‘ಮೇ ತಿಂಗಳಲ್ಲಿ ನಿಗದಿಯಾಗಿದ್ದ ಯಾವುದೇ ಆಫ್​ಲೈನ್ ಪರೀಕ್ಷೆಗಳನ್ನೂ ನಡೆಸಬೇಡಿ’-ಶಿಕ್ಷಣಸಂಸ್ಥೆಗಳಿಗೆ ಶಿಕ್ಷಣ ಇಲಾಖೆಯಿಂದ ಸೂಚನೆ

ದೇಶಾದ್ಯಂತ ಇರುವ ಎಲ್ಲ ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಟೆಕ್ನಾಲಜಿ ಆಫ್ ಇಂಡಿಯನ್ ಇನ್​ಸ್ಟಿಟ್ಯೂಟ್​ಗಳು, ಟೆಕ್ನಾಲಜಿ ಆಫ್​ ನ್ಯಾಷನಲ್ ಇನ್​ಸ್ಟಿಟ್ಯೂಟ್​ಗಳು ಮತ್ತು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳೂ ಈ ನಿಯಮ ಪಾಲಿಸಬೇಕು.

‘ಮೇ ತಿಂಗಳಲ್ಲಿ ನಿಗದಿಯಾಗಿದ್ದ ಯಾವುದೇ ಆಫ್​ಲೈನ್ ಪರೀಕ್ಷೆಗಳನ್ನೂ ನಡೆಸಬೇಡಿ’-ಶಿಕ್ಷಣಸಂಸ್ಥೆಗಳಿಗೆ ಶಿಕ್ಷಣ ಇಲಾಖೆಯಿಂದ ಸೂಚನೆ
ಸಾಂದರ್ಭಿಕ ಚಿತ್ರ
Follow us
Lakshmi Hegde
| Updated By: Digi Tech Desk

Updated on:May 04, 2021 | 10:08 AM

ದೆಹಲಿ: ಕೊವಿಡ್ 19 ಉಲ್ಬಣ ಆಗುತ್ತಿರುವ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ನಡೆಸಲು ತೀರ್ಮಾನಿಸಲಾಗಿದ್ದ ಆಫ್​ಲೈನ್​ (ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ಹೋಗಿ ಬರೆಯುವ) ಪರೀಕ್ಷೆಗಳನ್ನು ಮುಂದೂಡುವಂತೆ ಕೇಂದ್ರ ಉನ್ನತ ಶಿಕ್ಷಣ ಇಲಾಖೆ ಎಲ್ಲ ಶಿಕ್ಷಣಸಂಸ್ಥೆಗಳಿಗೂ ಪತ್ರದ ಮೂಲಕ ತಿಳಿಸಿದೆ. ಶಿಕ್ಷಣ ಸಂಸ್ಥೆಗಳು ಮೇ ತಿಂಗಳಲ್ಲಿ ನಡೆಸಲು ಆಯೋಜಿಸಿದ್ದ ಆಫ್​ಲೈನ್ ಪರೀಕ್ಷೆಗಳನ್ನು ಮುಂದೂಡಬೇಕು. ಆನ್​ಲೈನ್​ ಪರೀಕ್ಷೆಗಳನ್ನು ನಡೆಸಲು ಯಾವುದೇ ಅಡ್ಡಿಯಿಲ್ಲ ಎಂದು ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿ ಅಮಿತ್ ಖರೆ ಹೇಳಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಶಿಕ್ಷಣ ಸಂಸ್ಥೆಗಳನ್ನು ಒತ್ತಾಯಿಸಿದ್ದಾರೆ.

ಈ ಸೂಚನೆಯನ್ನು ದೇಶಾದ್ಯಂತ ಇರುವ ಎಲ್ಲ ಕೇಂದ್ರೀಯ ವಿಶ್ವವಿದ್ಯಾನಿಲಯಗಳು, ಟೆಕ್ನಾಲಜಿ ಆಫ್ ಇಂಡಿಯನ್ ಇನ್​ಸ್ಟಿಟ್ಯೂಟ್​ಗಳು, ಟೆಕ್ನಾಲಜಿ ಆಫ್​ ನ್ಯಾಷನಲ್ ಇನ್​ಸ್ಟಿಟ್ಯೂಟ್​ಗಳು ಮತ್ತು ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳೂ ಪಾಲಿಸಬೇಕು ಎಂದು ಶಿಕ್ಷಣ ಇಲಾಖೆ ತಿಳಿಸಿದೆ. ಹಾಗೇ, ಆಫ್​ಲೈನ್ ಪರೀಕ್ಷೆಗೆ ಸಂಬಂಧಪಟ್ಟ ನಿರ್ಧಾರಗಳನ್ನು ಜೂನ್​ ಮೊದಲವಾರದಲ್ಲಿ ನಡೆಸಲಾಗುವ ಸಭೆಯಲ್ಲಿ ಕೈಗೊಳ್ಳಲಾಗುವುದು ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಯಾವುದೇ ಶಿಕ್ಷಣಸಂಸ್ಥೆಯಲ್ಲಿ ಯಾರಿಗಾದರೂ ಏನಾದರೂ ನೆರವು ಬೇಕಿದ್ದರೆ ಸಂಸ್ಥೆ ಅವರ ಪರವಾಗಿ ನಿಲ್ಲಬೇಕು. ಹಾಗೇ, ಅಲ್ಲಿರುವವ ಅರ್ಹರು ಲಸಿಕೆ ತೆಗೆದುಕೊಳ್ಳುವಂತೆ ಸಂಸ್ಥೆ ಪ್ರೇರೇಪಿಸಬೇಕು ಎಂದು ಶಿಕ್ಷಣ ಇಲಾಖೆ ಸಲಹೆ ನೀಡಿದೆ.

ಇದನ್ನೂ ಓದಿ: ಚಾಮರಾಜನಗರ ಜಿಲ್ಲಾಸ್ಪತ್ರೆ ಸೆಕ್ಯುರಿಟಿ ಗಾರ್ಡ್​ ಬಿಚ್ಚಿಟ್ಟ ಅಸಲಿ ಮುಖ | ಇವ್ರು ಎಲ್ಲಾ ಮುಚ್ಚಿಡ್ತಾರೆ ಸರ್…

ಆಸ್ಪತ್ರೆಗೆ ದಾಖಲಿಸಿಕೊಳ್ಳದಿದ್ದರೆ ಜೋರ್ ಮಾಡಬೇಕು, ಅಲ್ಲೇ ಧರಣಿ ಕೂರಬೇಕು; ಸಿದ್ದರಾಮಯ್ಯರಿಂದ ಶಾಸಕಿ ಕುಸುಮಾ ಶಿವಳ್ಳಿಗೆ ಪಾಠ

Published On - 10:58 pm, Mon, 3 May 21