KCET Results 2022: ನಾಳೆ ಕೆಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡುವುದು ಹೇಗೆ?

ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮಗಳಲ್ಲಿ ಪರೀಕ್ಷೆ ಬರೆದಿದ್ದ 12ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುವುದು ತಡವಾದ ಹಿನ್ನೆಲೆಯಲ್ಲಿ ಸಿಇಟಿ ಫಲಿತಾಂಶ ಪ್ರಕಟಣೆಯೂ ತಡವಾಯಿತು.

KCET Results 2022: ನಾಳೆ ಕೆಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡುವುದು ಹೇಗೆ?
ಸಾಂದರ್ಭಿಕ ಚಿತ್ರImage Credit source: Zee News
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Jul 29, 2022 | 2:30 PM

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) KCET 2022 ಪರೀಕ್ಷೆಗಳ ಫಲಿತಾಂಶಗಳನ್ನು ಶನಿವಾರ (ಜುಲೈ 30) ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ. ಕೆಸಿಇಟಿ 2022ರ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್ kea.kar.nic.in ಅಥವಾ cetonline.karnataka.gov.inನಲ್ಲಿ ವೀಕ್ಷಿಸಬಹುದು. ಫಲಿತಾಂಶದ ಜೊತೆಗೆ ಮೆರಿಟ್ ಪಟ್ಟಿ ಕೂಡ ಪ್ರಕಟವಾಗಲಿದೆ. ನಾಳೆ ಮಧ್ಯಾಹ್ನದ ವೇಳೆಗೆ ಕೆಸಿಇಟಿ ಫಲಿತಾಂಶ (KCET Results) ಪ್ರಕಟವಾಗುವ ನಿರೀಕ್ಷೆಯಿದೆ.

ಈ ಮೊದಲು ಸಿಇಟಿ ಫಲಿತಾಂಶವನ್ನು ಜುಲೈ 17ರಂದೇ ಪ್ರಕಟಿಸುವುದಾಗಿ ಪರೀಕ್ಷಾ ಪ್ರಾಧಿಕಾರ ಘೋಷಿಸಿತ್ತು. ಆದರೆ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮಗಳಲ್ಲಿ ಪರೀಕ್ಷೆ ಬರೆದಿದ್ದ 12ನೇ ತರಗತಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗುವುದು ತಡವಾದ ಹಿನ್ನೆಲೆಯಲ್ಲಿ ಸಿಇಟಿ ಫಲಿತಾಂಶ ಪ್ರಕಟಣೆಯೂ ತಡವಾಯಿತು.

KCET ಫಲಿತಾಂಶ 2022 ಅನ್ನು ಹೇಗೆ ಪರಿಶೀಲಿಸುವುದು?: – ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ kea.kar.nic.inಗೆ ಭೇಟಿ ನೀಡಿ

– ವೆಬ್​ಸೈಟ್​​ನಲ್ಲಿ ಮುಖಪುಟದಲ್ಲಿ ‘KCET ಫಲಿತಾಂಶ 2022’ ಮೇಲೆ ಕ್ಲಿಕ್ ಮಾಡಿ

– ಲಾಗ್ ಇನ್ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ನಮೂದಿಸಿ

– ಆಗ ನಿಮ್ಮ KCET ಫಲಿತಾಂಶಗಳು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತವೆ

– ರಿಸಲ್ಟ್​ ಡೌನ್‌ಲೋಡ್ ಮಾಡಿಕೊಂಡು, ಪ್ರಿಂಟ್‌ಔಟ್ ತೆಗೆದುಕೊಳ್ಳಿ

ಇದನ್ನೂ ಓದಿ: KCET Result 2022: ಕೆಸಿಇಟಿ ಫಲಿತಾಂಶ ಇಂದೇ ಪ್ರಕಟ ಸಾಧ್ಯತೆ; ರಿಸಲ್ಟ್​ ನೋಡಲು ಹೀಗೆ ಮಾಡಿ

ಪ್ರತಿ ವರ್ಷ, ಇಂಜಿನಿಯರಿಂಗ್, ಫಾರ್ಮಸಿ, ಕೃಷಿ, ಪಶುವೈದ್ಯಕೀಯ ಮತ್ತು ಇತರ ತಾಂತ್ರಿಕ ಕೋರ್ಸ್‌ಗಳಿಗೆ ಕರ್ನಾಟಕ ರಾಜ್ಯ ಕಾಲೇಜುಗಳಿಗೆ ಪ್ರವೇಶ ಪಡೆಯುವ ಅಭ್ಯರ್ಥಿಗಳಿಗಾಗಿ ಕೆಸಿಇಟಿ ನಡೆಯುತ್ತದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ವರ್ಷ ಜೂನ್ 16ರಿಂದ 18ರವರೆಗೆ ಕೆಸಿಇಟಿ ಪರೀಕ್ಷೆಯನ್ನು ನಡೆಸಿತು. ಸಿಬಿಎಸ್‌ಇ 12ನೇ ತರಗತಿಯ ಅವಧಿ 2 ಮತ್ತು ಐಸಿಎಸ್‌ಇ ಬೋರ್ಡ್ ಫಲಿತಾಂಶಗಳು ಬಿಡುಗಡೆಯಾಗುವವರೆಗೆ ಕೆಸಿಇಟಿ 2022 ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗುವುದಿಲ್ಲ.

‘ಫಲಿತಾಂಶ ಪ್ರಕಟಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದ್ದೇವೆ. ಜುಲೈ 30ರಂದು ಫಲಿತಾಂಶ ಪ್ರಕಟಿಸುತ್ತೇವೆ’ ಎಂದು ನಿನ್ನೆಯಷ್ಟೇ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್‌. ರಮ್ಯಾ ಹೇಳಿದ್ದರು.