Congress Guarantees: ಸುಭದ್ರ ಸರ್ಕಾರ ಬಂತು; ಕಾಂಗ್ರೆಸ್ ಕೊಟ್ಟ 5 ಗ್ಯಾರಂಟಿಗಳೇನು? ಭರವಸೆಗಳ ಪಟ್ಟಿ ಇಲ್ಲಿದೆ; ಕೈ ಆಶ್ವಾಸನೆಗಳು ಈಡೇರುತ್ತವಾ?

Karnataka Elections, Congress Manifesto: ಗೃಹಜ್ಯೋತಿ, ಗೃಹಲಕ್ಷ್ಮೀ, ಅನ್ನಭಾಗ್ಯ, ಯುವನಿಧಿ ಮತ್ತು ಶಕ್ತಿ, ಇವು ಕರ್ನಾಟಕದ ಜನತೆಗೆ ಕಾಂಗ್ರೆಸ್ ಪಕ್ಷ ಕೊಟ್ಟಿರುವ 5 ಗ್ಯಾರಂಟಿಗಳು. ಈಗ ರಾಜ್ಯ ಜನತೆ ಕಾಂಗ್ರೆಸ್​ಗೆ ಪೂರ್ಣಾಶೀರ್ವಾದ ಮಾಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಣಾಳಿಕೆಯತ್ತ ಒಂದು ನೋಟ...

Congress Guarantees: ಸುಭದ್ರ ಸರ್ಕಾರ ಬಂತು; ಕಾಂಗ್ರೆಸ್ ಕೊಟ್ಟ 5 ಗ್ಯಾರಂಟಿಗಳೇನು? ಭರವಸೆಗಳ ಪಟ್ಟಿ ಇಲ್ಲಿದೆ; ಕೈ ಆಶ್ವಾಸನೆಗಳು ಈಡೇರುತ್ತವಾ?
ಕಾಂಗ್ರೆಸ್ ನಾಯಕರು
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 13, 2023 | 9:02 PM

ಬೆಂಗಳೂರು: ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Elections 2023) ಕಾಂಗ್ರೆಸ್ ಜಯಭೇರಿ ಭಾರಿಸಿ ನಿಚ್ಚಳ ಬಹುಮತ ಗಳಿಸಿದೆ. ಇಲ್ಲಿ ಯಾವ ಮೋದಿ ಮ್ಯಾಜಿಕ್ ಕೂಡ ಕೆಲಸ ಮಾಡಿಲ್ಲ. ಮೋದಿ ಅಬ್ಬರಾತಿ ಅಬ್ಬರದಲ್ಲಿ ಪ್ರಚಾರ ಮಾಡಿದರೂ ಉಪಯೋಗವಾಗಿಲ್ಲ. ಬಿಜೆಪಿಗೆ ಬಜರಂಗಬಲಿಯೂ ಕೈಹಿಡಿಯಲಿಲ್ಲ. ಒಂದೇ ಪಕ್ಷಕ್ಕೆ ಸತತವಾಗಿ ಎರಡು ಬಾರಿ ಅಧಿಕಾರ ಕೊಡದ ಕರ್ನಾಟಕದ ಪರಂಪರೆ ಮುಂದುವರಿದಿದೆ. ಕಾಂಗ್ರೆಸ್ ಪಕ್ಷ ಜನರಿಗೆ ಭರ್ಜರಿ ಆಶ್ವಾಸನೆಗಳನ್ನೂ ಕೊಟ್ಟಿದೆ. ಅದರ ಚುನಾವಣಾ ಪ್ರಣಾಳಿಕೆಯಲ್ಲಿ (Congress Manifesto) 5 ಗ್ಯಾರಂಟಿಗಳು ಪ್ರಮುಖ ಹೈಲೈಟ್ ಆಗಿವೆ.

ಸರ್ವಜನಾಂಗದ ಶಾಂತಿಯ ತೋಟ ಹೆಸರಿನಲ್ಲಿ ಕಾಂಗ್ರೆಸ್ ಬಿಡುಗಡೆ ಮಾಡಿದ ಚುನಾವಣಾ ಪ್ರಣಾಳಿಕೆಯಲ್ಲಿ ಏನೆಲ್ಲಾ ಆಶ್ವಾಸನೆ ಕೊಡಲಾಗಿದೆ, ಅದರ ಪ್ರಮುಖ ಅಂಶಗಳು ಇಲ್ಲಿವೆ.

ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಕೊಡಲಾದ 5 ಗ್ಯಾರಂಟಿಗಳು:

  1. ಗೃಹ ಜ್ಯೋತಿಪ್ರತೀ ಮನೆಗೂ 200 ಯೂನಿಟ್ ಉಚಿತ ವಿದ್ಯುತ್
  2. ಗೃಹ ಲಕ್ಷ್ಮೀಮನೆಯ ಯಜಮಾನಿಗೆ ತಿಂಗಳಿಗೆ 2,000 ರೂ ಸಹಾಯಧನ
  3. ಅನ್ನ ಭಾಗ್ಯ: ಬಿಪಿಎಲ್ ಕುಟುಂಬಗಳಿಗೆ ಉಚಿತ 10 ಕಿಲೋ ಆಹಾರಧಾನ್ಯ
  4. ಯುವ ನಿಧಿ: ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3,000 ರೂ, ಡಿಪ್ಲೊಮಾ ನಿರುದ್ಯೋಗಿಗಳಿಗೆ ತಿಂಗಳಿಗೆ 1,500 ರೂ ಸಹಾಯಧನ
  5. ಶಕ್ತಿ: ರಾಜ್ಯದಲ್ಲಿ ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ

ಇದನ್ನೂ ಓದಿRahul Gandhi: ರಾಹುಲ್ ಗಾಂಧಿ ಪಾದಯಾತ್ರೆ ಸಾಗಿದ ಬಹುತೇಕ ಕಡೆ ಕಾಂಗ್ರೆಸ್ ಗೆದ್ದಿದೆ: ರಣದೀಪ್ ಸುರ್ಜೆವಾಲ

ಕಾಂಗ್ರೆಸ್ ಪಕ್ಷ ಕರ್ನಾಟಕದ ಜನತೆಗೆ ಕೊಟ್ಟಿರುವ ಇತರ ಆಶ್ವಾಸನೆಗಳು

  • ಸರ್ಕಾರದಲ್ಲಿ ಒಂದು ವರ್ಷದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿ
  • ಆದ್ಯತೆಯ ಮೇರೆಗೆ ಕಾಲ ಕಾಲಕ್ಕೆ ಎಲ್ಲಾ ಖಾಲಿ ಹುದ್ದೆಗಳ ಭರ್ತಿ
  • ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿರುವ ನೌಕರರಿಗೆ ಖಾಯಂ
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರ ಖಾಯಂ
  • ಬಜರಂಗದಳ, ಪಿಎಫ್ಐ ನಿಷೇಧ
  • ಅಂಗನವಾಡಿ ಕಾರ್ಯಕರ್ತೆಯರ ವೇತನ 11,500ರಿಂದ 15 ಸಾವಿರಕ್ಕೆ ಹೆಚ್ಚಳ
  • ಮಿನಿ ಅಂಗನವಾಡಿ ಕಾರ್ಯಕರ್ತೆಯರ ವೇತನ 10,000 ರೂಗೆ ಹೆಚ್ಚಳ
  • ಆಶಾ ಕಾರ್ಯಕರ್ತೆಯರ ಗೌರವಧನ 8 ಸಾವಿರ ರೂ.ಗೆ ಹೆಚ್ಚಳ
  • ರಾತ್ರಿ ಪಾಳಿಯ ಪೊಲೀಸ್ ಸಿಬ್ಬಂದಿಗೆ 5 ಸಾವಿರ ರೂ. ವಿಶೇಷ ಭತ್ಯೆ
  • ಎಲ್ಲಾ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ
  • ಮುಸ್ಲಿಮರಿಗೆ ಶೇ. 4ರಷ್ಟು ಮೀಸಲಾತಿ ತರುವ ವ್ಯವಸ್ಥೆ ಮತ್ತೆ ಜಾರಿ
  • ಅಲ್ಪಸಂಖ್ಯಾತ ಸಮುದಾಯಗಳ ಕಲ್ಯಾಣಕ್ಕಾಗಿ 10,000 ಕೋಟಿ ರೂ ವಿನಿಯೋಗ
  • ಮೀಸಲಾತಿ ಪ್ರಮಾಣ ಶೇ. 75ಕ್ಕೆ ಏರಿಕೆ
  • ರಾಜ್ಯದಲ್ಲಿ ಎನ್​ಇಪಿ ಬದಲು ಹೊಸ ಶಿಕ್ಷಣ ನೀತಿ ಜಾರಿ
  • ನೀರಾವರಿ ಯೋಜನೆಗಳಿಗೆ 1.5 ಲಕ್ಷ ಕೋಟಿ ರೂ
  • ಕೃಷಿ ಆಧುನೀಕರಣಕ್ಕೆ 1.5 ಲಕ್ಷ ಕೋಟಿ ರೂ
  • ಗ್ರಾಮೀಣ ಭಾಗದಲ್ಲಿ ಸೌಕರ್ಯ ಅಭಿವೃದ್ಧಿಗೆ 50,000 ಕೋಟಿ ರೂ

ಇನ್ನಷ್ಟು ವಿಧಾನಸಭಾ ಚುನಾವಣೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ