ಮೊಬೈಲ್ ಅಂಗಡಿಯೊಂದರಲ್ಲಿ ಆಕಸ್ಮಿಕ ಗುಂಡಿನ ದಾಳಿ, ಪೊಲೀಸ್ ಅಧಿಕಾರಿ ಅಮಾನತು, ಒಬ್ಬನಿಗೆ ಗಾಯ
ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಆಕಸ್ಮಿಕವಾಗಿ ಪೊಲೀಸ್ ಅಧಿಕಾರಿ ಬಂದೂಕಿನಿಂದ ಗುಂಡು ಹಾರಿಸಿರುವ ಘಟನೆ ಪಂಜಾಬ್‌ನ ಅಮೃತಸರದಲ್ಲಿ ನಡೆದಿದೆ
ಅಮೃತಸರ: ಮೊಬೈಲ್ ಅಂಗಡಿಯಲ್ಲಿ ( mobile shop) ಕೆಲಸ ಮಾಡುತ್ತಿದ್ದ ಯುವಕನ ಮೇಲೆ ಆಕಸ್ಮಿಕವಾಗಿ ಪೊಲೀಸ್ ಅಧಿಕಾರಿ ಬಂದೂಕಿನಿಂದ ಗುಂಡು ಹಾರಿಸಿರುವ ಘಟನೆ ಪಂಜಾಬ್‌ನ ( Punjab) ಅಮೃತಸರದಲ್ಲಿ (Amritsar) ನಡೆದಿದೆ, ಇದೀಗ ಈ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಈ ಘಟನೆಯ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಮತ್ತು ಇದರ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ಪೊಲೀಸರು ಮೊಬೈಲ್ ಅಂಗಡಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ತನ್ನ ಬಂದೂಕನ್ನು ಹೊರತೆಗೆದು ತನ್ನ ಪಕ್ಕದಲ್ಲಿ ನಿಂತಿರುವ ವ್ಯಕ್ತಿಗೆ ಮತ್ತು ಮೊಬೈಲ್ ಅಂಗಡಿಯ ಕೌಂಟರ್‌ಗೆ ಅಡ್ಡಲಾಗಿ ಕುಳಿತಿದ್ದ ಇನ್ನೊಬ್ಬ ವ್ಯಕ್ತಿಗೆ ತೋರಿಸಿದ್ದಾರೆ.
#WATCH | A youth working in a mobile shop got injured in an alleged accidental firing by a policeman in Punjab's Amritsar
The accused police official has been suspended. We've recovered the CCTV footage: Varinder Singh, ACP North, Amritsar
(CCTV visuals) pic.twitter.com/N8R0VpMhH0
— ANI (@ANI) October 19, 2022
ಪೊಲೀಸ್ ಪೇದೆಯ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿ ತನ್ನ ಕೈಯಲ್ಲಿದ್ದ ಬಂದೂಕನ್ನು ತೋರಿಸಿದಾಗ, ಪೊಲೀಸರು ತಕ್ಷಣ ಅದನ್ನು ತೆಗೆದುಕೊಂಡು ಆಕಸ್ಮಿಕವಾಗಿ ಟ್ರಿಗರ್ ಅನ್ನು ಎಳೆದಿದ್ದಾರೆ. ಇದರಿಂದ ಪಕ್ಕದಲ್ಲಿ ನಿಂತಿದ್ದ ಯುವಕ ಮೇಲೆ ಪೈರಿಂಗ್ ಆಗಿದೆ.
ಇದನ್ನು ಓದಿ: Crime News: ಹೈದರಾಬಾದ್ ಶಾಲೆಯಲ್ಲಿ 4 ವರ್ಷದ ಬಾಲಕಿ ಮೇಲೆ ಪ್ರಿನ್ಸಿಪಾಲ್ ಚಾಲಕನಿಂದ ಅತ್ಯಾಚಾರ!
ಘಟನೆಯಲ್ಲಿ ಗಾಯಗೊಂಡ ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಮೃತಸರದ ಸಹಾಯಕ ಪೊಲೀಸ್ ಆಯುಕ್ತ ವರೀಂದರ್ ಸಿಂಗ್ ಹೇಳಿದ್ದಾರೆ. ಇದೀಗ ಈ ಘಟನೆಗೆ ಕಾರಣರಾದ ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಮತ್ತು ಪ್ರತ್ಯಕ್ಷದರ್ಶಿಗಳು ಮತ್ತು ಕುಟುಂಬದವರ ಹೇಳಿಕೆಗಳನ್ನು ಆಧರಿಸಿ ಅವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ವರೀಂದರ್ ಸಿಂಗ್ ಹೇಳಿದರು.
Published On - 10:53 am, Thu, 20 October 22