Pariksha Pe Charcha 2022: ಪ್ರಧಾನಿ ಮೋದಿ ಜತೆ ‘ಪರೀಕ್ಷಾ ಪೇ ಚರ್ಚಾ’ದಲ್ಲಿ ಭಾಗವಹಿಸುವ ಆಸಕ್ತಿ ಇದೆಯೇ? ನೋಂದಣಿ, ಆಯ್ಕೆ ಕುರಿತ ಮಾಹಿತಿ ಇಲ್ಲಿದೆ
PM Narendra Modi: 2022ರ ಪರೀಕ್ಷಾ ಪೇ ಚರ್ಚಾಕ್ಕೆ ಎಂದಿನಿಂದ ನೋಂದಣಿ ಆರಂಭವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಇಂದಿನ ಮನ್ ಕೀ ಬಾತ್ನಲ್ಲಿ ಅವರು ಈ ಕುರಿತು ಮಾತನಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) 9 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗೆ ‘ಪರೀಕ್ಷಾ ಪೇ ಚರ್ಚಾ’ವನ್ನು 2018ರಿಂದ ನಡೆಸಿಕೊಂಡು ಬರುತ್ತಿದ್ದಾರೆ. ಈ ವರ್ಷದ ಪರೀಕ್ಷಾ ಪೇ ಚರ್ಚಾದ (Pariksha Pe Charcha 2022) ಕುರಿತು ಇಂದು (ಡಿಸೆಂಬರ್ 26) ನಡೆದ ‘ಮನ್ ಕೀ ಬಾತ್’ನ 84ನೇ ಸಂಚಿಕೆಯಲ್ಲಿ ಪ್ರಧಾನಿ ಮಾತನಾಡಿದ್ದಾರೆ. ಅದರಲ್ಲಿ ಅವರು, ಈ ಬಾರಿ ಶಿಕ್ಷಕರು ಮತ್ತು ಪೋಷಕರಿಗೆ ಆನ್‌ಲೈನ್ ಸ್ಪರ್ಧೆ ಕೂಡ ನಡೆಸಲಾಗುತ್ತದೆ ಎನ್ನುವುದನ್ನು ಘೋಷಿಸಿದ್ದಾರೆ. ಮನದ ಮಾತು ಕಾರ್ಯಕ್ರಮದಲ್ಲಿ ಪ್ರಧಾನಿ ಈ ಕುರಿತು ಮಾತನಾಡಿ, ‘‘ನಾನು ವಿದ್ಯಾರ್ಥಿಗಳೊಂದಿಗೆ ಚರ್ಚಿಸಲಿದ್ದೇನೆ. ಈ ವರ್ಷವೂ ಪರೀಕ್ಷೆಗೆ ಮುನ್ನ ವಿದ್ಯಾರ್ಥಿಗಳೊಂದಿಗೆ ಚರ್ಚಿಸಲು ಮುಂದಾಗಿದ್ದು, ಪರೀಕ್ಷಾ ಪೇ ಚರ್ಚಾ ನಡೆಯಲಿದೆ’’ ಎಂದಿದ್ದಾರೆ. ಈ ವರ್ಷದ ಪರೀಕ್ಷಾ ಪೇ ಚರ್ಚಾ ನಡೆಯುವ ದಿನಾಂಕ ಘೋಷಿಸಿಲ್ಲ. ನೋದಣಿ ಪ್ರಾರಂಭವಾಗುವ ದಿನಾಂಕವನ್ನು ಪ್ರಧಾನಿ ತಿಳಿಸಿದ್ದಾರೆ.
‘ಪರೀಕ್ಷಾ ಪೇ ಚರ್ಚಾ’ಗೆ ನೋಂದಣಿ ಎಂದಿನಿಂದ ಪ್ರಾರಂಭಮತ್ತು ನೋಂದಾಯಿಸುವುದು ಹೇಗೆ? ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮಕ್ಕೆ ಎರಡು ದಿನಗಳ ನಂತರ ಅಂದರೆ ಡಿಸೆಂಬರ್ 28 ರಿಂದ mygov.in ನಲ್ಲಿ ಪ್ರಾರಂಭವಾಗುತ್ತದೆ. ಆಸಕ್ತರಿಗೆ ನೋಂದಣಿ ಮಾಡಿಕೊಳ್ಳಲು ಡಿಸೆಂಬರ್ 28 ರಿಂದ ಜನವರಿ 20 ರವರೆಗೆ ಅವಕಾಶವಿರಲಿದೆ. ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಇದಕ್ಕೆ ನೋಂದಣಿ ಮಾಡಿಕೊಳ್ಳಬಹುದು.
ಪರೀಕ್ಷಾ ಪೇ ಚರ್ಚಾಗೆ ಆಯ್ಕೆ ಹೇಗೆ? ‘ಪರೀಕ್ಷಾ ಪೇ ಚರ್ಚಾ’ಗೆ ಪ್ರವೇಶವು ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರಿಗೆ ಕೆಲವು ಆನ್‌ಲೈನ್ ಸ್ಪರ್ಧೆಗಳನ್ನು ಆಧರಿಸಿರುತ್ತದೆ. ವಿಜೇತರು ನೇರವಾಗಿ ಪ್ರಧಾನ ಮಂತ್ರಿಯೊಂದಿಗೆ ಸಂವಾದ ನಡೆಸುವ ಅವಕಾಶವನ್ನು ಪಡೆಯುತ್ತಾರೆ. ಈ ವಿಶೇಷ ವಿಜೇತರು ತಮ್ಮ ಹಸ್ತಾಕ್ಷರದ ಛಾಯಾಚಿತ್ರದ ಡಿಜಿಟಲ್ ಸ್ಮರಣಿಕೆಯನ್ನು ಪಡೆಯುತ್ತಾರೆ. ಅವರಿಗೆ ಭಾಗವಹಿಸುವಿಕೆ ಪ್ರಮಾಣ ಪತ್ರವನ್ನೂ ನೀಡಲಾಗುವುದು.
ಈ ಕುರಿತು ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಟ್ವೀಟ್:
Like every year, we will have Pariksha Pe Charcha early next year… #MannKiBaat pic.twitter.com/rBKfH3qVd8
— PMO India (@PMOIndia) December 26, 2021
ಕಳೆದ ವರ್ಷ ಕೊರೊನಾ ಸಾಂಕ್ರಾಮಿಕದಿಂದ ಕಾರ್ಯಕ್ರಮವನ್ನು ವರ್ಚುವಲ್ ಮೋಡ್‌ನಲ್ಲಿ ನಡೆಸಲಾಗಿತ್ತು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಧಾನ ಮಂತ್ರಿಯವರ ಈ ಸಂವಾದ 2018 ರಲ್ಲಿ ಆರಂಭವಾಗಿತ್ತು.
ಪುಸ್ತಕ ಓದುವುದನ್ನು ಉತ್ತೇಜಿಸಿದ ಪ್ರಧಾನಿ: ಮನ್ ಕೀ ಬಾತ್ನಲ್ಲಿ ಪ್ರಧಾನಿ ಪುಸ್ತಕ ಓದುವುದನ್ನು ಉತ್ತೇಜಿಸಿದರು. “ನಾವು ಓದುವುದನ್ನು ಹೆಚ್ಚು ಜನಪ್ರಿಯಗೊಳಿಸೋಣ. ಈ ವರ್ಷ ನೀವು ಯಾವ ಪುಸ್ತಕಗಳನ್ನು ಓದಿದ್ದೀರಿ ಎಂಬುದನ್ನು ಹಂಚಿಕೊಳ್ಳಲು ನಾನು ನಿಮ್ಮೆಲ್ಲರನ್ನು ಕೋರುತ್ತೇನೆ. ಈ ರೀತಿಯಾಗಿ ನೀವು ಇತರರಿಗೆ 2022 ರ ಓದುವ ಪಟ್ಟಿಯನ್ನು ಮಾಡಲು ಸಹಾಯ ಮಾಡುತ್ತೀರಿ”ಎಂದು ಮೋದಿ ಹೇಳಿದ್ದಾರೆ.
ಇದನ್ನೂ ಓದಿ:
Mann Ki Baat ಸ್ಕ್ರೀನ್ ಟೈಮ್ ಹೆಚ್ಚಾಗುತ್ತಿರುವ ಕಾಲದಲ್ಲಿ ಪುಸ್ತಕದ ಓದು ಜಾಸ್ತಿಯಾಗಲಿ: ನರೇಂದ್ರ ಮೋದಿ
Published On - 2:48 pm, Sun, 26 December 21