KCET Results 2021: ಸಿಇಟಿಯಲ್ಲಿ ಮೈಸೂರಿನ ಮೇಘನ್ ಹೆಚ್​.ಕೆ.ಗೆ ಮೊದಲ ರ್ಯಾಂಕ್; ವೆಬ್​ಸೈಟ್​ನಲ್ಲಿ ಫಲಿತಾಂಶ ಲಭ್ಯ

| Updated By: ಸುಷ್ಮಾ ಚಕ್ರೆ

Updated on: Sep 20, 2021 | 4:08 PM

Karnataka CET Result 2021: ಕರ್ನಾಟಕ ಸಿಇಟಿ ಫಲಿತತಾಂಶ 2021: ಇಂದು 2020-21ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಸಿಇಟಿಗೆ ನೋಂದಣಿ ಮಾಡಿದ್ದ 2,01,834 ವಿದ್ಯಾರ್ಥಿಗಳ ಪೈಕಿ 1.93 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದಾರೆ.

KCET Results 2021: ಸಿಇಟಿಯಲ್ಲಿ ಮೈಸೂರಿನ ಮೇಘನ್ ಹೆಚ್​.ಕೆ.ಗೆ ಮೊದಲ ರ್ಯಾಂಕ್; ವೆಬ್​ಸೈಟ್​ನಲ್ಲಿ ಫಲಿತಾಂಶ ಲಭ್ಯ
ಸಿಇಟಿ ಫಲಿತಾಂಶ
Follow us on

ಬೆಂಗಳೂರು: ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಆಗಸ್ಟ್ 28 ಮತ್ತು 29ರಂದು ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಇಂದು ಸಂಜೆ ಪ್ರಕಟವಾಗಲಿದೆ. ಸಿಇಟಿ ರ್ಯಾಂಕ್ ಪಟ್ಟಿಯನ್ನು ಉನ್ನತ ಶಿಕ್ಷಣ ಸಚಿವ ಡಾ. ಅಶ್ವಥ್ ನಾರಾಯಣ ಘೋಷಿಸಿದ್ದಾರೆ. ಮೈಸೂರಿನ ಮೇಘನ್ ಹೆಚ್​.ಕೆ ಸಿಇಟಿ ಇಂಜಿನಿಯರಿಂಗ್​ ಸೇರಿದಂತೆ ಎಲ್ಲ 5 ಕೋರ್ಸ್ ಗಳಲ್ಲೂ ಪ್ರಥಮ ರ್ಯಾಂಕ್ ಪಡೆದಿದ್ದಾರೆ. ಮೈಸೂರಿನ ಪ್ರಮತಿ ಹಿಲ್ ವ್ಯೂ ಅಕಾಡೆಮಿಯ ಮೇಘನ್ ಹೆಚ್​.ಕೆ ಇಂಜಿನಿಯರಿಂಗ್, ಬಿ-ಫಾರ್ಮಾ, ಕೃಷಿ ವಿಜ್ಞಾನ, ಪಶು ವೈದ್ಯಕೀಯ, ಯೋಗ ಮತ್ತು ನ್ಯಾಚುರೋಪಥಿಯಲ್ಲಿ ಕರ್ನಾಟಕಕ್ಕೆ ಮೊದಲ ರ್ಯಾಂಕ್ ಪಡೆದಿದ್ದಾರೆ. 

ಇಂದು 2020-21ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಸಿಇಟಿಗೆ ನೋಂದಣಿ ಮಾಡಿದ್ದ 2,01,834 ವಿದ್ಯಾರ್ಥಿಗಳ ಪೈಕಿ 1.93 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದಾರೆ. ಇಂಜಿನಿಯರಿಂಗ್ ಕೋರ್ಸ್ ಗೆ 1,83,231 ರ್ಯಾಂಕ್ ನೀಡಲಾಗಿದೆ. ಕೃಷಿ ಕೋರ್ಸಿಗೆ 1,52,518 ಅಭ್ಯರ್ಥಿಗಳು, 1,55,760 ಪಶುಸಂಗೋಪನೆ, 1,55,910 ಯೋಗ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಗಣಿತ ಪರೀಕ್ಷೆ ಬರೆದಿರುವ 1.89 ಲಕ್ಷ ವಿದ್ಯಾರ್ಥಿಗಳು, ಜೀವಶಾಸ್ತ್ರ ಪರೀಕ್ಷೆ ಬರೆದಿರುವ 1.62 ಲಕ್ಷ ವಿದ್ಯಾರ್ಥಿಗಳು, ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದ 1.93 ಲಕ್ಷ ವಿದ್ಯಾರ್ಥಿಗಳು, ಭೌತಶಾಸ್ತ್ರ ಪರೀಕ್ಷೆ ಬರೆದಿದ್ದ 1.93 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ. ಇಂಜಿನಿಯರಿಂಗ್, ಯೋಗ, ನ್ಯಾಚುರೋಪತಿ, ಬಿ ಫಾರ್ಮ್, ಫಾರ್ಮಾ ಡಿ, ವೆಟರ್ನರಿ ಕೋರ್ಸ್‌ಗಳಿಗೆ ನಡೆದಿದ್ದ ಸಿಇಟಿ ಫಲಿತಾಂಶ kea.kar.nic.in ವೆಬ್‌ಸೈಟ್‌ನಲ್ಲಿ‌ ಸಂಜೆ 4 ಗಂಟೆಗೆ ಪ್ರಕಟವಾಗಲಿದೆ.

ಸಿಇಟಿ ಫಲಿತಾಂಶ ಸಂಜೆ 4 ಗಂಟೆಯ ಬಳಿಕ ಈ ಲಿಂಕ್​ನಲ್ಲಿ kea.kar.nic.in ಲಭ್ಯವಾಗಲಿದೆ. ಆಗಸ್ಟ್ 28 ಮತ್ತು 29ರಂದು ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET-2021) ಫಲಿತಾಂಶ ಇಂದು ಆನ್​ಲೈನ್​ನಲ್ಲಿ ಪ್ರಕಟವಾಗಲಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ  (KEA) ಅಧಿಕೃತ ವೆಬ್‌ಸೈಟ್ cetonline.karnataka.gov.in ನಲ್ಲಿ  ಫಲಿತಾಂಶವನ್ನು ಪರಿಶೀಲಿಸಬಹುದು. ಕರ್ನಾಟಕ ಸಿಇಟಿ ಫಲಿತಾಂಶವು ಅಭ್ಯರ್ಥಿಗಳು ಪಡೆದ ವಿಷಯವಾರು ಅಂಕಗಳು, ಒಟ್ಟು ಅಂಕಗಳು ಮತ್ತು ಶ್ರೇಣಿಯನ್ನು ಒಳಗೊಂಡಿರುತ್ತದೆ. KEA ಫಲಿತಾಂಶ ಘೋಷಣೆಯೊಂದಿಗೆ KCET 2021 ಟಾಪರ್‌ಗಳ ಪಟ್ಟಿಯನ್ನೂ ಸಹ ಬಿಡುಗಡೆ ಮಾಡಲಿದೆ. ಅರ್ಹ ಅಭ್ಯರ್ಥಿಗಳು ಕೆಸಿಇಟಿ 2021 ಕೌನ್ಸೆಲಿಂಗ್ ಮತ್ತು ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಅರ್ಹರಾಗುತ್ತಾರೆ.

ಇಂಜಿನಿಯರಿಂಗ್ ಅಥವಾ ತಂತ್ರಜ್ಞಾನ (ಬಿಇ / ಬಿ.ಟೆಕ್): ಕೆಸಿಇಟಿ 2021ರಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಆಧಾರದ ಮೇಲೆ ಆಯ್ಕೆ ನಡೆದಿದೆ.

B.Tech (Agril. Eng), ಬಿ.ಟೆಕ್ (ಆಹಾರ ತಂತ್ರಜ್ಞಾನ) ಬಿ.ಟೆಕ್ (ಡೈರಿ ತಂತ್ರಜ್ಞಾನ): 2021ರ ಕೆಸಿಇಟಿ ಪರೀಕ್ಷೆಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಅಭ್ಯರ್ಥಿಗಳ ಕಾರ್ಯಕ್ಷಮತೆಯನ್ನು ಆಧರಿಸಿ ಅರ್ಹತೆ ಪಡೆಯಲಿದ್ದಾರೆ.

ಇಂದು ಬೆಂಗಳೂರಿನ ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ್ದು, ಸಿಇಟಿ ಫಲಿತಾಂಶ ಪ್ರಕಟವಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ kea.kar.nic.in ವೆಬ್​ಸೈಟ್​ನಲ್ಲಿ ಫಲಿತಾಂಶವನ್ನು ವೀಕ್ಷಿಸಬಹುದು.

ಸಿಇಟಿಗೆ 2,01,834 ವಿದ್ಯಾರ್ಥಿಗಳು ನೋಂದಣಿ ಮಾಡಿದ್ದರು. 1.89 ಲಕ್ಷ ವಿದ್ಯಾರ್ಥಿಗಳು ಗಣಿತ ಪರೀಕ್ಷೆ ಬರೆದಿದ್ದಾರೆ. 1.62 ಲಕ್ಷ ವಿದ್ಯಾರ್ಥಿಗಳು ಜೀವಶಾಸ್ತ್ರ ಪರೀಕ್ಷೆ ಬರೆದಿದ್ದಾರೆ. 1.93 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ, 1.93 ಲಕ್ಷ ವಿದ್ಯಾರ್ಥಿಗಳು ಭೌತಶಾಸ್ತ್ರ ಪರೀಕ್ಷೆ ಬರೆದಿದ್ದಾರೆ. ಇಂಜಿನಿಯರಿಂಗ್, ಯೋಗ, ನ್ಯಾಚುರೋಪತಿ, ಬಿ ಫಾರ್ಮ್, ಫಾರ್ಮಾ ಡಿ, ವೆಟರ್ನರಿ ಕೋರ್ಸ್​ಗಳಿಗೆ ಸಿಇಟಿ ನಡೆದಿತ್ತು.

ಕರ್ನಾಟಕ ಸಿಇಟಿ ಫಲಿತಾಂಶವು ಅಭ್ಯರ್ಥಿಗಳು ಪಡೆದ ವಿಷಯವಾರು ಅಂಕಗಳು, ಒಟ್ಟು ಅಂಕಗಳು ಮತ್ತು ಶ್ರೇಣಿಯನ್ನು ಒಳಗೊಂಡಿರುತ್ತದೆ. KEA ಫಲಿತಾಂಶ ಘೋಷಣೆಯೊಂದಿಗೆ KCET 2021 ಟಾಪರ್​ಗಳ ಪಟ್ಟಿಯನ್ನೂ ಸಹ ಬಿಡುಗಡೆ ಮಾಡಲಿದೆ. ಅರ್ಹ ಅಭ್ಯರ್ಥಿಗಳು ಕೆಸಿಇಟಿ 2021 ಕೌನ್ಸೆಲಿಂಗ್ ಮತ್ತು ಸೀಟು ಹಂಚಿಕೆಯಲ್ಲಿ ಭಾಗವಹಿಸಲು ಅರ್ಹತೆ ಪಡೆಯಲಿದ್ದಾರೆ.

ಇದನ್ನೂ ಓದಿ: KCET Results 2021 LIVE: ಇಂದು ಸಂಜೆ 4 ಗಂಟೆಗೆ ಸಿಇಟಿ ಫಲಿತಾಂಶ ಪ್ರಕಟ; ಲೈವ್​ ರಿಸಲ್ಟ್​ಗೆ ಇಲ್ಲಿ ಕ್ಲಿಕ್​ ಮಾಡಿ

KCET Result 2021: ಇಂದು ಕೆಸಿಇಟಿ ಫಲಿತಾಂಶ ಪ್ರಕಟ; ಈ ವೆಬ್​ಸೈಟ್​ನಲ್ಲಿ ರಿಸಲ್ಟ್ ವೀಕ್ಷಿಸಿ

(KCET Result 2021 declared on Karnataka CET official Website kea.kar.nic.in in Kannada)

Published On - 3:34 pm, Mon, 20 September 21