KCET 2021: ಕರ್ನಾಟಕ ಸಿಇಟಿ 2ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿ ಪ್ರಕಟ; ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

| Updated By: ಸುಷ್ಮಾ ಚಕ್ರೆ

Updated on: Dec 11, 2021 | 4:04 PM

KCET Round 2 Seat Allotment Result: ಕರ್ನಾಟಕ ಸಿಇಟಿ 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶ ಪ್ರಕಟವಾಗಿದ್ದು, ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ kea.kar.nic.in ವೆಬ್​ಸೈಟ್​ಗೆ ಭೇಟಿ ನೀಡಿ ರಿಸಲ್ಟ್​ ವೀಕ್ಷಿಸಬಹುದು.

KCET 2021: ಕರ್ನಾಟಕ ಸಿಇಟಿ 2ನೇ ಸುತ್ತಿನ ಸೀಟು ಹಂಚಿಕೆ ಪಟ್ಟಿ ಪ್ರಕಟ; ಫಲಿತಾಂಶ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
KCET 2021
Follow us on

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಶುಕ್ರವಾರ ಎರಡನೇ ಸುತ್ತಿನ ಕೌನ್ಸೆಲಿಂಗ್‌ಗಾಗಿ ಕರ್ನಾಟಕ UGCET ಅಥವಾ KCET ಸೀಟು ಹಂಚಿಕೆ 2021 ಫಲಿತಾಂಶವನ್ನು ಪ್ರಕಟಿಸಿದೆ. ಅಭ್ಯರ್ಥಿಗಳು ತಮ್ಮ ಸೀಟು ಹಂಚಿಕೆಯನ್ನು ಪರಿಶೀಲಿಸಲು kea.kar.nic.in ವೆಬ್​ಸೈಟ್​ಗೆ ಭೇಟಿ ನೀಡಬಹುದು. KCET ಕೌನ್ಸೆಲಿಂಗ್ ವೇಳಾಪಟ್ಟಿಯ ಪ್ರಕಾರ, ಅಭ್ಯರ್ಥಿಗಳು ಡಿಸೆಂಬರ್ 12ರವರೆಗೆ KCET 2021ರ 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶದ ಆಯ್ಕೆಗಳನ್ನು ಪರಿಶೀಲಿಸಲು ಸಾಧ್ಯವಾಗುತ್ತದೆ.

KCET ಎರಡನೇ ಸುತ್ತಿನ ಸೀಟು ಹಂಚಿಕೆ 2021 ಫಲಿತಾಂಶದ ಜೊತೆಗೆ, KEA ಪದವಿಪೂರ್ವ ಪ್ರವೇಶಕ್ಕಾಗಿ ಕಟ್-ಆಫ್ ಸ್ಕೋರ್‌ಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡುತ್ತದೆ. ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಅಗ್ರಿಕಲ್ಚರ್, ಫಾರ್ಮಸಿ ಮತ್ತು ಇತರ ಕೋರ್ಸ್‌ಗಳಿಗೆ ಪ್ರವೇಶಕ್ಕಾಗಿ ಕಟ್-ಆಫ್‌ಗಳು ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿರುತ್ತವೆ.

KCET ಸೀಟ್ ಹಂಚಿಕೆ 2021 ಫಲಿತಾಂಶವನ್ನು ಡೌನ್‌ಲೋಡ್ ಮಾಡುವುದು ಹೇಗೆ?:

1. ಅಭ್ಯರ್ಥಿಗಳು ಮೊದಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್​ಸೈಟ್ ಆಗಿರುವ kea.kar.nic.in ಗೆ ಭೇಟಿ ನೀಡಿ.

2. ಹೋಂ ಪೇಜಿನಲ್ಲಿ UGCET 2ನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ ಅಥವಾ ಪ್ರವೇಶ ವಿಭಾಗದ ಅಡಿಯಲ್ಲಿ ಲಿಂಕ್ ಅನ್ನು ಹುಡುಕಿ.

3. ಅಗತ್ಯವಿದ್ದರೆ, ಲಾಗಿನ್ ಆಗಲು ನಿಮ್ಮ ವಿವರಗಳನ್ನು ನಮೂದಿಸಿ.

4. ನಂತರ KCET ಸೀಟು ಹಂಚಿಕೆ ಫಲಿತಾಂಶವನ್ನು ಪರಿಶೀಲಿಸಿ.

ಆಯ್ಕೆ-1 ಮತ್ತು ಆಯ್ಕೆ-2 ಅಭ್ಯರ್ಥಿಗಳು ಪ್ರವೇಶ ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ ಮತ್ತು ಡಿಸೆಂಬರ್ 13 ಮತ್ತು 15, 2021ರ ನಡುವೆ ಪ್ರವೇಶದ ಆದೇಶಗಳನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಗದಿಪಡಿಸಿದ ಕಾಲೇಜುಗಳಿಗೆ ಸೇರಿಕೊಳ್ಳಲು ಡಿ. 16 ಕೊನೆಯ ದಿನವಾಗಿರಲಿದೆ.

ಆಗಸ್ಟ್ 28, 29 ಮತ್ತು 30ರಂದು KCET ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ಪರೀಕ್ಷೆಯನ್ನು ಮಾಡಲಾಗಿತ್ತು. ಫಲಿತಾಂಶವನ್ನು ಸೆಪ್ಟೆಂಬರ್ 20ರಂದು ಪ್ರಕಟಿಸಲಾಯಿತು. UGCET ಮೊದಲ ಸೀಟು ಹಂಚಿಕೆ ಪಟ್ಟಿಯನ್ನು ನವೆಂಬರ್ 27ರಂದು ಬಿಡುಗಡೆ ಮಾಡಲಾಯಿತು. ಇದೀಗ 2ನೇ ಸೀಟು ಹಂಚಿಕೆ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಕರ್ನಾಟಕ ಸಿಇಟಿ ಪರೀಕ್ಷೆಯು ರಾಜ್ಯದಲ್ಲಿ ನೆಲೆಗೊಂಡಿರುವ ಕಾಲೇಜುಗಳು ಮತ್ತು ಸಂಸ್ಥೆಗಳು ನೀಡುವ ಎಂಜಿನಿಯರಿಂಗ್, ಫಾರ್ಮಸಿ, ಫಾರ್ಮಾ ಡಿ ಮತ್ತು ಇತರ ವೃತ್ತಿಪರ ಕೋರ್ಸ್‌ಗಳಲ್ಲಿ ಪ್ರವೇಶವನ್ನು ಒದಗಿಸಲು ಆಯೋಜಿಸಲಾದ ರಾಜ್ಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ.

ಇದನ್ನೂ ಓದಿ: KCET Results 2021: ಸಿಇಟಿ ಫಲಿತಾಂಶ ಪ್ರಕಟ; ಟಾಪ್ 5 ರ್ಯಾಂಕ್ ಪಡೆದವರ ಪಟ್ಟಿ ಇಲ್ಲಿದೆ

KCET Result 2021: ಇಂದು ಕೆಸಿಇಟಿ ಫಲಿತಾಂಶ ಪ್ರಕಟ; ಈ ವೆಬ್​ಸೈಟ್​ನಲ್ಲಿ ರಿಸಲ್ಟ್ ವೀಕ್ಷಿಸಿ