Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore: ದುಡ್ಡು ಮಾಡೋದು ಬಿಟ್ರೆ ಬಿಬಿಎಂಪಿ ಇನ್ನೇನು ಮಾಡ್ತಿಲ್ಲ; ರಸ್ತೆ ಗುಂಡಿಗೆ ಬಿದ್ದ ವ್ಯಕ್ತಿಯ ಆಕ್ರೋಶ

Bangalore: ದುಡ್ಡು ಮಾಡೋದು ಬಿಟ್ರೆ ಬಿಬಿಎಂಪಿ ಇನ್ನೇನು ಮಾಡ್ತಿಲ್ಲ; ರಸ್ತೆ ಗುಂಡಿಗೆ ಬಿದ್ದ ವ್ಯಕ್ತಿಯ ಆಕ್ರೋಶ

TV9 Web
| Updated By: Rakesh Nayak Manchi

Updated on:Oct 20, 2022 | 11:28 AM

Bangalore Rain: ಬೆಂಗಳೂರು ನಗರದ ರಸ್ತೆಗಳಲ್ಲಿ ವಾಹನ ಸವಾರಿ ವೇಳೆ ಜೀವ ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದಾರೆ. ಇದಕ್ಕೆ ರಸ್ತೆಗಳಲ್ಲಿನ ಹೊಂಡಗಳೇ ಕಾರಣ. ನಿನ್ನೆ ಸರಿದ ಮಳೆಗೆ ನೀರು ತುಂಬಿದ್ದ ಹೊಂಡಕ್ಕೆ ತಂದೆ-ಮಗಳು ಬಿದ್ದ ಘಟನೆ ನಡೆದಿದೆ.

ಬೆಂಗಳೂರು: ನಗರದಲ್ಲಿ ರಾತ್ರಿಯಿಂದ ಸುರಿದ ಮಳೆ (Bangalore Rain) ಸೃಷ್ಟಿಸಿದ ಅವಾಂತರಗಳಿಗೆ ಸಾರ್ವಜನಿಕರು ಪರದಾಡುವಂತಾಗಿದೆ. ಮಳೆ ಹೊಡೆತದಿಂದಾಗಿ ರಾತ್ರಿ ನದಿಯಂತಾಗಿದ್ದ ಶಿವಾನಂದ ಸರ್ಕಲ್​ ಬಳಿಯ ರಸ್ತೆಗಳಲ್ಲಿನ ಹೊಂಡಗಳಲ್ಲಿ ನೀರು ತುಂಬಿಕೊಂಡಿತ್ತು. ನೀರು ಆವರಿಸಿದ್ದರಿಂದ ಹೊಂಡ ಕಾಣಿಸದೆ ಬೈಕ್​ನಲ್ಲಿ ಬರುತ್ತಿದ್ದ ತಂದೆ ಮಗಳು ಅದಕ್ಕೆ ಬಿದ್ದಿದ್ದಾರೆ. ಸ್ಥಳದಲ್ಲಿ ವಾಹನ ಸಂಚಾರದ ವಿಡಿಯೋ ಮಾಡುತ್ತಿದ್ದಾಗ ಟಿವಿ 9 ಕ್ಯಾಮರಾದ ಮುಂದೆಯೇ ಈ ಘಟನೆ ನಡೆದಿದೆ. ಘಟನೆಯಲ್ಲಿ ವಿದ್ಯಾರ್ಥಿನಿಯ ತಂದೆಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಮಾತನಾಡಿದ ಗಾಯಾಳು ವ್ಯಕ್ತಿ ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಪಾಲಿಕೆ ದುಡ್ಡು ಮಾಡುವುದು ಬಿಟ್ಟರೆ ಇನ್ನೇನು ಮಾಡುತ್ತಿಲ್ಲ ಎಂದರು.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

Published on: Oct 20, 2022 11:28 AM