Shocking News: ಪರೀಕ್ಷೆಯ ಕಾಪಿ ಚೀಟಿಯನ್ನು ಲವ್ ಲೆಟರ್ ಎಂದುಕೊಂಡ ಬಾಲಕಿ; ನಡೆದೇ ಹೋಯ್ತು ಬರ್ಬರ ಹತ್ಯೆ!

ಬಾಲಕ ಓದುತ್ತಿದ್ದ ತರಗತಿಯಲ್ಲೇ ಆತನ ಕಸಿನ್ ಕೂಡ ಓದುತ್ತಿದ್ದಳು. ಪರೀಕ್ಷೆ ಆರಂಭವಾಗುತ್ತಿದ್ದಂತೆ ತಾನು ತಂದಿದ್ದ ಕಾಪಿ ಚೀಟಿಯನ್ನು ಆ ಬಾಲಕ ಕಸಿನ್ ಕುಳಿತಿದ್ದ ಡೆಸ್ಕ್​ನತ್ತ ಬಿಸಾಡಿದ್ದ. ಆದರೆ, ಅದು ಆತನ ಹಿಂದೆ ಕುಳಿತಿದ್ದ ಇನ್ನೋರ್ವ ಬಾಲಕಿಯ ಬಳಿ ಬಿದ್ದಿತ್ತು.

Shocking News: ಪರೀಕ್ಷೆಯ ಕಾಪಿ ಚೀಟಿಯನ್ನು ಲವ್ ಲೆಟರ್ ಎಂದುಕೊಂಡ ಬಾಲಕಿ; ನಡೆದೇ ಹೋಯ್ತು ಬರ್ಬರ ಹತ್ಯೆ!
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Oct 20, 2022 | 1:20 PM

ಪಾಟ್ನಾ: ಕೆಲವೊಮ್ಮೆ ನಮ್ಮ ಹಣೆಬರಹ ಸರಿಯಿಲ್ಲದಿದ್ದರೆ ಹಗ್ಗವೂ ಹಾವಾಗುತ್ತದಂತೆ. ಮಹಾರಾಷ್ಟ್ರದ ಬಳಿಯ ಪಾಟ್ನಾದ (Patna) ಬಾಲಕನ ಕತೆಯೂ ಹಾಗೇ ಆಗಿದೆ. ಪರೀಕ್ಷೆಯಲ್ಲಿ ಕಾಪಿ ಮಾಡುವ ಸಲುವಾಗಿ ಚೀಟಿ ಬರೆದಿಟ್ಟುಕೊಂಡಿದ್ದ ಆತನ ಆ ಚೀಟಿ ಪರೀಕ್ಷೆಯ ಹಾಲ್​ನಲ್ಲಿ ಹಿಂದಿನ ಡೆಸ್ಕ್​ನಲ್ಲಿ ಕುಳಿತಿದ್ದ ಬಾಲಕಿಯ ಬಳಿ ಹೋಗಿ ಬಿದ್ದಿತ್ತು. ಅದನ್ನು ನೋಡಿದ ಆಕೆ ಲವ್ ಲೆಟರ್ ಎಂದು ತಪ್ಪಾಗಿ ತಿಳಿದುಕೊಂಡು ತನ್ನ ಮನೆಯವರಿಗೆ ವಿಷಯ ತಿಳಿಸಿದ್ದಳು. ತಮ್ಮ ಮಗಳಿಗೆ ಲವ್ ಲೆಟರ್ (Love Letter) ಬರೆದಿದ್ದಾನೆಂದು ಗೊತ್ತಾದ ಕೂಡಲೆ ಆ ಚೀಟಿಯಲ್ಲಿ ಏನಿದೆ ಎಂಬುದನ್ನು ಕೂಡ ನೋಡದೆ ಆಕೆಯ ಮನೆಯವರು ಆ ಬಾಲಕನನ್ನು ಥಳಿಸಿ, ಆತನ ದೇಹವನ್ನು ಕತ್ತರಿಸಿ ಕೊಂದೇ ಹಾಕಿದ್ದಾರೆ! ಪರೀಕ್ಷೆಯ ಕಾಪಿ ಚೀಟಿಯಿಂದಾಗಿ ಆ ಬಾಲಕ ತನ್ನ ಪ್ರಾಣವನ್ನೇ ಕಳೆದುಕೊಂಡ ದುರಂತ ಕತೆಯಿದು!

ತಮ್ಮ ಮಗಳು ಪರೀಕ್ಷೆ ಬರೆದು ಮನೆಗೆ ಬರುತ್ತಿದ್ದಂತೆ ತನಗೆ ಹುಡುಗನೊಬ್ಬ ಲವ್ ಲೆಟರ್ ಬರೆದಿದ್ದಾನೆ ಎಂದು ಹೇಳಿದ್ದಳು. ಇದರಿಂದ ಕೋಪಗೊಂಡ ಆ ಹುಡುಗಿಯ ಅಪ್ಪ, ಅಣ್ಣಂದಿರು ಆ ಬಾಲಕನನ್ನು ಹಿಡಿದು, ಹೊಡೆದು, ಕೊಂದಿದ್ದಾರೆ. ನಂತರ ಆತನ ದೇಹವನ್ನು ಕತ್ತರಿಸಿ ಬಿಸಾಡಿದ್ದಾರೆ. ರೈಲ್ವೆ ಹಳಿಯ ಮೇಲೆ ವ್ಯಕ್ತಿಯ ದೇಹದ ಅಂಗಗಳು ಸಿಕ್ಕಿದ್ದರಿಂದ ತನಿಖೆ ಕೈಗೊಂಡ ಪೊಲೀಸರು ಈ ಪ್ರಕರಣವನ್ನು ಭೇದಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ 9 ಮಂದಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ತೆಲಂಗಾಣ: ವಾಮಾಚಾರಕ್ಕೆ ತಂದೆ-ಮಗ ಬಲಿ; ಸಮಸ್ಯೆಗಳಿಗೆ ಅರ್ಚಕನೇ ಕಾರಣ ಎಂದು ಕೊಲೆ ಮಾಡಿದ್ದ ಆರೋಪಿ ಗ್ಯಾಂಗ್ ಅರೆಸ್ಟ್

ಆ ಬಾಲಕ ಓದುತ್ತಿದ್ದ ತರಗತಿಯಲ್ಲೇ ಆತನ ಕಸಿನ್ ಕೂಡ ಓದುತ್ತಿದ್ದಳು. ಪರೀಕ್ಷೆ ಆರಂಭವಾಗುತ್ತಿದ್ದಂತೆ ತಾನು ಬರೆದಿಟ್ಟುಕೊಂಡು ಬಂದಿದ್ದ ಕಾಪಿ ಚೀಟಿಯನ್ನು ಹೊರತೆಗೆದ ಬಾಲಕ ಅದನ್ನು ನೋಡಿ ಪರೀಕ್ಷೆ ಬರೆದಿದ್ದ. ನಂತರ ತನ್ನ ಕಸಿನ್​ಗೂ ಸಹಾಯವಾಗಲೆಂದು ಆ ಚೀಟಿಯನ್ನು ಆಕೆ ಕುಳಿತಿದ್ದ ಡೆಸ್ಕ್​ನತ್ತ ಬಿಸಾಡಿದ್ದ. ಆದರೆ, ಆ ಚೀಟಿ ಆತನ ಹಿಂದೆ ಕುಳಿತಿದ್ದ ಇನ್ನೋರ್ವ ಬಾಲಕಿಯ ಬಳಿ ಹೋಗಿ ಬಿದ್ದಿತ್ತು. ಆ ಬಾಲಕನಾಗಲಿ, ಆತನ ಕಸಿನ್ ಆಗಲಿ ಅದನ್ನು ಗಮನಿಸಿರಲಿಲ್ಲ. ತನ್ನ ಬಳಿ ಬಂದು ಬಿದ್ದ ಚೀಟಿಯನ್ನು ತೆರೆದು ಓದಲೂ ಹೋಗದ ಆ ಬಾಲಕಿ ಅದನ್ನು ಲವ್ ಲೆಟರ್ ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಳು. ಆಕೆಯ ದುಡುಕು ನಿರ್ಧಾರದಿಂದ ಇದೀಗ ಆ ಬಾಲಕನ ಜೀವವೇ ಹೋಗಿದೆ.

ಆ ಬಾಲಕನನ್ನು ಕಿಡ್ನಾಪ್ ಮಾಡಿದ್ದ ಬಾಲಕಿಯ ಪೋಷಕರು ಆತನನ್ನು ಕೊಂದು ರೈಲ್ವೆ ಹಳಿ ಬಳಿ ಬಿಸಾಡಿದ್ದರು. ಅದಾಗಿ 4 ದಿನಗಳ ಬಳಿಕ ಆತನ ಮೃತದೇಹದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ತಾನು ಮಾಡದ ತಪ್ಪಿಗೆ ಬಾಲಕ ಪ್ರಾಣ ಕಳೆದುಕೊಂಡಿದ್ದರೆ, ತಮ್ಮ ತಂಗಿ ಮಾಡಿದ ತಪ್ಪಿಗೆ ಆಕೆಯ ಅಣ್ಣ- ಅಪ್ಪ ಜೈಲು ಸೇರಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ರೆಸಾರ್ಟ್​ನಲ್ಲಿ ನಟಿ ಹರಿಪ್ರಿಯಾ ಸೀಮಂತ ಶಾಸ್ತ್ರ; ಆಶೀರ್ವಾದ ಮಾಡಿದ ತಾರಾ
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ಹೆಚ್​ಎಂಪಿ ವೈರಸ್ ವಿಷಯದಲ್ಲಿ ನಮ್ಮ ಸರ್ಕಾರ ಅಲರ್ಟ್ ಆಗಿದೆ: ಶಿವಕುಮಾರ್
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ತನ್ನ ತಂದೆ ಬಗ್ಗೆ ಮಾತಾಡಿದ ಬಿಜೆಪಿ ನಾಯಕನ ಹೇಳಿಕೆಗೆ ಕಣ್ಣೀರು ಹಾಕಿದ ಅತಿಶಿ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ರಾಮಚಂದ್ರಪ್ಪನಿಂದ ಪೀಡಿತ ಮತ್ತೊಬ್ಬ ಮಹಿಳೆ ತನ್ನ ವೇದನೆ ಹೇಳಿಕೊಂಡಿದ್ದಾರೆ
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ