ಕರ್ನಾಟಕದಲ್ಲಿ ಎರಡು ವಾರ ತಡವಾಗಿ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆಗೆ ಸಚಿವರ ಪತ್ರ; ಪತ್ರಕ್ಕೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ
ಮೇ 16 ರಿಂದ ಶಾಲಾ ಆರಂಭ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಈಗಾಗಲೇ ತಿಳಿಸಿದೆ. ಕೊರೊನಾ ಕಾರಣದಿಂದ ಮಕ್ಕಳ ಕಲಿಕೆ ಹಿನ್ನಡೆಯಾಗಿರುವ ಕಾರಣ ಎರಡು ವಾರಗಳ ಬೇಸಿಗೆ ರಜೆ ಕಡಿತ ಮಾಡಿ ಮೇ 16ರಿಂದಲೇ ಶಾಲೆಗಳ ಆರಂಭಕ್ಕೆ ಮುಂದಾಗಿದೆ.
ಬೆಂಗಳೂರು: ರಾಜ್ಯದಲ್ಲಿ ಕೆಲವೆಡೆ ಮಳೆಯಾಗುತ್ತಿದೆ. ಇನ್ನು ಕೆಲ ಜಿಲ್ಲೆಗಳಲ್ಲಿ ಭಾರಿ ಬಿಸಿಲು. ಹೀಗಾಗಿ ಮಕ್ಕಳನ್ನು ಶಾಲೆಗೆ (School) ಕಳುಹಿಸಲು ಪೋಷಕರು ಹಿಂದೇಟು ಹಾಕುತ್ತಿದ್ದಾರೆ. ತೀವ್ರ ತಾಪಮಾನ ಏರಿಕೆ ಹಾಗೂ ಬಿಸಿಲಿನ ಕಾರಣಕ್ಕೆ ಇನ್ನು ಎರಡು ವಾರಗಳ ಬಳಿಕ ಶಾಲೆ ಆರಂಭಿಸುವಂತೆ ಕೋರಿ ಕೆಲವು ಸಚಿವರು, ಪರಿಷತ್ ಸದಸ್ಯರು ಹಾಗೂ ಪೋಷಕರು ಶಿಕ್ಷಣ ಇಲಾಖೆಗೆ (Education Department) ಪತ್ರ ಬರೆದು ಮನವಿ ಮಾಡಿದ್ದಾರೆ. ಮೇ 16 ರಿಂದ ಶಾಲಾ ಆರಂಭ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಈಗಾಗಲೇ ತಿಳಿಸಿದೆ. ಕೊರೊನಾ ಕಾರಣದಿಂದ ಮಕ್ಕಳ ಕಲಿಕೆ ಹಿನ್ನಡೆಯಾಗಿರುವ ಕಾರಣ ಎರಡು ವಾರಗಳ ಬೇಸಿಗೆ ರಜೆ ಕಡಿತ ಮಾಡಿ ಮೇ 16ರಿಂದಲೇ ಶಾಲೆಗಳ ಆರಂಭಕ್ಕೆ ಮುಂದಾಗಿದೆ.
ಆದರೆ ಶಾಲೆಗಳ ಆರಂಭ ಮೂಂದುಡಿಕೆಗೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧಿಸಿದೆ. ಮೇ ತಿಂಗಳ ಕೊನೆಯಲ್ಲಿ ಶಾಲೆಗಳನ್ನು ಆರಂಭಿಸುವಂತೆ ಮನವಿ ಮಾಡಿದ್ದ ಶಾಸಕರು, ಸಚಿವರು ಪತ್ರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಈಗಾಗಲೇ ಕೊವಿಡ್ನಿಂದ ಸಾಕಷ್ಟು ಕಲಿಕಾ ಹಿನ್ನಡೆಯಾಗಿದೆ. ಬಿಸಿಲಿನ ವಾತಾವರಣಕ್ಕೆ ಶಾಲೆ ಎರಡು ವಾರ ಮುಂದೂಡುವುದು ಸರಿಯಲ್ಲ. ತಾಪಮಾನ ಏರಿಕೆ ಇರುವ ಜಿಲ್ಲೆಗಳಲ್ಲಿ ಬೆಳಗಿನ ಅವಧಿಯ ನಾಲ್ಕು ಗಂಟೆಗಳ ಕಾಲ ಶಾಲೆ ಆರಂಭ ಮಾಡಬೇಕು. ಸರ್ಕಾರಿ ಶಾಲಾ ಶಿಕ್ಷಕರ ರಜೆ ಕಡಿತದ ಈ ಪೀತೂರಿಗೆ ಶಿಕ್ಷಣ ಇಲಾಖೆ ಮಣಿಯಬಾರದು. ಮೇ 16 ರಿಂದಲೇ ಶಾಲೆಗಳನ್ನು ಆರಂಭಿಸುವಂತೆ ಖಾಸಗಿ ಶಾಲೆಗಳ ಒಕ್ಕೂಟ ಮನವಿ ಮಾಡಿದೆ.
ಸೇತುಬಂಧ ಕಾರ್ಯಕ್ರಮ ನಡೆಸಲು ಶಾಲೆಗಳಿಗೆ ಸೂಚನೆ: ಮೇ 16ರಿಂದ ಜೂನ್ 15ರವರೆಗೆ, ಒಂದು ತಿಂಗಳ ಅವಧಿಗೆ ಸೇತುಬಂಧ ಕಾರ್ಯಕ್ರಮ ನಡೆಸಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ. ಮೇ 16ರಿಂದಲೇ ಮಕ್ಕಳ ದಾಖಲಾತಿ ಆರಂಭಿಸಿ, ಜುಲೈ 31ರೊಳಗೆ ಮುಗಿಸಬೇಕು. ಮೇ 14ರಿಂದ ತರಗತಿ ಆರಂಭಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಮೇ 16ರಿಂದ 20ರವರೆಗೆ ದಾಖಲಾತಿ ಆಂದೋಲನ ನಡೆಸಬೇಕು. ಜೂನ್ 1ರಿಂದ ಕಲಿಕಾ ಚೇತನ ಕಾರ್ಯಕ್ರಮದಡಿ ಪಠ್ಯ ಬೋಧನೆ ನಡೆಸಬೇಕು ಎಂದು ಶಿಕ್ಷಣ ಇಲಾಖೆ ಈಗಾಗಲೇ ಹೇಳಿದೆ.
ಇದನ್ನೂ ಓದಿ
ನ್ಯಾಯಾಂಗ ನಿಂದನೆ : ಆಂಧ್ರದ 3 ಐಎಎಸ್ ಅಧಿಕಾರಿಗಳಿಗೆ 1 ತಿಂಗಳು ಜೈಲು
ಪಿಎಸ್ಐ ಪರೀಕ್ಷಾ ಕೇಂದ್ರದಲ್ಲಿ ಕರ್ತವ್ಯದಲ್ಲಿದ್ದ ಕಲಬುರಗಿ 11 ಪೊಲೀಸ್ ಸಿಬ್ಬಂದಿ ಅಮಾನತು!
Published On - 11:52 am, Sat, 7 May 22