Election Results 2023: ನಾಗಾಲ್ಯಾಂಡ್, ತ್ರಿಪುರಾದಲ್ಲಿ ಬಿಜೆಪಿ ಮೇಲುಗೈ; ಮೇಘಾಲಯದಲ್ಲಿ ಸಿ ಸಾಂಗ್ಮಾ ಮುನ್ನಡೆ

ಮೂರು ರಾಜ್ಯಗಳ ಪೈಕಿ, ರಾಜ್ಯದ 60 ಸದಸ್ಯ ಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೆಸೆಯಲು ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮೊದಲ ಬಾರಿಗೆ ಕೈಜೋಡಿಸಿರುವುದರಿಂದ ಉಳಿದೆರಡು ರಾಜ್ಯಗಳಿಗಿಂತ ತ್ರಿಪುರಾ ಹೆಚ್ಚಿನ ಕುತೂಹಲ ಹುಟ್ಟಿಸಿದೆ.

Election Results 2023: ನಾಗಾಲ್ಯಾಂಡ್, ತ್ರಿಪುರಾದಲ್ಲಿ ಬಿಜೆಪಿ ಮೇಲುಗೈ; ಮೇಘಾಲಯದಲ್ಲಿ ಸಿ ಸಾಂಗ್ಮಾ ಮುನ್ನಡೆ
ಬಿಜೆಪಿ
Follow us
ರಶ್ಮಿ ಕಲ್ಲಕಟ್ಟ
|

Updated on:Mar 02, 2023 | 1:55 PM

ತ್ರಿಪುರಾ (Tripura) ,ಮೇಘಾಲಯ(Meghalaya) ಮತ್ತು ನಾಗಾಲ್ಯಾಂಡ್ (Nagaland) ವಿಧಾನಸಭಾ ಚುನಾವಣೆಗಳ ಮತ ಎಣಿಕೆ ಗುರುವಾರ ಪ್ರಾರಂಭವಾಗಿದ್ದು. ಬಿಜೆಪಿ ಮುನ್ನಡೆ ಸಾಧಿಸಿದೆ. ಆರಂಭಿಕ ಟ್ರೆಂಡ್‌ ಪ್ರಕಾರ, ತ್ರಿಪುರಾದಲ್ಲಿ ಎಡ ಮತ್ತು ಅದರ ಮಿತ್ರ ಪಕ್ಷ ಕಾಂಗ್ರೆಸ್ ಗಿಂತ ಬಿಜೆಪಿ(BJP) ಮುನ್ನಡೆ ಸಾಧಿಸಿದೆ. ಎಣಿಕೆಯ 1 ನೇ ಸುತ್ತಿನ ನಂತರ ಟೌನ್ ಬೋರ್ಡೋವಾಲಿ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಮಾಣಿಕ್ ಸಹಾ ಮುಂದಿದ್ದಾರೆ.ಈ ಮೂರು ರಾಜ್ಯಗಳ ಪೈಕಿ, ರಾಜ್ಯದ 60 ಸದಸ್ಯ ಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ಸವಾಲೆಸೆಯಲು ಸಾಂಪ್ರದಾಯಿಕ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಎಡಪಕ್ಷಗಳು ಮೊದಲ ಬಾರಿಗೆ ಕೈಜೋಡಿಸಿರುವುದರಿಂದ ಉಳಿದೆರಡು ರಾಜ್ಯಗಳಿಗಿಂತ ತ್ರಿಪುರಾ ಹೆಚ್ಚಿನ ಕುತೂಹಲ ಹುಟ್ಟಿಸಿದೆ.

ತ್ರಿಪುರಾ, ಮೇಘಾಲಯ, ನಾಗಾಲ್ಯಾಂಡ್ ಚುನಾವಣಾ ಫಲಿತಾಂಶ 2023: ಪ್ರಮುಖ ಅಂಶಗಳು

  1. ಪೋಸ್ಟಲ್ ಬ್ಯಾಲೆಟ್‌ನ ಆರಂಭಿಕ ಟ್ರೆಂಡ್‌ಗಳು ಆಡಳಿತಾರೂಢ ಬಿಜೆಪಿ 39 ಸ್ಥಾನಗಳಲ್ಲಿ ಮುನ್ನಡೆ ಸಾಧಿಸುತ್ತಿದೆ ಎಂದು ತೋರಿಸಿದ್ದು ಎಡಪಕ್ಷಗಳು ಮತ್ತು ಅದರ ಮಿತ್ರ ಪಕ್ಷವಾದ ಕಾಂಗ್ರೆಸ್ ತ್ರಿಪುರಾದಲ್ಲಿ 15 ಸ್ಥಾನಗಳಲ್ಲಿ ಮುಂದಿದೆ. ಹಿಂದಿನ ರಾಜಮನೆತನದ ವಂಶಸ್ಥರಾದ ಪ್ರದ್ಯೋತ್ ದೆಬ್ಬರ್ಮಾ ಅವರ ತಿಪ್ರ ಮೋಥಾ 5 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಗರ್ತಲಾ ಕ್ಷೇತ್ರದಲ್ಲಿ ಹಾಲಿ ಶಾಸಕ ಮತ್ತು ಕಾಂಗ್ರೆಸ್ ನಾಯಕ ಸುದೀಪ್ ರಾಯ್ ಬರ್ಮನ್ ಅವರು ಬಿಜೆಪಿಯ ಪಾಪಿಯಾ ದತ್ತಾರಿಂದ ಮುನ್ನಡೆ ಸಾಧಿಸಿದ್ದಾರೆ. ಅಂಚೆ ಮತ ಎಣಿಕೆ ಇನ್ನೂ ನಡೆಯುತ್ತಿದೆ. ಎಲ್ಲಾ 60 ಸ್ಥಾನಗಳಲ್ಲಿ ಸುಮಾರು 1,200 ಅಂಚೆ ಮತಗಳಿವೆ. ಬೆಳಿಗ್ಗೆ 10 ಗಂಟೆಯ ಹೊತ್ತಿಗೆ ಅಂಚೆ ಮತಗಳ ಎಣಿಕೆ ಮುಗಿಯುವ ನಿರೀಕ್ಷೆಯಿದೆ. ಅದೇ ಸಮಯದಲ್ಲಿ, ನಾವು ಬೆಳಿಗ್ಗೆ 8:30 ಕ್ಕೆ ಎಲ್ಲಾ ಸೀಟುಗಳಲ್ಲಿ ಇವಿಎಂಗಳ ಎಣಿಕೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಮೊದಲ ಸುತ್ತಿನ ಮತ ಎಣಿಕೆಯ ನಂತರದ ಟ್ರೆಂಡ್‌ಗಳ ವಿವರಗಳು ಶೀಘ್ರದಲ್ಲೇ ಲಭ್ಯವಿರುತ್ತವೆ ಎಂದು ತ್ರಿಪುರಾದ ಸಿಇಒ ಕಿರಣ್ ಗಿಟ್ಟೆ ಹೇಳಿದ್ದಾರೆ.
  2. ಮೇಘಾಲಯದಲ್ಲಿ, ಆರಂಭಿಕ ಟ್ರೆಂಡ್ ಪ್ರಕಾರ, NPP 18 ಸೀಟು ಮತ್ತು ತೃಣಮೂಲ ಕಾಂಗ್ರೆಸ್ 12 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ 9 ಸ್ಥಾನಗಳಲ್ಲಿ ಮುಂದಿದೆ.
  3. ನಾಗಾಲ್ಯಾಂಡ್‌ನಲ್ಲಿ ಎನ್‌ಡಿಪಿಪಿ ಮತ್ತು ಅದರ ಮಿತ್ರಪಕ್ಷಗಳು 50 ಸ್ಥಾನಗಳಲ್ಲಿ ಮುನ್ನಡೆಯಲ್ಲಿದ್ದರೆ, ಎನ್‌ಪಿಎಫ್ 3 ಸ್ಥಾನಗಳಲ್ಲಿ ಮುಂದಿದೆ.
  4. ತ್ರಿಪುರಾದ ರಾಮನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಸೂರಜಿತ್ ದತ್ತಾ ಮುನ್ನಡೆ ಸಾಧಿಸಿದ್ದಾರೆ.
  5. ಮೇಘಾಲಯದ ಗಾರೊ ನ್ಯಾಷನಲ್ ಕೌನ್ಸಿಲ್ ಅಭ್ಯರ್ಥಿ ನಿಕ್ಮನ್ ಮರಕ್ ಚೋಕ್‌ಪಾಟ್ ಕ್ಷೇತ್ರದಲ್ಲಿ ಎನ್‌ಪಿಪಿಯ ಸೆಂಗ್‌ಚಿಮ್ ಸಂಗ್ಮಾ ಮುನ್ನಡೆ ಸಾಧಿಸಿದ್ದಾರೆ. ಖಾರ್ಕುಟ್ಟಾದಲ್ಲಿ ಟಿಎಂಸಿಯ ಚೆರಾಕ್ ಮೊಮಿನ್ ಎನ್‌ಪಿಪಿಯ ರೂಪರ್ಟ್ ಮೊಮಿನ್,. ರೆಸುಬೆಲ್‌ಪಾರಾದಲ್ಲಿ ಎನ್‌ಪಿಪಿಯ ತಿಮೋತಿ ಶಿರಾ ಮುನ್ನಡೆ ಸಾಧಿಸಿದ್ದಾರೆ. ರೊಂಗರ ಸಿಜುನಲ್ಲಿ ಟಿಎಂಸಿಯ ರಾಜೇಶ್ ಮರಕ್ ಮುನ್ನಡೆ ಸಾಧಿಸಿದ್ದಾರೆ. ಪಬಿಯಾಚೆರಾ ಕ್ಷೇತ್ರದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಸಾಂಗ್ಸಾಕ್ ನಲ್ಲಿ ಮಾಜಿ ಸಿಎಂ ಹಾಗೂ ಟಿಎಂಸಿ ನಾಯಕ ಮುಕುಲ್ ಸಂಗ್ಮಾ ಮುನ್ನಡೆ ಸಾಧಿಸಿದ್ದಾರೆ. ಮುಕುಲ್ ಸಂಗ್ಮಾ ಅವರ ಸಹೋದರ ಟಿಎಂಸಿಯ ಜೆನಿತ್ ಸಂಗ್ಮಾ ರಂಗಸಕೋನಾದಲ್ಲಿ ಹಿಂದುಳಿದಿದ್ದಾರೆ. ಮುಕುಲ್ ಸಂಗ್ಮಾ ಅವರ ಪುತ್ರಿ ಟಿಎಂಸಿಯ ಮಿಯಾನಿ ಶಿರಾ, ಅಂಪಟ್ಟಿಯಲ್ಲಿ ಮುನ್ನಡೆ ಸಾಧಿಸಿದ್ದಾರೆ.
  6.  ನಾಗಾಲ್ಯಾಂಡ್: NDPP ಯ ಕೆ ಯೋಮ್ ಉತ್ತರ ಅಂಗಮಿ-I ನಲ್ಲಿ NPF ನ ಕೆ ಲೀಜಿಟ್ಸು ಅವರನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ್ದಾರೆ. ಪ್ಫುಟ್ಸೆರೊದಲ್ಲಿ ಎನ್‌ಪಿಎಫ್‌ನ ವಿ ಕೆಜೊ ಮುನ್ನಡೆ ಸಾಧಿಸಿದ್ದಾರೆ. ಪುಂಗ್ರೋ ಕಿಫಿರೆಯಲ್ಲಿ RPI (A) ನ ಟಿವೈ ಸಾಂಗ್ತಮ್ ಮುನ್ನಡೆ ಸಾಧಿಸಿದ್ದಾರೆ. ಸೆಯೋಚುಂಗ್ ಸಿಟಿಮಿಯಲ್ಲಿ ಬಿಜೆಪಿಯ ವಿಕೆ ಸಾಂಗ್ತಮ್ ಮುನ್ನಡೆ ಸಾಧಿಸಿದ್ದಾರೆ. ತುಯೆನ್ಸಾಂಗ್ ಸದರ್-1ರಲ್ಲಿ ಬಿಜೆಪಿಯ ಪಿಬಿ ಚಾಂಗ್ ಮುನ್ನಡೆ ಸಾಧಿಸಿದ್ದಾರೆ.
  7. ಫೆಬ್ರವರಿ 16 ರಂದು ತ್ರಿಪುರಾದಲ್ಲಿ ಮತದಾನ ಮಾಡಿತ್ತು. ರಾಷ್ಟ್ರೀಯ ಪಕ್ಷಗಳ ನಡುವಿನ ಈ ಕದನದಲ್ಲಿ, ಪ್ರದ್ಯೋತ್ ದೆಬ್ಬರ್ಮಾ ನೇತೃತ್ವದ ಟಿಪ್ರಾ ಮೋಥಾ ಎಂಬುದು ಎಕ್ಸ್-ಫ್ಯಾಕ್ಟರ್ ಆಗಿ ಹೊರಹೊಮ್ಮಿದೆ. ಸಾಂಪ್ರದಾಯಿಕ ಲೆಕ್ಕಾಚಾರಗಳ ಪ್ರಕಾರ, 2018 ರಲ್ಲಿ ಬುಡಕಟ್ಟು ಪ್ರದೇಶದಲ್ಲಿ ಬಿಜೆಪಿ ಮತ್ತು ಅದರ ಮಿತ್ರಪಕ್ಷವಾದ ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (IPFT) ಉತ್ತಮ ಸಾಧನೆ ಮಾಡಿತ್ತು.
  8. 2018 ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 36 ಸ್ಥಾನಗಳನ್ನು ಮತ್ತು ಐಪಿಎಫ್ ಎಂಟು ಸ್ಥಾನಗಳನ್ನು ಗೆದ್ದಿತ್ತು.
  9. ಫೆಬ್ರವರಿ 27 ರಂದು ಮೇಘಾಲಯ ಮತ್ತು ನಾಗಾಲ್ಯಾಂಡ್ ನಲ್ಲಿ ಮತದಾನ ನಡೆದಿತ್ತು, ಮೇಘಾಲಯ ಮತ್ತು ನಾಗಾಲ್ಯಾಂಡ್ ಎರಡರಲ್ಲೂ ಪ್ರಾದೇಶಿಕ ಪಕ್ಷಗಳು ಪ್ರಮುಖ ಸ್ಪರ್ಧಿಗಳಾಗಿರುವಾಗ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ತನ್ನ ದೊಡ್ಡ ನಾಯಕರೊಂದಿಗೆ ಬಿಜೆಪಿ ಇಲ್ಲಿ ಭರ್ಜರಿ ಪ್ರಚಾರ ಮಾಡಿತ್ತು.
  10. ಇದೇ ಮೊದಲ ಬಾರಿ ಬಿಜೆಪಿಯು ಮೇಘಾಲಯದ ಎಲ್ಲಾ 60 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ನ್ಯಾಷನಲ್ ಪೀಪಲ್ಸ್ ಪಾರ್ಟಿ (NPP) ನಾಯಕ ಮತ್ತು ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ ಅವರನ್ನು ನಿರಂತರವಾಗಿ ಗುರಿಯಾಗಿಸಿದೆ. ಒಂದೊಮ್ಮೆ ಬಿಜೆಪಿ ರಾಜ್ಯ ಸರ್ಕಾರದ ಪಾಲುದಾರರಾಗಿದ್ದರು ಆದರೆ ಚುನಾವಣೆಗೆ ಮುಂಚಿತವಾಗಿ ಸಂಬಂಧವನ್ನು ಮುರಿದುಕೊಂಡಿತ್ತು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:52 pm, Thu, 2 March 23

ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಸಿಡ್ನಿ ಟೆಸ್ಟ್ ಆಡುತ್ತಿಲ್ಲ ರೋಹಿತ್ ಶರ್ಮಾ
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ಬೆಳಗಾವಿಯ ಮಹಿಳೆಯೊಬ್ಬರಿಗೆ ಬೇಡವಂತೆ ಉಚಿತ ಬಸ್ ಪ್ರಯಾಣ!
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಬಿಗ್​ಬಾಸ್ ಮನೆಗೆ ಬಂದ ಹನುಮಂತನ ಪೋಷಕರು
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ