Karnataka Election Results: ಒಟ್ಟು 4 ಸ್ಥಾನ ಗೆದ್ದ ಇತರರು; ಜನಾರ್ದನ್ ರೆಡ್ಡಿ ಮತ್ತು ಇನ್ಯಾರು? ಇಲ್ಲಿದೆ ವಿವರ
224 ರಲ್ಲಿ ನಾಲ್ಕು ಸ್ಥಾನ ಇತರರ ಪಾಲಾಗಿದೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹಾಗೂ ಸರ್ವೋದಯ ಕರ್ನಾಟಕ ಪಕ್ಷದಿಂದ ತಲಾ ಒಬ್ಬರು ಜಯ ಗಳಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಘೋಷಣೆ ನಂತರ ವಿವಿಧ ಪಕ್ಷಗಳು ಅಳೆದು-ತೂಗಿ ಟಿಕೆಟ್ ನೀಡಿದ್ದವು. ಟಿಕೆಟ್ ಸಿಗದ ಅಸಮಾಧಾನಿತರು ಪಕ್ಷ ತೊರೆದು ಹೊರಬಂದು ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ನಂತರ ಕೆಲವರು ಹಿಂದಕ್ಕೆ ಪಡೆದುಕೊಂಡಿದ್ದರು. ಬದಲಾದ ರಾಜಕಾರಣ ವ್ಯವಸ್ಥೆಯಲ್ಲಿ ಒಂದು ಕಾಲದಲ್ಲಿ ಬಿಜೆಪಿಯ ನಾಯಕರಾಗಿ ಸಚಿವರೂ ಆಗಿದ್ದ ಜನಾರ್ದನ ರೆಡ್ಡಿ ತಮ್ಮದೇ ಪಕ್ಷ ಸ್ಥಾಪನೆ ಮಾಡಿದ್ದರು. ಹಾಗಿದ್ದರೆ ಈ ಬಾರಿ 224 ಕ್ಷೇತ್ರದಲ್ಲಿ ಎಷ್ಟು ಜನ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದಾರೆ?
224 ರಲ್ಲಿ ನಾಲ್ಕು ಸ್ಥಾನ ಇತರರ ಪಾಲಾಗಿದೆ. ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಹಾಗೂ ಸರ್ವೋದಯ ಕರ್ನಾಟಕ ಪಕ್ಷದಿಂದ ತಲಾ ಒಬ್ಬರು ಜಯ ಗಳಿಸಿದ್ದಾರೆ.
ಗೆಲುವು ಕಂಡ ಜನಾರ್ದನ ರೆಡ್ಡಿ: ಫುಟ್ಬಾಲ್ ಚಿಹ್ನೆಯೊಂದಿಗೆ ಅಖಾಡಕ್ಕೆ ಇಳಿದ ಜನಾರ್ದನ ರೆಡ್ಡಿ ಗಂಗಾವತಿಯಲ್ಲಿ ವಿಜಯದ ನಗೆ ಬೀರಿದ್ದಾರೆ. ಬಳ್ಳಾರಿಯಲ್ಲಿ ಪತ್ನಿ ಅರುಣಾ ಲಕ್ಷ್ಮೀ ಅವರನ್ನು ಗೆಲ್ಲಿಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಗಂಗಾವತಿಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದ ರೆಡ್ಡಿ ಹಲವಾರು ಭರವಸೆಗಳನ್ನು ನೋಡಿದ್ದರು. ರಾಜ್ಯದ 49 ಕ್ಷೇತ್ರಗಳಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು.
ಇದನ್ನೂ ಓದಿ: Karnataka Election Results: 50 ಸಾವಿರಕ್ಕಿಂತ ಹೆಚ್ಚು ಅಂತರದಲ್ಲಿ ಗೆದ್ದವರ ವಿವರ; ಡಿಕೆ ಶಿವಕುಮಾರ್ಗೆ ಅಗ್ರ ಸ್ಥಾನ
ದರ್ಶನ್ ಪುಟ್ಟಣ್ಣಯ್ಯ: ಸರ್ವೋದಯ ಕರ್ನಾಟಕ ಪಕ್ಷದಿಂದ ದರ್ಶನ್ ಪುಟ್ಟಣಯ್ಯ ಗೆದ್ದಿದ್ದಾರೆ. ಅವರಿಗೆ ಕಾಂಗ್ರೆಸ್ ಪಕ್ಷ ಬೆಂಬಲ ಸೂಚಿಸಿತ್ತು. ಜೆಡಿಎಸ್ ಮತ್ತು ದರ್ಶನ್ ನಡುವೆ ಬೇರ ಹಣಾಹಣಿ ಏರ್ಪಟ್ಟಿದ್ದು ಸಿಎಸ್ ಪುಟ್ಟರಾಜು ಸೋಲು ಕಂಡಿದ್ದರು.
ಪಕ್ಷೇತರರಾಗಿ ಹರಪನಹಳ್ಳಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ.ಪಿ. ಪ್ರಕಾಶ್ ಅವರ ಪುತ್ರಿ ಎಂ.ಪಿ. ಲತಾ ಮಲ್ಲಿಕಾರ್ಜುನ ಗೆಲುವು ಸಾಧಿಸಿದ್ದಾರೆ. ಶಾಸಕ ಕರುಣಾಕರ ರೆಡ್ಡಿ ಅವರಿಗೆ ಲತಾ ಶಾಕ್ ನೀಡಿದ್ದಾರೆ. ಗೌರಿಬಿದನೂರು ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಪುಟ್ಟಸ್ವಾಮಿ ಗೌಡ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಶಿವಶಂಕರ್ ರೆಡ್ಡಿ ಅವರನ್ನು ಪುಟ್ಟಸ್ವಾಮಿಗೌಡ ಸೋಲಿಸಿದ್ದು ವಿಧಾನಸಭೆ ಪ್ರವೇಶಿಸಿದ್ದಾರೆ.