Success Story: ಮನಸಿದ್ದರೆ ಮಾರ್ಗ; ರಿಕ್ಷಾ ಚಾಲಕನ ಮಗ ಈಗ ಹಿರಿಯ ಐಎಎಸ್​ ಅಧಿಕಾರಿ

|

Updated on: Oct 25, 2023 | 11:31 AM

2004-05ರಲ್ಲಿ ಗೋವಿಂದ್‌ ಯುಪಿಎಸ್‌ಸಿ ಓದಲು ದೆಹಲಿಗೆ ತೆರಳಿದ್ದರು. ಆದರೆ ತಂದೆಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಆದರೂ ಅವರ ತಂದೆ ತನ್ನ ಮಗನ ಕನಸನ್ನು ನನಸಾಗಿಸಲು ನಿರ್ಧರಿಸಿದರು. ಹೀಗಾಗಿ, ಮತ್ತೆ ತಮ್ಮ 14 ಸೈಕಲ್ ರಿಕ್ಷಾಗಳನ್ನು ಮಾರಾಟ ಮಾಡಿದರು.

Success Story: ಮನಸಿದ್ದರೆ ಮಾರ್ಗ; ರಿಕ್ಷಾ ಚಾಲಕನ ಮಗ ಈಗ ಹಿರಿಯ ಐಎಎಸ್​ ಅಧಿಕಾರಿ
ತಂದೆಯ ಜೊತೆ ಐಎಎಸ್​ ಅಧಿಕಾರಿ ಗೋವಿಂದ್ ಜೈಸ್ವಾಲ್
Follow us on

ವಾರಾಣಸಿ: ನನ್ನ ಕೈಯಲ್ಲಿ ಆಗುವುದಿಲ್ಲ ಎಂದು ಕುಳಿತರೆ ಅದೇ ನಮ್ಮ ಸೋಲಿಗೆ ದೊಡ್ಡ ಕಾರಣವಾಗುತ್ತದೆ. ಮನಸಿಟ್ಟು ಮಾಡಿದ ಕೆಲಸ ನಮ್ಮ ಕೈ ಹಿಡಿದೇ ಹಿಡಿಯುತ್ತದೆ ಎಂಬುದಕ್ಕೆ 2006ರಲ್ಲಿ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಗೋವಿಂದ್ ಜೈಸ್ವಾಲ್ ಅವರೇ ಉದಾಹರಣೆ. ತಮ್ಮ 22ನೇ ವಯಸ್ಸಿನಲ್ಲಿ 48ನೇ ರ್ಯಾಂಕ್​ನೊಂದಿಗೆ ತೇರ್ಗಡೆಯಾಗಿರುವ ಗೋವಿಂದ್ ಜೈಸ್ವಾಲ್ ಅವರ ಕತೆ ಬಹಳ ಸ್ಫೂರ್ತಿದಾಯಕವಾಗಿದೆ. ಏಕೆಂದರೆ ಅವರ ತಂದೆ ಓರ್ವ ಸೈಕಲ್ ರಿಕ್ಷಾ ಚಾಲಕರಾಗಿದ್ದರು.

ಗೋವಿಂದ್ ಅವರ ಕುಟುಂಬ ವಾರಾಣಸಿಯಲ್ಲಿ ವಾಸವಾಗಿತ್ತು. ಅವರ ತಂದೆ ಮೊದಲು 35 ಸೈಕಲ್ ರಿಕ್ಷಾಗಳನ್ನು ಇಟ್ಟುಕೊಂಡಿದ್ದರು. ಆದರೆ, ಅವರು ತಮ್ಮ ತಾಯಿಯ ಅನಾರೋಗ್ಯದ ಹಣವನ್ನು ಹೊಂದಿಸಲು ಅವರು ಅವುಗಳಲ್ಲಿ 20 ಸೈಕಲ್ ರಿಕ್ಷಾಗಳನ್ನು ಮಾರಾಟ ಮಾಡಬೇಕಾಯಿತು. ಅದೇ ವರ್ಷ ಅವರ ತಾಯಿ ಅನಾರೋಗ್ಯಕ್ಕೆ ಒಳಗಾಗಿದ್ದರು.

ಇದನ್ನೂ ಓದಿ: Success Story: ದಿನಕ್ಕೆ 10 ರೂ. ದುಡಿಯುತ್ತಿದ್ದ ದಿನಗೂಲಿ ನೌಕರ ಈಗ ಐಎಎಸ್​ ಅಧಿಕಾರಿ!

2004-05ರಲ್ಲಿ ಗೋವಿಂದ್‌ ಯುಪಿಎಸ್‌ಸಿ ಓದಲು ದೆಹಲಿಗೆ ತೆರಳಿದ್ದರು. ಆದರೆ ತಂದೆಯ ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಆದರೂ ಅವರ ತಂದೆ ತನ್ನ ಮಗನ ಕನಸನ್ನು ನನಸಾಗಿಸಲು ನಿರ್ಧರಿಸಿದರು. ಹೀಗಾಗಿ, ಮತ್ತೆ ತಮ್ಮ 14 ಸೈಕಲ್ ರಿಕ್ಷಾಗಳನ್ನು ಮಾರಾಟ ಮಾಡಿದರು. ಕೊನೆಗೆ ತನಗಾಗಿ ಕೇವಲ ಒಂದು ಸೈಕಲ್ ರಿಕ್ಷಾವನ್ನು ಇಟ್ಟುಕೊಂಡಿದ್ದರು.

ಗೋವಿಂದ್ ಅವರ ತಂದೆ ಕಾಲಿನ ಸಮಸ್ಯೆಯಿಂದ ಬಳಲುತ್ತಿದ್ದರೂ ತಲೆಕೆಡಿಸಿಕೊಳ್ಳದೆ ಸೈಕಲ್ ರಿಕ್ಷಾ ಓಡಿಸಿಕೊಂಡು ಜೀವನ ಸಾಗಿಸುತ್ತಿದ್ದರು. ತನ್ನ ಹೆಂಡತಿ, ತಾಯಿ, ಮಗನಿಗಾಗಿ ಗೋವಿಂದ್ ಅವರ ತಂದೆ ತಮ್ಮದೆಲ್ಲವನ್ನೂ ತ್ಯಾಗ ಮಾಡಿದರು. ಅದನ್ನು ಮನಸಿನಲ್ಲಿಟ್ಟುಕೊಂಡು ಕಷ್ಟಪಟ್ಟು ಓದಿದ ಗೋವಿಂದ್ ಯುಪಿಎಸ್​ಸಿ ಪರೀಕ್ಷೆಯಲ್ಲಿ ಪಾಸ್ ಆದರು.

ಇದನ್ನೂ ಓದಿ: Success Story: 16ನೇ ವರ್ಷದಲ್ಲೇ ಶ್ರವಣ ಶಕ್ತಿ ಕಳೆದುಕೊಂಡ ಸೌಮ್ಯ ಈಗ ಐಎಎಸ್​ ಅಧಿಕಾರಿ

ಶ್ರದ್ಧೆ ಮತ್ತು ಕಠಿಣ ಪರಿಶ್ರಮದಿಂದ ಓದಿದ ಗೋವಿಂದ್ 48ನೇ ರ್ಯಾಂಕ್ ಪಡೆದು ಇದೀಗ ಹಿರಿಯ ಐಎಎಸ್ ಅಧಿಕಾರಿಗಳಲ್ಲಿ ಒಬ್ಬರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಇದೀಗ ಯುಪಿಎಸ್​ಸಿ ಪರೀಕ್ಷೆ ಬರೆಯಲು ಪ್ರಯತ್ನಿಸುತ್ತಿರುವ ಎಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ