Karnataka Assembly Polls 2023: ಈ ಬಾರಿ ಮೈಸೂರು ಜಿಲ್ಲೆಯಲ್ಲಿ 1 ಲಕ್ಷ ಜನ ಮನೆಯಿಂದಲೇ ಮತದಾನ

ಮೈಸೂರು ಜಿಲ್ಲೆಯಲ್ಲಿ 84,917 ಜನ 80 ವರ್ಷ ಮೇಲ್ಪಟ್ಟವರಿದ್ದು, 31,754 ಜನ ವಿಶೇಷ ಚೇತನರು ತಮ್ಮ ಮನೆ ಬಾಗಿಲಿನಿಂದಲೇ ಮತದಾನ ಮಾಡಲಿದ್ದಾರೆ.

Karnataka Assembly Polls 2023: ಈ ಬಾರಿ ಮೈಸೂರು ಜಿಲ್ಲೆಯಲ್ಲಿ 1 ಲಕ್ಷ ಜನ ಮನೆಯಿಂದಲೇ ಮತದಾನ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on:Apr 07, 2023 | 7:40 AM

ಮೈಸೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಆಯೋಗ (Election Commission) 80 ವರ್ಷ (80 Above) ಮೇಲ್ಪಟ್ಟವರಿಗೆ ಮತ್ತು ವಿಶೇಷ ಚೇತನರು (Physically Disabled) ಮನೆಯಿಂದಲೇ ಮತದಾನ ಮಾಡುವ ಅನುಕೂಲ ಮಾಡಿಕೊಟ್ಟಿದ್ದು, ಈ ಮೂಲಕ ಶೇ 90 ರಷ್ಟು ಮತದಾನದ ಗುರಿಯನ್ನು ಹೊಂದಿದೆ. ಇದರಂತೆ ಮೈಸೂರು ಜಿಲ್ಲೆಯಲ್ಲಿ (Mysore) 84,917 ಜನ 80 ವರ್ಷ ಮೇಲ್ಪಟ್ಟವರಿದ್ದು, 31,754 ಜನ ವಿಶೇಷ ಚೇತನರು ತಮ್ಮ ಮನೆ ಬಾಗಿಲಿನಿಂದಲೇ ಮತದಾನ (Vote From Home) ಮಾಡಲಿದ್ದಾರೆ. ಈ ಸಂಬಂಧ ಜಿಲ್ಲಾಡಳಿತ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತರಬೇತಿ ನೀಡುತ್ತಿದೆ.

ಜಿಲ್ಲಾಡಳಿತದ ಅಂಕಿಅಂಶಗಳ ಪ್ರಕಾರ, ಮೈಸೂರು ಅರಮನೆ ಸೇರಿದಂತೆ ನಗರದ ಹಳೆಯ ಪ್ರದೇಶಗಳನ್ನು ಒಳಗೊಂಡಿರುವ ಕೃಷ್ಣರಾಜ ಕ್ಷೇತ್ರದಲ್ಲಿ 80 ವರ್ಷ ಮೇಲ್ಪಟ್ಟ ಸುಮಾರು 12,174 ಮತದಾರರಿದ್ದಾರೆ. ಅತಿ ಕಡಿಮೆ ಅಂದರೆ ಪಿರಿಯಾಪಟ್ಟಣದಲ್ಲಿ 5266 ಮಂದಿ ಇದ್ದಾರೆ. ಹೆಚ್.ಡಿ.ಕೋಟೆ ಕ್ಷೇತ್ರದಲ್ಲಿ ಅತಿ ಹೆಚ್ಚು ವಿಶೇಷಚೇತನ ಮತದಾರರು (3,438) ಇದ್ದು, ಹುಣಸೂರು 3,430 ಮತದಾರರಿದ್ದಾರೆ.

ಇದನ್ನೂ ಓದಿ: ವಿಕಲಚೇತನರಿಗೆ ಮತ್ತು 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನಕ್ಕೆ ಅವಕಾಶ, ಹೇಗೆ ಪ್ರಕ್ರಿಯೆ?

ಮನೆಯಿಂದಲೇ ಮತದಾನವನ್ನು ಪರಿಚಯಿಸಿದ ಉದ್ದೇಶ, ಆರೋಗ್ಯ ಸಂಬಂಧ ಕಾರಣಗಳಿಂದ ಮತಗಟ್ಟೆಗಳಿಗೆ ಹೋಗಿ ಮತ ​​ಚಲಾಯಿಸಲು ಸಾಧ್ಯವಾಗದ ವ್ಯಕ್ತಿಗಳೂ ಕೂಡಾ ತಮ್ಮ ಹಕ್ಕನ್ನು ಚಲಾಯಿಸಲೆಂದು ಪರಿಚಯಿಸಲಾಗಿದೆ. ಮನೆಯಿಂದಲೇ ಮತದಾನ ಪ್ರಕ್ರಿಯೆ ವೇಳೆ ವೀಡಿಯೋಗ್ರಾಫರ್‌ಗಳು, ಎಲ್ಲಾ ರಾಜಕೀಯ ಪಕ್ಷದ ಏಜೆಂಟ್‌ಗಳು, ಪೊಲೀಸರು ಮತ್ತು ಬೂತ್ ಮಟ್ಟದ ಅಧಿಕಾರಿಗಳೊಂದಿಗೆ ಚುನಾವಣಾ ಸಿಬ್ಬಂದಿ ನಿವಾಸಗಳಿಗೆ ಭೇಟಿ ನೀಡಲಿದ್ದಾರೆ. “ಮತದಾನದ ಗೌಪ್ಯತೆಯನ್ನು ಕಾಪಾಡಬೇಕು. ನಾವು ನಮ್ಮ ಮತಗಟ್ಟೆ ಸಿಬ್ಬಂದಿ ಮತ್ತು ವಿಡಿಯೋಗ್ರಾಫರ್‌ಗಳಿಗೆ ತರಬೇತಿ ನೀಡುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ತಿಳಿಸಿದರು.

ಜಿಲ್ಲೆಯ 80+ ಮತದಾರರು: 84,917

ಪಿರಿಯಾಪಟ್ಟಣ: 5,266, ಕೃಷ್ಣರಾಜ ನಗರ: 6,811, ಹುಣಸೂರು: 7,034, ಎಚ್‌.ಡಿ.ಕೋಟೆ: 6,484, ನಂಜನಗೂಡು: 7,572, ಚಾಮುಂಡೇಶ್ವರಿ: 9767, ಕೃಷ್ಣರಾಜ: 12,174, ಚಾಮರಾಜ: 9,833, ನರಸಿಂಹರಾಜ: 6,368, ವರುಣ: 7,615, ತಿ.ನರಸೀಪುರ:5,993 ಜನರು 80 ವರ್ಷ ಮೇಲ್ಪಟ್ಟವರಿದ್ದಾರೆ.

ವಿಶೇಷ ಚೇತನರು: 31,754

ಪಿರಿಯಾಪಟ್ಟಣ: 3,257 ಕೃಷ್ಣರಾಜ ನಗರ: 3,132 ಹುಣಸೂರು: 3,430 ಹೆಚ್‌.ಡಿ.ಕೋಟೆ: 3,438 ನಂಜನಗೂಡು: 3,107 ಚಾಮುಂಡೇಶ್ವರಿ: 2,595 ಕೃಷ್ಣರಾಜ: 1,436 ಚಾಮರಾಜ: 2,374 ನರಸಿಂಹರಾಜ: 2,667 ವರುಣ: 3,218 ತಿ.ನರಸೀಪುರ: 3,100 ವಿಶೇಷ ಚೇತನ ಮತದಾರರಿದ್ದಾರೆ.

ಮತ್ತಷ್ಟು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಇಲ್ಲಿ ಕ್ಲಿಕ್ ಮಾಡಿ

Published On - 7:39 am, Fri, 7 April 23

ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ನ್ಯೂ ಈಯರ್ ರೆವೆಲ್ಲರ್​​ಗಳ ಅಮಲಿನ ಹಾವಭಾವಗಳು ನಗೆ ಹುಟ್ಟಿಸುವಂತಿದ್ದವು!
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಗುಂಡಿನ ಮತ್ತೇ ಗಮ್ಮತ್ತು, ಗೆಳೆಯ ಹೊತ್ತೊಯ್ಯದಿದ್ದರೆ ಕಾದಿತ್ತು ಆಪತ್ತು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
ಕಂಠಮಟ್ಟ ಕುಡಿದು ರಸ್ತೆಯಲ್ಲಿ ಓಲಾಡುತ್ತಇತರರ ಕಣ್ಣಿಗೆ ಆಹಾರವಾದ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
New Year Party: ಕೋರಮಂಗಲದಲ್ಲಿ ಮದ್ಯದ ಮತ್ತಲ್ಲಿ ತೂರಾಡಿದ ಯುವಕ ಯುವತಿಯರು
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಹೊಸ ವರ್ಷಾಚರಣೆಗೆ ಮೈಸೂರಿನಲ್ಲಿ ಯುವತಿಯರ ಮಸ್ತ್ ಡ್ಯಾನ್ಸ್: ವಿಡಿಯೋ ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಮೂರು ತಿಂಗಳು ದೂರ ಇದ್ದ ಅಕ್ಕನ ಮರೆತ ತಮ್ಮ; ಮೋಕ್ಷಿತಾ ಕಣ್ಣೀರು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ಸಂಖ್ಯಾ ವರ್ಷದ ಆಚರಣೆ ವಿಧಾನ ಹೇಗಿರಬೇಕು ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಹೊಸ ವರ್ಷದ ಮೊದಲ ದಿನ ಹೇಗಿದೆ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ವೇಳೆ ಅಸಭ್ಯ ವರ್ತನೆ: ಜನರಿಂದ ಧರ್ಮದೇಟು
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ
ಗುಡ್​ಬೈ 2024: ವೆಲ್​ಕಮ್​ 2025, ಜನರ ಜೋಶ್ ನೋಡಿ