KCET Results 2021: ಸಿಇಟಿ ಫಲಿತಾಂಶ ಪ್ರಕಟ; ಟಾಪ್ 5 ರ್ಯಾಂಕ್ ಪಡೆದವರ ಪಟ್ಟಿ ಇಲ್ಲಿದೆ

KCET Toppers List: 2020-21ನೇ ಸಾಲಿನ ಸಿಇಟಿ ಫಲಿತಾಂಶ kea.kar.nic.in ವೆಬ್​ಸೈಟ್​ನಲ್ಲಿ ಪ್ರಕಟವಾಗಿದೆ. ಸಿಇಟಿ ಇಂಜಿನಿಯರಿಂಗ್ ವಿಭಾಗದ ಟಾಪ್ 10 ವಿದ್ಯಾರ್ಥಿಗಳಲ್ಲಿ ಬೆಂಗಳೂರಿನ 9, ಮೈಸೂರಿನ ಒಬ್ಬ ವಿದ್ಯಾರ್ಥಿ ಇದ್ದಾರೆ.

KCET Results 2021: ಸಿಇಟಿ ಫಲಿತಾಂಶ ಪ್ರಕಟ; ಟಾಪ್ 5 ರ್ಯಾಂಕ್ ಪಡೆದವರ ಪಟ್ಟಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on:Sep 20, 2021 | 5:59 PM

ಬೆಂಗಳೂರು: ಕರ್ನಾಟಕ ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಇಂಜಿನಿಯರಿಂಗ್(Engineering) , ಕೃಷಿ (Agriculture) , ನ್ಯಾಚುರೋಪಥಿ (Naturopathy) , ಪಶು ವೈದ್ಯಕೀಯ (Veterinary) , ಬಿ-ಫಾರ್ಮಾ ವಿಭಾಗದ ಟಾಪ್ 5 ವಿದ್ಯಾರ್ಥಿಗಳ ಪಟ್ಟಿ ಇಲ್ಲಿದೆ. ಈ ಐದೂ ವಿಭಾಗಗಳಲ್ಲಿ ಮೈಸೂರಿನ ಪ್ರಮತಿ ಹಿಲ್ ವ್ಯೂ ಅಕಾಡೆಮಿಯ ಮೇಘನ್ ಹೆಚ್​.ಕೆ ಪ್ರಥಮ ರ್ಯಾಂಕ್ (CET First Rank) ಪಡೆಯುವ ಮೂಲಕ ಸಾಧನೆ ಮಾಡಿದ್ದಾರೆ. 2020-21ನೇ ಸಾಲಿನ ಸಿಇಟಿ ಫಲಿತಾಂಶ kea.kar.nic.in ವೆಬ್​ಸೈಟ್​ನಲ್ಲಿ ಪ್ರಕಟವಾಗಿದೆ. ಸಿಇಟಿ ಇಂಜಿನಿಯರಿಂಗ್ ವಿಭಾಗದ ಟಾಪ್ 10 ವಿದ್ಯಾರ್ಥಿಗಳಲ್ಲಿ ಬೆಂಗಳೂರಿನ 9, ಮೈಸೂರಿನ ಒಬ್ಬ ವಿದ್ಯಾರ್ಥಿ ಇದ್ದಾರೆ.

ಸಿಇಟಿಗೆ ನೋಂದಣಿ ಮಾಡಿದ್ದ 2,01,834 ವಿದ್ಯಾರ್ಥಿಗಳ ಪೈಕಿ 1.93 ಲಕ್ಷ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದಾರೆ. ಇಂಜಿನಿಯರಿಂಗ್ ಕೋರ್ಸ್ ಗೆ 1,83,231 ರ್ಯಾಂಕ್ ನೀಡಲಾಗಿದೆ. ಕೃಷಿ ಕೋರ್ಸಿಗೆ 1,52,518 ಅಭ್ಯರ್ಥಿಗಳು, 1,55,760 ಪಶುಸಂಗೋಪನೆ, 1,55,910 ಯೋಗ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಗಣಿತ ಪರೀಕ್ಷೆ ಬರೆದಿರುವ 1.89 ಲಕ್ಷ ವಿದ್ಯಾರ್ಥಿಗಳು, ಜೀವಶಾಸ್ತ್ರ ಪರೀಕ್ಷೆ ಬರೆದಿರುವ 1.62 ಲಕ್ಷ ವಿದ್ಯಾರ್ಥಿಗಳು, ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದ 1.93 ಲಕ್ಷ ವಿದ್ಯಾರ್ಥಿಗಳು, ಭೌತಶಾಸ್ತ್ರ ಪರೀಕ್ಷೆ ಬರೆದಿದ್ದ 1.93 ಲಕ್ಷ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿದೆ.

ಸಿಇಟಿ ಇಂಜಿನಿಯರಿಂಗ್ ವಿಭಾಗ: ಮೇಘನ್‌ ಹೆಚ್​.ಕೆ. – ಮೈಸೂರು ಪ್ರಮತಿ ಹಿಲ್‌ ವೀವ್‌ ಅಕಾಡೆಮಿ ಪ್ರೇಮಾಂಕುರ್ ಸಿ- ನ್ಯಾಷನಲ್‌ ಪಬ್ಲಿಕ್ ಸ್ಕೂಲ್, ಯಲಹಂಕ ಬಿ.ಎನ್. ಅನಿರುದ್ಧ್‌ – ಆಕ್ಸ್‌ಫರ್ಡ್‌ ಪಿಯು ಕಾಲೇಜು, ಉಲ್ಲಾಳ, ಬೆಂ. ನಿರಂಜನ್ ರೆಡ್ಡಿ -ಶ್ರೀಚೈತನ್ಯ ಟೆಕ್ನೋ ಸ್ಕೂಲ್, ವೀರಣ್ಣ ಪಾಳ್ಯ ಆದಿತ್ಯ – ನಾರಾಯಣ ಇ- ಟೆಕ್ನೋ ಸ್ಕೂಲ್, ವಿದ್ಯಾರಣ್ಯಪುರ, ಬೆಂಗಳೂರು

ಸಿಇಟಿ ಕೃಷಿ ವಿಭಾಗ: ಮೇಘನ್‌ ಹೆಚ್​.ಕೆ. – ಮೈಸೂರು ಪ್ರಮತಿ ಹಿಲ್‌ ವ್ಯೂ ಅಕಾಡೆಮಿ ರೀತಮ್. ಬಿ. – ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು ಆದಿತ್ಯ ಪ್ರಭಾಸ್ – ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಕೆಆರ್ ಪುರಂ ತೇಜಸ್ – ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು ಸುಜ್ಞಾನ ಆರ್ ಶೆಟ್ಟಿ – ಆಳ್ವಾಸ್ ಪಿಯು ಕಾಲೇಜು, ಮೂಡಬಿದಿರೆ

ಸಿಇಟಿ ಬ್ಯಾಚುಲರ್ ಆಫ್ ನ್ಯಾಚುರೋಪತಿ ಆ್ಯಂಡ್ ಯೋಗಿಕ್ ಸೈನ್ಸ್‌: ಮೇಘನ್ ಹೆಚ್​.ಕೆ – ಮೈಸೂರಿನ ಪ್ರಮತಿ ಹಿಲ್ ವ್ಯೂ ಅಕಾಡೆಮಿ ವರುಣ್ ಆದಿತ್ಯ- ಶ್ರೀ ಚೈತನ್ಯ ಟೆಕ್ನೋ ಕಾಲೇಜು, ಮಾರತ್ತಹಳ್ಳಿ ರೀತಮ್. ಬಿ. – ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು ಮೊಹಮ್ಮದ್ ಕೈಫ್ ಕೆ ಮುಲ್ಲಾ – ಆರ್​ಎಲ್ ಪಿಯು ಕಾಲೇಜು, ಬೆಳಗಾವಿ ಎಂ. ಹಯವದನ. ಎಸ್. – ವಿದ್ಯಾಕಿರಣ ಪಿಯು ಕಾಲೇಜು, ಬಳ್ಳಾರಿ

ಸಿಇಟಿ ಪಶುವೈದ್ಯಕೀಯ ವಿಜ್ಞಾನ ವಿಭಾಗ: ಮೇಘನ್ ಹೆಚ್​.ಕೆ. – ಮೈಸೂರಿನ ಪ್ರಮತಿ ಹಿಲ್ ವ್ಯೂ ಅಕಾಡೆಮಿ ವರುಣ್ ಆದಿತ್ಯ – ಶ್ರೀ ಚೈತನ್ಯ ಟೆಕ್ನೋ ಕಾಲೇಜು, ಮಾರತ್ತಹಳ್ಳಿ ರೀತಮ್ ಬಿ. – ಎಕ್ಸ್‌ಪರ್ಟ್ ಪಿಯು ಕಾಲೇಜು, ಮಂಗಳೂರು ಮೊಹಮ್ಮದ್ ಕೈಫ್ ಕೆ ಮುಲ್ಲಾ – ಆರ್​ಎಲ್​ ಪಿಯು ಕಾಲೇಜು, ಬೆಳಗಾವಿ ಎಂ. ಹಯವದನ. ಎಸ್. – ವಿದ್ಯಾಕಿರಣ ಪಿಯು ಕಾಲೇಜು, ಬಳ್ಳಾರಿ

ಸಿಇಟಿ ಬಿ ಫಾರ್ಮಾ ಮತ್ತು ಡಿ ಫಾರ್ಮಾ:

ಮೇಘನ್ ಎಚ್.ಕೆ.- ಪ್ರಮಥಿ ಹಿಲ್ ವ್ಯೂ ಅಕಾಡೆಮಿ, ಮೈಸೂರು ಪ್ರೇಮಂಕೂರ್ ಚಕ್ರಬರ್ತಿ- ನ್ಯಾಷನಲ್ ಪಬ್ಲಿಕ್ ಸ್ಕೂಲ್, ಯಲಹಂಕ, ಬೆಂಗಳೂರು ಬಿ.ಎಸ್.ಅನಿರುದ್ಧ್- ಆಕ್ಸಿಫರ್ಡ್ ಇಂಡಿಯಾ ಪಿಯು ಕಾಲೇಜು, ಉಲ್ಲಾಳ, ಬೆಂಗಳೂರು ನಿರಂಜನ ರೆಡ್ಡಿ ಬಿ.ಎಸ್.- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ವಿರಣ್ಣಪಾಳ್ಯ, ಬೆಂಗಳೂರು ವರುಣ್ ಆದಿತ್ಯ- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್, ಮಾರತ್ʼಹಳ್ಳಿ, ಬೆಂಗಳೂರು

ಸಿಇಟಿ ಫಲಿತಾಂಶ kea.kar.nic.in ವೆಬ್​ಸೈಟ್​ನಲ್ಲಿ ಲಭ್ಯವಿದೆ. ಆಗಸ್ಟ್ 28 ಮತ್ತು 29ರಂದು ನಡೆದಿದ್ದ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆಯ (KCET-2021) ಫಲಿತಾಂಶ ಇಂದು ಆನ್​ಲೈನ್​ನಲ್ಲಿ ಪ್ರಕಟವಾಗಿದೆ. ಪರೀಕ್ಷೆ ಬರೆದ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ  (KEA) ಅಧಿಕೃತ ವೆಬ್‌ಸೈಟ್ cetonline.karnataka.gov.in ನಲ್ಲಿ  ಫಲಿತಾಂಶವನ್ನು ಪರಿಶೀಲಿಸಬಹುದು. ಕರ್ನಾಟಕ ಸಿಇಟಿ ಫಲಿತಾಂಶವು ಅಭ್ಯರ್ಥಿಗಳು ಪಡೆದ ವಿಷಯವಾರು ಅಂಕಗಳು, ಒಟ್ಟು ಅಂಕಗಳು ಮತ್ತು ಶ್ರೇಣಿಯನ್ನು ಒಳಗೊಂಡಿರುತ್ತದೆ.

ಇದನ್ನೂ ಓದಿ: KCET Results 2021: ಸಿಇಟಿಯಲ್ಲಿ ಮೈಸೂರಿನ ಮೇಘನ್ ಹೆಚ್​.ಕೆ.ಗೆ ಮೊದಲ ರ್ಯಾಂಕ್; ವೆಬ್​ಸೈಟ್​ನಲ್ಲಿ ಫಲಿತಾಂಶ ಲಭ್ಯ

KCET Results 2021 LIVE: ಸಿಇಟಿ ಫಲಿತಾಂಶ ಪ್ರಕಟ; ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ

(KCET Result 2021 announced on Karnataka CET official Website KCET Rank List Mysore HK Meghan First Rank in CET)

Published On - 4:32 pm, Mon, 20 September 21

ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಡಿಸೆಂಬರ್ 29ರಂದು ನಿಧನರಾದ ದಿವಿನ್ ಫೆಬ್ರುವರಿ 22ರಂದು ಮದುವೆಯಾಗಲಿದ್ದರು
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಬಿಗ್​ ಬಾಸ್ ಮನೆಗೆ ಬಂದ ಗೌತಮಿ ಜಾದವ್ ಪತಿ​; ಹೇಗಿತ್ತು ಮಂಜು ರಿಯಾಕ್ಷನ್?
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ಭಾವುಕ ಜೀವಿ ಸಾರಾ ಮಹೇಶ್ ಗತಿಸಿದ ಚಿಂಟುಳನ್ನು ನೆನೆದು ಕಣ್ಣೀರಾಗುತ್ತಾರೆ!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ರಸ್ತೆ ತಡೆಗೋಡೆಯಿಲ್ಲದಿದ್ದರೆ ಬಸ್ಸು ಪ್ರಪಾತಕ್ಕೆ ಉರುಳುತಿತ್ತು!
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ಕೆಪಿಸಿಸಿ ಅಧ್ಯಕ್ಷನನ್ನು ಬದಲಾಯಿಸುವುದು ಹೈಕಮಾಂಡ್​ಗೆ ಬಿಟ್ಟ ವಿಚಾರ: ಸಚಿವ
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ತಂದೆ ಮುಖ ನೋಡಿ ಅಳು ನಿಲ್ಲಿಸಲೇ ಇಲ್ಲ ಉಗ್ರಂ ಮಂಜು; ಎಮೋಷನಲ್ ಎಪಿಸೋಡ್
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಪೊಲೀಸರ ಮೇಲೆ ಅಪಾರ ನಂಬಿಕೆಯಿದೆ, ಸಿಬಿಐ ತನಿಖೆ ಬೇಕಿಲ್ಲ: ಸಿದ್ದರಾಮಯ್ಯ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್​ನಿಂದ ಅಪಪ್ರಚಾರ: ಸಿಟಿ ರವಿ
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಯುವಕ ಯುವತಿಯರ ಜೊತೆ ಮಧ್ಯವಯಸ್ಕ ಮಹಿಳೆಯರೂ ಪಬ್​ಗೆ ಬಂದಿದ್ದರು
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ
ಹೊಸ ವರ್ಷಕ್ಕೆ ಸಿಹಿ ಸುದ್ದಿ ಕೊಟ್ಟ ಶಿವಣ್ಣ: ವಿಡಿಯೋ ನೋಡಿ