Exit Poll: ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವ ಸಾಧ್ಯತೆ, ಬಿಆರ್‌ಎಸ್​​ಗೆ ಹೊಡೆತ

|

Updated on: Nov 30, 2023 | 9:05 PM

Telangana Assembly Election Exit Poll: ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಮತಗಟ್ಟೆ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 58-69 ಸ್ಥಾನ ಮತ್ತು ಬಿಆರ್‌ಎಸ್ 46-56 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ. ಏತನ್ಮಧ್ಯೆ, ಬಿಜೆಪಿ 4-9 ಸ್ಥಾನಗಳನ್ನು ಗೆಲ್ಲಬಹುದು. ಪೋಲ್‌ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ 49-59 ಸ್ಥಾನಗಳು ಮತ್ತು ಬಿಆರ್‌ಎಸ್ 48-58 ಸ್ಥಾನ ಗೆಲ್ಲಲಿದೆ

Exit Poll: ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರುವ ಸಾಧ್ಯತೆ, ಬಿಆರ್‌ಎಸ್​​ಗೆ ಹೊಡೆತ
ಕೆಸಿಆರ್
Follow us on

ದೆಹಲಿ ನವೆಂಬರ್ 30: ವಿವಿಧ ಸಂಸ್ಥೆಗಳ ಮತಗಟ್ಟೆ ಸಮೀಕ್ಷೆ (Exit Poll) ಪ್ರಕಾರ ತೆಲಂಗಾಣದಲ್ಲಿ (Telangana) ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿಗೆ (BRS) ಹೊಡೆತ ಬೀಳಲಿದ್ದು ಕಾಂಗ್ರೆಸ್ ಮೇಲುಗೈ ಸಾಧಿಸುವ ಸಾಧ್ಯತೆಯಿದೆ. 119 ಸದಸ್ಯ ಬಲದ ತೆಲಂಗಾಣ ವಿಧಾನಸಭೆಯಲ್ಲಿ ಕಾಂಗ್ರೆಸ್ 48 ರಿಂದ 64 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ ಎಂದು ಜನ್ ಕಿ ಬಾತ್ ಎಕ್ಸಿಟ್ ಪೋಲ್ ಹೇಳಿದೆ.
ಎಕ್ಸಿಟ್ ಪೋಲ್ ಪ್ರಕಾರ ಬಿಆರ್‌ಎಸ್ 40 ರಿಂದ 55 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಮತ್ತೊಂದೆಡೆ ಬಿಜೆಪಿ 7-13 ಸ್ಥಾನಗಳನ್ನು ಮಾತ್ರ ಗೆಲ್ಲುವ ಸಾಧ್ಯತೆ ಇದೆ.

ಅದೇ ರೀತಿ ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್ ಮತಗಟ್ಟೆ ಸಮೀಕ್ಷೆ ಪ್ರಕಾರ, ಕಾಂಗ್ರೆಸ್ 58-69 ಸ್ಥಾನಗಳನ್ನು ಗೆಲ್ಲುವ ಮತ್ತು ಬಿಆರ್‌ಎಸ್ 46-56 ಸ್ಥಾನಗಳನ್ನು ಗಳಿಸುವ ಸಾಧ್ಯತೆಯಿದೆ. ಏತನ್ಮಧ್ಯೆ, ಬಿಜೆಪಿ 4-9 ಸ್ಥಾನಗಳನ್ನು ಗೆಲ್ಲಬಹುದು. ಪೋಲ್‌ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ಗೆ 49-59 ಸ್ಥಾನಗಳು ಮತ್ತು ಬಿಆರ್‌ಎಸ್ 48-58 ಸ್ಥಾನಗಳನ್ನು ಪಡೆಯಲಿದೆ

ಇಂಡಿಯಾ ಟಿವಿ-ಸಿಎನ್‌ಎಕ್ಸ್ ಕಾಂಗ್ರೆಸ್‌ಗೆ 63-79 ಸೀಟುಗಳು, ಬಿಆರ್‌ಎಸ್‌ಗೆ 31-47, ಬಿಜೆಪಿಗೆ 2-4 ಎಂದು ಭವಿಷ್ಯ ನುಡಿದಿದೆ.
ಬಿಆರ್‌ಎಸ್ ಅಧಿಕಾರದಿಂದ ಕೆಳಗಿಳಿಯಲಿದೆ ಎಂದು ಸೂಚಿಸಿರುವ ಕೆಲವು ಎಕ್ಸಿಟ್ ಪೋಲ್ ಸಮೀಕ್ಷೆಗಳಿಗೆ ಪ್ರತಿಕ್ರಿಯಿಸಿದ ಪಕ್ಷದ ಕಾರ್ಯಾಧ್ಯಕ್ಷ ಕೆ ಟಿ ರಾಮರಾವ್, ಬಿಆರ್‌ಎಸ್ 70 ಸ್ಥಾನಗಳೊಂದಿಗೆ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಂಚರಾಜ್ಯಗಳಲ್ಲಿ ಮತದಾರರು ಮಣೆ ಹಾಕಿದ್ದು ಯಾರಿಗೆ? ಏನು ಹೇಳುತ್ತಿವೆ ಮತಗಟ್ಟೆ ಸಮೀಕ್ಷೆ?

“ನಾನು ನಿಮಗೆ ಭರವಸೆ ನೀಡುತ್ತೇನೆ, ನಿಮ್ಮಲ್ಲಿ ಬಿಆರ್‌ಎಸ್ ಸ್ನೇಹಿತರು ಮತ್ತು ಕೆಸಿಆರ್ ಹಿಂತಿರುಗಬೇಕೆಂದು ಬಯಸುವವರಿಗೆ, ಡಿಸೆಂಬರ್ 3 ರಂದು (ಎಣಿಕೆಯ ದಿನ) ನಾವು ಹಿಂತಿರುಗುತ್ತೇವೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ನಾವು 70 ಕ್ಕಿಂತ ಹೆಚ್ಚು ಸ್ಥಾನಗಳೊಂದಿಗೆ ಹಿಂತಿರುಗುತ್ತೇವೆ” ಎಂದು ಕೆಟಿಆರ್ ಹೇಳಿರುವುದಾಗಿ. ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ

ಗುರುವಾರ ತೆಲಂಗಾಣದ ಎಲ್ಲಾ 119 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ. ರಾಜ್ಯದಲ್ಲಿ 2014 ರಿಂದ ಮುಖ್ಯಮಂತ್ರಿ ಕೆಸಿಆರ್ ಅವರ ಭಾರತ್ ರಾಷ್ಟ್ರ ಸಮಿತಿ ಆಳ್ವಿಕೆ ನಡೆಸುತ್ತಿದೆ.

ಕಳೆದ 10 ವರ್ಷಗಳಲ್ಲಿ ಪಕ್ಷದ ಸಾಧನೆ ಮತ್ತು ಭರವಸೆಗಳ ಆಧಾರದ ಮೇಲೆ ಆಡಳಿತಾರೂಢ ಬಿಆರ್‌ಎಸ್ ಮೂರನೇ ಅವಧಿಯ ಆಡಳಿತವನ್ನು ಬಯಸುತ್ತಿದೆ. ಆದರೆ, ಬಿಆರ್‌ಎಸ್ ನೇತೃತ್ವದ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಮುಂದಾಗಿವೆ.

ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ