Khammam ತೆಲಂಗಾಣ: ಖಮ್ಮಂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 248.9 ಕೋಟಿ ರೂ ಅನುದಾನ ಘೋಷಿಸಿದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್

| Updated By: ಸಾಧು ಶ್ರೀನಾಥ್​

Updated on: Jan 19, 2023 | 4:40 PM

BRS chief K Chandrashekhar Rao: ಮುಖ್ಯಮಂತ್ರಿ ಕೆಸಿ ರಾವ್ ಅವರು ಇದೇ ಸಂದರ್ಭದಲ್ಲಿ ಪತ್ರಕರ್ತರಿಗೆ ಖಮ್ಮಂನಲ್ಲಿ ಮನೆ ನಿವೇಶನ ನೀಡುವ ಜವಾಬ್ದಾರಿಯನ್ನು ಸಚಿವರಾದ ಟಿ.ಹರೀಶ್ ರಾವ್ ಮತ್ತು ಪುವ್ವಾಡ ಅಜಯ್ ಕುಮಾರ್ ಅವರುಗಳಿಗೆ ವಹಿಸಿದರು.

Khammam ತೆಲಂಗಾಣ: ಖಮ್ಮಂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 248.9 ಕೋಟಿ ರೂ ಅನುದಾನ ಘೋಷಿಸಿದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್
ಖಮ್ಮಂ ಜಿಲ್ಲೆಯ ಸಮಗ್ರ ಅಭಿವೃದ್ಧಿಗಾಗಿ 248.9 ಕೋಟಿ ರೂ ಅನುದಾನ ಘೋಷಿಸಿದ ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್
Follow us on

ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (Telangana chief minister K Chandrashekhar Rao) ಅವರು ಖಮ್ಮಂ (Khammam) ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ವಿಶೇಷ ನಿಧಿಯಿಂದ ಅಭಿವೃದ್ಧಿ ಯೋಜನೆಗಳಿಗೆ (development projects) 248.9 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಘೋಷಿಸಿದ್ದಾರೆ. ಮುನೇರು ನದಿಯ (Muneru River) ಹಳೆಯ ಸೇತುವೆಯ ಬದಲಿಗೆ ಹೊಸ ಸೇತುವೆ ಮತ್ತು ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದ ಅಡಿಯಲ್ಲಿ ಹೊಸ ಕೋರ್ಸ್‌ಗಳೊಂದಿಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿಗೆ ಹಣದ ಭರವಸೆಯನ್ನೂ ಸಹ ನೀಡಿದರು.

ಖಮ್ಮಂ ಹೊರವಲಯದ ವಿ ವೆಂಕಟಾಯಪಾಲೆಂನಲ್ಲಿ ನಡೆದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್ -BRS) ಪಕ್ಷ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯಲ್ಲಿ ಮುಖ್ಯಮಂತ್ರಿ ಕೆಸಿಆರ್​ ಅವರು 589 ಗ್ರಾಮ ಪಂಚಾಯತಿಗಳಿಗೆ ತಲಾ 10 ಲಕ್ಷ ರೂ ಘೋಷಿಸಿದರು. ಮತ್ತು 10,000 ಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ ಪೆದ್ದ ತಾಂಡಾ, ಕಲ್ಲೂರು, ಎದುಲಾಪುರ, ತಲ್ಲಾಡ ಮತ್ತು ನೆಲಕೊಂಡಪಲ್ಲಿಗೆ ತಲಾ 10 ಕೋಟಿ ರೂ. ಘೋಷಿಸಿದರು.

ಮತ್ತು ಸತ್ತುಪಲ್ಲಿ, ಮದಿರಾ ಮತ್ತು ವೈರಾ ಜಿಲ್ಲೆಯ ಪುರಸಭೆಗಳಿಗೆ ತಲಾ 30 ಕೋಟಿ ಘೋಷಿಸಿದ್ದಲ್ಲದೆ, ಖಮ್ಮಂ ಪುರಸಭೆಯ ಅಭಿವೃದ್ಧಿಗೆ 50 ಕೋಟಿ ರೂ. ಪ್ರಕಟಿಸಿದರು. ಇದೇ ವೇಳೆ ರಾವ್ ಅವರು ಖಮ್ಮಂನಲ್ಲಿ ಪತ್ರಕರ್ತರಿಗೆ ಮನೆ ನಿವೇಶನ ನೀಡುವ ಜವಾಬ್ದಾರಿಯನ್ನು ಸಚಿವರಾದ ಟಿ ಹರೀಶ್ ರಾವ್ ಮತ್ತು ಪುವ್ವಾಡ ಅಜಯ್ ಕುಮಾರ್ ಅವರಿಗೆ ವಹಿಸಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:15 pm, Thu, 19 January 23