AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pariksha Pe Charcha 2025: ಪರೀಕ್ಷಾ ಪೆ ಚರ್ಚಾ: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ, ವೀಕ್ಷಿಸುವುದ್ಹೇಗೆ?

ಪರೀಕ್ಷೆಗಳ ಬಗ್ಗೆ ವಿದ್ಯಾರ್ಥಿಗಳಿಗಿರುವ ಆತಂಕವನ್ನು ದೂರ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಮ್ಮಿಕೊಂಡಿರುವ ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮ ಇಂದು ನಡೆಯಲಿದ್ದು, ಪ್ರಧಾನಿ ಮೋದಿ 36 ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಪ್ರಧಾನಿ ಮೋದಿ ಸಂವಾದದಲ್ಲಿ ಪರೀಕ್ಷೆಗಳು ಮತ್ತು ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸಲಹೆಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಬಾರಿಯ ಸಂವಾದವನ್ನು ದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನು ದೂರದರ್ಶನ ಮತ್ತು ಇತರ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ನೇರಪ್ರಸಾರ ವೀಕ್ಷಿಸಲು ಸಾಧ್ಯವಾಗುತ್ತದೆ.

Pariksha Pe Charcha 2025: ಪರೀಕ್ಷಾ ಪೆ ಚರ್ಚಾ: ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಸಂವಾದ, ವೀಕ್ಷಿಸುವುದ್ಹೇಗೆ?
ನರೇಂದ್ರ ಮೋದಿImage Credit source: Hindustan Times
Follow us
ನಯನಾ ರಾಜೀವ್
| Updated By: Digi Tech Desk

Updated on:Feb 10, 2025 | 9:08 AM

ಪ್ರಧಾನಿ ನರೇಂದ್ರ ಮೋದಿ ಇಂದು(ಫೆಬ್ರವರಿ10) ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮದ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರೊಂದಿಗೆ ಸಂವಾದ ನಡೆಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ  ಈ ಕಾರ್ಯಕ್ರಮವನ್ನು ಟಿವಿ, ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ವೀಕ್ಷಿಸಬಹುದು.

ಪ್ರಧಾನಿ ಮೋದಿ ಸಂವಾದದಲ್ಲಿ ಪರೀಕ್ಷೆಗಳು ಮತ್ತು ಜೀವನಕ್ಕೆ ಸಂಬಂಧಿಸಿದ ಪ್ರಮುಖ ಸಲಹೆಗಳನ್ನು ಹಂಚಿಕೊಳ್ಳಲಿದ್ದಾರೆ. ಈ ಬಾರಿಯ ಸಂವಾದವನ್ನು ದೆಹಲಿಯ ಭಾರತ್ ಮಂಟಪದಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮವನ್ನು ದೂರದರ್ಶನ ಮತ್ತು ಇತರ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಇದಲ್ಲದೆ, ವಿದ್ಯಾರ್ಥಿಗಳು ತಮ್ಮ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ನೇರಪ್ರಸಾರ ವೀಕ್ಷಿಸಲು ಸಾಧ್ಯವಾಗುತ್ತದೆ.

ವಿದ್ಯಾರ್ಥಿಗಳನ್ನು ಪರೀಕ್ಷಾ ಒತ್ತಡದಿಂದ ಮುಕ್ತಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶ. ಕಳೆದ ಕೆಲವು ವರ್ಷಗಳಲ್ಲಿ, ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸುವುದು, ಅವರ ಒತ್ತಡದ ಮಟ್ಟವನ್ನು ಕಡಿಮೆ ಮಾಡುವುದು ಮತ್ತು ಅವರು ಆರೋಗ್ಯವಾಗಿರಲು ಪ್ರೇರೇಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

36 ವಿದ್ಯಾರ್ಥಿಗಳು ಪ್ರಧಾನಿ ಮೋದಿ ಜತೆ ಮಾತನಾಡಲಿದ್ದಾರೆ ಪ್ರಧಾನಿ ಮೋದಿಯವರೊಂದಿಗೆ ನೇರವಾಗಿ ಸಂವಾದ ನಡೆಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ರಾಜ್ಯ/ಕೇಂದ್ರಾಡಳಿತ ಮಂಡಳಿಯ ಸರ್ಕಾರಿ ಶಾಲೆಗಳು, ಕೇಂದ್ರೀಯ ವಿದ್ಯಾಲಯ, ಸೈನಿಕ ಶಾಲೆಗಳು, ಏಕಲವ್ಯ ಮಾದರಿ ವಸತಿ ಶಾಲೆಗಳು, ಸಿಬಿಎಸ್‌ಇ ಮತ್ತು ನವೋದಯ ವಿದ್ಯಾಲಯಗಳಿಂದ 36 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ.

ಮತ್ತಷ್ಟು ಓದಿ: Pariksha Pe Charcha 2025: ಹೊಸ ಆಯಾಮದಲ್ಲಿ ಪರೀಕ್ಷಾ ಪೆ ಚರ್ಚಾ, ಮೋದಿ ಜತೆ ಇರಲಿದ್ದಾರೆ ದೀಪಿಕಾ ಪಡುಕೋಣೆ, ಸದ್ಗುರು

ಈ ಕಾರ್ಯಕ್ರಮಕ್ಕಾಗಿ ಇದಕ್ಕಾಗಿ 3.30 ಕೋಟಿಗೂ ಹೆಚ್ಚು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಆಯ್ಕೆಯಾದ ಸುಮಾರು 2,500 ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಖುದ್ದಾಗಿ ಭಾಗವಹಿಸುವ ಅವಕಾಶ ಪಡೆಯಲಿದ್ದಾರೆ. ದೂರದರ್ಶನ, PMO ನ ಅಧಿಕೃತ ಯೂಟ್ಯೂಬ್ ಚಾನೆಲ್, ಶಿಕ್ಷಣ ಸಚಿವಾಲಯ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೀಕ್ಷಿಸಬಹುದು.

ಈ ಕಾರ್ಯಕ್ರಮವನ್ನು ಪಿಐಬಿ, ಶಿಕ್ಷಣ ಸಚಿವಾಲಯ, ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಕಚೇರಿ ಇತ್ಯಾದಿಗಳ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಅದೇ ಸಮಯದಲ್ಲಿ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ದೂರದರ್ಶನ ಸೇರಿದಂತೆ ಹಲವು ಚಾನೆಲ್‌ಗಳಲ್ಲಿ ‘ಪರೀಕ್ಷಾ ಪೆ ಚರ್ಚಾ’ 2025 ಅನ್ನು ವೀಕ್ಷಿಸಬಹುದು. ಕೆಲವು ಶಾಲೆಗಳಲ್ಲಿ ಪರೀಕ್ಷಾ ಪೆ ಚರ್ಚಾ 2025 ರ ನೇರ ಪ್ರಸಾರಕ್ಕೂ ವ್ಯವಸ್ಥೆ ಮಾಡಲಾಗಿದೆ.

ಈ ಅತಿಥಿಗಳಿರಲಿದ್ದಾರೆ

ಪ್ರಧಾನಿ ಮೋದಿ ಅವರಲ್ಲದೆ, ಸದ್ಗುರು, ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ವಿಕ್ರಾಂತ್ ಮಾಸ್ಸೆ, ಮೇರಿ ಕೋಮ್, ಅವನಿ ಲೇಖರಾ ಅವರು ಈ ಚರ್ಚೆಯ ಭಾಗವಾಗಿರಲಿದ್ದಾರೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:42 am, Mon, 10 February 25

ಕುಡಿದ ಮತ್ತಿನಲ್ಲಿ ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಮಹಿಳೆ
ಕುಡಿದ ಮತ್ತಿನಲ್ಲಿ ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಮಹಿಳೆ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಬಿಆರ್ ಪಾಟೀಲ್ ಸಮಾಜವಾದಿ ಹಿನ್ನೆಲೆಯವರು, ಸಿಎಂ ಜೊತೆ ಸಲುಗೆಯಿದೆ: ರಾಜಣ್ಣ
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ಸ್ಥಳೀಯ ಪೋಲೀಸರ ಬಗ್ಗೆ ಕಳ್ಳರಿಗೆ ಕಿಂಚಿತ್ತೂ ಭಯವಿದ್ದಂತಿಲ್ಲ!
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ತೆಲಂಗಾಣ: ರೈಲ್ವೆ ಹಳಿ ಮೇಲೆ ಕಾರು ಚಲಾಯಿಸಿದ ಯುವತಿ
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಬಿಜೆಪಿ ಪ್ರಚಾರಕ್ಕಾಗಿ ಎಮರ್ಜೆನ್ಸಿ ವಿಚಾರ ಬಳಸಿಕೊಳ್ಳುತ್ತಿದೆ: ಶಿವಕುಮಾರ್
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ಕೇವಲ ಬೆಳಗಾವಿ ಮತ್ತು ಖಾನಾಪುರ ತಾಲೂಕುಗಳಲ್ಲಿ ಮಳೆಯಾಗುತ್ತಿದೆ: ಜಾರಕಿಹೊಳಿ
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ದೈವ ನುಡಿದಂತೆ ಮನೆಗೆ ಬಂದ ಅಣ್ಣ: ತಮ್ಮ ಹೇಳಿದ್ದಿಷ್ಟು
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ
ಚಿಕ್ಕಮಗಳೂರು: ಹಾಲಿನ ಟ್ಯಾಂಕರ್ ಪಲ್ಟಿ, ಹರಿಯಿತು ಹಾಲಿನ ಹೊಳೆ
ಕಬಿನಿ ಜಲಾಶಯಕ್ಕೆ ಶಿವಣ್ಣ-ಗೀತಕ್ಕ ಭೇಟಿ, ಮಕ್ಕಳೊಂದಿಗೆ ಬೆರೆತ ದಂಪತಿ
ಕಬಿನಿ ಜಲಾಶಯಕ್ಕೆ ಶಿವಣ್ಣ-ಗೀತಕ್ಕ ಭೇಟಿ, ಮಕ್ಕಳೊಂದಿಗೆ ಬೆರೆತ ದಂಪತಿ
ಮಗನಿಗಾಗಿ ಶಬರಿಯಂತೆ ಕಾಯ್ದ ತಾಯಿ, ದೈವದ ಮೊರೆ ಹೊಕ್ಕಿದ್ದ ಕುಟುಂಬ
ಮಗನಿಗಾಗಿ ಶಬರಿಯಂತೆ ಕಾಯ್ದ ತಾಯಿ, ದೈವದ ಮೊರೆ ಹೊಕ್ಕಿದ್ದ ಕುಟುಂಬ