ಬೆಂಗಳೂರು: ಕಾಂಗ್ರೆಸ್‌ನ 135 ಅಭ್ಯರ್ಥಿಗಳ ಮೊದಲ ಪಟ್ಟಿ (Congress Candidates First Lift) ನಾಳೆಯೇ(ಮಾ.17) ಹೊರಬೀಳುವ ಸಾಧ್ಯತ ಇದೆ. ಇದಕ್ಕೆ ಪೂರಕವೆಂಬತೆ ಎಂಬಂತೆ ಸ್ಕ್ರೀನಿಂಗ್ ಕಮಿಟಿಯಿಂದ ಹೈಕಮಾಂಡ್‌ಗೆ ಕಳುಹಿಸಲಾಗಿರುವ ಅಭ್ಯರ್ಥಿಗಳ ಪಟ್ಟಿ ಟಿವಿ9ಗೆ ಲಭ್ಯವಾಗಿದೆ. ಈ ಪಟ್ಟಿಯಲ್ಲಿ 66 ಕ್ಷೇತ್ರಗಳಿಗೆ ಸಿಂಗಲ್ ಹೆಸರು ಹಾಕಿ ಲಿಸ್ಟ್ ಕಳುಹಿಸಲಾಗಿದೆ. ಬಹುತೇಕ 66 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ತಲೆ ಬಿಸಿ ಇಲ್ಲ. ಈ ಪಟ್ಟಿಗೆ ಕಾಂಗ್ರೆಸ್ ಕೇಂದ್ರ ಚುನಾವಣಾ ಸಮಿತಿ (Congress’s Central Election Committee (CEC) ಗ್ರೀನ್ ಸಿಗ್ನಲ್ ನೀಡಿದರೆ ಮೊದಲ ಹಂತದಲ್ಲಿ 135 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಸಾಧ್ಯತೆ ಇದೆ. ಇನ್ನುಳಿದ 89 ಕ್ಷೇತ್ರಗಳಲ್ಲಿ ಎರಡೆರಡು ಹೆಸರು ಶಿಫಾರಸು ಮಾಡಲಾಗಿದೆ. ಈ ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ಕಾಂಗ್ರೆಸ್ ಪಾಲಿಗೆ ಚಾಲೆಂಜಿಂಗ್ ಕೆಲಸವಾಗಿದೆ. ಹೆಚ್ಚು ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಈಗಾಗಲೇ ಸಂಧಾನ ನಡೆಸುತ್ತಿದ್ದಾರೆ. ಸುಮಾರು 10ರಿಂದ 12 ಕ್ಷೇತ್ರಗಳಲ್ಲಿ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದ ಕೆಲ ಕ್ಷೇತ್ರಗಳ ಟಿಕೆಟ್ ಹಂಚಿಕೆ ಕಾಂಗ್ರೆಸ್‌ಗೆ ದೊಡ್ಡ ಸವಾಲ್ ಆಗಿ ಪರಿಣಮಿಸಿದ್ದು, ಅದಕ್ಕಾಗಿ ಹೈಕಮಾಂಡ್ ಮೊರೆ ಹೋಗಿದ್ದಾರೆ. ನಾಳೆ ದೆಹಲಿಯಲ್ಲಿ ಕಾಂಗ್ರೆಸ್ ಚುನಾವಣಾ ಸಮಿತಿ ಸಭೆ ಬಳಿಕ ಕೆಲ ಅಭ್ಯರ್ಥಿ ಬದಲಾಗುವ ಸಾಧ್ಯತೆಯೂ ಇದೆ. ಹಾಗಾದ್ರೆ ಸ್ಕ್ರೀನಿಂಗ್ ಕಮಿಟಿ ಯಾವ್ಯಾವ ಕ್ಷೇತ್ರಕ್ಕೆ ಸಿಂಗಲ್ ಹೆಸರು ಶಿಫಾರಸು ಮಾಡಿದೆ? ಯಾವ್ಯಾವ ಕ್ಷೇತ್ರದಲ್ಲಿ ಡಬಲ್ ಹೆಸರು ಶಿಫಾರಸು ಮಾಡಲಾಗಿದೆ? ಎನ್ನುವ ಪಟ್ಟಿ ಈ ಕೆಳಗಿನಂತಿದೆ.
89 ಕ್ಷೇತ್ರಗಳಿಗೆ ಇಬ್ಬರ ಹೆಸರನ್ನ ಶಿಫಾರಸು ಮಾಡಲಾಗಿದೆ. ಇನ್ನೂ 40-50 ಕ್ಷೇತ್ರ ಇನ್ನೂ ಕಗ್ಗಂಟಾಗಿದ್ದರೆ, 10-12 ಕ್ಷೇತ್ರದಲ್ಲಿ ಸಂಧಾನ ಸಕ್ಸಸ್ ಆಗಿದೆ. ಉಳಿದ ಕ್ಷೇತ್ರಗಳ ಸಂಧಾನ ನಡೆಯುತ್ತಿದೆ. ಹಾಗಾದ್ರೆ, ಯಾವುವು ಕ್ಷೇತ್ರ..? ನಾಳೆ ಇದೆಲ್ಲವನ್ನೂು ಅಳೆದು ತೂಗಿ 135 ಅಭ್ಯರ್ಥಿಗಳ ಹೆಸರು ಫೈನಲ್ ಆಗುವ ಸಾಧ್ಯತೆ ಇದೆ.
ಬಸವನಗುಡಿ- ಯುಬಿ ವೆಂಕಟೇಶ್, ರಾಜಾಜಿನಗರ- ಪುಟ್ಟಣ್ಣ, ಸೊರಬ – ಮಧು ಬಂಗಾರಪ್ಪ, ಚಿತ್ರದುರ್ಗ – ವೀರೇಂದ್ರ ಪಪ್ಪಿ, ಹಿರಿಯೂರು -ಸುಧಾಕರ್, ಹಿರೇಕೆರೂರು – ಯುಬಿ ಬಣಕಾರ್, ವಿರಾಜಪೇಟೆ – ಪೊನ್ನಣ್ಣ, ರಾಮನಗರ – ಇಕ್ಬಾಲ್ ಹುಸೇನ್, ಮಾಗಡಿ – ಬಾಲಕೃಷ್ಣ, ಹೊಸಕೋಟೆ- ಶರತ್ ಬಚ್ಚೇಗೌಡ, ಚಿಂತಾಮಣಿ – ಎಂಸಿ ಸುಧಾಕರ್, ಚಿಕ್ಕಬಳ್ಳಾಪುರ – ಕೊತ್ತೂರ್ ಮಂಜುನಾಥ್, ಟಿ. ನರಸಿಪುರ – ಸುನಿಲ್ ಬೋಸ್, ನಿಪ್ಪಾಣಿ – ಕಾಕಾಸಾಹೇಬ್ ಪಾಟೀಲ್, ಹುಕ್ಕೇರಿ – ಎ.ಬಿ ಪಾಟೀಲ್ , ಗೋಕಾಕ್ – ಅಶೋಕ್ ಪೂಜಾರಿ, ಹುನಗುಂದ – ವಿಜಯಾನಂದ ಕಾಶಪ್ಪನವರ್, ಮುದ್ದೇಬಿಹಾಳ – ಸಿ.ಎಸ್ ನಾಡಗೌಡ, ರಾಯಚೂರು – ಎನ್.ಎಸ್ ಬೋಸರಾಜ್, ಕನಕಗಿರಿ – ಶಿವರಾಜ್ ತಂಗಡಗಿ , ಯಲಬುರ್ಗಾ – ಬಸವರಾಜ್ ರಾಯರೆಡ್ಡಿ, ಕಾರವಾರ – ಸತೀಶ್ ಸೈಲ್, ಭಟ್ಕಳ – ಮಂಕಾಳ ವೈದ್ಯ, ಹಾನಗಲ್ – ಶ್ರೀನಿವಾಸ್ ಮಾನೆ, ಬೈಂದೂರು – ಗೋಪಾಲ್ ಪೂಜಾರಿ, ಕೋಲಾರ – ಸಿದ್ದರಾಮಯ್ಯ, ಕಾಪು – ವಿನಯ್ ಕುಮಾರ್ ಸೊರಕೆ, ಕಡೂರು – ವೈಎಸ್‌ವಿ ದತ್ತಾ.
ಹೊಳಲ್ಕೆರೆ – ಸವಿತಾ ರಘು/ ಆಂಜನೇಯ, ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್/ ಮಂಜುನಾಥ್ ಗೌಡ, ಬಳ್ಳಾರಿ ಸಿಟಿ – ಅಲ್ಲಂ ಪ್ರಶಾಂತ್/ ಅನಿಲ್ ಲಾಡ್, ಶಿಗ್ಗಾಂವಿ – ಅಜಂಪೀರ್ ಖಾದ್ರಿ/ ಸೋಮಣ್ಣ ಬೇವಿನಮರದ, ಗಂಗಾವತಿ – ಇಕ್ಬಾಲ್ ಅನ್ಸಾರಿ/ ಎಚ್.ಆರ್ ಶ್ರೀನಾಥ್, ಕಲಬುರಗಿ ಗ್ರಾಮೀಣ – ರೇವುನಾಯಕ ಬೆಳಮಗಿ/ ವಿಜಯಕುಮಾರ್, ತೇರದಾಳ್ – ಉಮಾಶ್ರೀ/ ಮಲ್ಲೇಶಪ್ಪ, ಬಾಗಲಕೋಟ – ಎಚ್ ವೈ ಮೇಟಿ/ ದೇವರಾಜ್ ಪಾಟೀಲ್, ಬೆಳಗಾವಿ ಉತ್ತರ – ಫೀರೋಜ್ ಸೇಠ್/ ಆಸೀಫ್ ಸೇಠ್, ಕುಡಚಿ – ಶ್ಯಾಮ್ ಭೀಮ್ ಘಾಟ್ಗೆ/ ಮಹೇಂದ್ರ ತಮ್ಮಣ್ಣ, ಕಾಗವಾಡ – ರಾಜೂ ಕಾಗೆ/ ದಿಗ್ವಿಜಯ್ ದೇಸಾಯಿ, ಅಥಣಿ – ಗಜಾನನ್ ಮಂಗಸೂಳಿ/ ಶ್ರೀಕಾಂತ್ ಪೂಜಾರಿ, ನಂಜನಗೂಡು – ಮಹದೇವಪ್ಪ/ ದ್ರುವನಾರಾಯಣ(ದರ್ಶನಗೆ ಫೈನಲ್), ಚಾಮುಂಡೇಶ್ವರಿ – ಮರಿಗೌಡ/ ಚಂದ್ರಶೇಖರ್, ಮಂಗಳೂರು ದಕ್ಷಿಣ – ಐವಾನ್ ಡಿಸೋಜಾ/ ಜೆ ಆರ್ ಲೋಬೋ, ಬೆಳ್ತಂಗಡಿ- ರಕ್ಷಿತ್ / ಶಿವರಾಂ, ಬೆಂಗಳೂರು ದಕ್ಷಿಣ-ಆರ್ ಕೆ ರಮೇಶ್/ ಸುಷ್ಮಾ ರಾಜಗೋಪಾಲ್, ದಾಸರಹಳ್ಳಿ- ಕೃಷ್ಣಮೂರ್ತಿ/ ಸಿ.ಎಂ ಧನಂಜಯ, ಕಲಘಟಗಿ – ಸಂತೋಷ್ ಲಾಡ್/ ನಾಗರಾಜ್ ಚಬ್ಬಿ
ಕುಂದಗೋಳ – ಕುಸುಮಾ ಶಿವಳ್ಳಿ, ಶಾಸಕಿ/ ಚಂದ್ರಶೇಖರ್ ಜತ್ತಲ್, ದೊಡ್ಡಬಳ್ಳಾಪುರ – ವೆಂಕಟರಮಣಯ್ಯ, ಶಾಸಕ/ ಬಿಸಿ ಆನಂದ್, ಪಾವಗಡ – ವೆಂಕಟರಮಣಪ್ಪ, ಶಾಸಕ/ಎಚ್.ವಿ ವೆಂಕಟೇಶ್, ಲಿಂಗಸುಗೂರು – ಡಿಎಸ್ ಹೂಲಗೇರಿ/ರುದ್ರಯ್ಯ.
Published On - 3:39 pm, Thu, 16 March 23