ಕನ್ನಡ ಸಮೃದ್ಧ ಭಾಷೆ, ನಾಡಿನ ಹೆಮ್ಮೆಯನ್ನು ಹೆಚ್ಚಿಸುವ ಭಾಷೆ; ಮುದ್ದೇನಹಳ್ಳಿಯಲ್ಲಿ ಪ್ರಧಾನಿ ಮೋದಿ ಬಣ್ಣನೆ

ಭಾಷೆಯನ್ನು ಮುಂದಿಟ್ಟುಕೊಂಡು ಹಿಂದಿನ ಸರ್ಕಾರಗಳು ಆಟವಾಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕಬಳ್ಳಾಪುರದಲ್ಲಿ ವಾಗ್ದಾಳಿ ನಡೆಸಿದರು. ಅಲ್ಲದೆ, ಕನ್ನಡ ಒಂದು ಸಮೃದ್ಧ ಭಾಷೆ. ಇದು ನಾಡಿನ ಹೆಮ್ಮೆಯನ್ನು ಹೆಚ್ಚಿಸುವ ಭಾಷೆ ಎಂದು ಬಣ್ಣನೆ ಮಾಡಿದರು.

ಕನ್ನಡ ಸಮೃದ್ಧ ಭಾಷೆ, ನಾಡಿನ ಹೆಮ್ಮೆಯನ್ನು ಹೆಚ್ಚಿಸುವ ಭಾಷೆ; ಮುದ್ದೇನಹಳ್ಳಿಯಲ್ಲಿ ಪ್ರಧಾನಿ ಮೋದಿ ಬಣ್ಣನೆ
ಚಿಕ್ಕಬಳ್ಳಾಪುರದಲ್ಲಿ ನರೇಂದ್ರ ಮೋದಿ
Follow us
|

Updated on:Mar 25, 2023 | 3:36 PM

ಚಿಕ್ಕಬಳ್ಳಾಪುರ: ಕನ್ನಡ ಒಂದು ಸಮೃದ್ಧ ಭಾಷೆ. ಇದು ನಾಡಿನ ಹೆಮ್ಮೆಯನ್ನು ಹೆಚ್ಚಿಸುವ ಭಾಷೆ. ಹಿಂದಿನ ಸರ್ಕಾರಗಳು ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿ ಕಲಿಸಲು ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ವಾಗ್ದಾಳಿ ನಡೆಸಿದರು. ಚಿಕ್ಕಬಳ್ಳಾಪುರದ ಶ್ರೀ ಮಧುಸೂದನ್ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ (Sri Madhusudan Sai Institute of Medical Sciences and Research) ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ನೇತೃತ್ವದ ಬಿಜೆಪಿ ಸರ್ಕಾರವು ಈ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುವ ಅವಕಾಶವನ್ನು ಒದಗಿಸಿದೆ ಎಂದು ಹೇಳಿದರು.

ಹಳ್ಳಿಗಳ ಯುವಕರು ಮತ್ತು ಬಡ ಕುಟುಂಬದ ಯುವಕರು ವೈದ್ಯಕೀಯ ವೃತ್ತಿಗೆ ಸೇರಲು ಎದುರಿಸುತ್ತಿರುವ ಸವಾಲುಗಳನ್ನು ಎತ್ತಿ ಹಿಡಿದ ಮೋದಿ, ಈ ಸವಾಲಿನಿಂದಾಗಿ ಬಡ ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದ ಹಳ್ಳಿಗಳ ಯುವಕರು ವೈದ್ಯರಾಗುವುದು ಕಷ್ಟಕರವಾಗಿತ್ತು ಎಂದು ಮೋದಿ ಹೇಳಿದರು. ಕೆಲವು ಪಕ್ಷಗಳು ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಮತ್ತು ಮತಬ್ಯಾಂಕ್ ರಾಜಕಾರಣಕ್ಕಾಗಿ ಭಾಷೆಗಳ ಮೇಲೆ ಆಟವಾಡಿವೆ. ಆದರೆ ಅವರು ನಿಜವಾದ ಅರ್ಥದಲ್ಲಿ ಭಾಷೆಗಳನ್ನು ಬೆಂಬಲಿಸಲು ಬೇಕಾದ ಪ್ರಯತ್ನವನ್ನು ಮಾಡಲಿಲ್ಲ. ಅಂತಹ ಪಕ್ಷಗಳಿಗೆ ಹಳ್ಳಿಗಳ, ಬಡ ಮತ್ತು ಹಿಂದುಳಿದ ವರ್ಗದ ಕುಟುಂಬಗಳ ಮಗ ಮತ್ತು ಹೆಣ್ಣು ಮಕ್ಕಳು ವೈದ್ಯರು ಅಥವಾ ಇಂಜಿನಿಯರ್ ಆಗಲು ಬಯಸಲಿಲ್ಲ. ಆದರೆ ಬಡವರ ಕಲ್ಯಾಣಕ್ಕಾಗಿ ಕೆಲಸ ಮಾಡುವ ನಮ್ಮ ಸರ್ಕಾರವು ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡಿದೆ ಎಂದರು.

ಕನ್ನಡ ಭಾಷಣೆಯನ್ನು ಬಣ್ಣಿಸಿದ ಮೋದಿ

ಕನ್ನಡ ಒಂದು ಸಮೃದ್ಧ ಭಾಷೆ. ಇದು ನಾಡಿನ ಹೆಮ್ಮೆಯನ್ನು ಹೆಚ್ಚಿಸುವ ಭಾಷೆ. ಹಿಂದಿನ ಸರ್ಕಾರಗಳು ವೈದ್ಯಕೀಯ, ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣವನ್ನು ಕನ್ನಡದಲ್ಲಿ ಕಲಿಸಲು ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಆದರೆ ನಮ್ಮ ಸರ್ಕಾರವು ಕನ್ನಡದಲ್ಲಿ ಕಲಿಸಲು ಕ್ರಮಗಳನ್ನು ಕೈಗೊಂಡಿದೆ ಎಂದು ಮೋದಿ ಹೇಳಿದರು.

ಇದನ್ನೂ ಓದಿ: ಸರ್ ಎಂ ವಿಶ್ವೇಶ್ವರಯ್ಯರಂಥ ಮಹಾನ್ ಆರ್ಕಿಟೆಕ್ಟ್​ರನ್ನು ದೇಶಕ್ಕೆ ನೀಡಿದ ಮುದ್ದೇನಹಳ್ಳಿಯ ಪುಣ್ಯಭೂಮಿಗೆ ಭೇಟಿ ನೀಡಿದ್ದು ನನ್ನ ಸೌಭಾಗ್ಯ: ಪ್ರಧಾನಿ ಮೋದಿ

ದೀರ್ಘಕಾಲದವರೆಗೆ, ದೇಶದಲ್ಲಿ ಇಂತಹ ರೀತಿಯ ರಾಜಕೀಯ ಇತ್ತು, ಅದು ಬಡವರನ್ನು ಕೇವಲ ವೋಟ್ ಬ್ಯಾಂಕ್ ಆಗಿ ನೋಡಿದೆ. ಆದರೆ ಬಿಜೆಪಿ ಸರ್ಕಾರಕ್ಕೆ ಬಡವರ ಸೇವೆ ಮಾಡುವುದು ಪರಮ ಕರ್ತವ್ಯವಾಗಿದೆ. ಬಡ ಮತ್ತು ಮಧ್ಯಮ ವರ್ಗದವರ ಆರೋಗ್ಯ ಮತ್ತು ಕಲ್ಯಾಣಕ್ಕೆ ಆದ್ಯತೆ ನೀಡಿದ್ದೇವೆ. ಅಗ್ಗದ ಔಷಧಿಗಳನ್ನು ಒದಗಿಸಲು ನಾವು ಜನೌಷದಿ ಕೇಂದ್ರಗಳನ್ನು ತೆರೆದಿದ್ದೇವೆ ಎಂದು ಮೋದಿ ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಗ್ರಾಮದಲ್ಲಿರುವ ಎಸ್‌ಎಂಎಸ್‌ಐಎಂಎಸ್‌ಆರ್ ಅನ್ನು ಪ್ರಧಾನಮಂತ್ರಿಯವರು ಶನಿವಾರ ಉದ್ಘಾಟಿಸಿದರು. ಇದು ಸಂಪೂರ್ಣ ಉಚಿತ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಾಗಿದ್ದು, ಇದನ್ನು ಮಾನವ ಶ್ರೇಷ್ಠತೆಗಾಗಿ ಗ್ರಾಮೀಣ ಪ್ರದೇಶದಲ್ಲಿ ಶ್ರೀ ಸತ್ಯಸಾಯಿ ವಿಶ್ವವಿದ್ಯಾಲಯ ಸ್ಥಾಪಿಸಿದೆ. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸೇವೆಯನ್ನು ವಾಣಿಜ್ಯೀಕರಣಗೊಳಿಸುವ ದೃಷ್ಟಿಯಲ್ಲಿ ಸ್ಥಾಪಿಸಲಾಗಿದ್ದು, SMSIMSR ವೈದ್ಯಕೀಯ ಶಿಕ್ಷಣ ಮತ್ತು ಗುಣಮಟ್ಟದ ವೈದ್ಯಕೀಯ ಸೇವೆಯನ್ನು ಎಲ್ಲರಿಗೂ ಉಚಿತವಾಗಿ ನೀಡಲಾಗುತ್ತದೆ. 2023 ರ ಶೈಕ್ಷಣಿಕ ವರ್ಷದಿಂದ ಸಂಸ್ಥೆಯು ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:34 pm, Sat, 25 March 23