Thailand: ಥಾಯ್ಲೆಂಡ್​ನಲ್ಲಿ ಗುಂಡಿನ ದಾಳಿ; 22 ಮಕ್ಕಳು ಸೇರಿದಂತೆ 34 ಮಂದಿ ಸಾವು

ಥಾಯ್ಲೆಂಡ್‌ನ ಈಶಾನ್ಯ ಪ್ರಾಂತ್ಯದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ ಸುಮಾರು 20 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ತಿಳಿಸಿದ್ದಾರೆ.

Thailand: ಥಾಯ್ಲೆಂಡ್​ನಲ್ಲಿ ಗುಂಡಿನ ದಾಳಿ; 22 ಮಕ್ಕಳು ಸೇರಿದಂತೆ 34 ಮಂದಿ ಸಾವು
ಗುಂಡು ಹಾರಿಸಿದ ವ್ಯಕ್ತಿ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Oct 06, 2022 | 2:36 PM

ಬ್ಯಾಂಕಾಕ್:  ಥಾಯ್ಲೆಂಡ್‌ನ  (Thailand)ಈಶಾನ್ಯ ಪ್ರಾಂತ್ಯದಲ್ಲಿ ಮಕ್ಕಳ ಡೇ-ಕೇರ್ ಸೆಂಟರ್‌ನಲ್ಲಿ ಗುರುವಾರ ನಡೆದ ಸಾಮೂಹಿಕ ಗುಂಡಿನ ದಾಳಿಯಲ್ಲಿ (mass shooting) ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಸಾವಿಗೀಡಾದವರಲ್ಲಿ ಮಕ್ಕಳು ಮತ್ತು ವಯಸ್ಕರು ಸೇರಿದ್ದಾರೆ ಬಂದೂಕುಧಾರಿ ಮಾಜಿ ಪೊಲೀಸ್ ಅಧಿಕಾರಿಯಾಗಿದ್ದು, ಶೋಧ ನಡೆಯುತ್ತಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕ್ರಮ ಕೈಗೊಳ್ಳಲು ಮತ್ತು ಅಪರಾಧಿಯನ್ನು ಬಂಧಿಸಲು ಪ್ರಧಾನಿ ಎಲ್ಲಾ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಸರ್ಕಾರದ ವಕ್ತಾರರು ತಿಳಿಸಿದ್ದಾರೆ.  ಥಾಯ್ಲೆಂಡ್‌ನ ನರ್ಸರಿಯೊಂದಕ್ಕೆ ಬಂದೂಕು ಮತ್ತು ಚಾಕು ಹಿಡಿದು ವ್ಯಕ್ತಿಯೊಬ್ಬ ನುಗ್ಗಿದ್ದು 22 ಮಕ್ಕಳು ಸೇರಿದಂತೆ ಕನಿಷ್ಠ 34 ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.  ಕನಿಷ್ಠ 34 ಮಂದಿ ಸಾವಿಗೀಡಾಗಿದ್ದಾರೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ ” ಎಂದು ಉಪ ಪೊಲೀಸ್ ವಕ್ತಾರ ಅರ್ಚನ್ ಕ್ರೈಟಾಂಗ್ ಹೇಳಿದ್ದಾರೆ.

ಕೆಲವು ದೇಶಗಳಿಗೆ ಹೋಲಿಸಿದರೆ ಥಾಯ್ಲೆಂಡ್​​ನಲ್ಲಿ  ಬಂದೂಕು ಮಾಲಿಕತ್ವದ ಪ್ರಮಾಣವು ಅಧಿಕವಾಗಿದೆ. ಆದರೆ ಅಧಿಕೃತ ಅಂಕಿಅಂಶಗಳನ್ನು ನೋಡಿದರೆ ಇಲ್ಲಿ ಭಾರೀ ಸಂಖ್ಯೆಯ ಅಕ್ರಮ ಶಸ್ತ್ರಾಸ್ತ್ರಗಳು ಇಲ್ಲ್ಲ, ಇವುಗಳಲ್ಲಿ ಹೆಚ್ಚಿನವು ಹಾನಿಗೊಳಗಾದ ನೆರೆಹೊರೆಯವರಿಂದ ವರ್ಷಗಳಲ್ಲಿ ಗಡಿಗಳ ಮೂಲಕ ತರಲಾಗಿದೆ. ಇಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ಅಪರೂಪ. ಆದರೆ 2020 ರಲ್ಲಿ, ಆಸ್ತಿ ವ್ಯವಹಾರದ ಮೇಲೆ ಕೋಪಗೊಂಡ ಯೋಧನೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ  29 ಜನರು ಸಾವಿಗೀಡಾಗಿದ್ದು  57 ಜನರು ಗಾಯಗೊಂಡಿದ್ದರು.

Published On - 1:24 pm, Thu, 6 October 22