Hubli-Dharwad: ಅವಳಿನಗರದ ಬಹತೇಕ ಕ್ಷೇತ್ರಗಳಿಗೆ ಘೋಷಣೆಯಾಗಿಲ್ಲ ಕಾಂಗ್ರೆಸ್ ಟಿಕೆಟ್​, ಇಲ್ಲಿದೆ 6 ವಿಧಾನಸಭಾ ಅಖಾಡಗಳ ಮುಸುಕಿನ ಗುದ್ದಾಟ

|

Updated on: Mar 25, 2023 | 11:07 AM

ಧಾರವಾಡ ಜಿಲ್ಲೆಯಲ್ಲಿ 6 ವಿಧಾನಸಭಾ ಕ್ಷೇತ್ರಗಳಿದ್ದು, 1 ಕ್ಷೇತ್ರಕ್ಕೆ ಮಾತ್ರ ಟಿಕೆಟ್​ ಘೋಷಣೆ ಮಾಡಿದ್ದಾರೆ. ಇನ್ನುಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಹಿರಂಗವಾಗಬೇಕಿದೆ. ಹುಬ್ಬಳ್ಳಿ-ಧಾರವಾಡ ಪೂರ್ವ ಕ್ಷೇತ್ರದಿಂದ ಹಾಲಿ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ.

Hubli-Dharwad: ಅವಳಿನಗರದ ಬಹತೇಕ ಕ್ಷೇತ್ರಗಳಿಗೆ ಘೋಷಣೆಯಾಗಿಲ್ಲ ಕಾಂಗ್ರೆಸ್ ಟಿಕೆಟ್​, ಇಲ್ಲಿದೆ 6 ವಿಧಾನಸಭಾ ಅಖಾಡಗಳ ಮುಸುಕಿನ ಗುದ್ದಾಟ
ಹುಬ್ಬಳ್ಳಿ ಚೆನ್ನಮ್ಮ ಸರ್ಕಲ್​
Follow us on

ಹುಬ್ಬಳಿ-ಧಾರವಾಡ: ರಾಜ್ಯ ವಿಧಾನಸಭೆ ಚುನಾವಣೆ ಹತ್ತಿರದಲ್ಲಿದ್ದು, ತೀರ್ವ ಕುತೂಹಲ ಮೂಡಿಸಿದ್ದ ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿ ಇಂದು (ಮಾ.25) ಬಿಡುಗಡೆಯಾಗಿದೆ. 125 ವಿಧಾನಸಭಾ ಕ್ಷೇತ್ರಗಳಿಗೆ ಮಾತ್ರ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ. ಇನ್ನು ಕೆಲವು ಕ್ಷೇತ್ರಗಳ ಹೆಸರು ಪಟ್ಟಿಯಲ್ಲಿಲ್ಲ. ಈ ಪೈಕಿ ಧಾರವಾಡ (Dharwad) ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರಗಳಿದ್ದು, 1 ಕ್ಷೇತ್ರಕ್ಕೆ ಮಾತ್ರ ಟಿಕೆಟ್​ ಘೋಷಣೆ ಮಾಡಿದ್ದಾರೆ. ಇನ್ನುಳಿದ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಬಹಿರಂಗವಾಗಬೇಕಿದೆ. ಹುಬ್ಬಳ್ಳಿ-ಧಾರವಾಡ (Hubli-Dharwad) ಪೂರ್ವ ಕ್ಷೇತ್ರದಿಂದ ಮೀಸಲು ಕ್ಷೇತ್ರವಿದ್ದು, ಹಾಲಿ ಶಾಸಕ ಪ್ರಸಾದ ಅಬ್ಬಯ್ಯ (Prasad Abbayya) ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿದೆ. ಇನ್ನುಳಿದ ಹುಬ್ಬಳ್ಳಿ-ಧಾರವಾಡ ಕೇಂದ್ರ ,ಕುಂದಗೋಳ, ಕಲಘಟಗಿ, ಹುಬ್ಬಳ್ಳಿ-ಧಾರವಾಡ ಪಶ್ಚಿಮ, ಧಾರವಾಡ, ನವಲಗುಂದ ಕ್ಷೇತ್ರಗಳಿಗೆ ಘೋಷಣೆಯಾಗಿಲ್ಲ.

ಕುಂದಗೋಳ ವಿಧಾನಸಭಾ ಕ್ಷೇತ್ರದ ಶಾಸಕಿ ಕುಸುಮಾ ಶಿವಳ್ಳಿಗೆ ಟಿಕೆಟ್​ ಘೋಷಣೆಯಾಗಿಲ್ಲ. ಮಾಜಿ ಸಚಿವ ದಿವಂಗತ ಸಿ.ಎಸ್​ ಶಿವಳ್ಳಿ ನಿಧನದ ನಂತರ ಪತ್ನಿ ಕುಸುಮಾ ಶಿವಳ್ಳಿ ಕಣಕ್ಕೆ ಇಳಿದು ಅನುಕಂಪದ ಆಧಾರದ ಮೇಲೆ ಗೆದ್ದು ಬಂದಿದ್ದಾರೆ. ಆದರೆ ಈಗ ಕುಂದಗೋಳ ಕ್ಷೇತ್ರದಲ್ಲಿ ಶಿವಳ್ಳಿ ವಿರುದ್ಧ ಕೆಲ ಕಾಂಗ್ರೆಸ್​ ನಾಯಕರೇ ಬಂಡಾಯ ಎದ್ದಿದ್ದು, ಕುಸುಮಾವತಿ ಶಿವಳ್ಳಿಗೆ ಟಿಕೆಟ್ ಕೊಡಬೇಡಿ ನಮಗೆ ನೀಡಿ ಎಂದು ಹೇಳುತ್ತಿದ್ದಾರೆ. ಈ ಕಾರಣಕ್ಕೆ ಟಿಕೆಟ್ ಘೋಷಣೆ ವಿಳಂಬವಾಗಿದೆ ಎನ್ನಲಾಗಿದೆ.

ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಸಂತೋಷ್ ಲಾಡ್, ನಾಗರಾಜ್ ಛಬ್ಬಿ ನಡುವೆ ಫೈಟ್​ ಇದೆ. ನಾಗರಾಜ್​ ಛಬ್ಬಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ ಬಣದಲ್ಲಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ ಬಣದಲ್ಲಿ ಸಂತೋಷ್​ ಲಾಡ್​ ಗುರುತಿಸಿಕೊಂಡಿದ್ದಾರೆ. ಈ ಹಿನ್ನೆಲೆ ಇಬ್ಬರ ನಡುವೆ ಪೈಪೋಟಿ ಇದೆ. ಹೀಗಾಗಿ ಟಿಕೆಟ್​ ಘೋಷಣೆ ವಿಳಂಬವಾಗಿದೆ.

ಇದನ್ನೂ ಓದಿ: ರಾಜಕೀಯ ಲಾಭದ ದುರುದ್ದೇಶದ ಪರಿಷ್ಕೃತ ಮೀಸಲಾತಿ ನೀತಿಯಿಂದ ಯಾವ ಸಮುದಾಯಕ್ಕೂ ಲಾಭ ಇಲ್ಲ: ಸಿದ್ದರಾಮಯ್ಯ

ಇದೇ ರೀತಿಯಾಗಿ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ವಿಧಾನಸಭಾ ಕ್ಷೇತ್ರದಲ್ಲೂ ಡಿಕೆ ಶಿವಕುಮಾರ್​ vs ಸಿದ್ದರಾಮಯ್ಯ ಅಂತ ಇದ್ದು, ಈ ಎರಡು ಬಣಗಳ ನಡುವೆ ಗುದ್ದಾಟವಿದೆ. ಸೆಂಟ್ರಲ್ ಕ್ಷೇತ್ರದಲ್ಲಿ ಡಿಕೆ ಶಿವಕುಮಾರ್​ ಬಣದ ರಜತ್ ಉಳ್ಳಾಗಡ್ಡಿ ಮಠ, ಸಿದ್ದರಾಮಯ್ಯ ಬಣದ ಅನಿಲ್ ಕುಮಾರ್ ಪಾಟೀಲ್, ಗಿರೀಶ್ ಗದಿಗೆಪ್ಪಗೌಡರ ನಡುವೆ ಪೈಪೋಟಿ ಇದೆ.

ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಒಟ್ಟು 11 ಆಕಾಂಕ್ಷಿಗಳಿದ್ದಾರೆ. ದೀಪಕ್ ಚಿಂಚೋರೆ, ಮಯೂರ ಮೋರೆ, ನಾಗರಾಜ ಗೌರಿ, ಪಾಂಡುರಂಗ ನೀರಲಕೇರಿ, ಕೀರ್ತಿ ಮೋರೆ, ಸ್ವಾತಿ ಮಳಗಿ ಸೇರಿದಂತೆ 11 ಜನ ರೇಸ್‌ನಲ್ಲಿದ್ದಾರೆ. ಇವರೊಂದಿಗೆ ಇತ್ತೀಚಿಗಷ್ಟೇ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಮೋಹನ ಲಿಂಬಿಕಾಯಿ‌ ಕೂಡ ಆಕಾಂಕ್ಷಿಯಾಗಿದ್ದಾರೆ.

ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ, ಇಸ್ಮಾಯಿಲ್ ತಮಟಗಾರ ನಡುವೆ ಪೈಪೋಟಿ ಇದೆ. ಇದೇ ವೇಳೆ ವಿನಯ ಕುಲಕರ್ಣಿ ಬದಲಿಗೆ ಅವರ ಪತ್ನಿ ಶಿವಲೀಲಾ ಕುಲಕರ್ಣಿಯವರಿಗು ಟಿಕೆಟ್ ಕೊಡುವ ಬಗ್ಗೆಯೂ ಪ್ರಸ್ತಾಪ‌ವಿದೆ. ನವಲಗುಂದ ಕ್ಷೇತ್ರದಲ್ಲಿ ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ, ವಿನೋದ ಅಸೂಟಿ, ಕೆ. ಎನ್. ಗಡ್ಡಿ, ಶಿವಾನಂದ ಕರಿಗಾರ ನಡುವೆ ಪೈಪೋಟಿ ಇದ್ದ ಹಿನ್ನೆಲೆ ಟಿಕೆಟ್​ ಘೋಷಣೆಯಾಗಿಲ್ಲ.

ಮತ್ತಷ್ಟು ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:07 am, Sat, 25 March 23