Study MBBS in China: ಚೀನಾದಲ್ಲಿ MBBS ಅಧ್ಯಯನಕ್ಕೆ ತಗಲುವ ವೆಚ್ಚವೆಷ್ಟು? ಭಾರತಕ್ಕಿಂತ ಎಷ್ಟು ಅಗ್ಗ?
ಭಾರತದಲ್ಲಿ ಎಂಬಿಬಿಎಸ್‌ನ ದುಬಾರಿ ಶುಲ್ಕದಿಂದಾಗಿ ಅನೇಕ ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ವೃತ್ತಿಯ ಕನಸುಗಳನ್ನು ಬಿಟ್ಟುಬಿಡುತ್ತಿದ್ದಾರೆ. ಆದರೆ ಚೀನಾ ಒಂದು ಆರ್ಥಿಕ ಪರಿಹಾರವಾಗಿದೆ. ಚೀನಾದಲ್ಲಿ ಎಂಬಿಬಿಎಸ್ ಕೋರ್ಸ್ ಭಾರತಕ್ಕಿಂತ ಕಡಿಮೆ ವೆಚ್ಚದಲ್ಲಿ, ಇಂಗ್ಲಿಷ್ ಮಾಧ್ಯಮದಲ್ಲಿದೆ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತದೆ. ಅರ್ಹತಾ ಮಾನದಂಡಗಳು ಮತ್ತು ಅಗತ್ಯ ದಾಖಲೆಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ಸಾಕಷ್ಟು ವಿದ್ಯಾರ್ಥಿಗಳಿಗೆ ಡಾಕ್ಟರ್ ಆಗಬೇಕು ಎಂಬ ಕನಸಿರುತ್ತದೆ. ಭಾರತದಲ್ಲಿನ ಎಂಬಿಬಿಎಸ್‌ನ ಭಾರೀ ಶುಲ್ಕವು ಆ ಕನಸಿಗೆ ಅಡ್ಡಿಯಾಗಿ ಸಾಕಷ್ಟು ವಿದ್ಯಾರ್ಥಿಗಳು ಕನಸನ್ನು ಅರ್ಥದಲ್ಲೇ ಬಿಡುವುದುಂಟು. ಆದರೆ ಈಗ ಚಿಂತಿಸುವ ಅಗತ್ಯವಿಲ್ಲ. ಚೀನಾ ನಿಮ್ಮ ವೈದ್ಯಕೀಯ ಅಧ್ಯಯನವನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಪೂರ್ಣಗೊಳಿಸುವ ಆಯ್ಕೆಯಾಗಿ ಹೊರಹೊಮ್ಮಿದೆ. ಹೌದು ಭಾರತದಲ್ಲಿ ಎಂಬಿಬಿಎಸ್ ಅಧ್ಯಯನಕ್ಕೆ 60 ರಿಂದ 90 ಲಕ್ಷ ರೂಪಾಯಿಗಳವರೆಗೆ ವೆಚ್ಚವಾದರೆ, ಚೀನಾದಲ್ಲಿ ಅದೇ ಕೋರ್ಸ್ ಕೇವಲ 30 ರಿಂದ 50 ಲಕ್ಷ ರೂಪಾಯಿಗಳಿಗೆ ಲಭ್ಯವಿದೆ. ಈ ಮೊತ್ತವು ಬೋಧನಾ ಶುಲ್ಕ, ಹಾಸ್ಟೆಲ್, ಆಹಾರ ಮತ್ತು ಇತರ ಅಗತ್ಯ ವೆಚ್ಚಗಳನ್ನು ಒಳಗೊಂಡಿದೆ. ಇದರರ್ಥ ವಿದೇಶದಿಂದ ಪದವಿ ಪಡೆಯುವ ಮೂಲಕ ವೈದ್ಯನಾಗುವ ಕನಸು ಈಗ ಮಧ್ಯಮ ವರ್ಗದ ಕುಟುಂಬಗಳಿಗೂ ನನಸಾಗಿಸಬಹುದು.
ಚೀನಾದ ವೈದ್ಯಕೀಯ ವಿಶ್ವವಿದ್ಯಾಲಯಗಳ ವಿಶೇಷವೆಂದರೆ ಇಲ್ಲಿನ ಅನೇಕ ಕಾಲೇಜುಗಳು ಅಂತರರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣವನ್ನು ನೀಡುತ್ತವೆ. ಅಷ್ಟೇ ಅಲ್ಲ, ಭಾರತಕ್ಕೆ ಹೋಲಿಸಿದರೆ ಚೀನಾದ ಜೀವನ ಮಟ್ಟವು ಆರ್ಥಿಕವಾಗಿಯೂ ಕಡಿಮೆಯಾಗಿದೆ. ಆಹಾರ, ಸಾರಿಗೆ ಮತ್ತು ವೈದ್ಯಕೀಯ ಚಿಕಿತ್ಸೆಯ ವೆಚ್ಚಗಳು ಇಲ್ಲಿ ತುಂಬಾ ಕಡಿಮೆ.
ಇದನ್ನೂ ಓದಿ: ಷೇರು ಮಾರುಕಟ್ಟೆ ಸ್ಟಾಕ್ ಬ್ರೋಕರ್ ಆಗಲು ಪಿಯುಸಿ ಬಳಿಕ ಯಾವ ಕೋರ್ಸ್ ಮಾಡಬೇಕು?
ಚೀನಾದಲ್ಲಿ ಎಂಬಿಬಿಎಸ್ ಕೋರ್ಸ್‌ನ ಅವಧಿ ಆರು ವರ್ಷಗಳು. ಇದರಲ್ಲಿ ಐದು ವರ್ಷಗಳ ತರಗತಿ ಅಧ್ಯಯನ ಮತ್ತು ಒಂದು ವರ್ಷದ ಇಂಟರ್ನ್‌ಶಿಪ್ ಸೇರಿವೆ. ಚೀನಾದಲ್ಲಿ ವೈದ್ಯಕೀಯ ಶಿಕ್ಷಣದ ಜನಪ್ರಿಯತೆ ನಿರಂತರವಾಗಿ ಹೆಚ್ಚುತ್ತಿದೆ. ಇದಕ್ಕೆ ಒಂದು ದೊಡ್ಡ ಕಾರಣವೆಂದರೆ ಅಲ್ಲಿ ಲಭ್ಯವಿರುವ ವಿದ್ಯಾರ್ಥಿವೇತನ, ಇದು ಅನೇಕ ವಿದ್ಯಾರ್ಥಿಗಳಿಗೆ ಆರ್ಥಿಕವಾಗಿ ಸಹಾಯವಾಗಲಿದೆ.
ಚೀನಾದಲ್ಲಿ ಎಂಬಿಬಿಎಸ್‌ಗೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಯ ವಯಸ್ಸು ಕನಿಷ್ಠ 17 ವರ್ಷಗಳು. ಅಲ್ಲದೆ, 12 ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯಗಳಲ್ಲಿ ಶೇ.50 ಅಂಕಗಳನ್ನು ಪಡೆಯುವುದು ಕಡ್ಡಾಯವಾಗಿದೆ. ಇದಲ್ಲದೆ, ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಸಹ ಅಗತ್ಯವಾಗಿದೆ. ವೈದ್ಯಕೀಯ ಫಿಟ್‌ನೆಸ್ ಪ್ರಮಾಣಪತ್ರವೂ ಅಗತ್ಯವಾಗಿದೆ.
ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




