ಉಗ್ರರನ್ನು ಟಾರ್ಗೆಟ್ ಮಾಡುವಂತೆ ನಾವು ಹೇಳಿದೆವು, ಅವರು ಮೋದಿಯನ್ನು ಟಾರ್ಗೆಟ್ ಮಾಡಿದರು: ಪ್ರಧಾನಿ ಮೋದಿ

| Updated By: ರಶ್ಮಿ ಕಲ್ಲಕಟ್ಟ

Updated on: Nov 27, 2022 | 9:27 PM

ಗುಜರಾತ್‌ನ ಬಿಜೆಪಿ ಸರ್ಕಾರವು ಭಯೋತ್ಪಾದಕರ ಸ್ಲೀಪರ್ ಸೆಲ್‌ಗಳನ್ನು ದಮನ ಮಾಡಿತು.ನಾವು ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೆವು. ಆದರೆ ಕೇಂದ್ರದ ಕಾಂಗ್ರೆಸ್ ಸರ್ಕಾರವು ಆ ಭಯೋತ್ಪಾದಕರನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದುದನ್ನು ಯಾರೂ ಮರೆಯಲು ಸಾಧ್ಯವಿಲ್ಲ

ಉಗ್ರರನ್ನು ಟಾರ್ಗೆಟ್ ಮಾಡುವಂತೆ ನಾವು ಹೇಳಿದೆವು, ಅವರು ಮೋದಿಯನ್ನು ಟಾರ್ಗೆಟ್ ಮಾಡಿದರು: ಪ್ರಧಾನಿ ಮೋದಿ
ಗುಜರಾತಿನಲ್ಲಿ ಮೋದಿ
Follow us on

ಭಾನುವಾರ ಗುಜರಾತ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಭಯೋತ್ಪಾದಕರನ್ನು ರಕ್ಷಿಸುತ್ತಿತ್ತು ಎಂದು ಆರೋಪಿಸಿದರು. ಖೇಡಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, ಗುಜರಾತ್ (Gujarat) ಯುಗಯುಗಾಂತರಗಳಿಂದ ಭಯೋತ್ಪಾದನೆಯ ಭಾರವನ್ನು ಹೊತ್ತುಕೊಂಡಿದೆ. ಗುಜರಾತ್ ಯಾವಾಗಲೂ ಭಯೋತ್ಪಾದನೆಯನ್ನು ಕೊನೆಗೊಳಿಸಲು ಬಯಸುತ್ತದೆ. ಗುಜರಾತ್‌ನ ಬಿಜೆಪಿ ಸರ್ಕಾರವು ಭಯೋತ್ಪಾದಕರ ಸ್ಲೀಪರ್ ಸೆಲ್‌ಗಳನ್ನು ದಮನ ಮಾಡಿತು.ನಾವು ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದೆವು. ಆದರೆ ಕೇಂದ್ರದ ಕಾಂಗ್ರೆಸ್ ಸರ್ಕಾರವು ಆ ಭಯೋತ್ಪಾದಕರನ್ನು ಬಿಡುಗಡೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದುದನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದಿದ್ದಾರೆ. ನಾವು ಭಯೋತ್ಪಾದನೆಯನ್ನು ಗುರಿಯಾಗಿಸಲು ಹೇಳಿದ್ದೆವು, ಆದರೆ ಕಾಂಗ್ರೆಸ್ ಸರ್ಕಾರ ಮೋದಿಯನ್ನು ಗುರಿಯಾಗಿಸಿತು. ಇದರ ಪರಿಣಾಮ ಭಯೋತ್ಪಾದಕರು ನಿರ್ಭೀತರಾದರು ಮತ್ತು ದೊಡ್ಡ ನಗರಗಳಲ್ಲಿ ಭಯೋತ್ಪಾದನೆ ತಲೆ ಎತ್ತಿತು. ದೆಹಲಿಯ ಬಾಟ್ಲಾ ಹೌಸ್ ಎನ್‌ಕೌಂಟರ್ ಅನ್ನು ಉಲ್ಲೇಖಿಸಿದ ಪ್ರಧಾನಿ ಮೋದಿ, “ನೆನಪಿಡಿ, ಕಾಂಗ್ರೆಸ್ ನಾಯಕರೊಬ್ಬರು ಭಯೋತ್ಪಾದಕರಿಗಾಗಿ ಅತ್ತಿದ್ದರು ಎಂದು. ಆದರೆ ಮೋದಿ ಸೋನಿಯಾ ಗಾಂಧಿಯವರ ಹೆಸರನ್ನು ಉಲ್ಲೇಖಿಸಲಿಲ್ಲ.

ಕಾಂಗ್ರೆಸ್ ಭಯೋತ್ಪಾದನೆಯನ್ನು ಮತಬ್ಯಾಂಕ್ ಮತ್ತು ತುಷ್ಟೀಕರಣದ ಮೂಲಕ ನೋಡುತ್ತದೆ. ಕಾಂಗ್ರೆಸ್ ಮಾತ್ರವಲ್ಲ, ಈಗ ಅಧಿಕಾರಕ್ಕೆ ಬರಲು ತುಷ್ಟೀಕರಣದ ಶಾರ್ಟ್‌ಕಟ್‌ಗಳನ್ನು ಅಳವಡಿಸಿಕೊಳ್ಳುವ ಅನೇಕ ಪಕ್ಷಗಳಿವೆ.


“2014 ರಲ್ಲಿ ನಿಮ್ಮ ಮತಗಳು ಸನ್ನಿವೇಶವನ್ನು ಬದಲಾಯಿಸಿವೆ. ಈಗ ಭಯೋತ್ಪಾದಕರು ನಮ್ಮ ಗಡಿಗಳ ಮೇಲೆ ದಾಳಿ ಮಾಡಲು ಹೆದರುತ್ತಿದ್ದಾರೆ. ಭಾರತದ ನಗರಗಳು ಸುರಕ್ಷಿತವಾಗಿವೆ ಏಕೆಂದರೆ ಈಗ ಭಾರತವು ಭಯೋತ್ಪಾದನೆಯ ಕೇಂದ್ರ ಪ್ರವೇಶಿಸಿ ಅದರ ಮೇಲೆ ದಾಳಿ ಮಾಡುತ್ತಿದೆ. ಆದರೆ ಅದು ಕಾಂಗ್ರೆಸ್ ಅಥವಾ ಮತ ಬ್ಯಾಂಕ್ ರಾಜಕೀಯ ಮಾಡುವ ಇತರ ಪಕ್ಷಗಳು ನಮ್ಮ ಸರ್ಜಿಕಲ್ ಸ್ಟ್ರೈಕ್ ಅನ್ನು ಪ್ರಶ್ನಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದರು.

ಭಯೋತ್ಪಾದನೆ ನಿಂತಿಲ್ಲ. ಕಾಂಗ್ರೆಸ್‌ನ ರಾಜಕೀಯವೂ ಬದಲಾಗಿಲ್ಲ, ನಾವು ಗುಜರಾತ್ ಅನ್ನು ಕಾಂಗ್ರೆಸ್ ಮತ್ತು ಇತರ ಪಕ್ಷಗಳಿಂದ ಸುರಕ್ಷಿತವಾಗಿರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.