Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲಂಗಾಣ: ವಾಮಾಚಾರಕ್ಕೆ ತಂದೆ-ಮಗ ಬಲಿ; ಸಮಸ್ಯೆಗಳಿಗೆ ಅರ್ಚಕನೇ ಕಾರಣ ಎಂದು ಕೊಲೆ ಮಾಡಿದ್ದ ಆರೋಪಿ ಗ್ಯಾಂಗ್ ಅರೆಸ್ಟ್

ಹಣ ಕೊಡಬೇಕಾಗುತ್ತೆ ಎಂದು ಬ್ಲ್ಯಾಕ್​ ಮ್ಯಾಜಿಕ್ ಮಾಡಿದ್ದಾರೆ ಎಂದು ಕೊಂಡ ಆರೋಪಿ ಅಕ್ಟೋಬರ್ 14 ರಂದು ತನ್ನ ಸ್ನೇಹಿತರೊಂದಿಗೆ ಅರ್ಚಕರ ನಿವಾಸಕ್ಕೆ ನುಗ್ಗಿ ಹಲ್ಲೆ ನಡೆಸಿದ್ದಾನೆ.

ತೆಲಂಗಾಣ: ವಾಮಾಚಾರಕ್ಕೆ ತಂದೆ-ಮಗ ಬಲಿ; ಸಮಸ್ಯೆಗಳಿಗೆ ಅರ್ಚಕನೇ ಕಾರಣ ಎಂದು ಕೊಲೆ ಮಾಡಿದ್ದ ಆರೋಪಿ ಗ್ಯಾಂಗ್ ಅರೆಸ್ಟ್
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಆಯೇಷಾ ಬಾನು

Updated on:Oct 19, 2022 | 7:36 AM

ಹೈದರಾಬಾದ್: ಕಳೆದ ಕೆಲವು ದಿನಗಳ ಹಿಂದೆ ತೆಲಂಗಾಣದಲ್ಲಿ ನಡೆದಿದ್ದ 75 ವರ್ಷದ ಅರ್ಚಕ ಹಾಗೂ ಆತನ ಮಗನ ಸಾವಿಗೆ ಕಾರಣ ಬಯಲಾಗಿದೆ. ಪೊಲೀಸ್ ಇನ್ಸೆಪೆಕ್ಟರ್ ಕೆಲಸಕ್ಕಾಗಿ ಮಾಟಮಂತ್ರದ(Black Majic) ಮೊರೆ ಹೋಗಿದ್ದ ವಿನಯ್ ಎಂಬ ವ್ಯಕ್ತಿ ಕೆಲಸ ಸಿಗದಿದ್ದಾಗ ತನ್ನ ಹಣ ಹಿಂದಿರುಗಿಸುವಂತೆ ಮೃತ ಅರ್ಚಕ ನರಸಿಂಹ ಬಳಿ ಗಲಾಟೆ ಮಾಡಿದ್ದ. ಹಣ ಕೊಡಿದಿದ್ದಾಗ ಸ್ನೇಹಿತರ ಜೊತೆ ಸೇರಿ ತಂದೆ ಮಗನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ರಾಚಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ಸಂಬಂಧ ಐವರನ್ನು ಬಂಧಿಸಲಾಗಿದೆ.

ಮೃತ ಅರ್ಚಕ ನರಸಿಂಹನಿಗೆ ಆರೋಪಿ ವಿನಯ್​ ಬಹಳ ದಿನಗಳಿಂದ ಪರಿಚಿತನಾಗಿದ್ದ. ಆರೋಪಿ ವಿನಯ್ ಆಚರಣೆಗಳಲ್ಲಿ ನಂಬಿಕೆ ಇದ್ದಂತಹ ವ್ಯಕ್ತಿ. ಅರ್ಚಕರು ಪೂಜೆ ಮಾಡಿದರೆ ತನಗೆ ಒಳ್ಳೆದಾಗುತ್ತೆ ಎಂಬ ಮೂಢನಂಬಿಕೆ ಈತ ಇಟ್ಟಿಕೊಂಡಿದ್ದ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಮೂಢನಂಬಿಕೆಗೆ ಇಬ್ಬರು ಬಲಿ

ಪ್ರಮುಖ ಆರೋಪಿ ವಿನಯ್ 2016ರಲ್ಲಿ ಪೊಲೀಸ್ ನೇಮಕಾತಿ ಪರೀಕ್ಷೆ ಬರೆದಿದ್ದ, ಮೃತ ಅರ್ಚಕ ಕೆಲಸ ಸಿಗಲು ಪೂಜೆ ಸಲ್ಲಿಸುವುದಾಗಿ ಹೇಳಿ ಆರೋಪಿ ಬಳಿ ಆರು ಲಕ್ಷ ರೂ ಪಡೆದಿದ್ದ. ಇದೇ ರೀತಿ ಮತ್ತೊಬ್ಬ ವ್ಯಕ್ತಿಗೆ ಸುಮಾರು 12.50 ಲಕ್ಷ ರೂ ನೀಡಲು ಹೇಳಿದ್ದ. ಆದರೆ, ಆರೋಪಿಗೆ ಕೆಲಸ ಸಿಗದ ಕಾರಣ ಆತ ತಾನು ನೀಡಿದ್ದ 12.50 ಲಕ್ಷ ರೂ.ಗಳನ್ನು ಹಿಂದಿರುಗಿಸುವಂತೆ ಒತ್ತಡ ಹಾಕಿದ್ದಾನೆ. 12ಲಕ್ಷ ಪಡೆದಿದ್ದ ವ್ಯಕ್ತಿ 10 ಲಕ್ಷ ರೂ.ಗಳನ್ನು ಹಿಂದಿರುಗಿಸಿ ಬಳಿಕ 2.50 ಲಕ್ಷ ರೂ.ಗೆ ಚೆಕ್ ನೀಡಿದ್ದಾನೆ. ಆದರೆ ಅರ್ಚಕರಿಗೆ ಆರು ಲಕ್ಷ ರೂಪಾಯಿ ಹಿಂದಿರುಗಿಸಲು ಸಾಧ್ಯವಾಗಿಲ್ಲ. ಇದನ್ನೂ ಓದಿ: 22 ವರ್ಷದ ಅಕೌಂಟ್​ನ ಒಂದೇ ದಿನದಲ್ಲಿ ನೋಡಿ ಮುಗಿಸಿದ ಸಂಜು; ಮೀರಾಗೆ ಹೆಚ್ಚಿತು ಅನುಮಾನ

ಬಳಿಕ ಆರೋಪಿ ವಿನಯ್ ತನ್ನ ವೈಯಕ್ತಿಕ ಜೀವನದಲ್ಲಿ ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದ. ಮತ್ತು ಅವುಗಳನ್ನು ನಿವಾರಿಸಲು ಅರ್ಚಕನಿಗೆ ಪೂಜೆ ಮಾಡಲು ಅನೇಕ ಬಾರಿ ಹಣವನ್ನು ನೀಡಿದ್ದ. 2021ರ ಮಾರ್ಚ್ ತಿಂಗಳಲ್ಲಿ ಆರೋಪಿಯು ತನ್ನ ಆರು ಲಕ್ಷ ರೂಪಾಯಿಗಳನ್ನು ಹಿಂದಿರುಗಿಸುವಂತೆ ಅರ್ಚಕನ ಮೇಲೆ ಒತ್ತಡ ಹೇರಿದ್ದಾನೆ. ಆದ್ರೆ ಅರ್ಚಕ ಆರೋಪಿ ಕಾಟದಿಂದ ತಪ್ಪಿಸಿಕೊಳ್ಳಲು ಅವನಿಂದ ದೂರುವಾಗಿದ್ದಾರೆ.

ಇಷ್ಟೆಲ್ಲಾ ಆದ ಬಳಿಕ ಆರೋಪಿ ವಿನಯ್​ ತನಗೆ ಆರೋಗ್ಯ ಸಮಸ್ಯೆಗಳು ಎದುರಾಗುತ್ತಿವೆ. ಆರ್ಥಿಕ ನಷ್ಟ ಸಂಭವಿಸುತ್ತಿದೆ. “ಪ್ರತಿ ಹುಣ್ಣಿಮೆಯ ದಿನ ಕೆಟ್ಟ ಅನುಭವಗಳಾಗುತ್ತಿವೆ ” ಎಂದು ತನ್ನ ಮನಸ್ಸಿನಲ್ಲಿ ಬಲವಾದ ಭಾವನೆಯನ್ನು ಬೆಳೆಸಿಕೊಂಡಿದ್ದ. ಇದಕ್ಕೆ ಅರ್ಚಕರೇ ಕಾರಣ ಇರಬೇಕು. ಹಣ ಕೊಡಬೇಕಾಗುತ್ತೆ ಎಂದು ಬ್ಲ್ಯಾಕ್​ ಮ್ಯಾಜಿಕ್ ಮಾಡಿದ್ದಾರೆ ಎಂದು ಕೊಂಡ ಆರೋಪಿ ಅಕ್ಟೋಬರ್ 14 ರಂದು ತನ್ನ ಸ್ನೇಹಿತರೊಂದಿಗೆ ಅರ್ಚಕರ ನಿವಾಸಕ್ಕೆ ನುಗ್ಗಿ ಹಲ್ಲೆ ನಡೆಸಿದ್ದಾನೆ. ಘಟನೆಯಲ್ಲಿ ಅರ್ಚಕ ಮತ್ತು ಆತನ ಮಗ ಮೃತಪಟ್ಟಿದ್ದಾರೆ. ಸದ್ಯ ಪೊಲೀಸರು ಪ್ರಕರಣ ಭೇದಿಸಿದ್ದು ಆರೋಪಿ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ.

Published On - 7:36 am, Wed, 19 October 22

ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ
ಗುತ್ತಿಗೆದಾರರು ಈ ಸರ್ಕಾರವನ್ನೂ ಅಧಿಕಾರದಿಂದ ಕೆಳಗಿಳಿಸಲಿದ್ದಾರೆ: ಸೋಮಣ್ಣ
ಪುಣ್ಯಸ್ನಾನ ಮಾಡಿ ಸಂಗಮ ತೀರದಲ್ಲೇ ಬಟ್ಟೆ ಬಿಸಾಡಿ ಹೋಗುತ್ತಿರುವ ಜನ
ಪುಣ್ಯಸ್ನಾನ ಮಾಡಿ ಸಂಗಮ ತೀರದಲ್ಲೇ ಬಟ್ಟೆ ಬಿಸಾಡಿ ಹೋಗುತ್ತಿರುವ ಜನ
ಎಲೆಕೋಸು ಬೆಲೆ ದಿಢೀರ್​​ ಕುಸಿತ: ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ ರೈತ
ಎಲೆಕೋಸು ಬೆಲೆ ದಿಢೀರ್​​ ಕುಸಿತ: ಕುರಿಗಳನ್ನ ಬಿಟ್ಟು ಬೆಳೆ ನಾಶ ಪಡಿಸಿದ ರೈತ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಅಂಬೇಡ್ಕರ್ ಎರಡು ಬಾರಿ ಚುನಾವಣೆಯಲ್ಲಿ ಸೋಲುವಂತೆ ಮಾಡಿದ್ದು ನೆಹರೂ: ಕಾರಜೋಳ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಕರಡಿಗಳಲ್ಲಿ ಮಾನವರ ಮೇಲೆ ಹಲ್ಲೆ ಮಾಡುವ ಪ್ರವೃತ್ತಿ, ಕೆಲವೊಮ್ಮೆ ಮಾರಣಾಂತಿಕ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಒಂದೇ ಸ್ಟ್ರಾಟಿಜಿ ಎಲ್ಲ ಪಂದ್ಯಗಳಿಗೆ ನಡೆಯಲ್ಲ, ಬದಲಾಯಿಸಬೇಕು: ಅಭಿಮಾನಿ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
‘ನಾನು ಇಲ್ಲಿಯವನು, ಬೆಂಗಳೂರು ಹೃದಯದಲ್ಲಿದೆ’; ಕನ್ನಡಿಗ ಕೆಎಲ್ ರಾಹುಲ್
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹುಬ್ಬಳ್ಳಿ: ಕುಸಿದು ಬಿದ್ದ ಪೊಲೀಸ್ ಠಾಣೆ ಮೇಲ್ಚಾವಣಿ ಕಾಂಕ್ರೀಟ್!
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ಹೋಮಕ್ಕೆ ತುಪ್ಪ ಹಾಗೂ ಧಾನ್ಯಗಳ ಹವಿಸ್ಸು ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ