ವಿದ್ಯಾರ್ಥಿಗೆ ಮಕ್ಕಳ ನೀಲಿಚಿತ್ರದ ವಿಡಿಯೊ ಕಳಿಸಿದ ಪ್ರೊಫೆಸರ್; ಕಾಮುಕ ಶಿಕ್ಷಕನ ವಿರುದ್ಧ ಕೇಸ್
ಮಕ್ಕಳ ಲೈಂಗಿಕ ವಿಡಿಯೋ ಕಳಿಸುವುದು, ನೋಡುವುದು ಹಾಗೂ ಸ್ಟೋರ್ ಮಾಡಿರುವುದು ಶಿಕ್ಷಾರ್ಹ ಅಪರಾಧ. ಆದ್ರೆ ಗೌರವಯುತ ಸ್ಥಾನದಲ್ಲಿರುವ ಪ್ರೊಫೆಸರ್ ತಮ್ಮ ವಿದ್ಯಾರ್ಥಿಗೆ ವಿಡಿಯೋ ಕಳಿಸಿದ್ದಾರೆ.
ಬೆಂಗಳೂರು: ಪ್ರತಿಷ್ಠಿತ ಕಾಲೇಜಿನ ಪ್ರೊಫೆಸರ್ ವಿರುದ್ಧ ಚೈಲ್ಡ್ ಪೋರ್ನೊಗ್ರಫಿ(Child Pornography) ಕೇಸ್ ದಾಖಲಾಗಿದೆ. ಚೈಲ್ಡ್ ಪೋರ್ನೊಗ್ರಫಿ (ಮಕ್ಕಳ ನೀಲಿಚಿತ್ರ) ಬೇರೆಯವರಿಗೆ ಕಳಿಸಿದ್ದಕ್ಕೆ ಮಧುಸೂದನ್ ಆಚಾರ್ಯ ಎಂಬ ಪ್ರೊಫೆಸರ್ ವಿರುದ್ಧ ಕೇಸ್ ದಾಖಲಾಗಿದೆ. ಮಧುಸೂದನ್ ಆಚಾರ್ಯ ಅವರು ತಾವು ಕೆಲಸ ಮಾಡುವ ಕಾಲೇಜಿನ ಓರ್ವ ವಿದ್ಯಾರ್ಥಿಗೆ ಇನ್ಸ್ಟಾಗ್ರಾಮ್ ಮೂಲಕ ವಿಡಿಯೋ ಕಳಿಸಿದ್ದರು. ಮಕ್ಕಳ ಲೈಂಗಿಕ ವಿಡಿಯೋ ಕಳಿಸುವುದು, ನೋಡುವುದು ಹಾಗೂ ಸ್ಟೋರ್ ಮಾಡಿರುವುದು ಶಿಕ್ಷಾರ್ಹ ಅಪರಾಧ. ಆದ್ರೆ ಗೌರವಯುತ ಸ್ಥಾನದಲ್ಲಿರುವ ಪ್ರೊಫೆಸರ್ ತಮ್ಮ ವಿದ್ಯಾರ್ಥಿಗೆ ವಿಡಿಯೋ ಕಳಿಸಿದ್ದಾರೆ.
ವಿಡಿಯೋ ಕಳಿಸಿದ್ದನ್ನು ಮಾನಿಟರ್ ಮಾಡಿದ್ದ National Center For Missing and Exploited Children ಪೋರ್ಟೆಲ್ ನಂತ್ರ ಈ ಮಾಹಿತಿಯನ್ನು ಎನ್ಸಿಆರ್ಬಿಗೆ ನೀಡಿದೆ. ಬಳಿಕ ಎನ್ಸಿಆರ್ಬಿ ರಾಜ್ಯ ಸಿಐಡಿಗೆ ಸಿಡಿ ಸಹಿತ ಪ್ರಕರಣದ ಮಾಹಿತಿ ನೀಡಿದೆ. ನಂತರ ಸೈಬರ್ ಕ್ರೈಮ್ ಟಿಪ್ ಲೈನ್ ಅಡಿಯಲ್ಲಿ ಮಾಹಿತಿ ನೀಡಲಾಗಿದೆ. ಮಾಹಿತಿ ಅನ್ವಯ ತಾಂತ್ರಿಕ ತನಿಖೆ ನಡೆಸಿದ್ದ ಸಿಐಡಿ ಸೈಬರ್ ಕ್ರೈಮ್ ಪೊಲೀಸರು ವಿಚಾರಣೆ ವೇಳೆ ಯಲಹಂಕ ಬಳಿಯ ಪ್ರತಿಷ್ಠಿತ ಕಾಲೇಜಿನ ಬಗ್ಗೆ ಮಾಹಿತಿ ಸಿಕ್ಕಿದೆ.
ಐಪಿ ಅಡ್ರಸ್ ಸಹಿತ ಏರಿಯಾ ಪತ್ತೆ ಮಾಡಿದ್ದ ಪೊಲೀಸರು ನಂತ್ರ ಘಟನೆ ಸಂಬಂಧ ಈಶಾನ್ಯ ವಿಭಾಗ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ ಕೇಸ್ ದಾಖಲು ಮಾಡಿದ ಸಿಇಎನ್ ಪೊಲೀಸರು ಕೇಸ್ ಸಂಬಂಧಿಸಿ ಪ್ರೊಫೆಸರ್ ಮಧುಸೂದನ್ರನ್ನು ವಿಚಾರಣೆಗೆ ಕರೆಸಿ ವಿಚಾರಿಸಿದ್ದಾರೆ. ಆಗ ಕೃತ್ಯ ಬಯಲಾಗಿದೆ. ಪ್ರೊಫೆಸರ್ ಮಧುಸೂದನ್ ಹಲವಾರು ವಿದ್ಯಾರ್ಥಿಗಳನ್ನು ಕಾಮ ದೃಷ್ಟಿಯಿಂದ ಕಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಘಟನೆ ಸಂಬಂಧಿಸಿ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಸೆನ್ಸೇಷನಲ್ ಕ್ರೈಮ್ ಕತೆಗಳು: ನರರೂಪದ ನರರಾಕ್ಷಸರು ನಿರ್ಭಯಳನ್ನು ಹಸಿದ ನಾಯಿಗಳಂತೆ ಕೊಂದ ಭೀಕರ ಕತೆಯಿದು!
ಗಾಂಜಾ ದಂಧೆಗೆ ಕೈ ಜೋಡಿಸಿದ ರೈಲ್ವೆ ಇಲಾಖೆ ಹೊರಗುತ್ತಿಗೆ ನೌಕರರು
ಬೆಂಗಳೂರು: ಗಾಂಜಾ ದಂಧೆಗೆ ಕೈಜೋಡಿಸಿದ್ದ ರೈಲ್ವೆ ಇಲಾಖೆಯ ಮೂವರು ಹೊರಗುತ್ತಿಗೆ ನೌಕರರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಸ್ಸಾಂ ಹಾಗೂ ತ್ರಿಪುರಾ ಮೂಲದ ಬಪ್ಪಾ ಕರ್ದೆ, ಪಿಂಟು ದಾಸ್, ರಾಜೇಶ್ ಪಾಲ್ ಬಂಧಿತರು. ರೈಲ್ವೆ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಿಂದ ನೇಮಕಗೊಂಡಿದ್ದ ಇವರು, ಈಶಾನ್ಯ ಫರ್ಟೈನರ್ ರೈಲ್ವೆ ಅಗ್ರಿಟ್ಲಾ ಕೊಚಿಂಗ್ ಡಿಪೊರ್ಟ್ ನಲ್ಲಿ ಎಸಿ ಅಟೆಂಡೆಂಟ್ ಹಾಗೂ ಬೆಡ್ ರೋಲ್ ಸ್ಟಾಫ್ ಗಳಾಗಿ ಕೆಲಸ ಮಾಡುತ್ತಿದ್ದರು.
ಆರೋಪಿಗಳು ತಮ್ಮ ಕೆಲಸಗಳ ನಿರ್ವಹಣೆಗೆ ನೀಡಲಾಗಿದ್ದ ರೈಲ್ವೆ ಬೋಗಿಗಳ ಲಾಕರ್ ಗಳನ್ನೇ ಕೃತ್ಯಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ಅಸ್ಸಾಂನಿಂದ ಗಾಂಜಾ ಕದ್ದು ಸಾಗಾಣಿಕೆ ಮಾಡಿ ಪೆಡ್ಲರ್ಗಳಿಂದ ಲಕ್ಷ ಲಕ್ಷ ಹಣ ಪಡೆಯುತಿದ್ದರು. ಅಸ್ಸಾಂನಿಂದ ದೇಶದ ವಿವಿಧ ಕಡೆ ರೈಲು ಮುಖಾಂತರವೇ ಸಾಗಿ ದಂಧೆ ನಡೆಸುತ್ತಿದ್ದರು. ಸದ್ಯ ಈಗ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಆರೋಪಿಗಳಿಂದ 80 ಲಕ್ಷ ಮೌಲ್ಯದ ಹ್ಯಾಶಿಶ್ ಆಯಿಲ್, 6 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು ಸಿಸಿಬಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Published On - 8:29 am, Thu, 20 October 22