UPSC Prelims Exam 2024 : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯುಪಿಎಸ್​​ಸಿ ಪ್ರಿಲಿಮಿನರಿ ಪರೀಕ್ಷೆ ಮುಂದೂಡಿಕೆ

ಕೇಂದ್ರ ಲೋಕಸೇವಾ ಆಯೋಗವು ಸಿಎಸ್‌ಇ ಹಾಗೂ ಇಂಡಿಯನ್ ಫಾರೆಸ್ಟ್‌ ಸರ್ವೀಸ್‌ ಪೂರ್ವಭಾವಿ ಪರೀಕ್ಷೆಯನ್ನು ಮೇ 26, 2024 ರಂದು ನಡೆಸಲು ದಿನಾಂಕವು ನಿಗದಿಯಾಗಿತ್ತು. ಆದರೆ ಇದೀಗ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ನಾಗರಿಕ ಸೇವಾ ಪ್ರಾಥಮಿಕ ಪರೀಕ್ಷೆಯನ್ನು ಜೂನ್ 16 ಕ್ಕೆ ಮುಂದೂಡಲಾಗಿದೆ.

UPSC Prelims Exam 2024 : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಯುಪಿಎಸ್​​ಸಿ ಪ್ರಿಲಿಮಿನರಿ ಪರೀಕ್ಷೆ ಮುಂದೂಡಿಕೆ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Mar 20, 2024 | 2:06 PM

ಯುಪಿಎಸ್​​ಸಿ ಸಿವಿಲ್ ಸರ್ವೀಸಸ್ ಪರೀಕ್ಷೆ (ಪ್ರಿಲಿಮಿನರಿ) 2024 ಕ್ಕೆ ತಯಾರಿ ನಡೆಸುತ್ತಿರುವ ಎಲ್ಲಾ ಅಭ್ಯರ್ಥಿಗಳಿಗೆ ಪ್ರಮುಖ ಸುದ್ದಿಯೊಂದು ಹೊರ ಬಿದ್ದಿದೆ. ಲೋಕಸಭಾ ಚುನಾವಣೆಯ ದಿನಾಂಕಗಳು ಪ್ರಕಟವಾದ ಹಿನ್ನಲೆಯಲ್ಲಿ ಇದೀಗ ಪೂರ್ವಭಾವಿ ಪರೀಕ್ಷೆಯನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ)ವು ಮುಂದೂಡಿದೆ.

ಪರೀಕ್ಷಾ ದಿನಾಂಕ ಮುಂದೂಡಿಕೆಯ ಬಗ್ಗೆ ಆಯೋಗವು ತನ್ನ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಹಂಚಿಕೊಂಡಿದೆ. ಯುಪಿಎಸ್​​ಸಿ ನೀಡಿದ ಮಾಹಿತಿಯ ಪ್ರಕಾರ, ಸಿಎಸ್‌ಇ ಹಾಗೂ ಇಂಡಿಯನ್ ಫಾರೆಸ್ಟ್‌ ಸರ್ವೀಸ್‌ ಪೂರ್ವಭಾವಿ ಪರೀಕ್ಷೆಯನ್ನು 26 ಮೇ 2024 ರ ಬದಲಿಗೆ 16 ಜೂನ್ 2024 ರಂದು ನಡೆಸಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ: 5, 8, 9, 11ನೇ ತರಗತಿಗಳ ಬೋರ್ಡ್ ಪರೀಕ್ಷೆ: ಸರ್ಕಾರದ ಮೇಲ್ಮನವಿಯ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ಹಲವಾರು ಹುದ್ದೆಗಳಿಗೆ ನೇಮಕಾತಿ

ಕೇಂದ್ರ ಲೋಕಸೇವಾ ಆಯೋಗವು ಈ ನೇಮಕಾತಿಯ ಪ್ರಕ್ರಿಯೆಯ ಮೂಲಕ 1206 ಒಟ್ಟು ಖಾಲಿ ಹುದ್ದೆಗಳನ್ನು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಭರ್ತಿ ಮಾಡಿಕೊಳ್ಳಲಿದೆ. ಇವುಗಳಲ್ಲಿ 1056 ಹುದ್ದೆಗಳನ್ನು ಭಾರತೀಯ ಆಡಳಿತ ಸೇವೆ/ಐಎಎಸ್ (ನಾಗರಿಕ ಸೇವೆಗಳು) ಗಾಗಿ ಮೀಸಲಿಡಲಾಗಿದೆ. ಅದಲ್ಲದೇ 150 ಹುದ್ದೆಗಳನ್ನು ಭಾರತೀಯ ಅರಣ್ಯ ಸೇವೆಗೆ (ಐಎಫ್‌ಎಸ್) ಮೀಸಲಿಡಲಾಗಿದೆ. ಯುಪಿಎಸ್​​ಸಿ ಸಿಎಸ್ ಇ ಪ್ರಿಲಿಮಿನರಿ ಪರೀಕ್ಷೆ 2024 ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಪಡೆದುಕೊಳ್ಳಬಹುದು.

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ