UGC NET Result: ಇಂದು ಯುಜಿಸಿ- ನೆಟ್ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಈ ವೆಬ್​ಸೈಟ್​ಗೆ ಭೇಟಿ ನೀಡಿ

| Updated By: ಸುಷ್ಮಾ ಚಕ್ರೆ

Updated on: Nov 05, 2022 | 7:35 AM

ಇಂದು ನೆಟ್ ಫಲಿತಾಂಶ ಬಿಡುಗಡೆಯಾಗಲಿದ್ದು, ಮೊದಲ ಹಂತದ ನೆಟ್ ಪರೀಕ್ಷೆಯ ಜುಲೈ 9ರಿಂದ 12ರವರೆಗೆ ನಡೆದಿತ್ತು. 2ನೇ ಹಂತದ ಪರೀಕ್ಷೆ ಸೆಪ್ಟೆಂಬರ್ 20ರಿಂದ 22ರವರೆಗೆ ನಡೆದಿತ್ತು.

UGC NET Result: ಇಂದು ಯುಜಿಸಿ- ನೆಟ್ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಈ ವೆಬ್​ಸೈಟ್​ಗೆ ಭೇಟಿ ನೀಡಿ
ಸಾಂದರ್ಭಿಕ ಚಿತ್ರ
Follow us on

ನವದೆಹಲಿ: ಯುಜಿಸಿ ನೆಟ್ ಫಲಿತಾಂಶದ ದಿನಾಂಕವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಘೋಷಿಸಿದ್ದು, ಇಂದು (ನವೆಂಬರ್ 5) ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (UGC NET) ಫಲಿತಾಂಶವನ್ನು ಬಿಡುಗಡೆ ಮಾಡಲಿದೆ. ನೆಟ್ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು ಅಧಿಕೃತ ವೆಬ್​ಸೈಟ್​ಗಳಾದ nta.ac.in ಮತ್ತು ugcnet.nta.nic.inಗೆ ಭೇಟಿ ನೀಡಿ ಫಲಿತಾಂಶವನ್ನು ನೋಡಬಹುದು.

ಇಂದು ನೆಟ್ ಫಲಿತಾಂಶ ಬಿಡುಗಡೆಯಾಗಲಿದ್ದು, ಈ ಬಗ್ಗೆ ಯುಜಿಸಿ ಅಧ್ಯಕ್ಷ ಮಾಮಿದಾಳ ಜಗದೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ. “ಯುಜಿಸಿ- ನೆಟ್ ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನವೆಂಬರ್ 5ರಂದು (ಶನಿವಾರ) ಪ್ರಕಟಿಸಲಿದೆ. ಫಲಿತಾಂಶಗಳು NTA ವೆಬ್‌ಸೈಟ್ https://nta.ac.in#UGC-NET ನಲ್ಲಿ ಲಭ್ಯವಿರುತ್ತವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: Shocking News: ಪರೀಕ್ಷೆಯ ಕಾಪಿ ಚೀಟಿಯನ್ನು ಲವ್ ಲೆಟರ್ ಎಂದುಕೊಂಡ ಬಾಲಕಿ; ನಡೆದೇ ಹೋಯ್ತು ಬರ್ಬರ ಹತ್ಯೆ!

ಮೊದಲ ಹಂತದ ನೆಟ್ ಪರೀಕ್ಷೆಯ ಜುಲೈ 9ರಿಂದ 12ರವರೆಗೆ ನಡೆದಿತ್ತು. 2ನೇ ಹಂತದ ಪರೀಕ್ಷೆ ಸೆಪ್ಟೆಂಬರ್ 20ರಿಂದ 22ರವರೆಗೆ ನಡೆದಿತ್ತು. UGC NET 2022 ಪರೀಕ್ಷೆಯ 3ನೇ ಹಂತ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 1ರವರೆಗೆ ನಡೆದಿತ್ತು. 4ನೇ ಹಂತ ಅಕ್ಟೋಬರ್ 8, 10, 11, 12, 13, ಮತ್ತು 14ರಂದು ನಡೆದಿತ್ತು.

UGC NET ಫಲಿತಾಂಶ 2022 ಅನ್ನು ಪರಿಶೀಲಿಸಲು, ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ಲಾಗಿನ್ ಆಗಬೇಕು. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು UGC NET ನ ಅಧಿಕೃತ ಸೈಟ್ ಅನ್ನು ಪರಿಶೀಲಿಸಬಹುದು.

ಇದನ್ನೂ ಓದಿ: CUET UG Result 2022: ಪದವಿಪೂರ್ವ ಸಾಮಾನ್ಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟ

UGC ನೆಟ್ ಫಲಿತಾಂಶವನ್ನು ವೀಕ್ಷಿಸಲು ಹೀಗೆ ಮಾಡಿ:
ಹಂತ 1: ugcnet.nta.nic.in ಪರೀಕ್ಷಾ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ವೆಬ್​ಸೈಟ್‌ನಿಂದ ಸ್ಕೋರ್‌ಕಾರ್ಡ್‌ಗಳನ್ನು ವೀಕ್ಷಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ಅಗತ್ಯ ಲಾಗಿನ್ ವಿವರಗಳನ್ನು ಭರ್ತಿ ಮಾಡಿ.
ಹಂತ 4: ನಿಮ್ಮ ಫಲಿತಾಂಶಗಳನ್ನು ಸಬ್ಮಿಟ್ ಮಾಡಿ ಮತ್ತು ಪರಿಶೀಲಿಸಿ.
ಹಂತ 5: ನಂತರದ ಫಲಿತಾಂಶಗಳ ಪುಟವನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.

ಮೀಸಲಾತಿಗೆ ಒಳಪಡದ ಅಭ್ಯರ್ಥಿಗಳು ಕನಿಷ್ಠ ಶೇ. 40 ಅಂಕಗಳನ್ನು ಗಳಿಸಬೇಕು. ಆದರೆ ಮೀಸಲಾತಿ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ. 35 ಅಂಕಗಳನ್ನು ಗಳಿಸಬೇಕಾಗುತ್ತದೆ. ಒಟ್ಟಾರೆಯಾಗಿ ಮಾತ್ರವಲ್ಲದೆ ನೆಟ್ ಬರೆದ ಅಭ್ಯರ್ಥಿಗಳು ಪ್ರತಿ ಪೇಪರ್ ಅನ್ನು ಪ್ರತ್ಯೇಕವಾಗಿ ಪಾಸ್ ಮಾಡಬೇಕು ಎಂದು ಯುಜಿಸಿ ತಿಳಿಸಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್