Clovis Hung: 5 ಪದವಿಗಳನ್ನು ಪಡೆದ 12 ವರ್ಷದ ಬಾಲಕ; ಇತಿಹಾಸ ಸೃಷ್ಟಿಸಿದ ಬಾಲಕನ ಸ್ಪೂರ್ಥಿಕತೆ!
ಕ್ಲೋವಿಸ್ ಹಂಗ್, 12 ವರ್ಷದ ಅದ್ಭುತ ಪ್ರತಿಭೆ, ಕ್ಯಾಲಿಫೋರ್ನಿಯಾದ ಫುಲ್ಲರ್ಟನ್ ಕಾಲೇಜಿನಿಂದ ಪದವಿ ಪಡೆದ ಅತ್ಯಂತ ಕಿರಿಯ ವ್ಯಕ್ತಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ.
ಕ್ಲೋವಿಸ್ ಹಂಗ್ (Clovis Hung), 12 ವರ್ಷದ ಅದ್ಭುತ ಪ್ರತಿಭೆ, ಕ್ಯಾಲಿಫೋರ್ನಿಯಾದ ಫುಲ್ಲರ್ಟನ್ ( California’s Fullerton College) ಕಾಲೇಜಿನಿಂದ 5 ಪದವಿ (Art Degrees) ಪಡೆದ ಅತ್ಯಂತ ಕಿರಿಯ ವ್ಯಕ್ತಿಯಾಗುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಅತ್ಯಂತ ಕಿರಿಯ ಪದವೀಧರರಾಗಿದ್ದ 13 ವರ್ಷದ ಜ್ಯಾಕ್ ರಿಕೊ ಅವರು ನಿರ್ಮಿಸಿದ ಹಿಂದಿನ ದಾಖಲೆಯಿಂದ ಪ್ರೇರಿತರಾಗಿ 9 ನೇ ವಯಸ್ಸಿನಲ್ಲಿ ಕ್ಲೋವಿಸ್ ಹಂಗ್ ತಮ್ಮ ಕಾಲೇಜಿನ ಪ್ರಯಾಣ ಪ್ರಾರಂಭಿಸಿದರು ಎಂದು ಎನ್ಬಿಸಿ ವರದಿ ಮಾಡಿದೆ.
ರಿಕೊ ಸಾಧನೆಯಿಂದ ಪ್ರೇರಿತರಾದ ಹಂಗ್, ರಿಕೊರಂತೆ ಹೆಚ್ಚು ಓದುವ ಆಸೆಯನ್ನು ಇಟ್ಟುಕೊಂಡ ಹಂಗ್ ಅವರ ಧಾಖಲೆಯನ್ನು ಮುರಿಯಲು ಸಾಧ್ಯವಾಗುತ್ತದೆ ಎಂದು ಒಹಿಸಿರಲಿಲ್ಲ ಎಂದು ತಿಳಿಸಿದರು. ಪದವಿ ಪ್ರದಾನ ದಿನದಂದು, ಹಂಗ್ ಹೆಮ್ಮೆಯಿಂದ ಟೋಪಿ ಮತ್ತು ಗೌನ್ ಧರಿಸಿ ವೇದಿಕೆಯ ಮೇಲೆ ಅವರ ವಯಸ್ಸಿಗಿಂತ ದೊಡ್ಡವರಾದ ಸಹ ಪದವೀಧರರ ಜೊತೆ ಸಮಾರಂಭದಲ್ಲಿ ಭಾಗಿಯಾದರು. ಅವರು ಇತಿಹಾಸ, ಸಮಾಜ ವಿಜ್ಞಾನ, ಸಾಮಾಜಿಕ ನಡವಳಿಕೆ ಮತ್ತು ಸ್ವ-ಅಭಿವೃದ್ಧಿ, ಕಲೆ ಮತ್ತು ಮಾನವ ಅಭಿವ್ಯಕ್ತಿ, ವಿಜ್ಞಾನ ಮತ್ತು ಗಣಿತ ಸೇರಿದಂತೆ ವಿವಿಧ ವಿಷಯಗಳಲ್ಲಿ ಐದು ಸಹಾಯಕ ಕಲಾ ಪದವಿಗಳನ್ನು ಪಡೆದರು. ಮುಂಬರುವ ವರ್ಷದಲ್ಲಿ ಮತ್ತೊಂದು ಪದವಿಯನ್ನು ಮುಂದುವರಿಸುವ ಯೋಜನೆಯನ್ನು ಹಂಗ್ ಬಹಿರಂಗಪಡಿಸಿದರು.
ವಿಶೇಷ ಪ್ರವೇಶ ಕಾರ್ಯಕ್ರಮದ ಮೂಲಕ ಹಂಗ್ ಫುಲ್ಲರ್ಟನ್ ಕಾಲೇಜಿಗೆ ಸೇರಿದರು, ಹಂಗ್ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು, ಹಂಗ್‌ನ ತಾಯಿ, ಸಾಂಗ್ ಚೋಯ್, ಅವನ ಕಾಲೇಜು ತರಗತಿಗಳನ್ನು ಹೋಮ್‌ಸ್ಕೂಲಿಂಗ್ ಪಠ್ಯಕ್ರಮದೊಂದಿಗೆ ಸಂಯೋಜಿಸಿದರು. ಅವರು ಹಂಗ್ ಅವರ ಪ್ರಬುದ್ಧತೆ, ಶ್ರದ್ಧೆ, ಸ್ವಯಂ-ಶಿಸ್ತು ಮತ್ತು ಪ್ರೇರಣೆಯನ್ನು ಶ್ಲಾಘಿಸಿದರು, ಸಾಂಪ್ರದಾಯಿಕ ಶಾಲೆಗಳಿಗೆ ಹೋಗುವುದರಿಂದ ಹಂಗ್ ತನ್ನ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ, ಹಾಗಾಗಿ ಹೋಂ ಸ್ಕೂಲಿಂಗ್ ಜೊತೆಗೆ ಕಾಲೇಜನ್ನು ಆಯ್ಕೆ ಮಾಡಿರುವುದು ಅವರ ಮಗನ ಸಾಧನೆಗೆ ಪೂರಕವಾಗಿದೆ ಎಂದು ಹೇಳಿದ್ದಾರೆ.
ಆರಂಭದಲ್ಲಿ, ಕಾಲೇಜು ಅನುಭವಕ್ಕೆ ಹೊಂದಿಕೊಳ್ಳುವುದು ಹಂಗ್‌ಗೆ ಸವಾಲಾಗಿತ್ತು. ಆದಾಗ್ಯೂ. ದಿನ ಕಳೆದಂತೆ ಹಂಗ್ ತಮ್ಮ ಪ್ರಾಧ್ಯಾಪಕರು ಮತ್ತು ಸಹಪಾಠಿಗಳಿಂದ ಬೆಂಬಲವನ್ನು ಕಂಡುಕೊಂಡರು, ಕಾಲೇಜಿನ ಪ್ರಾಧ್ಯಾಕರು ಮಾತ್ರವಲ್ಲದೆ, ಸಹಪಾಠಿಗಳು ಕೂಡ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು ಎಂದು ಹಂಗ್ ತಿಳಿಸಿದರು. ಸಹಪಾಠಿಗಳು ತಮ್ಮನ್ನು ಅವರ ಸಹೋದರನಂತೆ ಪರಿಗಣಿಸಿ, ಹಲವಾರು ವಿಷಯಗಳ ಕುರಿತು ಚರ್ಚಿಸುತ್ತಿದ್ದರು ಎಂದು ಹೇಳಿದರು.
ಇದನ್ನೂ ಓದಿ: ಶಿಕ್ಷಣವನ್ನು ರಾಜಕೀಯ ದಾಳವನ್ನಾಗಿ ಬಳಸಿಕೊಳ್ಳಬೇಡಿ: ಸರ್ಕಾರಕ್ಕೆ ಶಿಕ್ಷಣ ತಜ್ಞ ನಿರಂಜನಾರಾಧ್ಯ ಮನವಿ
ಕ್ಲೋವಿಸ್ ಹಂಗ್ ಅವರ ಗಮನಾರ್ಹ ಸಾಧನೆಯು ಅವರ ಅಸಾಧಾರಣ ಬುದ್ಧಿವಂತಿಕೆ ಮತ್ತು ಕಲಿಕೆಯ ಸಮರ್ಪಣೆಯನ್ನು ಎತ್ತಿ ತೋರಿಸುತ್ತದೆ. ಅವರ ಯಶೋಗಾಥೆಯು ಇತರರಿಗೆ ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ, ಯಾವುದೇ ವಯಸ್ಸಿನಲ್ಲಿ ಶಿಕ್ಷಣವನ್ನು ಮುಂದುವರಿಸುವ ಪ್ರಾಮುಖ್ಯತೆಯನ್ನು ಪ್ರದರ್ಶಿಸುತ್ತದೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ