ಸೆನ್ಸೇಷನಲ್ ಕ್ರೈಮ್ ಕತೆಗಳು: ನರರೂಪದ ನರರಾಕ್ಷಸರು ನಿರ್ಭಯಳನ್ನು ಹಸಿದ ನಾಯಿಗಳಂತೆ ಕೊಂದ ಭೀಕರ ಕತೆಯಿದು!

ನಿರ್ಭಯ ಗೆಳೆಯ ಅವಳ ರಕ್ಷಣೆಗೆ ಹೋದಾಗ ಅವನ ಮೇಲೆ ಕಬ್ಬಿಣದ ರಾಡುಗಳಿಂದ ಹಲ್ಲೆ ಮಾಡಲಾಯಿತು. ನಂತರ ನಿರ್ಭಯಳನ್ನು ಬಸ್ಸಿನ ಹಿಂಭಾಗಕ್ಕೆ ಎಳೆದುಕೊಂಡ ದುಷ್ಟರು ಚಲಿಸುವ ಬಸ್ಸಲ್ಲಿ ಒಬ್ಬನಾದ ಮೇಲೆ ಮತ್ತೊಬ್ಬನಂತೆ ಎಲ್ಲ 6 ಜನ ಅವಳ ಮೇಲೆ ಅತ್ಯಾಚಾರ ನಡೆಸಿದರು.

ಸೆನ್ಸೇಷನಲ್ ಕ್ರೈಮ್ ಕತೆಗಳು: ನರರೂಪದ ನರರಾಕ್ಷಸರು ನಿರ್ಭಯಳನ್ನು ಹಸಿದ ನಾಯಿಗಳಂತೆ ಕೊಂದ ಭೀಕರ ಕತೆಯಿದು!
ಕಾಮುಕ ಕೊಲೆಗಡುಕರು ಮತ್ತು ನಿರ್ಭಯ ತಾಯಿ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 20, 2022 | 8:06 AM

ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವಿಂದು ಇಡೀ ದೇಶವೇ ನಾಚಿಕೆಯಿಂದ ತಲೆ ತಗ್ಗಿಸುವಂತೆ ಮಾಡಿದ ಮತ್ತು ವಿಶ್ವದಾದ್ಯಂತ ಖಂಡನೆಗೆ ಗುರಿಯಾದ ‘ನಿರ್ಭಯ’ ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ಮತ್ತೊಮ್ಮೆ ನೆನಪು ಮಾಡಿಕೊಳ್ಳುತ್ತಿದ್ದೇವೆ. ಆ ಘಟನೆ ಎಷ್ಟು ಹೀನ, ಭಯಾನಕ, ಪಾಶವೀಯ ಮತ್ತು ಕ್ಷುದ್ರವಾಗಿತ್ತೆಂದರೆ ಜನ ರಾಷ್ಟ್ರದ ರಾಜಧಾನಿ ದೆಹಲಿಯನ್ನು ರೇಪ್ ಗಳ ರಾಜಧಾನಿ, ಅಪರಾಧಗಳ ರಾಜಧಾನಿ ಅಂತ ಉಲ್ಲೇಖಿಸಲಾರಂಭಿಸಿದರು. ನಿರ್ಭಯ ಪ್ರಕರಣದ ಬಳಿಕ ಆ ಹೆಸರಲ್ಲೇ ಒಂದು ಕಾಯ್ದೆ ಕೂಡ ರೂಪಿಸಲಾಯಿತು. ಆದರೆ ದುರಾದೃಷ್ಟದ ಸಂಗತಿಯೆಂದರೆ, ಕಾಯ್ದೆ ಜಾರಿಗೆ ಬಂದ ನಂತರವೂ ಮಹಿಳೆ, ಯುವತಿಯರು, ಅಪ್ರಾಪ್ತೆಯರ ಮೇಲೆ ಅತ್ಯಾಚಾರಗಳು ನಡೆಯುತ್ತಲೇ ಇವೆ. ನಮ್ಮ ರಾಜ್ಯದ ಸ್ಥಿತಿಯನ್ನೇ ಗಮನಿಸಿ. ಮಳವಳ್ಳಿಯ 10-ವರ್ಷ-ವಯಸ್ಸಿನ ಬಾಲಕಿಯ ರೇಪ್ ಮತ್ತು ಕೊಲೆ ಕಳೆದ ವಾರವಷ್ಟೇ ಸಂಭವಿಸಿದೆ.

ಅವತ್ತು ಅಸಲಿಗೆ ನಡೆದಿದ್ದೇನು?

ಡಿಸೆಂಬರ್ 16, 2012 ಕೇವಲ ನಿರ್ಭಯ ಮತ್ತವಳ ಸ್ನೇಹಿತನ ಪಾಲಿಗೆ ಮಾತ್ರ ಕರಾಳ ದಿನವಾಗಿರಲಿಲ್ಲ, ಇಡೀ ಮನುಕುಲದ ಮುಖಕ್ಕೆ ಮಸಿ ಬಳಿದ ದಿನವಾಗಿತ್ತು. ಆ ಭೀಕರ ದಿನವನ್ನು ನೆನಪಿಸಿಕೊಳ್ಳುವುದನ್ನು ಸಹ ಯಾರೂ ಇಷ್ಟಪಡಲಾರರು. ಅವತ್ತು ನಿರ್ಭಯ ತನ್ನ ಗೆಳೆಯನ ಜೊತೆ ಸಿನಿಮಾವೊಂದನ್ನು ವೀಕ್ಷಿಸಿ ದಕ್ಷಿಣ ದೆಹಲಿಯಲ್ಲಿರುವ ಮುನಿರ್ಕಾ ಕಡೆ ಹೊರಟಿದ್ದಳು. ಅಲ್ಲಿಂದ ಅವರಿಬ್ಬರು ತಮ್ಮ ಮನೆಗಳಿದ್ದ ದ್ವಾರಕಾಗೆ ಹೋಗಬೇಕಿತ್ತು. ಬಸ್ ಗಾಗಿ ಅವರು ಕಾಯುತ್ತಾ ನಿಂತಿದ್ದಾಗ, ಖಾಸಗಿ ಬಸ್ಸೊಂದು ಅವರ ಮುಂದೆ ಬಂದು ನಿಂತಿತು. ಅದು ಶೆಡ್ಯೂಲ್ಡ್ ಬಸ್ ಆಗಿರಲಿಲ್ಲ.

ಅದರಲ್ಲಿದ ಚಾಲಕ ಮತ್ತು ಇತರ ಜನ ಡ್ಯೂಟಿ ತೀರಿಸಿಕೊಂಡು ಮನೆಗೆ ಹೊರಟಿದ್ದರು. ಬಸ್ ದ್ವಾರಕಾ ಕಡೆಯೇ ಹೋಗ್ತಿರೋದು ಬನ್ನಿ ಲಿಫ್ಟ್ ಕೊಡುತ್ತೇನೆ ಅಂತ ಚಾಲಕ ಹೇಳಿದಾಗ ಸಂಶಯಿಸದೆ ನಿರ್ಭಯ ಮತ್ತು ಅವಳ ಗೆಳೆಯ ಬಸ್ ಹತ್ತಿದರು. ಬಸ್ಸಲ್ಲಿ ಅವರಿಬ್ಬರನ್ನು ಬಿಟ್ಟು ಇತರ 6 ಜನರಿದ್ದರು ಮತ್ತು ಅವರಲ್ಲೊಬ್ಬ ಅಪ್ರಾಪ್ತನಾಗಿದ್ದ. ಎಲ್ಲರೂ ಮದ್ಯಪಾನ ಮಾಡಿದ್ದರು.

ಅಮಾನುಷ ಹಲ್ಲೆ!

ಬಸ್ ಸ್ವಲ್ಪ ದೂರ ಚಲಿಸಿದ ನಂತರ ಬಸ್ಸಲ್ಲಿದ್ದ ಆ ಆರು ಜನ ನಿರ್ಭಯ ಗೆಳೆಯನ ಜೊತೆ ಉದ್ದೇಶಪೂರ್ವಕವಾಗಿ ಜಗಳ ತೆಗೆದರು. ಮಾತಿನಲ್ಲಿ ಶುರುವಾದ ಜಗಳ ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು. ನಿರ್ಭಯ ಯಾಕೆ ಅವನಿಗೆ ಹೊಡಿತಿರೋದು ಅಂತ ಕೇಳಿದಾಗ ದುರುಳರು ಅವನನ್ನು ಬಿಟ್ಟು ನಿರ್ಭಯಳೆಡೆ ಬಂದು ಅವಳೊಂದಿದೆ ಅಸಭ್ಯವಾಗಿ ವರ್ತಿಸಲಾರಂಭಿಸಿದರು. ಬಸ್ ಮಾತ್ರ ಚಲಿಸುತ್ತಲೇ ಇತ್ತು.

ನಿರ್ಭಯ ಗೆಳೆಯ ಅವಳ ರಕ್ಷಣೆಗೆ ಹೋದಾಗ ಅವನ ಮೇಲೆ ಕಬ್ಬಿಣದ ರಾಡುಗಳಿಂದ ಹಲ್ಲೆ ಮಾಡಲಾಯಿತು. ನಂತರ ನಿರ್ಭಯಳನ್ನು ಬಸ್ಸಿನ ಹಿಂಭಾಗಕ್ಕೆ ಎಳೆದುಕೊಂಡ ದುಷ್ಟರು ಚಲಿಸುವ ಬಸ್ಸಲ್ಲಿ ಒಬ್ಬನಾದ ಮೇಲೆ ಮತ್ತೊಬ್ಬನಂತೆ ಎಲ್ಲ 6 ಜನ ಅವಳ ಮೇಲೆ ಅತ್ಯಾಚಾರ ನಡೆಸಿದರು.

ರಾಕ್ಷಸರ ವಿಕೃತಿ!

ಮದ್ಯದ ಅಮಲಿನಲ್ಲಿದ್ದ ಕಾಮುಕರು ಅಷ್ಟಕ್ಕೆ ಬಿಟ್ಟಿದ್ದರೆ ಪ್ರಾಯಶಃ ನಿರ್ಭಯ ಬದುಕುಳಿಯುತ್ತಿದ್ದಳು. ಆದರೆ ಆ ನರರೂಪದ ರಾಕ್ಷಸರು ಅವಳ ಮೇಲೆ ದೈಹಿಕ, ಲೈಂಗಿಕ ಹಲ್ಲೆ ನಡೆಸಿದರಲ್ಲದೆ ಮರ್ಮಾಂಗದಲ್ಲಿ ತುಕ್ಕು ಹಿಡಿದ ಕಬ್ಬಿಣದ ರಾಡನ್ನು ತೂರಿ ಯೋಚಿಸಲೂ ಸಾಧ್ಯವಾಗದ ವಿಕೃತಿ ಮೆರೆದರು. ದೈಹಿಕ ಮತ್ತು ಮಾನಸಿಕವಾಗಿ ಜರ್ಝರಿತಗೊಳಿಸಿದ ಬಳಿಕ ಅವಳನ್ನು ಅರೆಜೀವ ಸ್ಥಿತಿಯಲ್ಲಿ ಗೆಳೆಯನ ಜೊತೆಗೆ ಮಹಿಪಾಲಪುರ ಎಂಬಲ್ಲಿ ಚಲಿಸುವ ಬಸ್ಸಿಂದಲೇ ಬಿಸಾಡಿದರು!

ಅವರನ್ನು ಆ ಸ್ಥಿತಿಯಲ್ಲಿ ನೋಡಿದ ಜನ ಕೂಡಲೇ ಸಫ್ದರ್ ಜಂಗ್ ಆಸ್ಪತ್ರೆಗೆ ಸಾಗಿಸಿದರು. ನಿರ್ಭಯಳ ಎಲ್ಲ ಅಂಗಾಂಗಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಆದಾಗ್ಯೂ ಆ ದಿಟ್ಟೆ 11 ದಿನಗಳ ಕಾಲ ಸಾವು ಬದುಕಿನ ಜೊತೆ ಹೋರಾಟ ನಡೆಸಿದಳು. ಹೆಚ್ಚಿನ ಚಿಕಿತ್ಸೆಗೆ ಅವಳನ್ನು ಸಿಂಗಾಪೂರಗೂ ತೆಗೆದುಕೊಂಡ ಹೋಗಲಾಯಿತು. ಆದರೆ ನಿರ್ಭಯಳ ಹೋರಾಟ ಡಿಸೆಂಬರ್ 23 ರಂದು ಆ ದೇಶದಲ್ಲೇ ಕೊನೆಗೊಂಡಿತು. ಅವಳ ಗೆಳೆಯ ಬದುಕುಳಿದಿದ್ದಾನೆ.

ಪ್ರಕರಣ ಈಗ ಯಾವ ಸ್ಥಿತಿಯಲ್ಲಿದೆ?

ಸಿಸಿಟಿವಿ ಫುಟೇಜ್ ಆಧಾರದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಲಾಯಿತು. ಅವರಲ್ಲೊಬ್ಬ ಅಪ್ರಾಪ್ತನಾಗಿದ್ದರಿಂದ ಅವನ ಹೆಸರನ್ನು ಉಲ್ಲೇಖಿಸುವಂತಿಲ್ಲ. ಅವನ ವಿಚಾರಣೆಯನ್ನು ಬಾಲಾಪರಾಧಿಗಳ ನ್ಯಾಯ ಮಂಡಳಿ ನಡೆಸಿ ಮೂರೂವರೆ ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತು. ಬಾಲಾಪರಾಧಿಗಳ ಗೃಹದಲ್ಲಿ ಇರಿಸಲಾಗಿದ್ದ ಅವನನ್ನು ಡಿಸೆಂಬರ್ 20, 2015 ರಲ್ಲಿ ಬಿಡುಗಡೆ ಮಾಡಲಾಯಿತು. ಸುರಕ್ಷತೆ ದೃಷ್ಟಿಯಿಂದ ಅವನನ್ನು ಈಗ ಚಾರಿಟಿ ಹೋಮ್ ನಲ್ಲಿ ಇರಿಸಲಾಗಿದೆ.

ಪ್ರಕರಣದ ಪ್ರಮುಖ ಅಪರಾಧಿ ರಾಮ್ ಸಿಂಗ್ ಬಂಧನಕ್ಕೊಳಗಾದವರಲ್ಲಿ ಮೊದಲಿಗ. ಮಾರ್ಚ್ 2013 ರಲ್ಲಿ ಅವನು ತಿಹಾರ ಜೈಲಲ್ಲಿ ಆತ್ಮಹತ್ಯೆ ಮಾಡಿಕೊಂಡ. ಆದರೆ ಅವನ ಕೊಲೆ ಮಾಡಲಾಯಿತು ಅಂತ ಅವನ ಕುಟುಂಬ ಈಗಲೂ ಹೇಳುತ್ತಿದೆ. ಮತ್ತೊಬ್ಬ ಅಪರಾಧಿ, ರಾಮ್ ಸಿಂಗ್ ಸಹೋದರ ಹಾಗೂ ಅಪರಾಧಿ ನಂಬರ್ 3 ಮುಕೇಶ್ ಸಿಂಗ್ ಗೆ ಮರಣದಂಡನೆ ವಿಧಿಸಲಾಯಿತು. ತಾನು ಬಸ್ಸಲ್ಲಿ ಇರಲೇ ಇಲ್ಲ ನ್ಯಾಯಾಲಯದಲ್ಲಿ ಕೊನೆವರೆಗೆ ವಾದಿಸಿದ ನಾಲ್ಕನೇ ಅಪರಾಧಿ ವಿನಯ್ ಶರ್ಮಗೂ ಗಲ್ಲು ಶಿಕ್ಷೆ ವಿಧಿಸಲಾಯಿತು.

ಐದು ಮತ್ತು ಆರನೇ ಅಪರಾಧಿಗಳಾಗಿದ್ದ ಅಕ್ಷಯ್ ಠಾಕೂರ್ ಮತ್ತು ಪವನ್ ಗುಪ್ತಾಗೂ ನೇಣುಗಂಬದ ಶಿಕ್ಷೆ ಪ್ರಕಟಿಸಲಾಯಿತು. ಅಂತಿಮವಾಗಿ ಮಾರ್ಚ್ 20, 2020ರ ಬೆಳಗಿನ ಜಾವ ದೆಹಲಿಯ ತಿಹಾರ್ ಜೇಲಿನಲ್ಲಿ ನಾಲ್ವರನ್ನು ಗಲ್ಲಿಗೇರಿಸಲಾಯಿತು.

ಇತ್ತೀಚಿಗೆ, ನೆಟ್ ಫ್ಲಿಕ್ಸ್ ನಿರ್ಭಯ ಪ್ರಕರಣ ಆಧಾರಿತ ‘ದೆಹಲಿ ಕ್ರೈಮ್’ ಹೆಸರಲ್ಲಿ ಒಂದು ಸಾಕ್ಷ್ಯಚಿತ್ರ ಪ್ರಸಾರ ಮಾಡಿತ್ತು. ಈ ಪೈಶಾಚಿಕ ಪ್ರಕರಣದ ಮೇಲೆ ಇನ್ನೂ ಹಲವಾರು ಸಾಕ್ಷ್ಯಚಿತ್ರಗಳು ತಯಾರಾಗಿವೆ.

‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಆಸ್ಟ್ರೇಲಿಯನ್ನರ ಮುಂದೆ ಪುಷ್ಪ ಸ್ಟೈಲ್​ನಲ್ಲಿ ಸಂಭ್ರಮಿಸಿದ ನಿತೀಶ್ ಕುಮಾರ್
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಎಂಟು ಮಂದಿ ನಾಮಿನೇಟ್; ಈ ಸ್ಪರ್ಧಿ ಮನೆಯಿಂದ ಔಟ್ ಆಗೋದು ಪಕ್ಕಾ?
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
ಕೊಹ್ಲಿ ಔಟಾದಾಗ ಸ್ಯಾಮ್​ ಕೊನ್​ಸ್ಟಾಸ್ ಸಂಭ್ರಮಿಸಿದ್ದು ಹೇಗೆ ನೋಡಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ದೇವರ ನಾಮ ಜಪದ ಮಹತ್ವ ಮತ್ತು ಪ್ರಯೋಜನಗಳು ತಿಳಿಯಿರಿ
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು
Daily Devotional: ಈ ರಾಶಿಯವರು ಇಂದು ಆಸ್ತಿ ಖರೀದಿಸುವರು