ಅಧಿಕಾರಕ್ಕೆ ಬಂದರೆ ದೇವಭೂಮಿಯಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವುದು ನಿಶ್ಚಿತ ಎಂದ ಕಾಂಗ್ರೆಸ್, ಏನಿದರ ಹಕೀಕತ್ತು?

Uttarakhand Legislative Assembly Election 2022: ಇದರಿಂದ ಕೆರಳಿಕೆಂಡವಾಗಿರುವ ಬಿಜೆಪಿ ಇದೇನಿದು ದೇವರನಾಡು ಚಾರ್ಧಾಮ್​ನಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆ ವಿಚಾರ. ಇದು ಸರ್ವತಾಸಾಧುವಲ್ಲ. ಕಾಂಗ್ರೆಸ್ ತನ್ನ ಓಲೈಕೆ ಚಾಳಿ ಮುಂದುವರಿಸಿದೆ ಎಂದು ಕಿಡಿಕಾರಿದೆ. ದೇವ ಪ್ರಯಾಗದಲ್ಲಿ ಸಂಸ್ಕೃತ ​ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗದ ಪಕ್ಷ ಇದೀಗ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವ ಮಾತನ್ನಾಡುತ್ತಿದೆ! ಎಂದು ಲೇವಡಿ

ಅಧಿಕಾರಕ್ಕೆ ಬಂದರೆ ದೇವಭೂಮಿಯಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವುದು ನಿಶ್ಚಿತ ಎಂದ ಕಾಂಗ್ರೆಸ್, ಏನಿದರ ಹಕೀಕತ್ತು?
ಅಧಿಕಾರಕ್ಕೆ ಬಂದರೆ ದೇವಭೂಮಿಯಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವುದು ನಿಶ್ಚಿತ ಎಂದ ಕಾಂಗ್ರೆಸ್, ಏನಿದರ ಹಕೀಕತ್ತು?
Follow us
TV9 Web
| Updated By: ಸಾಧು ಶ್ರೀನಾಥ್​

Updated on: Feb 08, 2022 | 7:09 AM

ಹರಿದ್ವಾರ: ಉತ್ತರಾಖಂಡದಲ್ಲಿ ಮುಂದಿನ ವಾರವೇ ವಿಧಾನಸಭಾ ಚುನಾವಣೆ. 70 ಸದಸ್ಯರ ಉತ್ತರಾಖಂಡ ಅಸೆಂಬ್ಲಿಗೆ ಫೆಬ್ರವರಿ 14, 2022 ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ (Uttarakhand Legislative Assembly Election 2022). ಆದರೆ ಮಾರ್ಚ್​ 10 ರವರಗೂ ಅಭ್ಯರ್ಥಿಗಳು ತಮ್ಮ ಹಣೆಬರಹ ಅರಿಯಲು ಕಾದುಕುಳಿತುಕೊಳ್ಳಬೇಕಾಗಿದೆ. ಈ ಮಧ್ಯೆ, ಓಲೈಕೆ ರಾಜಕೀಯ ಮೇಲಾಟ ಜೋರಾಗಿಯೇ ನಡೆದಿದೆ. ಉತ್ತರಾಖಂಡದ ಕಾಂಗ್ರೆಸ್ ನಾಯಕ ಹರೀಶ್ ರಾವತ್ ಅವರು (Harish Rawat) ತಾವೇನಾದರೂ ಮುಖ್ಯಮಂತ್ರಿಯಾಗಿ ಮುಂದಿನ ಚುನಾವಣೆ ವೇಳೆ ಆಯ್ಕೆಯಾಗಿದ್ದೇ ಆದರೆ ರಾಜ್ಯದಲ್ಲಿ ಮುಸ್ಲಿಮರಿಗಾಗಿ ಒಂದು ಪ್ರತ್ಯೇಕ ವಿಶ್ವವಿದ್ಯಾಲಯ ನಿರ್ಮಿಸುವ ಭರವಸೆ ನೀಡಿದ್ದಾರೆ. ಇದನ್ನು ಅಲ್ಲಿನ ಮುಸ್ಲಿಮರೂ ಸಹ ಗಂಭೀರವಾಗಿ ಪರಿಗಣಿಸಿದ್ದು, ಹರೀಶ್ ರಾವತ್ ಹೇಳಿಕೆಯಿಂದ ಆನಂದತುಂದಿಲಿತರಾಗಿದ್ದು, ಕಾಂಗ್ರೆಸ್ ನಾಯಕ ಅಕೀಲ್ ಅಹಮದ್ ಸಾಹಸ್​ಪುರ ವಿಧಾನಸಭಾ ಕ್ಷೇತ್ರದಿಂದ (Sahaspur constituency) ಸಲ್ಲಿಸಿದ್ದ ನಾಮಪತ್ರವನ್ನು ವಾಪಸ್​ ತೆಗೆದುಕೊಂಡಿದ್ದಾರೆ. ​ಹರೀಶ್ ರಾವತ್ ಅವರು ಮುಸ್ಲಿಂ ವಿಶ್ವವಿದ್ಯಾಲಯ ( Muslim University) ಸ್ಥಾಪಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ. ಇದರಿಂದ ತಾವು ಸಂತುಷ್ಟರಾಗಿದ್ದು, ನಾಮಪತ್ರ ವಾಪಸ್ ಪಡೆದಿರುವುದಾಗಿ ಪ್ರಕಟಿಸಿದ್ದಾರೆ.

ಆದರೆ ದೇವಭೂಮಿ ಚಾರ್​ಧಾಮ್​ ಭೂಮಿ ಎಂದೆನಿಸಿರುವ ಉತ್ತರಾಖಂಡದಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ಕಾಂಗ್ರೆಸ್ ಆಶ್ವಾಸನೆ ನೀಡುರುವುದು ಎಷ್ಟರಮಟ್ಟಿಗೆ ಸರಿ? ಕಾಂಗ್ರೆಸ್​​ನಿಂದ ಚುನಾವಣೆ ವೇಳೆ ಮತ್ತದೇ ಓಲೈಕೆ ರಾಜಕೀಯ ಮೇಲಾಟ ನಡೆದಿದೆ ಎಂದು ಉತ್ತರಾಖಂಡದ ಬಿಜೆಪಿ ಕೆಂಡಕಾರಿದೆ. ಅಂದಹಾಗೆ 2011ರ ಜನಗಣತಿ (Census 2011) ಪ್ರಕಾರ ಉತ್ತರಾಖಂಡದಲ್ಲಿ ಮುಸಲ್ಮಾನರು ಶೇಕಡಾ 14ರಷ್ಟು ಮಂದಿ ವಾಸವಿದ್ದಾರೆ. ಹಾಗಾಗಿ ಮುಸ್ಲಿಂ ಮಕ್ಕಳಿಗಾಗಿ ತಾನು ಪ್ರತ್ಯೇಕ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವ ಭರವಸೆ ನೀಡಿರುವುದಾಗಿ ಸಮರ್ಥಿಸಿಕೊಂಡಿದೆ.

ಏನಿದು ಕಾಂಗ್ರೆಸ್​ ಪಕ್ಷದ ಹಕೀಕತ್ತು ಎಂದು ನೋಡುವುದಾದರೆ ಸಾಹಸ್​ಪುರ ವಿಧಾನಸಭಾ ಕ್ಷೇತ್ರ ಈ ಭರವಸೆಯ ಬೆಳಕಾಗಿ ಕಂಡಿದೆ. ಅಲ್ಲಿನ ಕಾಂಗ್ರೆಸ್ ನಾಯಕ ಅಕೀಲ್ ಅಹಮದ್ ತಾನು ಚುನಾವಣೆಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದರು. ಆದರೆ ಕಾಂಗ್ರೆಸ್​ ಟಿಕೆಟ್​ ಕೊಟ್ಟಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಸ್ಥಳೀಯ ಪ್ರಭಾವೀ ನಾಯಕ ಅಕೀಲ್ ಅಹಮದ್ ತಾನು ಸ್ವತಂತ್ರವಾಗಿ ಕಣಕ್ಕೆ ಇಳಿಯುವುದಾಗಿ ಬೆದರಿಕೆಯೊಡ್ಡಿದರು. ಇದರಿಂದ ಕಂಗಾಲಾದ ಕಾಂಗ್ರೆಸ್​ ಬೇಡಾ ಬೇಡಾ, ನಿಮ್ಮ ಬೇಡಿಕೆ ಏನಿದೆ ಹೇಳಿ ಪೂರೈಸಿಕೊಡುವುದಾಗಿ ಹೇಳಿತು. ಅದರಂತೆ ರಾಜ್ಯದಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆ ವಿಚಾರ ಮುಂದಕ್ಕಿಟ್ಟಾಗ, ರಾಜ್ಯ ಕಾಂಗ್ರೆಸ್​ ಅಸ್ತು ಎಂದಿದೆ. ಮುಖ್ಯಮಂತ್ರಿ ಅಭ್ಯರ್ಥಿ ಹರೀಶ್ ರಾವತ್ ಸಹ ತಮ್ಮ ಬೇಡಿಕೆಗೆ ಓಕೆ ಎಂದಿರುವುದಾಗಿ ಅಕೀಲ್ ಅಹಮದ್ ತಮ್ಮ ಮುಸ್ಲಿಂ ಬಾಂಧವರ ಎದುರು ಪ್ರಕಟಿಸಿ, ಹಾಗಾಗಿಯೇ ತಾವು ಕಣದಿಂದ ಹಿಂದೆ ಸರಿಯುತ್ತಿರುವುದಾಗಿ ಸಕಾರಣ ನೀಡಿದ್ದಾರೆ. ಅಲ್ಲಿಗೆ ದೇವಭೂಮಿ ಉತ್ತರಾಖಂಡದಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆ ಬೆಳಕು ಕಾಣುವುದಕ್ಕೆ ಸಮಯ ಒದಗಿಬಂದಿದೆ ಎಂದು ರಾಜ್ಯ ಮುಸ್ಲಿಮ್​ ನಾಯಕರು ಆಶಾಭಾವ ಹೊಂದಿದ್ದಾರೆ.

ಆದರೆ ಇದರಿಂದ ಕೆರಳಿಕೆಂಡವಾಗಿರುವ ಬಿಜೆಪಿ ಇದೇನಿದು ದೇವರನಾಡು ಚಾರ್​ಧಾಮ್​ನಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆ ವಿಚಾರ. ಇದು ಸರ್ವತಾಸಾಧುವಲ್ಲ. ಕಾಂಗ್ರೆಸ್ ತನ್ನ ಓಲೈಕೆ ಚಾಳಿ ಮುಂದುವರಿಸಿದೆ ಎಂದು ಕಿಡಿಕಾರಿದೆ. ದೇವ ಪ್ರಯಾಗದಲ್ಲಿ ಸಂಸ್ಕೃತ ​ವಿಶ್ವವಿದ್ಯಾಲಯ ಸ್ಥಾಪನೆಗೆ ಮುಂದಾಗದ ಪಕ್ಷ ಇದೀಗ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುವ ಮಾತನ್ನಾಡುತ್ತಿದೆ! ಎಂದು ಲೇವಡಿ ಮಾಡಿದೆ.

ಆದರೆ ಚುನಾವಣೆಯಲ್ಲಿ ತನ್ನನ್ನು ಟಾರ್ಗೆಟ್​ ಮಾಡಲು, ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆಗೆ ತಾನು ಸಮ್ಮತಿಸಿರುವುದಾಗಿ ಹೇಳಲಾಗಿದೆ. ಆದರೆ ತಾನು ಅಂತಹ ಯಾವುದೇ ಭರವಸೆ ನೀಡಿಲ್ಲ ಎಂದು ಕಾಂಗ್ರೆಸ್ ನಾಯಕ ಹರೀಶ್ ರಾವತ್ ಆತಂಕದ ದನಿಯಲ್ಲಿ ಹೇಳಿದ್ದಾರೆ. ಹಾಗಾದರೆ ಮಾರ್ಚ್​ 10ರವರೆಗೂ ಕಾದು ನೋಡಬೇಕಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು, ​ಹರೀಶ್ ರಾವತ್ ಮುಖ್ಯಮಂತ್ರಿಯಾಗಿ ದೇವಭೂಮಿ ಉತ್ತರಾಖಂಡದಲ್ಲಿ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪಿಸುತ್ತಾರಾ? ಅಥವಾ ಅದು ಭರವಸೆಯಾಗಿಯೇ ಉಳಿಯುತ್ತದಾ ಎಂಬುದು ಸದ್ಯದ ಕುತೂಹಲವಾಗಿದೆ.

ಇದನ್ನೂ ಓದಿ: WhatsApp: ವಾಟ್ಸ್​ಆ್ಯಪ್​ನಲ್ಲಿ ದೊಡ್ಡ ಗಾತ್ರದ MB, GB ಫೈಲ್​ಗಳನ್ನು ಕ್ಷಣಾರ್ಧದಲ್ಲಿ ಸೆಂಡ್ ಮಾಡುವ ಟ್ರಿಕ್ ಗೊತ್ತಾ?

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್