NEET UG 2023: ವೆಬ್‌ಸೈಟ್‌ನಲ್ಲಿನ ಸಮಸ್ಯೆಯಿಂದ ನೋಂದಣಿ ವಿಳಂಬ; ವಿದ್ಯಾರ್ಥಿಗಳ ಕಳವಳ
ವಿದ್ಯಾರ್ಥಿಗಳ ಬೇಡಿಕೆಯ ಮೇರೆಗೆ NEET UG 2023 ನೋಂದಣಿ ಪ್ರಕ್ರಿಯೆಯನ್ನು ಪುನಃ ತೆರೆಯಲಾಗಿದೆ. ಆದರೆ, ವೆಬ್‌ಸೈಟ್‌ನ ಸಮಸ್ಯೆಯಿಂದಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸಾಧ್ಯವಾಗಿಲ್ಲ.
ಬಹುನಿರೀಕ್ಷಿತ NEET UG 2023 ಅನ್ನು ಮೇ 7, 2023 ರಂದು ನಿಗದಿಪಡಿಸಲಾಗಿದೆ. ಪರೀಕ್ಷೆ ನಡೆಸುವ ಸಂಸ್ಥೆ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA), ಮಾರ್ಚ್ 6, 2023 ರಿಂದ ಏಪ್ರಿಲ್ 6, 2023 ರವರೆಗೆ ನೋಂದಣಿ (Registration) ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಆದರೆ, ವಿದ್ಯಾರ್ಥಿಗಳ ಬೇಡಿಕೆ ಮೇರೆಗೆ, ನೋಂದಣಿ ಪ್ರಕ್ರಿಯೆಯು ಏಪ್ರಿಲ್ 11, 2023 ರಿಂದ ಏಪ್ರಿಲ್ 13, 2023 ರವರೆಗೆ ಪುನಃ ತೆರೆಯಲಾಗಿದೆ (Re-open). ಆದಾಗ್ಯೂ, ವಿದ್ಯಾರ್ಥಿಗಳು NEET UG 2023 ನೋಂದಣಿ ಲಿಂಕ್ ಅಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗಲಿಲ್ಲ, ಏಕೆಂದರೆ, neet.nta.nic. ರಲ್ಲಿ ಕೆಲಸ ಮಾಡುತ್ತಿಲ್ಲ.
ಇದರ ಮಧ್ಯೆ, ನೋಂದಣಿ ಪ್ರಕ್ರಿಯೆಯಲ್ಲಿನ ವಿಳಂಬದ ಬಗ್ಗೆ ವಿದ್ಯಾರ್ಥಿಗಳು ಟ್ವಿಟರ್ ಮತ್ತು ಇತರ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಕಳವಳ ವ್ಯಕ್ತಪಡಿಸಲು ಪ್ರಾರಂಭಿಸಿದ್ದಾರೆ. ಈಗ, ಅವರು ಆದಷ್ಟು ಬೇಗ ಮತ್ತೆ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಕೇಳುತ್ತಿದ್ದಾರೆ.
ಅಧಿಕೃತ ಸೂಚನೆ
NTA ಬಿಡುಗಡೆ ಮಾಡಿದ ಅಧಿಕೃತ ಸೂಚನೆಯ ಪ್ರಕಾರ, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ, NEET ಪರೀಕ್ಷೆಯ ನೋಂದಣಿ ಪೋರ್ಟಲ್ ಅನ್ನು ಏಪ್ರಿಲ್ 11, 2023 ರಂದು ತೆರೆಯಲು ನಿರ್ಧರಿಸಲಾಗಿದೆ ಮತ್ತು ಏಪ್ರಿಲ್ 13, 2023 ರಂದು ಮುಚ್ಚಲಾಗುತ್ತದೆ. ವಿದ್ಯಾರ್ಥಿಗಳ ಬೇಡಿಕೆಯ ಮೇರೆಗೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಇದನ್ನೂ ಓದಿ: NEET UG 2023 ಪರೀಕ್ಷಾ ತಯಾರಿ; ಸಾಮಾನ್ಯವಾಗಿ ಮಾಡುವ 5 ತಪ್ಪುಗಳು
ಅಭ್ಯರ್ಥಿಗಳಿಂದ ಟ್ವೀಟ್‌ಗಳು
Hello @DG_NTA Kindly check website. New application registration page is not working, Again aspirants are in trouble and they are not able to fill #NEETUG2023 application form.#NEETUG #neet2023 #extendneetregistration2023 #NTAReopenNEETRegistration2023 #Extendneetregistration pic.twitter.com/qyaL35lf1H
— Dr Vivek pandey (@Vivekpandey21) April 11, 2023
#NEETUG2023 Till site under maintenance and not working, please fix it as soon as possible. pic.twitter.com/zDEh5INXDI
— Aftab Akram Khan (@aftab_khan_9) April 12, 2023
NTA extends the registration date for NEET UG 2023 but the registration website is still under maintenance. What’s the point of extending the date if we can’t even register? This is causing a lot of inconvenience to aspiring medical students.#NEETUG2023 #NEETUG #NEETUG23
— Shaikh Altamash Feroz (@AltamashFeroz) April 12, 2023