SSLC Supplementary Exam Result 2023: ಇಂದು SSLC ಪೂರಕ ಫಲಿತಾಂಶ ಪ್ರಕಟ, ರಿಸಲ್ಟ್ ನೋಡುವ ವಿಧಾನ ಇಲ್ಲಿದೆ

|

Updated on: Jun 30, 2023 | 6:52 AM

Karnataka SSLC supplementary exam result : ಇಂದು ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಯಾವಾಗ? ಫಲಿತಾಂಶ ನೋಡುವುದು ಹೇಗೆ ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ.

SSLC Supplementary Exam Result 2023: ಇಂದು SSLC ಪೂರಕ ಫಲಿತಾಂಶ ಪ್ರಕಟ, ರಿಸಲ್ಟ್ ನೋಡುವ ವಿಧಾನ ಇಲ್ಲಿದೆ
Follow us on

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆಯ ಫಲಿತಾಂಶ (SSLC Supplementary Exam Result) ಇಂದು(ಜೂನ್ 30) ಬೆಳಗ್ಗೆ 11 ಗಂಟೆಗೆ ಪ್ರಕಟವಾಗಲಿದೆ. ವಿದ್ಯಾರ್ಥಿಗಳು https://karresults.nic.in ಅಥವಾ kseab.karnataka.gov.in ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದಾಗಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾಹಿತಿ ನೀಡಿದೆ. ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಜೂ.12ರಿಂದ ಜೂ.19ರವರೆಗೆ ನಡೆದಿದ್ದವು. ಇದರ ರಿಲಸ್ಟ್ ಇಂದು ಪ್ರಕಟವಾಗಲಿದ್ದು, ಆನ್​ಲೈನ್​ನಲ್ಲಿ ಪರಿಶೀಲನೆ ಮಾಡುವುದು ಹೇಗೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ ನೋಡಿ.

ಇದನ್ನೂ ಓದಿ: Karnataka Textbook Revision: ಪಠ್ಯಪುಸ್ತಕ ಪರಿಷ್ಕರಿಸಿ ಆದೇಶ ಹೊರಡಿಸಿದ ಸರ್ಕಾರ: ಯಾವೆಲ್ಲ ಪಾಠಗಳಿಗೆ ಕೊಕ್​​, ಹೊಸ ಸೇರ್ಪಡೆ ? ಇಲ್ಲಿದೆ ಮಾಹಿತಿ

ಕರ್ನಾಟಕ SSLC ಪೂರಕ ಫಲಿತಾಂಶ ನೋಡುವ ವಿಧಾನ

  • karresults.nic.in ಕರ್ನಾಟಕ ಫಲಿತಾಂಶಗಳ ಅಧಿಕೃತ ಸೈಟ್‌ಗೆ ಭೇಟಿ ನೀಡಿ.
  • ಮುಖಪುಟದಲ್ಲಿ ಲಭ್ಯವಿರುವ ಕರ್ನಾಟಕ SSLC ಪೂರಕ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸು (Submit) ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ಫಲಿತಾಂಶವನ್ನು ಪರದೆಯ ಮೇಲೆ ಕಾಣುತ್ತದೆ.
  • ಫಲಿತಾಂಶವನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು.

    ಎಸ್‌ಎಸ್‌ಎಲ್‌ಸಿ ಮುಖ್ಯ ಪರೀಕ್ಷೆಯ ಫಲಿತಾಂಶ ಮೇ 8 ರಂದು ಪ್ರಕಟವಾಗಿತ್ತು. ಕರ್ನಾಟಕದಲ್ಲಿ ಒಟ್ಟು 8,35,102 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗಿದ್ದರು, ಈ ಪೈಕಿ 7,00,619 ಅಂದರೇ ಶೇಕಡಾ 83.89 ರಷ್ಟು ಉತ್ತೀರ್ಣರಾಗಿದ್ದರು.ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 6:51 am, Fri, 30 June 23