AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

NEET-PG 2026: ನೀಟ್–ಪಿಜಿ ಪರೀಕ್ಷೆಯ ವೇಳೆ ವಿದ್ಯುತ್ ಕಡಿತ; ಸೆಪ್ಟೆಂಬರ್ 5ಕ್ಕೆ ಮರುಪರೀಕ್ಷೆ ನಡೆಸಲು ನಿರ್ಧಾರ!

ಜೈಪುರದ ಐಒಎನ್ ಡಿಜಿಟಲ್ ವಲಯದಲ್ಲಿ ನಡೆದ ನೀಟ್-ಪಿಜಿ ಪರೀಕ್ಷೆಗೆ ವಿದ್ಯುತ್ ಕೈಕೊಟ್ಟ ಕಾರಣ ಭಾರಿ ಅವ್ಯವಸ್ಥೆ ಉಂಟಾಗಿದೆ. ಪರೀಕ್ಷೆ ಅರ್ಥಕ್ಕೆ ನಿಂತು, 311 ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಕಡಿತದಿಂದ ತೊಂದರೆಗೊಳಗಾದ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 5ರಂದು ಜೈಪುರದಲ್ಲೇ ಮರುಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇಂದು ನಡೆದ ಪರೀಕ್ಷೆಗೆ ದೇಶಾದ್ಯಂತ 2.73 ಲಕ್ಷ ವಿದ್ಯಾರ್ಥಿಗಳಲ್ಲಿ 2.65 ಲಕ್ಷ ಅಭ್ಯರ್ಥಿಗಳು 1,111 ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದರು.

NEET-PG 2026: ನೀಟ್–ಪಿಜಿ  ಪರೀಕ್ಷೆಯ ವೇಳೆ ವಿದ್ಯುತ್ ಕಡಿತ; ಸೆಪ್ಟೆಂಬರ್ 5ಕ್ಕೆ ಮರುಪರೀಕ್ಷೆ ನಡೆಸಲು ನಿರ್ಧಾರ!
ನೀಟ್–ಪಿಜಿ 2026
ಅಕ್ಷತಾ ವರ್ಕಾಡಿ
|

Updated on:Aug 30, 2026 | 2:59 PM

Share

ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸಲಿರುವ ನೀಟ್–ಪಿಜಿ 2026 ಪರೀಕ್ಷೆಯು ಇಂದು (ಆ.30) ನಡೆದಿದ್ದು, ಜೈಪುರದ ಸೀತಾಪುರದಲ್ಲಿರುವ ಐಒಎನ್ (iON) ಡಿಜಿಟಲ್ ವಲಯ ಪರೀಕ್ಷಾ ಕೇಂದ್ರದಲ್ಲಿಇದ್ದಕ್ಕಿದ್ದಂತೆ ವಿದ್ಯುತ್ ಸರಬರಾಜು ಸ್ಥಗಿತಗೊಂಡು ಭಾರಿ ಅವ್ಯವಸ್ಥೆ ಉಂಟಾಗಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಇದಾಗಿದ್ದರಿಂದ ವಿದ್ಯುತ್ ಕೈಕೊಟ್ಟ ಕಾರಣ ಪರೀಕ್ಷೆ ಅರ್ಥಕ್ಕೆ ನಿಂತಿದ್ದು, ಅಭ್ಯರ್ಥಿಗಳಲ್ಲಿಆಕ್ರೋಶ ಭುಗಿಲೆದ್ದಿದೆ.

ಸೀತಾಪುರ ಕೇಂದ್ರದಲ್ಲಿ ಭುಗಿಲೆದ್ದ ಅಭ್ಯರ್ಥಿಗಳ ಆಕ್ರೋಶ:

ಸೀತಾಪುರದ ಐಒಎನ್ ಡಿಜಿಟಲ್ ಜೋನ್ ಕೇಂದ್ರದಲ್ಲಿ ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 12:30 ರವರೆಗೆ ಪರೀಕ್ಷೆ ನಿಗದಿಯಾಗಿತ್ತು. ಆದರೆ ವಿದ್ಯುತ್ ವೈಫಲ್ಯದಿಂದಾಗಿ ಪರೀಕ್ಷೆ ಬರೆಯಲು ಆಗಮಿಸಿದ್ದ 311 ಅಭ್ಯರ್ಥಿಗಳು ತೀವ್ರ ತೊಂದರೆ ಎದುರಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದಲ್ಲಿ ಗದ್ದಲ ಸೃಷ್ಟಿಸಿ, ಆಡಳಿತ ಮಂಡಳಿಯ ಕಳಪೆ ವ್ಯವಸ್ಥೆಯನ್ನು ಪ್ರಶ್ನಿಸಿದರು. ವಿದ್ಯುತ್ ಕಡಿತದಿಂದ ತಮ್ಮ ಭವಿಷ್ಯ ಮತ್ತು ಪರೀಕ್ಷಾ ಕಾರ್ಯಕ್ಷಮತೆಯ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಅಭ್ಯರ್ಥಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್ 5 ರಂದು ಮರುಪರೀಕ್ಷೆ:

ಟಿಸಿಎಸ್ (TCS) ಕೇಂದ್ರದಲ್ಲಿ ಉಂಟಾದ ವಿದ್ಯುತ್ ವೈಫಲ್ಯದ ಪರಿಣಾಮ ಸೀತಾಪುರದ ಎರಡು ಐಒಎನ್ ಡಿಜಿಟಲ್ ವಲಯ ಕೇಂದ್ರಗಳ (41682 & 41683) ಪರೀಕ್ಷೆ ಪೂರ್ಣಗೊಂಡಿಲ್ಲ. ಹೀಗಾಗಿ ತೊಂದರೆಗೊಳಗಾದ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 5, 2026 ರ ಶನಿವಾರ ಮಧ್ಯಾಹ್ನ 3:00 ಗಂಟೆಗೆ ಜೈಪುರದಲ್ಲೇ ಮರುಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಅಭ್ಯರ್ಥಿಗಳಿಗೆ ಹೊಸ ಪ್ರವೇಶ ಪತ್ರ (Admit Card) ಮತ್ತು ಪರೀಕ್ಷಾ ಕೇಂದ್ರದ ವಿವರಗಳನ್ನು ಪ್ರತ್ಯೇಕವಾಗಿ ತಲುಪಿಸಲಾಗುತ್ತದೆ.

ಮತ್ತಷ್ಟು ಓದಿ: NEET-UG Exam: ಜೆಇಇ ಮಾದರಿಯಲ್ಲಿ ನೀಟ್-ಯುಜಿ ಪರೀಕ್ಷಾ ಕ್ರಾಂತಿ:ಆನ್‌ಲೈನ್ ಕಂಪ್ಯೂಟರ್ ಪರೀಕ್ಷೆ

ದೇಶಾದ್ಯಂತ NEET-PG 2026 ಪರೀಕ್ಷಾ ಅಂಕಿ-ಅಂಶಗಳು:

  • ಒಟ್ಟು ನೋಂದಾಯಿತ ಅಭ್ಯರ್ಥಿಗಳು: ದೇಶಾದ್ಯಂತ 2.73 ಲಕ್ಷ ವಿದ್ಯಾರ್ಥಿಗಳಲ್ಲಿ 2.65 ಲಕ್ಷ ಅಭ್ಯರ್ಥಿಗಳು 1,111 ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗಿದ್ದರು.
  • ಜೈಪುರ ನಗರದ ಸ್ಥಿತಿ: ಜೈಪುರದ 15 ಕೇಂದ್ರಗಳಲ್ಲಿ ಒಟ್ಟು 8,370 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಪರೀಕ್ಷಾ ಕೇಂದ್ರದ ಈ ಹಠಾತ್ ಎಡವಟ್ಟು ಜೈಪುರದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಭವಿಷ್ಯದಲ್ಲಿ ಇಂತಹ ತಾಂತ್ರಿಕ ಅಡಚಣೆಗಳು ಮರುಕಳಿಸದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಮತ್ತು ಪೋಷಕರು ಒತ್ತಾಯಿಸಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Sun, 30 August 26

Follow Us
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆ ಆದೇಶ: ಪ್ರಿಯಾಂಕ್ ಖರ್ಗೆ ಮಹತ್ವದ ಹೇಳಿಕೆ
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮಾಂಗಲ್ಯ ಮಾರಿಯಾದ್ರೂ ದುಡ್ಡು ಕೊಡ್ತೀವಿ, ನೀರು ಕೊಡಿ: ಮಹಿಳೆಯರ ಅಳಲು
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಮನೆ ಕೆಲಸದ ಹೆಸರಿನಲ್ಲಿ 'ಕಾಳಿಕಾಂಬ ಎಂಟರ್‌ಪ್ರೈಸಸ್' ವಂಚನೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಯಲ್ಲಮ್ಮನ ಗುಡ್ಡದ ಕಿರಾಣಿ ಅಂಗಡಿಗಳಲ್ಲಿ ಅಕ್ರಮವಾಗಿ ಔಷಧ ಮಾರಾಟ ಪತ್ತೆ
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಕಳೆದ ಅಧಿವೇಶನದಂತೆ ಈ ವಿಶೇಷ ಅಧಿವೇಶನದ ಕಲಾಪವೂ ವೇಸ್ಟ್ ಆಗುತ್ತಾ!
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಇಂದಿನಿಂದ ದಸರಾ ಗೋಲ್ಡ್ ಕಾರ್ಡ್, ವಿವಿಧ ಕಾರ್ಯಕ್ರಮಗಳ ಟಿಕೆಟ್‌ ಮಾರಾಟ ಆರಂಭ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಕಸ್ತೂರಿ ರಂಗನ್ ವರದಿ ಬಗ್ಗೆ ಚರ್ಚೆ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಹೆಚ್.ಕೆ. ಪಾಟೀಲ್ ಪತ್ರ ಉಲ್ಲೇಖಿಸಿ ಕಾಂಗ್ರೆಸ್ ವಿರುದ್ಧ JDS ವ್ಯಂಗ್ಯ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಬಿಗ್ ಬಾಸ್ ಮನೆಯಲ್ಲಿ ವೈಲೆಂಟ್ ಆದ ಜಗ್ಗಿ; ತೀವ್ರ ಸ್ವರೂಪ ಪಡೆದ ಜಗಳ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ
ಕಸ್ತೂರಿರಂಗನ್ ಯೋಜನೆ ಜನರಪರವಾದದ್ದು: ಉಪನ್ಯಾಸಕ ಡಾ. ಎಲ್. ಕೆ ಶ್ರೀಪತಿ