ನವದೆಹಲಿ: ಹಿಮಾಚಲ ಪ್ರದೇಶದಲ್ಲಿ (Himachal Pradesh Elections 2022) ಇಂದು (ಶನಿವಾರ) ಒಂದೇ ಹಂತದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಈಗಾಗಲೇ ಮತದಾನ ಆರಂಭವಾಗಿದೆ. ಕಣದಲ್ಲಿರುವ 412 ಅಭ್ಯರ್ಥಿಗಳ ಭವಿಷ್ಯವನ್ನು 5.5 ಮಿಲಿಯನ್ ಮತದಾರರು ನಿರ್ಧರಿಸಲಿದ್ದಾರೆ. ಹಿಮಾಚಲ ಪ್ರದೇಶದ ಗ್ರಾಮೀಣ ಪ್ರದೇಶದಲ್ಲಿ 7,235 ಮತ್ತು ನಗರ ಪ್ರದೇಶಗಳಲ್ಲಿ 646 ಸೇರಿದಂತೆ 7,884 ಮತಗಟ್ಟೆಗಳಲ್ಲಿ ಬೆಳಿಗ್ಗೆ 8ರಿಂದ ಸಂಜೆ 5ರವರೆಗೆ ಮತದಾನವನ್ನು ನಿಗದಿಪಡಿಸಲಾಗಿದೆ. ಚುನಾವಣಾ ಆಯೋಗದಿಂದ (Election Commission) ದೂರದ ಪ್ರದೇಶಗಳಲ್ಲಿ 3 ಇತರೆ ಮತಗಟ್ಟೆಗಳನ್ನು ಸಹ ಸ್ಥಾಪಿಸಲಾಗಿದೆ. ಡಿಸೆಂಬರ್ 8ರಂದು ಮತ ಎಣಿಕೆ ನಡೆಯಲಿದೆ.
ಹಿಮಾಚಲ ಪ್ರದೇಶದಲ್ಲಿ ಒಟ್ಟು 5,592,828 ನೋಂದಾಯಿತ ಮತದಾರರಲ್ಲಿ 2017ರ ವಿಧಾನಸಭಾ ಚುನಾವಣೆಯಲ್ಲಿ 75.57% ಮತದಾನವಾಗಿದೆ. ಮತದಾರರ ಪೈಕಿ 2,854,945 ಮತದಾರರು ಪುರುಷ ಮತ್ತು 2,737,845 ಮಹಿಳೆಯರಿದ್ದಾರೆ. ಒಟ್ಟು 121,409 ಮತದಾರರು 80 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದಾರೆ. ಚುನಾವಣೆ ಸುಗಮವಾಗಿ ನಡೆಯಲು ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಪೂರ್ಣಗೊಳಿಸಿದ್ದರೂ ಗುಡ್ಡಗಾಡು ಪ್ರದೇಶದ ಎತ್ತರದ ಪ್ರದೇಶದಲ್ಲಿ ಹಿಮಪಾತವಾಗುತ್ತಿರುವುದರಿಂದ ಮತದಾರರು ಹಾಗೂ ಮತಗಟ್ಟೆಯ ಅಧಿಕಾರಿಗಳ ಸಂಕಷ್ಟವನ್ನು ಹೆಚ್ಚಿಸಿದೆ.
ಇದನ್ನೂ ಓದಿ: PM Narendra Modi Rally: ಹಿಮಾಚಲ ಪ್ರದೇಶದ 2 ಕ್ಷೇತ್ರಗಳಲ್ಲಿ ಇಂದು ಪ್ರಧಾನಿ ಮೋದಿ ಚುನಾವಣಾ ರ್ಯಾಲಿ
ಕಿನ್ನೌರ್ ಮತ್ತು ಚಂಬಾ ಜೊತೆಗೆ ಬುಡಕಟ್ಟು ಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ಒಟ್ಟು 140 ಮತಗಟ್ಟೆಗಳು ಹಿಮದಿಂದ ಆವೃತವಾಗಿವೆ. ಎತ್ತರದ ಪ್ರದೇಶಗಳಲ್ಲಿ ಹಿಮಪಾತದ ಹೊರತಾಗಿಯೂ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಚಂಬಾ ಜಿಲ್ಲಾಧಿಕಾರಿ ರಾಣಾ ಹೇಳಿದ್ದಾರೆ.
Himachal Pradesh | People cast their votes in Nadaun Assembly constituency, Hamirpur; visuals from polling station 4
I am a first-time voter; feel very excited. I have voted for development: Ankita, a voter#AssemblyElections2022 pic.twitter.com/0453ZyRUhR
— ANI (@ANI) November 12, 2022
ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಮತ್ತೆ ಸ್ಪರ್ಧಿಸುತ್ತಿರುವ ಸೆರಾಜ್ ಪ್ರಮುಖ ಕ್ಷೇತ್ರವಾಗಿದೆ. ಕಳೆದ ಬಾರಿಯೂ ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚೇತ್ರಂ ಠಾಕೂರ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ಮಹೀಂದರ್ ರಾಣಾ ಸಿಪಿಐಎಂ ಅಭ್ಯರ್ಥಿಯಾಗಿದ್ದಾರೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮುಖೇಶ್ ಅಗ್ನಿಹೋತ್ರಿ ಅವರು ಉನಾ ಜಿಲ್ಲೆಯ ಹರೋಲಿ ವಿಧಾನಸಭಾ ಕ್ಷೇತ್ರದಿಂದ ಐದನೇ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ರಾಜ್ಯ ವಕ್ತಾರ ರಾಮ್ ಕುಮಾರ್ ಅವರನ್ನು ಕಣಕ್ಕಿಳಿಸಿದೆ. ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯಾಗಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸುಖವಿಂದರ್ ಸಿಂಗ್ ಸುಖು ನಾದೌನ್‌ನಿಂದ ಸ್ಪರ್ಧಿಸಿದ್ದಾರೆ. ಬಿಜೆಪಿ ವಿಜಯ್ ಅಗ್ನಿಹೋತ್ರಿ ಅವರನ್ನು ಕಣಕ್ಕಿಳಿಸಿದೆ.
Himachal Pradesh CM Jairam Thakur, his wife Sadhana Thakur & daughters Chandrika Thakur & Priyanka Thakur, offer prayers in Mandi, ahead of casting their votes for the state’s #AssemblyElections2022 pic.twitter.com/OGWVvDXW7j
— ANI (@ANI) November 12, 2022
ಇದನ್ನೂ ಓದಿ: 24 ಗಂಟೆಯೂ ಮೋದಿ ಚುನಾವಣೆ ಬಗ್ಗೆ ಯೋಚಿಸ್ತಾರೆ, ಕರ್ನಾಟಕ ಗೆಲ್ಲಬೇಕೇಂದು ಅನೇಕ ಬಾರಿ ಭೇಟಿ ಕೊಡ್ತಿದ್ದಾರೆ -ಪ್ರಿಯಾಂಕ್ ಖರ್ಗೆ
ಹಿಮಾಚಲ ಪ್ರದೇಶದ ಮಾಜಿ ಸಚಿವೆ ಮತ್ತು ಕಾಂಗ್ರೆಸ್ ನಾಯಕಿ ಆಶಾ ಕುಮಾರಿ ಅವರು ಡಾಲ್ಹೌಸಿಯಿಂದ ಸ್ಪರ್ಧಿಸುತ್ತಿದ್ದಾರೆ. ಅವರು ಬಿಜೆಪಿಯ ಡಿಎಸ್ ಠಾಕೂರ್ ಮತ್ತು ಎಎಪಿಯ ಮನೀಶ್ ಸರೀನ್ ವಿರುದ್ಧ ಕಣಕ್ಕಿಳಿದಿದ್ದಾರೆ. ಹಿರಿಯ ಕಾಂಗ್ರೆಸ್ ನಾಯಕ ಕೌಲ್ ಸಿಂಗ್ ಠಾಕೂರ್ ಅವರು ತಮ್ಮ ಸಾಂಪ್ರದಾಯಿಕ ಕ್ಷೇತ್ರವಾದ ದಾರಂಗ್‌ನಿಂದ ಬಿಜೆಪಿಯ ಪುರಾನ್ ಚಂದ್ ಠಾಕೂರ್ ಮತ್ತು ಎಎಪಿ ಅಭ್ಯರ್ಥಿ ಸುನಿತಾ ಠಾಕೂರ್ ವಿರುದ್ಧ ಮತ್ತೆ ಸ್ಪರ್ಧೆಗಿಳಿದಿದ್ದಾರೆ. ಮಾಜಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ಅವರ ಪುತ್ರ ವಿಕ್ರಮಾದಿತ್ಯ ಸಿಂಗ್ ಅವರು ಶಿಮ್ಲಾ ಗ್ರಾಮಾಂತರದಿಂದ ಮರು ಸ್ಪರ್ಧಿಸುತ್ತಿದ್ದಾರೆ. ಬಿಜೆಪಿಯಿಂದ ರವಿ ಮೆಹ್ತಾ ಅವರನ್ನು ಕಣಕ್ಕಿಳಿಸಿದೆ. ಹಿಮಾಚಲ ಪ್ರದೇಶ ವಿಧಾನಸಭೆಯ ಸ್ಪೀಕರ್ ವಿಪಿನ್ ಪರ್ಮಾರ್ ಅವರು ಜಗದೀಶ್ ಸಫಿಯಾ ಮತ್ತು ಎಎಪಿ ಅಭ್ಯರ್ಥಿ ರವೀಂದರ್ ಸಿಂಗ್ ವಿರುದ್ಧ ಸುಲಾಹ್ ನಿಂದ ಸ್ಪರ್ಧಿಸುತ್ತಿದ್ದಾರೆ.