Dropout Rankings: ಹೈಸ್ಕೂಲ್​ನಲ್ಲೇ ವಿದ್ಯಾಭ್ಯಾಸಕ್ಕೆ ಗುಡ್​ಬೈ, ಮೇಘಾಲಯ ನಂ.1, ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?

|

Updated on: Jun 12, 2023 | 9:23 PM

2023-24ರ "ಸಮಗ್ರ ಶಿಕ್ಷಾ" ಕಾರ್ಯಕ್ರಮದ ಅನುಷ್ಠಾನದ ಕುರಿತು ಚರ್ಚಿಸಲು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ನಡೆದ ಯೋಜನಾ ಅನುಮೋದನೆ ಮಂಡಳಿ ಸಭೆಗಳ ನಡಾವಳಿಗಳಿಂದ ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ.

Dropout Rankings: ಹೈಸ್ಕೂಲ್​ನಲ್ಲೇ ವಿದ್ಯಾಭ್ಯಾಸಕ್ಕೆ ಗುಡ್​ಬೈ, ಮೇಘಾಲಯ ನಂ.1, ಕರ್ನಾಟಕ ಎಷ್ಟನೇ ಸ್ಥಾನದಲ್ಲಿದೆ ಗೊತ್ತಾ?
ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಲ್ಲಿ ಹೈಸ್ಕೂಲ್​ ಮಟ್ಟದಲ್ಲೇ ಶಾಲೆ ತೊರೆಯುವ ವಿದ್ಯಾರ್ಥಿಗಳ ಪ್ರಮಾಣ ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಳವಾಗಿದೆ
Image Credit source: careeraddict
Follow us on

ಬೆಂಗಳೂರು: ಮಾಧ್ಯಮಿಕ ಶಿಕ್ಷಣದಿಂದಲೇ (Secondary school) ವಿದ್ಯಾಭ್ಯಾಸ ಕೊನೆಗಾಣಿಸುವ ವಿದ್ಯಾರ್ಥಿಗಳ ಪ್ರಮಾಣದ ನೋಡಿ ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ 2030ರ ವೇಳೆಗೆ ಶೇ 100ರಷ್ಟು ಒಟ್ಟು ದಾಖಲಾತಿ ದರ ಸಾಧಿಸುವ ಗುರಿಯನ್ನು ಕೇಂದ್ರ ಸರ್ಕಾರ ಕಳವಳಗೊಂಡಿದೆ. ಮೇಘಾಲಯ, ಗುಜರಾತ್, ಬಿಹಾರ, ಕರ್ನಾಟಕ, ಅಸ್ಸಾಂ ಮತ್ತು ಪಂಜಾಬ್​ನಲ್ಲಿ ಹೈಸ್ಕೂಲ್​ನಲ್ಲೇ (High School Dropout) ಶಾಲೆ ಬಿಡುವ ಪ್ರಮಾಣವು 2021-22ರಲ್ಲಿ ರಾಷ್ಟ್ರೀಯ ಸರಾಸರಿ ಶೇಕಡಾ 12.6 ಕ್ಕಿಂತ ಹೆಚ್ಚಾಗಿದೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ. 2021-22ನೇ ಸಾಲಿನಲ್ಲಿ ಡ್ರಾಪ್​ಔಟ್ ಆದ ವಿದ್ಯಾರ್ಥಿಗಳ ಪ್ರಮಾಣವನ್ನು ರಾಜ್ಯವಾರು ನೋಡುವುದಾದರೆ ಅಗ್ರಸ್ಥಾನದ ಕುಖ್ಯಾತಿಯನ್ನು ಮೇಘಾಲಯ ಪಡೆದುಕೊಂಡಿದೆ. ಕರ್ನಾಟಕ (Karnataka) 7ನೇ ಸ್ಥಾನದಲ್ಲಿದೆ.

2023-24ರ “ಸಮಗ್ರ ಶಿಕ್ಷಾ” ಕಾರ್ಯಕ್ರಮದ ಅನುಷ್ಠಾನದ ಕುರಿತು ಚರ್ಚಿಸಲು ಶಿಕ್ಷಣ ಸಚಿವಾಲಯದ ಅಡಿಯಲ್ಲಿ ನಡೆದ ಯೋಜನಾ ಅನುಮೋದನೆ ಮಂಡಳಿ ಸಭೆಗಳ ನಡಾವಳಿಗಳಿಂದ ಈ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳೊಂದಿಗಿನ ಸಭೆಗಳು ಈ ವರ್ಷದ ಮಾರ್ಚ್ ಮತ್ತು ಮೇ ನಡುವೆ ನಡೆದಿದ್ದವು.

ಪ್ರಸ್ತುತ ರಾಜಸ್ಥಾನದಲ್ಲಿ ಡ್ರಾಪ್​ಔಟ್​ ಆಗುತ್ತಿರುವ ವಿದ್ಯಾರ್ಥಿಗಳ ಪ್ರಮಾಣದಲ್ಲಿ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ. ರಾಷ್ಟ್ರೀಯ ಸರಾಸರಿಗಿಂತ (12.6) ಹೆಚ್ಚಾಗಿಲ್ಲವಾಗಿದರೂ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಈ ಪೈಕಿ ಮುಸ್ಲಿಂ ವಿದ್ಯಾರ್ಥಿಗಳೇ ಹೆಚ್ಚು (ಶೇಕಡಾ 18) ಡ್ರೌಪ್​ಔಟ್ ಮಾಡುತ್ತಿದ್ದಾರೆ. ಶೇ.9ರಷ್ಟು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಹೈಸ್ಕೂಲ್​ನಲ್ಲೇ ವಿದ್ಯಾಭ್ಯಾಸ ಕೊನೆಗೊಳಿಸುತ್ತಿದ್ದಾರೆ.

ಇದನ್ನೂ ಓದಿ: KCET Results 2023: ಜೂನ್ 14ರಂದು ಕೆ-ಸೆಟ್ ಪರೀಕ್ಷಾ ಫಲಿತಾಂಶ ಪ್ರಕಟ ಸಾಧ್ಯತೆ, ಫಲಿತಾಂಶ ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

ಮಧ್ಯಪ್ರದೇಶದಲ್ಲಿ ಕೈಗೊಂಡ ಕ್ರಮಗಳಿಂದಾಗಿ ಡ್ರಾಪ್​ಔಟ್ ಪ್ರಮಾಣದಲ್ಲಿ ಸುಧಾರಣೆಯಾಗಿದೆ. 2020-21ರಲ್ಲಿ ಇದ್ದ ಶಾಲೆ ತೊರೆಯುವ ವಿದ್ಯಾರ್ಥಿಗಳ ಸಂಖ್ಯೆ ಶೇ. 23.8 ರಿಂದ ಶೇ. 10.1ಕ್ಕೆ (2021-22ನೇ ಸಾಲಿನಲ್ಲಿ) ಇಳಿಕೆಯಾಗಿದೆ. ಶಾಲಾ ದಾಖಲಾತಿಗಾಗಿ ವಿಶೇಷ ಅಭಿಯಾನ, ಮೊಬೈಲ್ ಆ್ಯಪ್​ ನೆರವಿನಿಂದ ಮನೆಮನೆ ಸಮೀಕ್ಷೆಯಂತ ವಿಶೇಷ ಕ್ರಮಗಳನ್ನು ಅಲ್ಲಿನ ಶಿಕ್ಷಣ ಇಲಾಖೆ ಕೈಗೊಂಡಿತ್ತು.

ಉತ್ತರ ಪ್ರದೇಶ, ಮಹಾರಾಷ್ಟ್ರದಲ್ಲೂ ಶಾಲೆ ಬಿಡುವ ಮಕ್ಕಳ ಪ್ರಮಾಣದಲ್ಲಿ ಕಡಿಮೆಯಾಗಿದೆ. ಪಶ್ಚಿಮ ಬಂಗಾಳದಲ್ಲಿಯೂ 2020-21 ರಿಂದ 2021-22 ರವರೆಗೆ ವಿಶೇಷವಾಗಿ ಪ್ರಾಥಮಿಕ ಹಂತದಲ್ಲಿ ಡ್ರಾಪ್ಔಟ್ ದರವು ಗಣನೀಯವಾಗಿ ಸುಧಾರಿಸಿದೆ. ಮಕ್ಕಳನ್ನು ಶಾಲೆಯತ್ತ ಸೆಳೆಯಲು ಕೈಗೊಂಡ ವಿಶೇಷ ಕ್ರಮಗಳಿಂದಾಗಿ ಈ ಸುಧಾರಣೆ ಕಂಡಿದೆ. ಆದರೆ ಈ ರಾಜ್ಯಗಳಲ್ಲಿ ಶಾಲೆ ಬಿಡುವವರ ಪ್ರಮಾಣ ಹೆಚ್ಚಿದೆ.

2021-22ರಲ್ಲಿ ವಿವಿಧ ರಾಜ್ಯಗಳಲ್ಲಿನ ಡ್ರಾಪ್ಔಟ್ ದರ (ಶೇಕಡಾವಾರು)

  • ಮೇಘಾಲಯ: ಶೇ. 21.7
  • ಬಿಹಾರದಲ್ಲಿ: ಶೇ. 20.46
  • ಗುಜರಾತ್‌: ಶೇ. 17.85
  • ಅಸ್ಸಾಂ: ಶೇ. 20.3
  • ಆಂಧ್ರಪ್ರದೇಶ: ಶೇ. 16.7
  • ಪಂಜಾಬ್: ಶೇ. 17.2
  • ಕರ್ನಾಟಕ: ಶೇ. 14.6

ಭಾರತದಲ್ಲಿ 33 ಪ್ರತಿಶತ ಹೆಣ್ಣುಮಕ್ಕಳು ಮನೆಗೆಲಸದ ಕಾರಣದಿಂದ ಶಾಲೆಯನ್ನು ಬಿಡುತ್ತಾರೆ ಎಂದು ಕಳೆದ ವರ್ಷ ವಿಶ್ವಸಂಸ್ಥೆಯ ಮಕ್ಕಳ ನಿಧಿಯ ಸಮೀಕ್ಷೆಯು ತಿಳಿಸಿತ್ತು. ಶಾಲೆ ಬಿಟ್ಟ ನಂತರ ಮಕ್ಕಳು ತಂದೆ-ತಾಯಿ ಜೊತೆ ಸೇರಿ ಕೂಲಿ ಕೆಲಸ ಮಾಡುವುದು ಅಥವಾ ಬೇರೆಯವರ ಮನೆಗಳನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ತೊಡಗಿಕೊಂಡಿರುವುದು ಬಯಲಾಗಿತ್ತು.

ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:18 pm, Mon, 12 June 23