AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಹಿಂದುತ್ವ ಪರ ಕಾರ್ಯಕರ್ತರಿಂದ ಹಲಾಲ್ ಮುಕ್ತ ದೀಪಾವಳಿ ಅಭಿಯಾನ: ಮನೆಮನೆಗೆ ಭಿತ್ತಿಪತ್ರ ಹಂಚಿಕೆ

ಮನೆ ಮನೆಗೆ ತೆರಳಿ ಹಲಾಲ್ ಜಿಹಾದ್ ಪುಸ್ತಕ ಮತ್ತು ಬಿತ್ತಿಪತ್ರಗಳನ್ನು ನೀಡಿ ಈ ಬಾರಿಯ ದೀಪಾವಳಿ ಹಬ್ಬದಲ್ಲಿ ಹಲಾಲ್ ವಸ್ತುಗಳನ್ನು ಖರೀದಿ ಮಾಡದಂತೆ ಮನವಿ ಮಾಡಲಾಗುತ್ತೆ.

ಬೆಂಗಳೂರಿನಲ್ಲಿ ಹಿಂದುತ್ವ ಪರ ಕಾರ್ಯಕರ್ತರಿಂದ ಹಲಾಲ್ ಮುಕ್ತ ದೀಪಾವಳಿ ಅಭಿಯಾನ: ಮನೆಮನೆಗೆ ಭಿತ್ತಿಪತ್ರ ಹಂಚಿಕೆ
ದೀಪಾವಳಿ ದಿವಾಳಿ ಎಂದಾಗದಿರಲಿ, ಮೈಸೂರಿನಲ್ಲಿ ಜಾಗೃತಿ ಅಭಿಯಾನ
Follow us
TV9 Web
| Updated By: ಆಯೇಷಾ ಬಾನು

Updated on:Oct 20, 2022 | 9:48 AM

ಬೆಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆ ಬೆಂಗಳೂರಿನಲ್ಲಿ ಹಲಾಲ್ ಮುಕ್ತ ದೀಪಾವಳಿ ಅಭಿಯಾನ(Halal Mukta Deepavali Abhiyan) ನಡೆಸಲು ಹಿಂದೂ ಸಂಘಟನೆಗಳು(Hindu organizations) ಕರೆ ಕೊಟ್ಟಿವೆ. ಹಿಂದೂಪರ ಸಂಘಟನೆಗಳ “ಹಲಾಲ್ ಮುಕ್ತ ದೀಪಾವಳಿ” ಕರೆ ಹಿನ್ನೆಲೆ ಜಯನಗರ, ಬಸವನಗುಡಿಯಲ್ಲಿಂದು 11 ಗಂಟೆಗೆ ಜಾಗೃತಿ ಅಭಿಯಾನ ನಡೆಯಲಿದೆ. ಜಯನಗರದ ಮಯ್ಯಾಸ್ ಹೋಟೆಲ್ ಬಳಿಯಿಂದ ಅಭಿಯಾನ ಆರಂಭವಾಗಲಿದೆ. ಅಭಿಯಾನದಲ್ಲಿ ಭಾಷಣಕಾರರಾದ ವಿವೇಕ್ ವಂಶಿ, ಹಾರಿಕ ಮುಂಜುನಾಥ್, ಮುಖಂಡರಾದ ಮೋಹನ್ ಗೌಡ, ಮುನೇಗೌಡ ಹಾಗೂ ಪುನೀತ್ ಕೆರೆ ಹಳ್ಳಿ ಭಾಗಿಯಾಗಲಿದ್ದಾರೆ.

ಆಟೋದಲ್ಲಿ ಮೈಕ್ ಸೆಟ್ ‌ಮೂಲಕ ಜಾಗೃತಿ ಮೂಡಿಸಲಿದ್ದಾರೆ. ಮನೆ ಮನೆಗೆ ತೆರಳಿ ಹಲಾಲ್ ಜಿಹಾದ್ ಪುಸ್ತಕ ಮತ್ತು ಬಿತ್ತಿಪತ್ರಗಳನ್ನು ನೀಡಿ ಈ ಬಾರಿಯ ದೀಪಾವಳಿ ಹಬ್ಬದಲ್ಲಿ ಹಲಾಲ್ ವಸ್ತುಗಳನ್ನು ಖರೀದಿ ಮಾಡದಂತೆ ಮನವಿ ಮಾಡಲಿದ್ದಾರೆ. ಹಿಂದೂ ಜನಜಾಗೃತಿ ಸಮಿತಿ, ಶ್ರೀ ರಾಮ ಸೇನೆ, ರಾಷ್ಟ್ರ ರಕ್ಷಣಾ ಪಡೆ ಹಾಗೂ ವಿಶ್ವ ಹಿಂದೂ ಸನಾತನ ಪರಿಷತ್ತಿನ ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗಿಯಾಗಲಿದ್ದಾರೆ. ಇಂದು ಜಯನಗರ ಮತ್ತು ಬಸವನಗುಡಿಯ ವಿಧಾನಸಭಾ ಕ್ಷೇತ್ರದಲ್ಲಿ ಜಾಗೃತಿ ಅಭಿಯಾನ ನಡೆಯಲಿದೆ. ಹಿಂದೂಪರ ಹೋರಾಟಗಾರರು ಹೋಟೆಲ್‌ ಮಾಲೀಕರು, ಉದ್ಯಮಿಗಳು, ಅಂಗಡಿ ಮಾಲೀಕರು ಹಾಗೂ ಎಪಿಎಂಸಿ ಮಾಲೀಕರ ಜೊತೆಗೆ ಜಾಗೃತಿ ‌ಸಭೆ ಕೂಡ ಮಾಡಲಿದ್ದಾರೆ. ಇದನ್ನೂ ಓದಿ: Population Policy: ಮತಾಂತರಗೊಂಡವರಿಗೆ ಮೀಸಲಾತಿ ಸವಲತ್ತು ಸಲ್ಲದು; ಆರ್​ಎಸ್​ಎಸ್​ ನಾಯಕ ದತ್ತಾತ್ರೇಯ ಹೊಸಬಾಳೆ

ದೀಪಾವಳಿ ದಿವಾಳಿ ಎಂದಾಗದಿರಲಿ, ಮೈಸೂರಿನಲ್ಲಿ ಜಾಗೃತಿ ಅಭಿಯಾನ

ಇನ್ನು ಮತ್ತೊಂದೆಡೆ ಮೈಸೂರಿನಲ್ಲೂ ಜಾಗೃತಿ ಅಭಿಯಾನ ಶುರುವಾಗಿದೆ. ದೀಪಾವಳಿ ದಿವಾಳಿ ಎಂದಾಗದಿರಲಿ ಕನ್ನಡ ಪದ ಬಳಕೆ ಸರಿಯಿರಲಿ ಎಂದು ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಜಾಗೃತಿ ಮೂಡಿಸಲಾಗುತ್ತಿದೆ. ದೇವರಾಜ ಅರಸು ರಸ್ತೆ, ವಿನೋಬ ರಸ್ತೆ, ಶಿವರಾಂಪೇಟೆ ಸೇರಿ ಹಲವು ಅಂಗಡಿಗಳಿಗೆ ತೆರಳಿ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದೆ. ಗುಲಾಬಿ ಹೂವು ನೀಡಿ ಕನ್ನಡ ಪದಗಳನ್ನು ಸರಿಯಾದ ರೀತಿಯಲ್ಲಿ ಬಳಸುವಂತೆ ಮನವಿ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:48 am, Thu, 20 October 22