Schools Reopen in Karnataka: ಶಾಲೆಗಳು ಪುನರಾರಂಭ, ತರಗತಿಗಳು ಮೇ 31 ರಂದು ಪ್ರಾರಂಭವಾಗುತ್ತವೆ

|

Updated on: May 30, 2023 | 3:43 PM

2023-24ರ ಶೈಕ್ಷಣಿಕ ವರ್ಷಕ್ಕೆ ಸೋಮವಾರದಂದು (May 29) ರಾಜ್ಯದಾದ್ಯಂತ ವಿದ್ಯಾರ್ಥಿಗಳ ಮಧ್ಯಮ ಸಂಖ್ಯೆಯೊಂದಿಗೆ ಶಾಲೆಗಳು ಪುನರಾರಂಭಗೊಂಡಿದ್ದು, ತರಗತಿಗಳು ಅಧಿಕೃತವಾಗಿ ಮೇ 31 ರಂದು ಪ್ರಾರಂಭಗೊಳ್ಳಲಿವೆ.

Schools Reopen in Karnataka: ಶಾಲೆಗಳು ಪುನರಾರಂಭ, ತರಗತಿಗಳು ಮೇ 31 ರಂದು ಪ್ರಾರಂಭವಾಗುತ್ತವೆ
ಸಾಂದರ್ಭಿಕ ಚಿತ್ರ
Follow us on

49 ದಿನಗಳ ಬೇಸಿಗೆ ರಜೆಯ (Summer Holidays) ನಂತರ, 2023-24ರ ಶೈಕ್ಷಣಿಕ ವರ್ಷಕ್ಕೆ (Academic Year) ಸೋಮವಾರದಂದು (May 29) ರಾಜ್ಯದಾದ್ಯಂತ ವಿದ್ಯಾರ್ಥಿಗಳ ಮಧ್ಯಮ ಸಂಖ್ಯೆಯೊಂದಿಗೆ ಶಾಲೆಗಳು ಪುನರಾರಂಭಗೊಂಡಿದ್ದು, ತರಗತಿಗಳು ಅಧಿಕೃತವಾಗಿ ಮೇ 31 ರಂದು ಪ್ರಾರಂಭಗೊಳ್ಳಲಿವೆ (Schools Reopen). ಜೊತೆಗೆ ಇಂಡಕ್ಷನ್ ಕಾರ್ಯಕ್ರಮ ಮತ್ತು ಮಧ್ಯಾಹ್ನದ ಊಟವು ಇರಲಿದೆ. ಶಾಲೆಯ ಮೊದಲ ದಿನ ಪ್ರಾರಂಭಿಸುವ ಮೊದಲು ತರಗತಿಯ ಕೊಠಡಿಗಳು, ಅಡುಗೆ ಪಾತ್ರೆಗಳು, ಆಹಾರ ಧಾನ್ಯಗಳು ಮತ್ತು ನೀರಿನ ಸಂಪ್‌ಗಳು ಸೇರಿದಂತೆ ಶಾಲೆ ಆವರಣವನ್ನು ಸ್ವಚ್ಛಗೊಳಿಸಲು ಮತ್ತು ಅನಗತ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಶಾಲೆಗಳಿಗೆ ನಿರ್ದೇಶನ ನೀಡಲಾಗಿದೆ.

ಹೆಚ್ಚಿನ ಸರ್ಕಾರಿ, ಖಾಸಗಿ ಮತ್ತು ಅನುದಾನಿತ ಶಾಲೆಗಳಲ್ಲಿ, ವಿದ್ಯಾರ್ಥಿಗಳ ಸಂಖ್ಯೆ ಮಧ್ಯಮವಾಗಿತ್ತು. ಸರಕಾರಿ ಹಾಗೂ ಅನುದಾನಿತ ಶಾಲಾ ಮಕ್ಕಳಿಗೆ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು.ಅಗರ ಸರಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕ ಚಿಕ್ಕದೇವೇಗೌಡ ದಿ ಹಿಂದೂ ಪತ್ರಿಕೆ ಜೊತೆ ಮಾತನಾಡಿ, “ಹದಿನೈದು ದಿನಗಳಿಂದ ಪೋಷಕರಿಗೆ ಕರೆ ಮಾಡಿ ಸೋಮವಾರ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ತಿಳಿಸಿದ್ದೇವೆ. ಹಾಗಾಗಿ ಶೈಕ್ಷಣಿಕ ವರ್ಷದ ಮೊದಲ ದಿನ ಶೇ.90ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ನಾವು ವಿದ್ಯಾರ್ಥಿಗಳಿಗೆ ಹಾಡುಗಾರಿಕೆ, ನೃತ್ಯ ಮತ್ತು ಇತರ ಪಠ್ಯೇತರ ಚಟುವಟಿಕೆಗಳೊಂದಿಗೆ ಅರ್ಧ ದಿನದ ತರಗತಿಗಳನ್ನು ನಡೆಸಿದ್ದೇವೆ. ವಿದ್ಯಾರ್ಥಿಗಳನ್ನು ಪರಸ್ಪರ ಪರಿಚಯಿಸಲಾಯಿತು.” ಎಂದು ತಿಳಿಸಿದರು.

ಇದನ್ನೂ ಓದಿ: ಮಧ್ಯಾಹ್ನದ ಊಟದ ಜೊತೆಗೆ ಮಕ್ಕಳಿಗೆ ಸಿಹಿ ಹಂಚಿ; ಶಾಲೆಗಳ ಆರಂಭಕ್ಕೆ ಸರ್ಕಾರದಿಂದ ಮಾರ್ಗಸೂಚಿ

ಹೆಚ್ಚಿನ ಖಾಸಗಿ ಶಾಲೆಗಳು ಒಂದು ವಾರದ ಹಿಂದೆ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ತರಗತಿಗಳನ್ನು ಪ್ರಾರಂಭಿಸಿದವು ಮತ್ತು ಇತರ ತರಗತಿಗಳು ಸೋಮವಾರದಿಂದ ಪ್ರಾರಂಭವಾದವು. ಕನಕಪುರ ರಸ್ತೆಯ ಸಾಧನಾ ಪಬ್ಲಿಕ್ ಶಾಲೆಯ ಅಧ್ಯಕ್ಷ ಹರ್ಷಕುಮಾರ್ ಎನ್. ದಿ ಹಿಂದೂ ಜೊತೆ ಮಾತನಾಡುತ್ತಾ, “ನಾವು 10 ನೇ ತರಗತಿ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನಡೆಸುತ್ತಿದ್ದೇವೆ. ಉಳಿದ ತರಗತಿಗಳು ಸೋಮವಾರದಿಂದ ಆರಂಭಗೊಂಡಿವೆ. ಆದರೆ, ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದು, ಎರಡ್ಮೂರು ದಿನಗಳಲ್ಲಿ ಸುಧಾರಿಸಲಿದೆ” ಎಂದು ಹೇಳಿದರು.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ