UGC NET 2022 Result: ನ. 5ಕ್ಕೆ ಯುಜಿಸಿ ನೆಟ್ ಫಲಿತಾಂಶ ಪ್ರಕಟ; ರಿಸಲ್ಟ್ ನೋಡುವುದು ಹೇಗೆ?
ಯುಜಿಸಿ NET ಫಲಿತಾಂಶವನ್ನು ಪರಿಶೀಲಿಸಲು, ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ಲಾಗಿನ್ ಆಗಬೇಕು.
ನವದೆಹಲಿ: ರಾಷ್ಟ್ರೀಯ ಅರ್ಹತಾ ಪರೀಕ್ಷೆಯ (UGC NET) ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನಾಳೆ (ನವೆಂಬರ್ 5) ಬಿಡುಗಡೆ ಮಾಡಲಿದೆ. ನೆಟ್ ಪರೀಕ್ಷೆ ಬರೆದಿರುವ ಅಭ್ಯರ್ಥಿಗಳು nta.ac.in ಮತ್ತು ugcnet.nta.nic.in ಈ ಅಧಿಕೃತ ವೆಬ್ಸೈಟ್ನಲ್ಲಿ ಫಲಿತಾಂಶವನ್ನು ಪರಿಶೀಲಿಸಬಹುದು.
ನೆಟ್ ಫಲಿತಾಂಶದ ಬಿಡುಗಡೆ ದಿನಾಂಕವನ್ನು ಯುಜಿಸಿ ಅಧ್ಯಕ್ಷ ಮಾಮಿದಾಳ ಜಗದೇಶ್ ಕುಮಾರ್ ಇಂದು ಪ್ರಕಟಿಸಿದ್ದಾರೆ. “UGC-NET ಫಲಿತಾಂಶಗಳನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ನವೆಂಬರ್ 5ರಂದು (ಶನಿವಾರ) ಪ್ರಕಟಿಸಲಿದೆ. ಫಲಿತಾಂಶಗಳು NTA ವೆಬ್‌ಸೈಟ್ https://nta.ac.in#UGC-NET ನಲ್ಲಿ ಲಭ್ಯವಿರುತ್ತವೆ ಎಂದು ಅವರು ಟ್ವಿಟ್ಟರ್‌ನಲ್ಲಿ ತಿಳಿಸಿದ್ದಾರೆ.
UGC-NET results will be announced by National Testing Agency (NTA) on 5th November (Saturday). The results will be available on NTA website https://t.co/HMrF8NRnOv#UGC-NET
— Mamidala Jagadesh Kumar (@mamidala90) November 4, 2022
ಮೊದಲ ಹಂತದ ನೆಟ್ ಪರೀಕ್ಷೆಯ ಜುಲೈ 9ರಿಂದ 12ರವರೆಗೆ ನಡೆದಿತ್ತು. 2ನೇ ಹಂತದ ಪರೀಕ್ಷೆ ಸೆಪ್ಟೆಂಬರ್ 20ರಿಂದ 22ರವರೆಗೆ ನಡೆದಿತ್ತು. UGC NET 2022 ಪರೀಕ್ಷೆಯ 3ನೇ ಹಂತ ಸೆಪ್ಟೆಂಬರ್ 23ರಿಂದ ಅಕ್ಟೋಬರ್ 1ರವರೆಗೆ ನಡೆದಿತ್ತು. 4ನೇ ಹಂತ ಅಕ್ಟೋಬರ್ 8, 10, 11, 12, 13, ಮತ್ತು 14ರಂದು ನಡೆದಿತ್ತು.
ಇದನ್ನೂ ಓದಿ: UGC-NET ಅರ್ಹತಾ ಪರೀಕ್ಷೆಯಲ್ಲಿ ಗೊಂದಲ- ಕನ್ನಡ ವಿಷಯ ಪರೀಕ್ಷಾರ್ಥಿಗಳ ಆಕ್ರೋಶ, ಕೊನೆಗೆ ಮರು ಪರೀಕ್ಷೆಗೆ ಒಪ್ಪಿಗೆ
UGC NET ಫಲಿತಾಂಶ 2022 ಅನ್ನು ಪರಿಶೀಲಿಸಲು, ಅಭ್ಯರ್ಥಿಗಳು ತಮ್ಮ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕದೊಂದಿಗೆ ಲಾಗಿನ್ ಆಗಬೇಕು. ಹೆಚ್ಚಿನ ಸಂಬಂಧಿತ ವಿವರಗಳಿಗಾಗಿ ಅಭ್ಯರ್ಥಿಗಳು UGC NET ನ ಅಧಿಕೃತ ಸೈಟ್ ಅನ್ನು ಪರಿಶೀಲಿಸಬಹುದು.
UGC ನೆಟ್ ಫಲಿತಾಂಶವನ್ನು ಪರಿಶೀಲಿಸುವುದು ಹೇಗೆ? ಹಂತ 1: ugcnet.nta.nic.in ಪರೀಕ್ಷಾ ವೆಬ್‌ಸೈಟ್‌ಗೆ ಭೇಟಿ ನೀಡಿ.
ಹಂತ 2: ವೆಬ್ಸೈಟ್ನಿಂದ ಸ್ಕೋರ್‌ಕಾರ್ಡ್‌ಗಳನ್ನು ವೀಕ್ಷಿಸಲು ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ಅಗತ್ಯ ಲಾಗಿನ್ ವಿವರಗಳನ್ನು ಭರ್ತಿ ಮಾಡಿ.
ಹಂತ 4: ನಿಮ್ಮ ಫಲಿತಾಂಶಗಳನ್ನು ಸಬ್ಮಿಟ್ ಮಾಡಿ ಮತ್ತು ಪರಿಶೀಲಿಸಿ.
ಹಂತ 5: ನಂತರದ ಫಲಿತಾಂಶಗಳ ಪುಟವನ್ನು ಪ್ರಿಂಟ್ ತೆಗೆದಿಟ್ಟುಕೊಳ್ಳಿ.
ಮೀಸಲಾತಿಗೆ ಒಳಪಡದ ಅಭ್ಯರ್ಥಿಗಳು ಕನಿಷ್ಠ ಶೇ. 40 ಅಂಕಗಳನ್ನು ಗಳಿಸಬೇಕು. ಆದರೆ ಮೀಸಲಾತಿ ವರ್ಗದ ಅಭ್ಯರ್ಥಿಗಳು ಕನಿಷ್ಠ ಶೇ. 35 ಅಂಕಗಳನ್ನು ಗಳಿಸಬೇಕಾಗುತ್ತದೆ. ಒಟ್ಟಾರೆಯಾಗಿ ಮಾತ್ರವಲ್ಲದೆ ನೆಟ್ ಬರೆದ ಅಭ್ಯರ್ಥಿಗಳು ಪ್ರತಿ ಪೇಪರ್ ಅನ್ನು ಪ್ರತ್ಯೇಕವಾಗಿ ಪಾಸ್ ಮಾಡಬೇಕು.
ಶಿಕ್ಷಣಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:45 pm, Fri, 4 November 22