Karnataka CET 2022 Toppers List: ಸಿಇಟಿ ಫಲಿತಾಂಶ ಪ್ರಕಟ: ಇವರೇ ನೋಡಿ ರ‍್ಯಾಂಕ್​​ ಪಡೆದ ವಿದ್ಯಾರ್ಥಿಗಳು

| Updated By: ಗಂಗಾಧರ​ ಬ. ಸಾಬೋಜಿ

Updated on: Jul 30, 2022 | 12:03 PM

ಕರ್ನಾಟಕ ಸಿಇಟಿ ಟಾಪರ್ಸ್​, ಮೆರಿಟ್​, ರ‍್ಯಾಂಕಿಂಗ್‌ ಲಿಸ್ಟ್​: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ kea.kar.nic.inಗೆ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ.

Karnataka CET 2022 Toppers List: ಸಿಇಟಿ ಫಲಿತಾಂಶ ಪ್ರಕಟ: ಇವರೇ ನೋಡಿ ರ‍್ಯಾಂಕ್​​ ಪಡೆದ ವಿದ್ಯಾರ್ಥಿಗಳು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: 2021-22ನೇ ಸಾಲಿನ ಸಿಇಟಿ (CET) ಪರೀಕ್ಷಾ ಫಲಿತಾಂಶವನ್ನು ಇಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ. ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದರು. ಒಟ್ಟು 83 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಮತ್ತು 88 ಸಾವಿರಕ್ಕೂ ಅಧಿಕ ವಿದ್ಯಾರ್ಥಿನಿಯರು ಈ ಭಾರಿ ಸಿಇಟಿ ಫಲಿತಾಂಶದಲ್ಲಿ ತೇರ್ಗಡೆ ಹೊಂದಿದ್ದಾರೆ. ಪ್ರತಿ ವರ್ಷದಂತೆ ಈ ಭಾರಿಯೂ ವಿದ್ಯಾರ್ಥಿನಿಯರೇ ಮತ್ತೇ ಮೇಲುಗೈ ಸಾಧಿಸಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ kea.kar.nic.inಗೆ ಭೇಟಿ ನೀಡುವ ಮೂಲಕ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ರ‍್ಯಾಂಕ್​ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಸಹ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬಿಡುಗಡೆ ಮಾಡಿದೆ. ಅದು ಈ ಕೆಳಗಿನಂತಿದೆ.

KCET Toppers 2022 List: Engineering stream
Rank Name Institute Percentage
1 Apurva Tandon National Public School Yelahanka 97%
2 Siddharth Singh Sri Chaitanya Techno School Marathahalli 96%
3 Atmakuri Venkata Sri Chaitanya Techno School Marathahalli
KCET Toppers 2022 List: Naturopathy and Yoga
Rank Student name Institute Percentage
1 Hrishikesh National Center for Excellence, Bangalore 98%
2 Vrajesh Madava Krupa English School, Udupi 96%
3 Krishna Sri Chaitanya Techno School, Bangalore 96%
KCET Toppers 2022 List: B.Sc Agriculture
Rank Student name Institute Percentage
1 Arjun HAL Public School, Bengaluru 93%
2 Sumeeth Sri Chaitanya Techno School, Ulla, Bengaluru 92%
3 Sudeep Vidyaniketan PU College, Tumakuru 92%
KCET Toppers 2022 List: B.V.Sc (Veterinary Science)
Rank Student name Institute Percentage
1 Hrishikesh National Center for Excellence, Bengaluru 98%
2 Manish Sri Chaitanya Techno School, K.R.Puram Bengaluru 97%
3 Shubha Kaushik Sri Chaitanya Techno School, Bengaluru 96%

ಇಂಜಿನಿಯರಿಂಗ್ ಕೋರ್ಸ್​ಗೆ 1,71,656 ರ‍್ಯಾಂಕ್​​​, ಕೃಷಿ ಕೋರ್ಸ್​ಗೆ 1,39,968 ರ‍್ಯಾಂಕ್, ಪಶುಸಂಗೋಪನೆ 1,42,2820 ಯೋಗ ಮತ್ತು ನ್ಯಾಚುರೋಪತಿ 1,42,750 ರ‍್ಯಾಂಕ್, ಬಿ.ಫಾರ್ಮ್ ಕೋರ್ಸ್ ಮತ್ತು ಫಾರ್ಮ-ಡಿ ಕೋರ್ಸಿಗೆ 1,74,568 ರ‍್ಯಾಂಕ್ ಬಂದಿದೆ. Kea.kar.nic.in ಮತ್ತು karesults.nic.in ಸೈಟ್​ನಲ್ಲಿ ಫಲಿತಾಂಶ ಪ್ರಕಟ ಮಾಡಲಾಗಿದೆ.

KCET ಫಲಿತಾಂಶ 2022 ಅನ್ನು ಹೇಗೆ ಪರಿಶೀಲಿಸುವುದು? 

– ವೆಬ್​ಸೈಟ್​​ನಲ್ಲಿ ಮುಖಪುಟದಲ್ಲಿ ‘KCET ಫಲಿತಾಂಶ 2022’ ಮೇಲೆ ಕ್ಲಿಕ್ ಮಾಡಿ

– ಲಾಗ್ ಇನ್ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಮೂದಿಸಿ

– ಆಗ ನಿಮ್ಮ KCET ಫಲಿತಾಂಶಗಳು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ

– ರಿಸಲ್ಟ್​ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್‌ಔಟ್ ತೆಗೆದುಕೊಳ್ಳಿ

Published On - 12:00 pm, Sat, 30 July 22