Karnataka Assembly Election: ಜೆಡಿಎಸ್​ನಿಂದ ಕಣಕ್ಕಿಳಿದ ಬಿಜೆಪಿ ನಾಯಕ, ಕೊಪ್ಪಳ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ

|

Updated on: Apr 21, 2023 | 7:20 AM

ತ್ರೀವ ಕೂತುಹಲ‌ ಕೆರಳಿಸಿದ್ದ ಕೊಪ್ಪಳ ಬಿಜೆಪಿ ಟಿಕೆಟ್ ಸಂಸದರ ಕುಟುಂಬಕ್ಕೆ ಸಿಗುತ್ತಿದ್ದಂತೆ, ಕ್ಷೇತ್ರದಲ್ಲಿ ಬಿಜೆಪಿಗೆ ಬಂಡಾಯ ಭೀತಿ ಎದುರಾಗಿದೆ. ಬಿಜೆಪಿ ಆಕಾಂಕ್ಷಿಯಾಗಿದ್ದ ಸಿ‌.ವಿ.ಚಂದ್ರಶೇಖರ್ ಜೆಡಿಎಸ್​ನಿಂದ ಕಣಕ್ಕಿಳಿದಿದ್ದು, ಕೊಪ್ಪಳದಲ್ಲಿ ತ್ರಿಕೋನ ಸ್ಪರ್ಧೆ ಎರ್ಪಟ್ಟಿದ್ದು ಹೈವೊಲ್ಟೇಜ್ ರಣಕಣವಾಗಿ ಮಾರ್ಪಟ್ಟಿದೆ.

Karnataka Assembly Election: ಜೆಡಿಎಸ್​ನಿಂದ ಕಣಕ್ಕಿಳಿದ ಬಿಜೆಪಿ ನಾಯಕ, ಕೊಪ್ಪಳ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ
ಕರಡಿ ಸಂಗಣ್ಣ, ಸಿ.ವಿ ಚಂದ್ರಶೇಖರ್​
Follow us on

ಕೊಪ್ಪಳ: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election)ಗೆ ಇನ್ನು ಕೆಲವೇ ದಿನಗಳು ಇದ್ದು ನಿನ್ನೆ(ಏ.20) ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿತ್ತು. ಅದರಂತೆ ಕೊಪ್ಪಳದಿಂದ ಬಿಜೆಪಿ, ತನ್ನ ಅಭ್ಯರ್ಥಿಯನ್ನ ಘೋಷಣೆ ಮಾಡದೇ ಬಾರಿ ಕೂತುಹಲ ಮೂಡಿಸಿತ್ತು. ಬಳಿಕ ಕೊನೆಳಿಗೆಯಲ್ಲಿ ಸಂಸದ ಸಂಗಣ್ಣ ಕರಡಿ(Karadi Sanganna) ರಾಜೀನಾಮೆ ಬೆದರಿಕೆಗೆ ಬಗ್ಗಿದ ಬಿಜೆಪಿ ವರಿಷ್ಠರು, ಅವರ ಕುಟುಂಬಕ್ಕೆ ಟಿಕೆಟ್ ಘೋಷಣೆ ಮಾಡಿದ್ದು. ಸಂಗಣ್ಣ ಕರಡಿ ಹಿರಿಯ ಸೊಸೆ ಮಂಜುಳಾ ಅಮರೇಶ್ ಅವರಿಗೆ ಟಿಕೆಟ್ ನೀಡಿತ್ತು. ಯವಾಗ ಕೊನೆಯ ಪಟ್ಟಿಯಲ್ಲಿ ಸಂಸದರ ಕುಟುಂಬಕ್ಕೆ ಟಿಕೆಟ್ ಘೋಷಣೆ ಮಾಡ್ತೋ, ಮತ್ತೊಬ್ಬ ಬಿಜೆಪಿ ಟಿಕೆಟ್ ಆಕಾಂಕ್ಷಿ ಸಿ‌.ವಿ.ಚಂದ್ರಶೇಖರ್ ಪಕ್ಷದ ವಿರುದ್ದ ಬಂಡಾಯದ ಬಾವುಟ ಹಾರಿಸಿದ್ದಾರೆ. ಪಕ್ಷಕ್ಕೆ ರಾಜೀನಾಮೆ ನೀಡಿರುವ ಸಿ.ವಿ.ಚಂದ್ರಶೇಖರ್ ಜೆಡಿಎಸ್​ನಿಂದ ಕಣಕ್ಕಿಳಿದಿದ್ದು, ಬಿಜೆಪಿಗೆ ಆರಂಭದಲ್ಲಿಯೇ ಬಂಡಾಯ ಬಿಸಿ ತಟ್ಟಿದೆ.

ಹೌದು ನಿನ್ನೆ(ಏ.20) ತಮ್ಮ ಉಮೇದುವಾರಿಕೆ ಸಲ್ಲಿಸಿದ ಸಿವಿಸಿ, ಬೃಹತ್ ಶಕ್ತಿ ಪ್ರದರ್ಶನ ಮಾಡಿದರು. ಸಾವಿರಾರು ಬೆಂಬಲಿಗರೊಂದಿಗೆ ರೋಡ್ ಶೋ ನಡೆಸಿದ ಜೆಡಿಎಸ್ ಅಭ್ಯರ್ಥಿ ಬಿಜೆಪಿ ಹಾಗೂ ಕಾಂಗ್ರೆಸ್​ಗೆ ತಲೆನೋವಾಗಿದ್ದಾರೆ.‌ ಯಾಕೆಂದರೆ ಕಳೆದ ಬಾರಿ ಬಿಜೆಪಿ ಟಿಕೆಟ್ ಘೋಷಣೆ ಮಾಡಿತ್ತು. ಅಂತಿಮ ಹಂತದಲ್ಲಿ ಸಂಸದ ಸಂಗಣ್ಣ ತಮ್ಮ ಪುತ್ರನಿಗೆ ಭಿ ಪಾರಂ ಕೊಡಿಸುವಲ್ಲಿ ಯಶಸ್ವಿಯಾಗಿದ್ದರು. ಆವತ್ತು ಕೂಡ ಟಿಕೆಟ್ ಸಿಗದೇ ಇದ್ದರು, ಬಂಡಾಯವೆದ್ದಿರಲಿಲ್ಲ. ಬಳಿಕ ಸಂಸದರ ಪುತ್ರ ಕೈ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ್ ವಿರುದ್ದ ಹಿನಾಯ ಸೋಲು ಕಂಡಿದ್ದರು. ಈ ಬಾರಿ ಟಿಕೆಟ್​ ಸಿಕ್ಕೆ ಸಿಗುತ್ತೆ ಎನ್ನುವ ವಿಶ್ವಾಸದಲ್ಲಿದ್ದ ಸಿವಿಸಿಗೆ ಮತ್ತೊಮ್ಮೆ ನಿರಾಸೆಯಾಗಿದೆ.

ಇದನ್ನೂ ಓದಿ:ರಾಜಕೀಯ ತಿರುವು ಪಡೆದುಕೊಂಡ ಬಿಜೆಪಿ ಯುವ ಮೋರ್ಚಾ ಮುಖಂಡ ಹತ್ಯೆ ಕೇಸ್; ಇದು ರಾಜಕೀಯ ಕೊಲೆ ಎಂದ ಪ್ರಲ್ಹಾದ್ ಜೋಶಿ

ಅತ್ತ ಕರಡಿ ಸಂಗಣ್ಣ ಮತ್ತೆ ತಮ್ಮ ಕುಟುಂಬವನ್ನೆ ಕಣಕ್ಕಿಳಿಸಿದ್ದಾರೆ. ಇದರಿಂದ ಸಿಡಿದೆದ್ದಿರುವ ಸಿವಿಸಿ, ಸಂಗಣ್ಣ ವಿರುದ್ದ ಬ್ಲ್ಯಾಕ್ ಮೇಲ್ ಆರೋಪ ಹೊರೆಸಿದ್ದಾರೆ.‌ ಬಿಜೆಪಿ ವರಿಷ್ಟರಿಗೆ ರಾಜೀನಾಮೆ ಬೆದರಿಕೆಯೊಡ್ಡಿ ಸಂಸದರು ತಮ್ಮ ಸೊಸೆಗೆ ಟಿಕೆಟ್​ ಕೊಡಿಸಿದ್ದಾರೆಂದು ಹರಿಹಾಯ್ದಿದ್ದಾರೆ. ಅಲ್ಲದೆ ಕೊಪ್ಪಳ ಕ್ಷೇತ್ರದಲ್ಲಿ ಹಾಲಿ ಶಾಸಕ ರಾಘವೇಂದ್ರ ಹಿಟ್ನಾಳ್, ಹಾಗೂ ಸಂಸದ ಕರಡಿ ಸಂಗಣ್ಣ ಕುಟುಂಬದ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ ಎನ್ನುವ ಆರೋಪ ಕೂಡ ಮಾಡಿದ್ರು. ಅವರ ಹೊಂದಾಣಿಕೆ ರಾಜಕಾರಣಕ್ಕೆ ನಿಷ್ಠಾವಂತ ಕಾರ್ಯಕರ್ತರು ಬಲಿಯಾಗುತ್ತಿದ್ದಾರೆ. ಅದಕ್ಕಾಗಿಯೇ ಈ ಬಾರಿ ನಾನು ಜೆಡಿಎಸ್​ನಿಂದ ಸ್ಪರ್ಧಿಸುತ್ತಿದ್ದು, ಅವರ ಹೊಂದಾಣಿಕೆ ರಾಜಕೀಯಕ್ಕೆ ಅಂತ್ಯ ಹಾಡುತ್ತೆನೆ ಎನ್ನುತ್ತಿದ್ದಾರೆ.

ಅತ್ತ ನಿರಾಳವಾಗಿದ್ದ ಕೈ ಅಭ್ಯರ್ಥಿಗೂ ಕೂಡ ಹೈ ಟೆನ್ಶನ್ ಶುರುವಾಗಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ನೇರಾ ನೇರ ಟಕ್ಕರ್ ಎದುರಾದ್ರೆ ಗೆದ್ದು ಬಿಡಬಹುದು ಎನ್ನುವ ಲೆಕ್ಕಚಾರಕ್ಕೆ, ಸಧ್ಯ ಜೆಡಿಎಸ್ ಅಡ್ಡಿಯಾಗುವ ಆತಂಕ ಸೃಷ್ಠಿಯಾಗಿದೆ. ಯಾಕೆಂದರೆ ತ್ರಿಕೋನ ಸ್ಪರ್ಧೆಯಿಂದ ಮತ ವಿಭಜನೆಯಾಗುವ ಆತಂಕ ಎದುರುರಾಗಿದೆ. ಲಿಂಗಾಯತ, ರೆಡ್ಡಿ ಸಮುದಾಯಕ್ಕೆ ಸೇರಿರುವ ಜೆಡಿಎಸ್ ಅಭ್ಯರ್ಥಿ ಯಾರ ಮತ ತೆಗೆದುಕೊಳ್ತಾರೆ ಎನ್ನುವ ಪ್ರಶ್ನೆ ಮೂಡಿದೆ. ಹೀಗಾಗೇ ಬಿಜೆಪಿ ಅಭ್ಯರ್ಥಿ ಮಂಜುಳಾಗೂ ಹಾಗೂ ರಾಘವೇಂದ್ರ ಹಿಟ್ನಾಳ್​ಗೂ ಟೆನ್ಶನ್ ಶುರುವಾಗಿದೆ. ತಮ್ಮ ಗೆಲುವಿಗೆ ಜೆಡಿಎಸ್ ಅಭ್ಯರ್ಥಿ ಅಡ್ಡಿಯಾಗ್ತಾರಾ ಎನ್ನೊ ಆತಂಕ ಮೂಡಿದೆ.

ಇದನ್ನೂ ಓದಿ:Karnataka Elections: ಜಾತಿ ಜನಗಣತಿಗೆ ಒತ್ತಾಯಿಸಿದ ರಾಹುಲ್ ಗಾಂಧಿ; ಚುನಾವಣೆಗೆ ಕಾಂಗ್ರೆಸ್ ತಂತ್ರ?

ಇಲ್ಲಿಯವರೆಗೆ ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯದ್ದೆ ನೇರಾ ನೇರ ಹಣಾಹಣಿಯಿತ್ತು. ಆದ್ರೆ, ಜೆಡಿಎಸ್ ಈ ಬಾರಿ ಪ್ರಬಲ ಅಭ್ಯರ್ಥಿ ಹಾಕಿದ್ದರಿಂದ ಕದನ ಕಣ ಮತ್ತಷ್ಟು ರಂಗೇರಲಿದೆ.‌ ಸುಲಭವಾಗಿ ಗೆಲ್ತಿವಿ ಅಂದುಕೊಂಡಿದ್ದ ಅಭ್ಯರ್ಥಿಗಳಿಗೆ ಈ ಬಾರಿ ಗೆಲುವು ಅಷ್ಟು ಸುಲಭವಿಲ್ಲ ಎನ್ನುವುದು ಗೊತ್ತಾಗಿದೆ.

ವರದಿ: ದತ್ತಾತ್ರೇಯ ಪಾಟೀಲ್ ಟಿವಿ9 ಕೊಪ್ಪಳ

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ