ಶಿಮ್ಲಾ: ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆಯ ಮತ ಎಣಿಕೆ (Himachal pradesh Election Results 2022) ನಡೆಯುತ್ತಿದ್ದು, ಈಗ ಬಹುತೇಕ ಕಾಂಗ್ರೆಸ್ ಸರಳ ಬಹುಮತದತ್ತ ಹೆಜ್ಜೆ ಇಟ್ಟಿದೆ. ಬಿಜೆಪಿಯನ್ನು ಹಿಂದಿಕ್ಕಿ 40 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಈ ಬಾರಿ ಹಿಮಾಚಲ ಪ್ರದೇಶದಲ್ಲಿ ಮತ್ತೆ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಬಹುತೇಕ ಎಕ್ಸಿಟ್ ಪೋಲ್ಗಳು ಸಮೀಕ್ಷೆಯಲ್ಲಿ ಹೇಳಿದ್ದವು. ಈಗ ಫಲಿತಾಂಶದಲ್ಲಿ ಎಕ್ಸಿಟ್ ಪೋಲ್ಗಳ ಭವಿಷ್ಯ ತಲೆಕೆಳಗಾಗಿದ್ದು, ಕಾಂಗ್ರೆಸ್ ಸರಳ ಬಹುಮತದತ್ತ ಮುನ್ನುಗ್ಗುತ್ತಿದೆ. ಆದ್ರೆ, ಇದೀಗ ಗೆದ್ದ ಖುಷಿಯಲ್ಲಿರುವ ಕಾಂಗ್ರೆಸ್ಗೆ ಒಂದು ಕಡೆ ಆಪರೇಷನ್ ಕಮಲ ಭೀತಿ ಶುರುವಾಗಿದ್ರೆ, ಮತ್ತೊಂದೆಡೆ ಮುಖ್ಯಮಂತ್ರಿ ಪಟ್ಟ ಯಾರಿಗೆ ಕಟ್ಟಬೇಕು ಎನ್ನುವ ಗೊಂದಲಕ್ಕೆ ಸಿಲುಕಿದೆ.
ಇದನ್ನೂ ಓದಿ: Himachal Pradesh Election Result 2022: ಸೆರಾಜ್ ಕ್ಷೇತ್ರದಿಂದ ಹಾಲಿ ಸಿಎಂ ಜೈರಾಮ್ ಠಾಕೂರ್ ಗೆಲುವು
ಹೌದು…. ಒಂದು ಕಡೆ ಆಪರೇಷನ್ ಕಮಲದ ಭೀತಿ ಹಿನ್ನೆಲೆಯಲ್ಲಿ ಗೆದ್ದ ಶಾಸರಕನ್ನು ಹಿಡಿದಿಟ್ಟುಕೊಳ್ಳವ ಪ್ರಯತ್ನಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಮುಖ್ಯಮಂತ್ರಿ ಯಾರನ್ನು ಮಾಡಬೇಕೆಂಬ ದೊಡ್ಡ ಸವಾಲು ಕಾಂಗ್ರೆಸ್ಗಿದೆ. ಈಗಾಗಲೇ ಸಿಎಂ ರೇಸ್ನಲ್ಲಿ ಹಲವರ ಹೆಸರುಗಳು ಕೇಳಿಬರುತ್ತಿವೆ.
ಹಿಮಾಚಲದಲ್ಲಿ ಗದ್ದುಗೆ ಹಿಡಿದ್ರೂ ಸಿಎಂ ಆಯ್ಕೆ ಕಗ್ಗಂಟು!
ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬಂದರೂ ಸಹ ಕಾಂಗ್ರೆಸ್ಗೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಯಾಕಂದ್ರೆ ಸಿಎಂ ಆಕಾಂಕ್ಷಿಗಳ ಪಟ್ಟಿ ಹನುಮಂತನ ಬಾಲದಂತೆ ಬೆಳೆದಿದೆ. ಇದರಿಂದ ಮುಖ್ಯಮಂತ್ರಿ ಪಟ್ಟ ಯಾರಿಗೆ ಕಟ್ಟಬೇಕು ಅನ್ನೋದೇ ಗೊಂದಲ ಶುರುವಾಗಿದೆ.
ಸುಖ್ವಿಂದರ್ ಸಿಂಗ್ , ಮಾಜಿ ಸಿಎಂ ವೀರಭದ್ರ ಸಿಂಗ್ ಪತ್ನಿ ಪ್ರತಿಭಾ ಸಿಂಗ್, ಅಗ್ನಿಹೋತ್ರಿ ಕಾರ್ಯ, ಹಿರಿಯ ನಾಯಕ ತಾಕೂರ್ ಕೌಲ್ ಸಿಂಗ್, ಆಶಾ ಕುಮಾರಿ ಇಷ್ಟು ಹೆಸರು ಪ್ರಮುಖವಾಗಿ ಮುಖ್ಯಮಂತ್ರಿ ಹುದ್ದೆಗೆ ಕೇಳಿಬರುತ್ತಿರುವ ಹೆಸರುಗಳು ಇನ್ನು ಈ ಐವರನ್ನು ಹೊರತುಪಡಿಸಿ ಮತ್ತಿಬ್ಬರು ಹಿಮಾಚಲ ಸಿಎಂ ರೇಸ್ನಲ್ಲಿ ಇದ್ದಾರೆ. ಮುಖ್ಯಮಂತ್ರಿ ಕುರ್ಚಿಯ ಮೇಲೇ ಹರ್ಷವರ್ಧನ್ ಚೌಹಾಣ್ ಹಾಗೂ ರಾಜೇಶ್ ಧರ್ಮಾನಿ ಸಿಎಂ ಕುರ್ಚಿ ಮೇಲೆ ಕಣ್ಣಿದೆ.
ಇದನ್ನೂ ಒದಿ: Himachal Pradesh Result 2022: ಹಿಮಾಚಲ ಪ್ರದೇಶದಲ್ಲಿ ಬಿಜೆಪಿ-ಕಾಂಗ್ರೆಸ್ಗೆ ಪಕ್ಷೇತರರ ಕಂಟಕ
ಭರ್ಜರಿ ಪ್ರಚಾರ ಮಾಡಿದ್ದ ಸುಖ್ವಿಂದರ್ ಸಿಂಗ್
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ 2022ರಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿಯ ಮುಖ್ಯಸ್ಥ ಸುಖ್ವಿಂದರ್ ಸಿಂಗ್ ಹೆಸರು ಮುಖ್ಯಮಂತ್ರಿ ಹುದ್ದೆಗೆ ಪ್ರಬಲವಾಗಿ ಕೇಳಿಬರುತ್ತಿದೆ. ಯಾಕಂದ್ರೆ. ಸುಖ್ವಿಂದರ್ ಸಿಂಗ್ ಚುನಾವಣೆ ಸಂದರ್ಭದಲ್ಲಿ ಪ್ರಚಾರ ಸಮಿತಯ ಅಧ್ಯಕ್ಷರಾಗಿ ಭರ್ಜರಿ ಪ್ರಚಾರ ಮಾಡಿದ್ದರು. ಖ್ವಿಂದರ್ ಸಿಂಗ್ ಅವರರು ನಾದ್ವಾನ್ ಕ್ಷೇತ್ರದಿಂದ ಸ್ಪರ್ಧಿಸಿದ್ದಾರೆ.
ಮಾಜಿ ಸಿಎಂ ಪತ್ನಿ ಪ್ರತಿಭಾ ಸಿಂಗ್
ಹಿಮಾಚಲ ಪ್ರದೇಶದ ಮಾಜಿ ಸಿಎಂ ವೀರಭದ್ರ ಸಿಂಗ್ ಅವರ ಪತ್ನಿ ಪ್ರತಿಭಾ ಸಿಂಗ್ ಹೆಸರು ಸಹ ಸಿಎಂ ಹುದ್ದೆಗೆ ಕೇಳಿಬರುತ್ತಿದೆ. ಮಂಡಿ ಲೋಕಸಭೆ ಸಂಸದರಾಗಿದ್ದರೂ ಆಗಿರುವ ಪ್ರತಿಭಾ ಸಿಂಗ್, ಈ ಬಾರಿ ವಿಧಾನಸಭೆ ಚುನಾವಣೆ ಸ್ಪರ್ಧೆ ಮಾಡಿಲ್ಲ. ಆದರೂ ಸಹ ಅವರು ಸಿಎಂ ರೇಸ್ನಲ್ಲಿದ್ದಾರೆ.
ಮುಖೇಶ್ ಅಗ್ನಿಹೋತ್ರಿ
ಹಿಮಾಚಲ ಪ್ರದೇಶ ಸಿಎಂ ರೇಸ್ನಲ್ಲಿ ಮುಖೇಶ್ ಅಗ್ನಿಹೋತ್ರಿ ಹೆಸರು ಮುಂಚೂಣಿಯಲ್ಲಿದೆ. ಒಂದು ವೇಳೆ ತಮಗೆ ಸಿಎಂ ಹುದ್ದೆ ಸಿಗದಿದ್ದರೂ ಪರವಾಗಿಲ್ಲ. ಯಾವುದೇ ಕಾರಣಕ್ಕೂ ಸುಖ್ವಿಂದರ್ ಸಿಂಗ್ ಮುಖ್ಯಮಂತ್ರಯಾಗಲು ಬಿಡಬಾರದು ಎನ್ನುವ ದೃಷ್ಟಿಯಿಂದ ಪ್ರತಿಭಾ ಸಿಂಗ್ ಅವರು ಆಪ್ತ ಮುಖೇಶ್ ಅಗ್ನಿಹೋತ್ರಿಗೆ ಬೆಂಬಲಿಸುವ ಸಾಧ್ಯತೆಗಳಿವೆ. ನಾಲ್ಕು ಬಾರಿ ಶಾಸಕರಾಗಿ ಮುಖೇಶ್ ಅಗ್ನಿಹೋತ್ರಿ ಹರೋಲಿ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದಾರೆ.
8 ಬಾರಿ ಶಾಸಕರಾಗಿ ಕೌಳ್ ಸಿಂಗ್
ಹಿರಿಯ ನಾಯಕ ತಾಕೂರ್ ಕೌಲ್ ಸಿಂಗ್ ಸಹ ಸಿಎಂ ರೇಸ್ನಲ್ಲಿದ್ದಾರೆ. ಮಂಡಿ ಜಿಲ್ಲೆಯಿಂದ 8 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಕೌಳ್ ಸಿಂಗ್ ತಮ್ಮ ಹಿರಿತನದ ಆಧಾರದ ಮೇಲೆ ಮುಖ್ಯಮಂತ್ರಿ ನೀಡಿ ಎಂದು ನಿಂತಿದ್ದಾರೆ. ಆದ್ರೆ, 77 ವರ್ಷದ ಕೌಲ್ ಸಿಎಂ ಪಟ್ಟಕ್ಕೇರಲು ವಯಸ್ಸಿನ ಅಡ್ಡಿಯಾಗುವ ಸಾಧ್ಯತೆಗಳಿವೆ.
ಆಶಾ ಕುಮಾರಿ ಹೆಸರು ಚಾಲ್ತಿಯಲ್ಲಿ
ಯೆಸ್…ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಆಶಾ ಕುಮಾರಿ ಹೆಸರಿದೆ. ಚಾಂಬಾ ಜಿಲ್ಲೆಯಿಂದ 6 ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಆಶಾ, ಹಿಮಾಚಲ ಪ್ರದೇಶದ ಪ್ರಭಾವಿ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ. ಅಲ್ಲದೇ ಚತ್ತೀಸ್ಘಡ ಸಚಿವ ಟಿ.ಎಸ್.ಸಿಂಗ್ ಸಹೋದರಿ ಕೂಡ ಹೌದು.
ಯಾರಿಗೆ ಪಟ್ಟ?
ಗುಜರಾತ್ನಲ್ಲಿ ಸೋತರೂ ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೆ ಬರುವ ಖುಷಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ಗೆ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ದೊಡ್ಡ ಸವಾಲು ಆಗಿದೆ. ಅರ್ಧ ಡಜನ್ಗೂ ಹೆಚ್ಚು ನಾಯಕರು ಮುಖ್ಯಮಂತ್ರಿ ರೇಸ್ನಲ್ಲಿದ್ದು, ಯಾರನ್ನು ಆಯ್ಕೆ ಮಾಡಬೇಕು? ಯಾರನ್ನು ಬಿಡಬೇಕು? ಎನ್ನುವುದು ನೂತನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ದೊಡ್ಡ ತಲೆನವಾಗಿ ಪರಿಣಮಿಸಿದೆ.
ಒಟ್ಟಿನಲ್ಲಿ ಹಿಮಾಚಲ ಪ್ರದೇಶದ ಸಿಎಂ ರೇಸ್ನಲ್ಲಿ ಅರ್ಧ ಡಜನ್ಗೂ ಹೆಚ್ಚು ಪ್ರಭಾವಿ ನಾಯಕರು ಇದ್ದು, ಯಾರಿಗೆ ಮುಖ್ಯಮಂತ್ರಿ ಪಟ್ಟ ಒಲಿಯಲಿದೆ ಎನ್ನುವುದು ಕುತೂಹಲ ಮೂಡಿಸಿದೆ.
ಇನ್ನಷ್ಟು ಸದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ