MBBS Deadline: 9 ವರ್ಷದೊಳಗೆ ಎಂಬಿಬಿಎಸ್ ಮುಗಿಸಬೇಕು: ನ್ಯಾಷನಲ್ ಮೆಡಿಕಲ್ ಕಮಿಷನ್ನಿಂದ ಹೊಸ ನಿಯಮಾವಳಿ
NMC Regulations On Medical Education: ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳು, ಈ ಕೋರ್ಸ್ಗೆ ದಾಖಲಾದ ದಿನದಿಂದ ಆರಂಭವಾಗಿ 9 ವರ್ಷದೊಳಗೆ ಕೋರ್ಸ್ ಪೂರ್ಣಗೊಳಿಸಬೇಕು. 9 ವರ್ಷದ ಬಳಿಕ ವಿದ್ಯಾರ್ಥಿಗೆ ಈ ಕೋರ್ಸ್ ಮುಂದುವರಿಸಲು ಅವಕಾಶ ಇರುವುದಿಲ್ಲ. ಇದು ಎನ್ಎಂಸಿ ಹೊರಡಿಸಿರುವ ಹೊಸ ನಿಯಮಾವಳಿಯಲ್ಲಿದೆ.
ನವದೆಹಲಿ: ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳು 9 ವರ್ಷದೊಳಗೆ ಕೋರ್ಸ್ ಪೂರ್ಣಗೊಳಿಸಬೇಕು. ಮೊದಲ ವರ್ಷದ ಕೋರ್ಸ್ ಅನ್ನು ಪೂರ್ಣಗೊಳಿಸಲು ಗರಿಷ್ಠ 4 ಪ್ರಯತ್ನಗಳು ಮಾತ್ರ ಇರುತ್ತವೆ. ಇವು ರಾಷ್ಟ್ರೀಯ ವೈದ್ಯಕೀಯ ಆಯೋಗ (NMC- National Medical Commission) ಪ್ರಕಟಿಸಿರುವ ಹೊಸ ನಿಯಮಾವಳಿಗಳಲ್ಲಿ ಪ್ರಸ್ತಾಪಿತವಾಗಿವೆ. ಅಲ್ಲದೇ, ನೀಟ್ ಪರೀಕ್ಷೆಯಲ್ಲಿ (NEET UG Exam) ಬಂದ ಶ್ರೇಯಾಂಕ ಪಟ್ಟಿಯ ಪ್ರಕಾರ ದೇಶದ ಎಲ್ಲಾ ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಕೋರ್ಸ್ಗಳ ದಾಖಲಾತಿಗಾಗಿ ಕಾಮನ್ ಕೌನ್ಸಲಿಂಗ್ ಇರಲಿದೆ ಎಂದು ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ರೆಗ್ಯುಲೇಶನ್ಸ್ 2023 (GMER-23) ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಜೂನ್ 2ರಂದು ನ್ಯಾಷನಲ್ ಮೆಡಿಕಲ್ ಕಮಿಷನ್ ಈ ಹೊಸ ನಿಯಮಾವಳಿಗಳ ಗೆಜೆಟ್ ಅಧಿಸೂಚನೆ ಹೊರಡಿಸಿದೆ.
ಎನ್ಎಂಸಿ ಒದಗಿಸುವ ಸೀಟ್ ಮ್ಯಾಟ್ರಿಕ್ಸ್ ಆಧಾರದ ಮೇಲೆ ಕೌನ್ಸಲಿಂಗ್ ಇರುತ್ತದೆ. ಅಗತ್ಯ ಇದ್ದಲ್ಲಿ ಒಂದಕ್ಕಿಂತ ಹೆಚ್ಚು ಸುತ್ತುಗಳ ಕೌನ್ಸಲಿಂಗ್ಗೆ ಅವಕಾಶ ಇರುತ್ತದೆ. ಅಂಡರ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಬೋರ್ಡ್ (UGMEB) ಕಾಮನ್ ಕೌನ್ಸಲಿಂಗ್ ಹೇಗೆ ನಡೆಯಬೇಕೆಂದು ಮಾರ್ಗಸೂಚಿ ಪ್ರಕಟಿಸುತ್ತದೆ. ಅದರ ಪ್ರಕಾರ ಸೆಕ್ಷನ್ 17ರ ಅಡಿಯಲ್ಲಿ ನಿಯೋಜಿತ ಅಧಿಕಾರಿಯಿಂದ ಕೌನ್ಸಲಿಂಗ್ ನಡೆಯಬೇಕು ಎಂದು ಎನ್ಎಂಸಿ ಗೆಜೆಟ್ನಲ್ಲಿ ತಿಳಿಸಲಾಗಿದೆ. ಕೌನ್ಸಲಿಂಗ್ಗೆ ನಿಯೋಜಿತ ಅಧಿಕಾರಿಯನ್ನು ಸರ್ಕಾರವೇ ನೇಮಿಸಲಿದೆ. ಈ ನಿಯಮಾವಳಿಗಳನ್ನು ಮೀರಿ ಯಾವ ಶಿಕ್ಷಣ ಸಂಸ್ಥೆಯೂ ಅಭ್ಯರ್ಥಿಯನ್ನು ದಾಖಲಿಸಿಕೊಳ್ಳುವಂತಿಲ್ಲ ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: UPSC Prelims Result 2023: UPSC ಸಿವಿಲ್ ಸರ್ವೀಸಸ್ ಪ್ರಿಲಿಮ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟ
ಎಂಬಿಬಿಎಸ್ ಕೋರ್ಸ್ ಪೂರ್ಣಗೊಳಿಸಲು ಗಡುವು
ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳು, ಈ ಕೋರ್ಸ್ಗೆ ದಾಖಲಾದ ದಿನದಿಂದ ಆರಂಭವಾಗಿ 9 ವರ್ಷದೊಳಗೆ ಕೋರ್ಸ್ ಪೂರ್ಣಗೊಳಿಸಬೇಕು. 9 ವರ್ಷದ ಬಳಿಕ ವಿದ್ಯಾರ್ಥಿಗೆ ಈ ಕೋರ್ಸ್ ಮುಂದುವರಿಸಲು ಅವಕಾಶ ಇರುವುದಿಲ್ಲ. ಮೊದಲ ವರ್ಷದ ಶಿಕ್ಷಣವನ್ನು ಗರಿಷ್ಠ 4 ಅಟೆಂಪ್ಟ್ನಲ್ಲಿ ಮುಗಿಸಲು ಅವಕಾಶ ನೀಡಲಾಗಿದೆ. ಮೆಡಿಕಲ್ ಇಂಟರ್ನ್ಶಿಪ್ ಮುಗಿದ ಬಳಿಕವಷ್ಟೇ ಗ್ರಾಜುಯೇಶನ್ ಪೂರ್ಣಗೊಂಡಂತೆ. ಈ ಎಲ್ಲಾ ಅಂಶಗಳು ಎನ್ಎಂಸಿ ಹೊರಡಿಸಿದ ಹೊಸ ನಿಯಮಾವಳಿಗಳಲ್ಲಿ ಇವೆ.
ಶಿಕ್ಷಣ ವಿಭಾಗದಲ್ಲಿ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ