Karnataka SSLC Result 2022: ಎಸ್​ಎಸ್​​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ: Karresults.nic.in ವೆಬ್​ಸೈಟ್​ನಲ್ಲಿ ಲಭ್ಯ

| Updated By: Digi Tech Desk

Updated on: May 19, 2022 | 1:22 PM

KSEEB Result 2022: sslc.karnataka.gov.in ವೆಬ್​ಸೈಟ್​ ಓಪನ್ ಆಗದ ಕಾರಣ Karresults.nic.in ಈ ವೆಬ್​ಸೈಟ್​ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದಾಗಿದೆ.

Karnataka SSLC Result 2022: ಎಸ್​ಎಸ್​​ಎಲ್​ಸಿ ಪರೀಕ್ಷೆ ಫಲಿತಾಂಶ ಪ್ರಕಟ: Karresults.nic.in ವೆಬ್​ಸೈಟ್​ನಲ್ಲಿ ಲಭ್ಯ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: 2021-22ನೇ ಸಾಲಿನ ಎಸ್​ಎಸ್​​ಎಲ್​ಸಿ (SSLC) ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ ಎಂದು ಪ್ರಾಥಮಿಕ & ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ. sslc.karnataka.gov.in ವೆಬ್​ಸೈಟ್​ ಓಪನ್ ಆಗದ ಕಾರಣ Karresults.nic.in ಈ ವೆಬ್​ಸೈಟ್​ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ವೀಕ್ಷಿಸಬಹುದಾಗಿದೆ. 8,20,900 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. 8,07,206 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 20,406 ವಿದ್ಯಾರ್ಥಿಗಳು ಪರೀಕ್ಷೆಗೆ ಗೈರು ಹಾಜರಾಗಿದ್ದರು. 8,53,436 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಒಟ್ಟು 7,30,881 ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದಾರೆ. ಶೇಕಡಾ 85.53ರಷ್ಟು ವಿದ್ಯಾರ್ಥಿಗಳು ಪಾಸ್​ ಆಗಿದ್ದಾರೆ ಎಂದು ಹೇಳಿದ್ದಾರೆ.

145 ವಿದ್ಯಾರ್ಥಿಗಳು 625 ಅಂಕಗಳಿಗೆ 625 ಅಂಕಗಳನ್ನು ಪಡೆದುಕೊಂಡಿದ್ದಾರೆ. ಎರಡು ವರ್ಷ ಕೊವಿಡ್ ಕಾರಣಕ್ಕೆ ಪೂರ್ಣ ಪ್ರಮಾಣದಲ್ಲಿ ಎಕ್ಸಾಂ ನಡೆದಿರಲಿಲ್ಲ. 85.63% ಉತ್ತೀರ್ಣರಾಗಿದ್ದಾರೆ. ಕಳೆದ ಹತ್ತು ವರ್ಷದಲ್ಲಿ ದಾಖಲೆಯ ಫಲಿತಾಂಶವಾಗಿದೆ. 3,720279 – 90.29 ಬಾಲಕಿಯರು ಉತ್ತೀರ್ಣರಾಗಿದ್ದಾರೆ. ಬಾಲಕರು – 81.3%, ಒಟ್ಟು ಗ್ರೇಸ್ ಅಂಕಗಳ ಮೂಲಕ ಪಾಸ್ ಆಗಿದ್ದಾರೆ. 40061 ವಿದ್ಯಾರ್ಥಿಗಳು, ಗ್ರೇಸ್ ಅಂಕಗಳ ಮೂಲಕ ಅಧಿಕ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ಇದನ್ನೂ ಓದಿ: Karnataka SSLC Result 2022: ಎಸ್ಎಸ್​​ಎಲ್​ಸಿ ಫಲಿತಾಂಶ ಪ್ರಕಟ, 145 ಮಕ್ಕಳು ಔಟ್​ ಆಫ್ ಔಟ್

ಕರ್ನಾಟಕ SSLC ಫಲಿತಾಂಶ 2022: ವೆಬ್‌ಸೈಟ್‌ 
karresults.nic.in

ಕರ್ನಾಟಕ SSLC ಫಲಿತಾಂಶ 2022: ಮಾರ್ಕ್‌ಶೀಟ್ ಡೌನ್‌ಲೋಡ್ ಮಾಡಲು ಕ್ರಮಗಳು

ಫಲಿತಾಂಶವನ್ನು ಪರಿಶೀಲಿಸಲು ಹಂತ ಹಂತದ ವಿವರಗಳು:

ಹಂತ 1 – ಕರ್ನಾಟಕ ಬೋರ್ಡ್ ಫಲಿತಾಂಶ ವೆಬ್‌ಸೈಟ್‌ಗೆ ಭೇಟಿ ನೀಡಿ: Karresults.nic.in

ಹಂತ 2 – ಇದು 2022 ರ SSLC ವೆಬ್‌ಸೈಟ್‌ನಲ್ಲಿ Karresults.nic.in ನ ಮುಖಪುಟವನ್ನು ತೆರೆಯುತ್ತದೆ.

ಹಂತ 3 – 10 ನೇ ಫಲಿತಾಂಶ ಕರ್ನಾಟಕ 2022 ವೆಬ್‌ಸೈಟ್‌ನಲ್ಲಿ, ಕರ್ನಾಟಕ SSLC ಎಂದು ಹೇಳುವ ಲಿಂಕ್ ಅನ್ನು ಕ್ಲಿಕ್ ಮಾಡಿ.

ಹಂತ 4 – ಇದು KSEEB SSLC ಫಲಿತಾಂಶ 2022 ಲಾಗಿನ್ ವಿಂಡೋಗೆ ಕಾರಣವಾಗುತ್ತದೆ.

ಹಂತ 5 – Karresults.nic.in ಫಲಿತಾಂಶ ವಿಂಡೋದಲ್ಲಿ ನೋಂದಣಿ ಸಂಖ್ಯೆ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.

ಹಂತ 6 – SSLC ಫಲಿತಾಂಶ 2022 ಕರ್ನಾಟಕವು ಪರದೆಯ ಮೇಲೆ ಕಾಣಿಸುತ್ತದೆ.

ಹಂತ 7 – SSLC ಫಲಿತಾಂಶ ಪರಿಶೀಲನೆಯ ನಂತರ ಪ್ರಿಂಟ್‌ಔಟ್ ಅಥವಾ ಸ್ಕ್ರೀನ್‌ಶಾಟ್ ತೆಗೆದುಕೊಳ್ಳಿ ಮತ್ತು ಭವಿಷ್ಯದ ಉಲ್ಲೇಖಗಳಿಗಾಗಿ ಅದನ್ನು ಸುರಕ್ಷಿತವಾಗಿರಿಸಿಕೊಳ್ಳಿ.

ರಾಜ್ಯದ ಇನ್ನುಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.