ರಾಹುಲ್ ಗಾಂಧಿ ಸದ್ದಾಂ ಹುಸೇನ್​​ನಂತೆ ಕಾಣುತ್ತಿದ್ದಾರೆ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ನರ್ಮದಾ ಬಚಾವೋ ಆಂದೋಲನದ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ನೋಡಿದ್ದೇನೆ ಎಂದು ಶರ್ಮಾ ಹೇಳಿದ್ದಾರೆ.

ರಾಹುಲ್ ಗಾಂಧಿ ಸದ್ದಾಂ ಹುಸೇನ್​​ನಂತೆ ಕಾಣುತ್ತಿದ್ದಾರೆ: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ
TV9kannada Web Team

| Edited By: Rashmi Kallakatta

Nov 23, 2022 | 6:04 PM

ಅಹಮದಾಬಾದ್‌: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇರಾಕಿನ ಮಾಜಿ ಸರ್ವಾಧಿಕಾರಿ “ಸದ್ದಾಂ ಹುಸೇನ್”(Saddam Hussein) ನಂತೆ ಕಾಣುತ್ತಿದ್ದಾರೆ. ಅವರು ಸರ್ದಾರ್ ಪಟೇಲ್, ಜವಾಹರಲಾಲ್ ನೆಹರು ಅಥವಾ ಮಹಾತ್ಮ ಗಾಂಧಿಯವರಂತೆ ಕಾಣಿಸಿಕೊಂಡಿದ್ದರೆ ಒಳ್ಳೆಯದಿರುತ್ತಿತ್ತು ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ(Himanta Biswa Sarma) ಹೇಳಿದ್ದಾರೆ. ಶರ್ಮಾ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್​​ನ ಹಿರಿಯ ನಾಯಕ ಮನೀಶ್ ತಿವಾರಿ, ಅಸ್ಸಾಂ ಮುಖ್ಯಮಂತ್ರಿಯವರ ಮಾತು ಟ್ರೋಲ್ ನಂತೆ ಧ್ವನಿಸುತ್ತಿದೆ ಎಂದಿದ್ದಾರೆ. ಕಾಂಗ್ರೆಸ್‌ನ ಸಾಮೂಹಿಕ ಸಂಪರ್ಕ ಉಪಕ್ರಮವಾದ ಭಾರತ್ ಜೋಡೋ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ಈಗ ಕ್ಲೀನ್ ಶೇವ್ ಬದಲು ಗಡ್ಡಧಾರಿಯಾಗಿದ್ದಾರೆ. ಮಂಗಳವಾರ ಅಹಮದಾಬಾದ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಶರ್ಮಾ, ಅವರ ಮುಖಚರ್ಯೆ ಬದಲಾಗಿದೆ ಎಂದು ನಾನು ನೋಡಿದೆ. ಕೆಲವು ದಿನಗಳ ಹಿಂದೆ ನಾನು ಟಿವಿ ಸಂದರ್ಶನವೊಂದರಲ್ಲಿ ಅವರ ಹೊಸ ಲುಕ್​ನಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿದ್ದೆ. . ಆದರೆ ನೀವು ಲುಕ್ ಬದಲಾಯಿಸಬೇಕಾದರೆ, ಕನಿಷ್ಠ ಅದನ್ನು ಸರ್ದಾರ್ ವಲ್ಲಭಭಾಯಿ ಪಟೇಲ್ ಅಥವಾ ಜವಾಹರಲಾಲ್ ನೆಹರೂನಂತೆ ಮಾಡಿ. ಗಾಂಧೀಜಿಯಂತೆ ಕಂಡರೆ ಉತ್ತಮ. ಆದರೆ ನಿಮ್ಮ ಮುಖ ಏಕೆ ಸದ್ದಾಂ ಹುಸೇನ್ ಆಗಿ ಬದಲಾಗುತ್ತಿದೆ? ಇದಕ್ಕೆ ಕಾರಣ ಕಾಂಗ್ರೆಸ್ ಸಂಸ್ಕೃತಿ ಭಾರತೀಯ ಜನರಿಗೆ ಹತ್ತಿರವಾಗಿಲ್ಲ. ಅವರ ಸಂಸ್ಕೃತಿ ಭಾರತವನ್ನು ಎಂದಿಗೂ ಅರ್ಥಮಾಡಿಕೊಳ್ಳದ ಜನರಿಗೆ ಹತ್ತಿರವಾಗಿದೆ ಎಂದು ಶರ್ಮಾ ಹೇಳಿದ್ದಾರೆ.

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಚುನಾವಣೆಗೆ ಸಿದ್ಧವಾಗಿರುವ ಹಿಮಾಚಲ ಪ್ರದೇಶ ಮತ್ತು  ಗುಜರಾತ್‌ನಂತಹ ರಾಜ್ಯಗಳಿಗೆ ಭೇಟಿ ನೀಡದಿರಲು ಆದ್ಯತೆ ನೀಡಿದ್ದಾರೆ.ಯಾವುದೇ ಚುನಾವಣೆಗಳಿಲ್ಲದ ರಾಜ್ಯಗಳ ಮೇಲೆ ಅವರು ಗಮನ ಕೇಂದ್ರೀಕರಿಸಿದ್ದಾರೆ. ಯಾಕೆಂದರೆ ಅವರು ಎಲ್ಲಿ ಭೇಟಿ ನೀಡುತ್ತಾರೆಯೋ ಅಲ್ಲಿ ಸೋಲುತ್ತಾರೆ ಎಂಬುದು ಅವರಿಗೆ ಗೊತ್ತಿದೆ ಎಂದು ಶರ್ಮಾ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರೊಂದಿಗೆ ನರ್ಮದಾ ಬಚಾವೋ ಆಂದೋಲನದ ಕಾರ್ಯಕರ್ತೆ ಮೇಧಾ ಪಾಟ್ಕರ್ ಅವರನ್ನು ನೋಡಿದ್ದೇನೆ ಎಂದು ಶರ್ಮಾ ಹೇಳಿದ್ದಾರೆ.

“ಗುಜರಾತ್‌ನ ನೀರನ್ನು ಕಸಿದುಕೊಳ್ಳಲು ಸಂಚು ರೂಪಿಸಿದವಳು ಅವಳು. ಅವಳು ಯಶಸ್ವಿಯಾದರೆ, ನರ್ಮದಾ ನೀರು ಕಚ್‌ಗೆ ಎಂದಿಗೂ ತಲುಪುತ್ತಿರಲಿಲ್ಲ. ಗುಜರಾತ್‌ನ ಅಭಿವೃದ್ಧಿಯನ್ನು ಎಂದಿಗೂ ಬಯಸದ ಜನರೊಂದಿಗೆ ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯನ್ನು ಮಾಡುತ್ತಿದ್ದಾರೆ” ಎಂದು ಅಸ್ಸಾಂ ಮುಖ್ಯಮಂತ್ರಿ ಹೇಳಿದ್ದಾರೆ.

ಅಹಮದಾಬಾದ್‌ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, “ನನ್ನ ಪ್ರತಿಕ್ರಿಯೆಯೊಂದಿಗೆ ನಾನು ಈ ದ್ವಂದ್ವಾರ್ಥವನ್ನು ಗೌರವಿಸಲು ಇಷ್ಟಪಡುವುದಿಲ್ಲ. ನಾವು ಸಾರ್ವಜನಿಕವಾಗಿ ಭಾಷೆಯ ಬಗ್ಗೆ ಸ್ವಲ್ಪ ಔಚಿತ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ದುರದೃಷ್ಟವಶಾತ್ ಅಸ್ಸಾಂನ ಮುಖ್ಯಮಂತ್ರಿ ಅವರು ಈ ರೀತಿಯ ಮಾತುಗಳನ್ನಾಡುವಾಗ ಸಣ್ಣ ಟ್ರೋಲ್‌ನಂತೆ ಧ್ವನಿಸುತ್ತಾರೆ. 182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada