Scholarship 2023: UG, PG ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಫೆ.16 ಕೊನೆಯ ದಿನ

| Updated By: ನಯನಾ ಎಸ್​ಪಿ

Updated on: Feb 14, 2023 | 6:45 PM

ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸಿ ಅವರ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡುವುದರ ಮೂಲಕ ಇಂತಹ ಪ್ರತಿಭೆಗಳು ಭಾರತದ ಬೆಳವಣಿಗೆಗೆ ಕೊಡುಗೆ ನೀಡಬೇಕು ಎನ್ನುವುದೇ ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನದ ಗುರಿ. ಅರ್ಜಿ ಸಲ್ಲಿಸಲು ಫೆಬ್ರವರಿ ೧೬ ಕೊನೆಯ ದಿನಾಂಕ

Scholarship 2023: UG, PG ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಫೆ.16 ಕೊನೆಯ ದಿನ
ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನ
Image Credit source: Relaince Foundation
Follow us on

ಭಾರತದಲ್ಲಿ ಒಟ್ಟು ಜನಸಂಖ್ಯೆಯ ಅರ್ಧದಷ್ಟು, 25 ವರ್ಷದೊಳಗಿನವರು ಇದ್ದಾರೆ. ರಿಲಯನ್ಸ್ ಫೌಂಡೇಶನ್ ಭಾರತದಲ್ಲಿ ಉನ್ನತ ಶಿಕ್ಷಣಕ್ಕೆ ಯುವಕರನ್ನು ಪ್ರೋತ್ಸಾಹಿಸಲು ಮುಂದಾಗಿದೆ. ಒಟ್ಟು 5,000 ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬೆಂಬಲಿಸುವ ಗುರಿಯನ್ನು ಹೊಂದಿದೆ. ರಿಲೈನ್ಸ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವವರು scholarships.reliancefoundation.org ಅಧಿಕೃತ ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಫೆಬ್ರವರಿ 16 ಕೊನೆಯ ದಿನಾಂಕ. ಆರ್ಥಿಕ ಹೊರೆಯಿಲ್ಲದೆ ವಿದ್ಯಾರ್ಥಿಗಳು ತಮ್ಮ ಅಧ್ಯಯನವನ್ನು ಮುಂದುವರಿಸಲು ಈ ವಿದ್ಯಾರ್ಥಿವೇತನ ಅಧಿಕಾರ ನೀಡುತ್ತದೆ. ವಿದ್ಯಾರ್ಥಿಗಳು ಯಶಸ್ವಿ ವೃತ್ತಿಪರರಾಗಿ ತಮ್ಮ ಕನಸುಗಳನ್ನು ನನಸಾಗಿಸಲು, ತಮ್ಮನ್ನು ಮತ್ತು ತಮ್ಮ ಸಮುದಾಯಗಳನ್ನು ಮೇಲಕ್ಕೆತ್ತುವ ಸಾಮರ್ಥ್ಯವನ್ನು ಪಡೆಯಲು ಮತ್ತು ಭಾರತದ ಭವಿಷ್ಯದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಲು ವಿದ್ಯಾರ್ಥಿಗಳು ಸಾಮರ್ಥ್ಯರಾಗಬೇಕು ಎನ್ನುವ ಗುರಿಯಿಟ್ಟುಕೊಂಡು ರಿಲಯನ್ಸ್ ಫೌಂಡೇಶನ್ ವಿದ್ಯಾರ್ಥಿವೇತನವನ್ನು ನೀಡುವುದಕ್ಕೆ ಮುಂದಾಗಿದೆ.

ವಿದ್ಯಾರ್ಥಿವೇತನದ ವೈಶಿಷ್ಟ್ಯಗಳು:

  • ದೇಶದೆಲ್ಲೆಡೆ ಇರುವ ಪದವಿಪೂರ್ವ/ಸ್ನಾತಕೋತ್ತರ ಪದವಿ ಕಾಲೇಜು ಶಿಕ್ಷಣ ಪಡೆಯಲಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಬೆಂಬಲಿಸುವುದು.
  • ತಮ್ಮ ಆಯ್ಕೆಯ ಯಾವುದೇ ಸ್ಟ್ರೀಮ್ ಅನ್ನು ಅಧ್ಯಯನ ಮಾಡುವ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಈ ವಿದ್ಯರ್ಥಿವೇತನ ದೊರಕುವಂತೆ ಮಾಡುವುದು. ಪ್ರತಿಭಾವಂತ ವಿದ್ಯಾರ್ಥಿಗಳ ಅರ್ಹತೆ ಮತ್ತು ಪೋಷಕರ ಆರ್ಥಿಕ ಸ್ಥಿತಿಯ (merit-cum-means) ಆಧಾರದ ಮೇಲೆ ವಿದ್ಯಾರ್ಥಿವೇತನ ನೀಡಲಾಗುತ್ತದೆ
  • 5,000 ಪದವಿಪೂರ್ವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ
  • 100 ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
  • ಪದವಿ ಕಾರ್ಯಕ್ರಮದ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ನೀಡಲಾಗುವ ಒಟ್ಟು ವಿದ್ಯಾರ್ಥಿವೇತನದ ಮೊತ್ತವು 2 ಲಕ್ಷ ರೂ. ಗಳವರೆಗೆ ಇರುತ್ತದೆ
  • ಸ್ಕಾಲರ್‌ಶಿಪ್, ಹಣಕಾಸಿನ ಬೆಂಬಲವನ್ನು ಮಾತ್ರವಲ್ಲದೆ ವಿದ್ಯಾರ್ಥಿಗಳು ಹಳೆಯ ವಿದ್ಯಾರ್ಥಿಗಳ ಮೂಲಕ ನೆಟ್‌ವರ್ಕಿಂಗ್ ಅವಕಾಶಗಳನ್ನು ಪಡೆಯುತ್ತಾರೆ. ಹಳೆಯ ವಿದ್ಯಾರ್ಥಿಗಳ ಸಹಾಯದಿಂದ ಒಳ್ಳೆಯ ಸಂಸ್ಥೆಯಲ್ಲಿ ಕೆಲಸ ಮಾಡುವ ಅವಕಾಶ ಸಿಗಬಹುದು.

ಪದವಿಪೂರ್ವ ವಿದ್ಯಾರ್ಥಿಗಳ ಅರ್ಹತಾ ಮಾನದಂಡ

  • ರಿಲೈನ್ಸ್ ಫೌಂಡೇಶನ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿ ಪಿಯುಸಿಯಲ್ಲಿ ಕನಿಷ್ಠ 60% ಪಡೆದಿರಬೇಕು.
  • ಪಿಯುಸಿ ನಂತರ ಭಾರತದ ಯಾವುದೇ ಕಾಲೇಜಿನಲ್ಲಿ ಯಾವುದೇ ಸ್ಟ್ರೀಮ್‌ನಲ್ಲಿ 1 ನೇ ವರ್ಷದ ಪೂರ್ಣ ಸಮಯದ ಪದವಿಪೂರ್ವ ಪದವಿಗೆ ಸೇರಿಕೊಂಡಿರಬೇಕು
  • ವಿದ್ಯಾರ್ಥಿಯು ಭಾರತದಲ್ಲಿ ನೆಲೆಸಿರುವ ಭಾರತೀಯ ಪ್ರಜೆಯಾಗಿರಬೇಕು
  • ಪೋಷಕರ ವಾರ್ಷಿಕ ಆದಾಯ ರೂ. 15 ಲಕ್ಷಗಳ ಕೆಳಗಿರಬೇಕು. (ರೂ. 2.5 ಲಕ್ಷಕ್ಕಿಂತ ಕೆಳಗಿರುವವರಿಗೆ ಆದ್ಯತೆ ನೀಡಲಾಗುವುದು)

ಅರ್ಜಿ ಸಲ್ಲಿಸಲು, ವಿದ್ಯಾರ್ಥಿಗಳು ಮೊದಲು ವಿದ್ಯಾರ್ಥಿವೇತನಕ್ಕಾಗಿ scholarships.reliancefoundation.org ಅಧಿಕೃತ ವೆಬ್‍ಸೈಟ್‍ನಲ್ಲಿ ನೋಂದಾಯಿಸಿಕೊಳ್ಳಬೇಕು. ಒಮ್ಮೆ ನೀವು ನೋಂದಾಯಿಸಿದ ನಂತರ, ನಿಮ್ಮ ಲಾಗ್-ಇನ್ ವಿವರಗಳೊಂದಿಗೆ ಇಮೇಲ್ ಅನ್ನು ಸ್ವೀಕರಿಸುತ್ತೀರಿ.

ಲಾಗ್-ಇನ್ ಆದ ಬಳಿಕ ನೀವು ಆಪ್ಟಿಟ್ಯೂಡ್ ಪರೀಕ್ಷೆಯನ್ನು ಬರೆಯಬೇಕು. ಇದಾದ ನಂತರ ನಿಮ್ಮ ಪಿಯುಸಿ ಅಂಕ, ಆಪ್ಟಿಟ್ಯೂಡ್ ಪರೀಕ್ಷಾ ಅಂಕ, ಪೋಷಕರ ವಾರ್ಷಿಕ ಆದಾಯವನ್ನೆಲ್ಲ ಪರಿಗಣಿಸಿ ಮಾರ್ಚ್ 2023 ರಲ್ಲಿ ವಿದ್ಯಾರ್ಥಿವೇತನವನ್ನು ಪಡೆಯಲಿರುವ 5000 ವಿದ್ಯಾರ್ಥಿಗಳ ಹೆಸರನ್ನು ಘೋಷಿಸುತ್ತಾರೆ.

ಇದನ್ನೂ ಓದಿ: ಯುಪಿಎಸ್​ಸಿ ಪರೀಕ್ಷೆಯನ್ನು ಮೊದಲ ಪ್ರಯತ್ನದಲ್ಲೇ ಪಾಸ್ ಮಾಡಲು ಇಲ್ಲಿದೆ ಟಿಪ್ಸ್

ಸ್ನಾತಕೋತ್ತರ ವಿದ್ಯಾರ್ಥಿಗಳ ಅರ್ಹತಾ ಮಾನದಂಡ

  • ಅರ್ಜು ಸಲ್ಲಿಸುವ ವಿದ್ಯಾರ್ಥಿ ಭಾರತೀಯ ನಿವಾಸಿ ಮತ್ತು ಭಾರತೀಯ ಪ್ರಜೆಯಾಗಿರಬೇಕು.
  • ಸ್ನಾತಕೋತ್ತರ ವಿದ್ಯಾರ್ಥಿವೇತನಕ್ಕೆ ವಿದ್ಯಾರ್ಥಿಯು ಗೇಟ್ ಪರೀಕ್ಷೆಯಲ್ಲಿ 550 – 1,000 ಅಂಕಗಳನ್ನು ಗಳಿಸಿದ ಮೊದಲ ವರ್ಷದ ಪಿಜಿ ವಿದ್ಯಾರ್ಥಿಯಾಗಿರಬೇಕು.
    ಅಥವಾ
  • ಗೇಟ್‌ಗೆ ಪ್ರಯತ್ನಿಸಡಿದ್ದರೆ ತಮ್ಮ ಪದವಿಪೂರ್ವ CGPA ನಲ್ಲಿ 7.5 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಯಾಗಿರಬೇಕು (ಅಥವಾ CGPA ಗೆ % ಸಾಮಾನ್ಯೀಕರಿಸಲಾಗಿದೆ)
  • ಅರ್ಹ ಪದವಿ ಕಾರ್ಯಕ್ರಮಗಳು – ಕಂಪ್ಯೂಟರ್ ಸೈನ್ಸ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್, ಗಣಿತ ಮತ್ತು ಕಂಪ್ಯೂಟಿಂಗ್, ಎಲೆಕ್ಟ್ರಿಕಲ್/ಅಥವಾ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್., ಕೆಮಿಕಲ್ ಇಂಜಿನಿಯರಿಂಗ್., ಮೆಕ್ಯಾನಿಕಲ್ ಇಂಜಿನಿಯರ್., ರಿನ್ಯೂಯಬಲ್ & ನ್ಯೂ ಎನರ್ಜಿ, ವಿಜ್ಞಾನ ಮತ್ತು ಎಂಜಿನಿಯರಿಂಗ್, ಮತ್ತು ಲೈಫ್ ಸೈನ್ಸಸ್.

ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:18 pm, Tue, 14 February 23