KCET Results 2023: ಜೂನ್ 14ರಂದು ಕೆ-ಸೆಟ್ ಪರೀಕ್ಷಾ ಫಲಿತಾಂಶ ಪ್ರಕಟ ಸಾಧ್ಯತೆ, ಫಲಿತಾಂಶ ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ

Karnataka Common Entrance Test Result 2023: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ಫಲಿತಾಂಶವು ಜೂನ್ 14 ರ ಒಳಗಾಗಿ ಪ್ರಕಟಿಸುವ ಸಾಧ್ಯತೆ ಇದೆ.

KCET Results 2023: ಜೂನ್ 14ರಂದು ಕೆ-ಸೆಟ್ ಪರೀಕ್ಷಾ ಫಲಿತಾಂಶ ಪ್ರಕಟ ಸಾಧ್ಯತೆ, ಫಲಿತಾಂಶ ಪರಿಶೀಲಿಸುವುದು ಹೇಗೆ? ಇಲ್ಲಿದೆ ಮಾಹಿತಿ
ಜೂನ್ 14ರಂದು ಕೆ-ಸೆಟ್ ಪರೀಕ್ಷಾ ಫಲಿತಾಂಶ ಪ್ರಕಟ ಸಾಧ್ಯತೆ
Follow us
Rakesh Nayak Manchi
|

Updated on: Jun 12, 2023 | 8:28 PM

ಬೆಂಗಳೂರು: ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (KCET) ಫಲಿತಾಂಶವು ಜೂನ್ 14 ರ ಒಳಗಾಗಿ ಪ್ರಕಟಿಸುವ ಸಾಧ್ಯತೆಯಿದೆ. ಫಲಿತಾಂಶವನ್ನು ಜೂನ್ 12 ರಂದು ಘೋಷಿಸಲು ಯೋಜಿಸುತ್ತಿದ್ದರೂ, ಈಗ ಅದನ್ನು ಜೂನ್ 14 ರಂದು ಬಿಡುಗಡೆ ಮಾಡಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA)  ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.

“ಸೋಮವಾರದಂದು ಫಲಿತಾಂಶ ಪ್ರಕಟ ಮಾಡಲು ದಿನಾಂಕ ನಿಗದಿಪಡಿಸಲಾಗಿತ್ತು. ಆದಾಗ್ಯೂ ಕೆಲವು ಆಂತರಿಕ ಪರಿಶೀಲನೆಗಳ ಹಿನ್ನೆಲೆ ಜೂನ್ 14 ರಂದು ಪ್ರಕಟಿಸಲಾಗುವುದು” ಎಂದು ಕೆಇಎ ಅಧಿಕಾರಿಯೊಬ್ಬರು ತಿಳಿಸಿದ್ದಾಗಿ ಇಂಡಿಯನ್ ಎಕ್ಸ್​ಪ್ರೆಸ್ ವರದಿ ಮಾಡಿದೆ. “ಜೂನ್ 14 ಸಂಜೆಯೊಳಗೆ ಫಲಿತಾಂಶಗಳನ್ನು ಪ್ರಕಟಿಸುವ ಸಾಧ್ಯತೆ ಇದೆ” ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಎಸ್ ಅವರು ಟಿಎನ್‌ಐಇಗೆ ಮಾಹಿತಿ ನೀಡಿದ್ದಾರೆ.

ಫಲಿತಾಂಶ ಪರಿಶೀಲನೆ ಹೇಗೆ?

KCET ಸ್ಕೋರ್ ಕಾರ್ಡ್ ಅನ್ನು ಅಧಿಕೃತ ವೆಬ್‌ಸೈಟ್‌ಗಳಾದ www.kea.kar.nic.in, www.cetonline.karnataka.gov.in ಮತ್ತು www.karresults.nic.in ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ತಮ್ಮ ಕರ್ನಾಟಕ CET ಫಲಿತಾಂಶ 2023 ಅನ್ನು ಪ್ರವೇಶಿಸಲು ತಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.

ಇದನ್ನೂ ಓದಿ: MBBS Deadline: 9 ವರ್ಷದೊಳಗೆ ಎಂಬಿಬಿಎಸ್ ಮುಗಿಸಬೇಕು: ನ್ಯಾಷನಲ್ ಮೆಡಿಕಲ್ ಕಮಿಷನ್​ನಿಂದ ಹೊಸ ನಿಯಮಾವಳಿ

ಮೇ 20 ಮತ್ತು 22 ರಂದು ನಡೆದ ಕರ್ನಾಟಕ ಸಿಇಟಿಗೆ ಈ ಬಾರಿ ಒಟ್ಟು 2.60 ಲಕ್ಷ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಒಟ್ಟು 1.4 ಲಕ್ಷ ಮಹಿಳಾ ಅಭ್ಯರ್ಥಿಗಳು ಮತ್ತು 1.21 ಲಕ್ಷ ಪುರುಷ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲು ನೋಂದಾಯಿಸಿಕೊಂಡಿದ್ದರು. ಒಟ್ಟಾರೆಯಾಗಿ 2.5 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 592 ಕೇಂದ್ರಗಳಲ್ಲಿ ಕೆಸಿಇಟಿ ನಡೆಸಲಾಗಿದ್ದು, ಈ ಪೈಕಿ 121 ಕೇಂದ್ರಗಳು ಬೆಂಗಳೂರಿನಲ್ಲಿದ್ದವು.

ಈ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾದ ನಂತರ, ಕೌನ್ಸೆಲಿಂಗ್ ವೇಳಾಪಟ್ಟಿಗೆ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು KEA ಬಿಡುಗಡೆ ಮಾಡುತ್ತದೆ. ಅದಾಗ್ಯೂ, ಪರೀಕ್ಷೆಗೆ ಹಾಜರಾದ ಸುಮಾರು 30,000 ಅಭ್ಯರ್ಥಿಗಳ ವಿವರಗಳಲ್ಲಿ ವ್ಯತ್ಯಾಸ ಕಂಡುಬಂದಿದೆ. ಕೆಇಎ ಪ್ರಕಾರ, ಜೂನ್ 12, 11 ರ ಗಡುವಿನೊಳಗೆ ಸಮಸ್ಯೆಯನ್ನು ಸರಿಪಡಿಸುವ ಅವಕಾಶ ಇತ್ತು. ಸರಿಪಡಿಸದಿದ್ದರೆ ಅಂತಹ ಅಭ್ಯರ್ಥಿಗಳನ್ನು ಸಾಮಾನ್ಯ ಮೆರಿಟ್ ಕೋಟಾದ ಅಡಿಯಲ್ಲಿ ಪರಿಗಣಿಸಲಾಗುತ್ತದೆ. ಆರ್‌ಡಿ ಸಂಖ್ಯೆ ಹೊಂದಿಕೆಯಾಗದ ಅಭ್ಯರ್ಥಿಗಳು ಕೋಟಾ ವ್ಯವಸ್ಥೆಯಡಿ ಕಾಯ್ದಿರಿಸಿದ ಸೀಟುಗಳಿಗೆ ಅರ್ಹರಾಗಿರುವುದಿಲ್ಲ.

ಶೈಕ್ಷಣಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ