ಅನುಕಂಪದ ಅಲೆಯ ಅಬ್ಬರ, ಟಿಕೆಟ್ ರೇಸ್‌ನಿಂದ ಹಿಂದೆ ಸರಿದ ಹೆಚ್.ಸಿ.ಮಹದೇವಪ್ಪ ಭಾವನಾತ್ಮಕ ಪೋಸ್ಟ್​ಗೆ ಭಾರೀ ಮೆಚ್ಚುಗೆ

ಗೆಳೆಯನ ಪುತ್ರನಿಗಾಗಿ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕ್ಷೇತ್ರ ತ್ಯಾಗ ಮಾಡಿದ್ದಾರೆ. ಇದರೊಂದಿಗೆ ಚುಣಾವಣೆ ಹೊತ್ತಲ್ಲೇ ಶುರುವಾಗಿದ್ದ ನಂಜನಗೂಡು ಟಿಕೆಟ್ ಸಮರ ಸುಖಾಂತ್ಯ ಕಂಡಿದೆ. ಇನ್ನು ದರ್ಶನ್ ಜೊತೆಗೆ ನಾವೆಲ್ಲರೂ ನಿಲ್ಲೋಣ ಎಂದ ಮಹದೇವಪ್ಪ ಕರೆ ಕೊಟ್ಟಿದ್ದಾರೆ.

ಅನುಕಂಪದ ಅಲೆಯ ಅಬ್ಬರ, ಟಿಕೆಟ್ ರೇಸ್‌ನಿಂದ ಹಿಂದೆ ಸರಿದ ಹೆಚ್.ಸಿ.ಮಹದೇವಪ್ಪ ಭಾವನಾತ್ಮಕ ಪೋಸ್ಟ್​ಗೆ ಭಾರೀ ಮೆಚ್ಚುಗೆ
ಹೆಚ್.ಸಿ.ಮಹದೇವಪ್ಪ
Follow us
ರಮೇಶ್ ಬಿ. ಜವಳಗೇರಾ
| Updated By: Digi Tech Desk

Updated on:Mar 16, 2023 | 3:45 PM

ಮೈಸೂರು: ಧ್ರುವನಾರಾಯಣ ನಿಧನದ ಬೆನ್ನಲ್ಲೇ ಕಾಂಗ್ರೆಸ್ ಪಾಳಯದಲ್ಲಿ ನಂಜನಗೂಡು(Nanjangud) ಟಿಕೆಟ್​ಗೆ ಕಿತ್ತಾಟ ಭುಗಿಲೆದ್ದಿತ್ತು. ಧ್ರುವನಾರಾಯಣ ಪುತ್ರ ಹಾಗೂ ಹೆಚ್.ಸಿ.ಮಹದೇವಪ್ಪ(Dr HC Mahadevappa) ನಡುವೆ ಸಮರ ಜೋರಾಗಿತ್ತು. ಧ್ರುವ ಪುತ್ರನಿಗೆ ಟಿಕೆಟ್ ನೀಡುವಂತೆ ಬೆಂಬಲಿಗರು ಬಿಗಿಪಟ್ಟು ಹಿಡಿದಿದ್ದರು. ಮತ್ತೊಂದೆಡೆ ಹೆಚ್.ಸಿ ಮಹದೇವಪ್ಪ ಟಿಕೆಟ್ ಗಾಗಿ ಲಾಬಿ ನಡೆಸುತ್ತಿದ್ದರು. ಆದ್ರೆ, ಅಂತಿಮವಾಗಿ ಮಹದೇವಪ್ಪ ನಂಜನಗೂಡು ಅಖಾಡದಿಂದ ಹಿಂದೆ ಸರಿದಿದ್ದಾರೆ. ಇದರೊಂದಿಗೆ ಚುಣಾವಣೆ ಹೊತ್ತಲ್ಲೇ ಶುರುವಾಗಿದ್ದ ನಂಜನಗೂಡು ಟಿಕೆಟ್ ಸಮರ ಸುಖಾಂತ್ಯ ಕಂಡಿದೆ. ಈ ಮೂಲಕ ನಂಜನಗೂಡು ಕಾಂಗ್ರೆಸ್​ ಟಿಕೆಟ್​​  ಧ್ರುವನಾರಾಯಣ್ ಪುತ್ರ ದರ್ಶನ್‌ಗೆ (Darshan Dhruvanarayan) ಪಕ್ಕಾ ಆದಂತಾಯ್ತು. ಇನ್ನು ಮಹದೇವಪ್ಪ ಅವರ ಈ ನಡೆಯಿಂದ ಮೆಚ್ಚುಗೆಗೆ ಕಾರಣವಾಗಿದೆ.

ಇದನ್ನೂ ಓದಿ: ಧ್ರುವನಾರಾಯಣ ಹಠಾತ್ ನಿಧನ, ನಂಜನಗೂಡು ಕಾಂಗ್ರೆಸ್​ ಟಿಕೆಟ್ ಯಾರಿಗೆ? ವ್ಯಾಪಕ ಚರ್ಚೆ

ಧ್ರುವನಾರಾಯಣ್ ಅವರ ಹಠಾತ್ ನಿಧನದ ಪರಿಣಾಮ ಕ್ಷೇತ್ರದಲ್ಲಿ ಧ್ರುವನಾರಾಯಣ್ ಕುಟುಂಬದ ಪರ ಅನುಕಂಪದ ಅಲೆ ದೊಡ್ಡ ಮಟ್ಟದಲ್ಲಿ ಎದ್ದಿದೆ. ಧ್ರುವನಾರಾಯಣ್ ಪುತ್ರ ದರ್ಶನ್‌ಗೆ ಟಿಕೆಟ್ ಕೊಡಬೇಕೆಂಬ ಕೂಗು ಬಹು ಜೋರಾಗಿಯೆ ಕೇಳಿ ಬರುತ್ತಿದೆ. ಯಾವಾಗ ಧ್ರುವನಾರಾಯಣ್ ಅವರ ಪುತ್ರನ ಪರ ಕೂಗು ಹೆಚ್ಚಾಯ್ತೋ, ಅನುಕಂಪದ ಅಲೆ ಎಚ್ಚಾಗುತ್ತಿದ್ದಂತೆಯೇ ಎಚ್ಚೆತ್ತುಕೊಂಡ ಮಹದೇವಪ್ಪ, ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಮಾಜಿ ಸಂಸದ ಆರ್‌. ಧ್ರುವನಾರಾಯಣ ಅವರ ಪುತ್ರ ದರ್ಶನ್‌ ಅವರಿಗೆ ಟಿಕೆಟ್‌ ನೀಡುವಂತೆ ಮನವಿ ಮಾಡಿದ್ದಾರೆ. ಈ ಮೂಲಕ ಟಿಕೆಟ್ ರೇಸ್‌ನಿಂದ ಹೊರ ನಡೆದಿದ್ದಾರೆ.

ಬುಧವಾರ ಸಂಜೆ ಮೈಸೂರಿನ ವಿಜಯನಗರದಲ್ಲಿರುವ ಧ್ರುವನಾರಾಯಣ ಅವರ ನಿವಾಸಕ್ಕೆ ಭೇಟಿ ನೀಡಿ, ಪುತ್ರ ದರ್ಶನ್‌ಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಹದೇವಪ್ಪ ಪುತ್ರ ಸುನಿಲ್‌ ಬೋಸ್‌ ಕೂಡ ಇದ್ದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಾ. ಮಹದೇವಪ್ಪ, ನನ್ನ ಸಂಪೂರ್ಣ ಬೆಂಬಲ ದರ್ಶನ್‌ಗೆ ಇದೆ. ನನ್ನ ಆತ್ಮಸಾಕ್ಷಿ ಪ್ರಕಾರ ಈ ನಿರ್ಧಾರ ಮಾಡಿದ್ದೇನೆ ಎಂದು ತಮ್ಮ ರಾಜಕೀಯ ನಿಲುವು ಪ್ರಕಟಿಸಿದರು.

ದರ್ಶನ್ ಜೊತೆಗೆ ನಾವೆಲ್ಲರೂ ನಿಲ್ಲೋಣ ಎಂದ ಮಹದೇವಪ್ಪ

ಇನ್ನು ಈ ಬಗ್ಗೆ ಫೇಸ್​ಬುಕ್​ನಲ್ಲಿ ಮಹದೇವಪ್ಪ ಸುದೀರ್ಘವಾಗಿ ಬರೆದುಕೊಂಡಿದ್ದು, ದರ್ಶನ್ ಜೊತೆಗೆ ನಾವೆಲ್ಲರೂ ಬೆಂಬಲವಾಗಿ ನಿಲ್ಲೋಣ ಎಂದು ತಮ್ಮ ಅಭಿಮಾನಿಗಳಿಗೆ ಕರೆ ಕೊಟ್ಟಿದ್ದಾರೆ. ಇದರೊಂದಿಗೆ ಈ ಭಾವನಾತ್ಮಕ ಪೋಸ್ಟ್ ಮೆಚ್ಚುಗೆಗೆ ಕಾರಣವಾಗಿದೆ.

ಬಿ ರಾಚಯ್ಯನವರ ಶಿಷ್ಯನಾಗಿ 40 ವರ್ಷಗಳ ಸಾರ್ವಜನಿಕ ಬದುಕನ್ನು ಪೂರೈಸಿದ ಈ ಸಂದರ್ಭದಲ್ಲಿ ನಮ್ಮ ಗುರುಗಳು ಮತ್ತು ಈ ರಾಜ್ಯದ ದಲಿತ ಸಂಘಟನೆಗಳು ಹೇಳಿಕೊಟ್ಟ ಪಾಠವನ್ನು ಅಕ್ಷರಶಃ ಪಾಲಿಸಿದ್ದೇನೆ. ನನ್ನ ದೈನಂದಿನ ಓದು ಬರಹದ ಜೊತೆಗೆ ನನ್ನದೇ ಆದ ಕೆಲವು ಬದುಕಿನ ಅನುಭವಗಳ ಮೂಲಕ ರಾಜ್ಯದ ಅಭಿವೃದ್ಧಿಗಾಗಿ ಮತ್ತು ಸಾಮಾಜಿಕ ನ್ಯಾಯದ ಈಡೇರಿಕೆಗಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ಇದರ ಪರಿಣಾಮವೇ ಕರ್ನಾಟಕದಲ್ಲಿ 40 ಸಾವಿರ ಕಿಲೋಮೀಟರ್ ರಸ್ತೆಗಳ ನಿರ್ಮಾಣ ಹಾಗೂ ಶೋಷಿತ ಸಮುದಾಯಗಳ ಪರವಾಗಿ ಮಹತ್ವದ ಕಾಯ್ದೆಗಳನ್ನು ಜಾರಿಗೊಳಿಸುವುದಕ್ಕೆ ನನಗೆ ಸಾಧ್ಯವಾಗಿದೆ. ನನಗೆ ನೆನಪಿರುವಂತೆ ನಾನು ಯಾರನ್ನೂ ದ್ವೇಷ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ. ಒಬ್ಬರನ್ನು ವೈಯಕ್ತಿಕವಾಗಿ ನಿಂದಿಸುವುದಾಗಲೀ ಅಥವಾ ತೇಜೋವಧೆ ಮಾಡುವ ಕೆಲಸವನ್ನಾಗಲೀ ನಾನು ಮಾಡಿಲ್ಲ. ಇದು ನನ್ನನ್ನು ಸರಿಯಾಗಿ ಬಲ್ಲ ಎಲ್ಲರಿಗೂ ಗೊತ್ತು. ಆದರೆ ಮೊನ್ನೆ ನನ್ನ ಸಹೋದ್ಯೋಗಿ ಮಿತ್ರ ದ್ರುವ ನಾರಾಯಣ್ ಅವರು ಹಠಾತ್ತನೆ ಸಾವನ್ನಪ್ಪಿದ ಸುದ್ದಿ ಕೇಳಿದಾಗ ನನಗೆ ತೀವ್ರ ಅಘಾತವಾಯಿತು. ಆ ಅಘಾತವನ್ನು ಸುಧಾರಿಸಿಕೊಳ್ಳಲು ನನಗೆ ಈಗಲೂ ಸಾಧ್ಯವಾಗುತ್ತಿಲ್ಲ.

ಆದರೆ ಅದಾದ ಮಾರನೇ ದಿನ ಯಾರೋ ಕೆಲವರು ಈ ಸಾವಿಗೆ ಮಹದೇವಪ್ಪನವರೇ ಕಾರಣ ಎಂದು ಸುದ್ದಿ ಹರಡಿಸಲು ಶುರು ಮಾಡಿದಾಗ ನನಗೆ ಅತೀವವಾದ ಬೇಸರವಾಯಿತು. ಯಾವುದೋ ಕೆಲಸದ ಮೇಲೆ ಹೊರಗೆ ಹೊರಟಿದ್ದವನು ಕೂಡಲೇ ಅದನ್ನು ರದ್ದು ಮಾಡಿ ನನ್ನ ಕೋಣೆಯೊಳಗೆ ಕೂತು, ನಾನು ಸಾರ್ವಜನಿಕವಾಗಿ ಬೆಳೆದು ಬಂದ ಹಾದಿಯ ಬಗ್ಗೆ ತೀವ್ರವಾಗಿ ಯೋಚಿಸಿದೆ. ನಮ್ಮ ಗುರುಗಳಾದ ಬಿ ರಾಚಯ್ಯನವರ ಮಾತುಗಳು, ಸಾಮಾಜಿಕ ಚಳುವಳಿಗಳು, ಬಾಬಾ ಸಾಹೇಬರ ವಿಚಾರ ಧಾರೆಗಳು, ರಾಜ್ಯದ ಜನರ ಅನುಕೂಲಕ್ಕಾಗಿ ಸಿದ್ದರಾಮಯ್ಯ ಅವರೊಂದಿಗೆ ಮಾಡಿದ ಮಹತ್ವದ ಚರ್ಚೆಗಳು ನನ್ನ ಮನಸ್ಸಿನಲ್ಲಿ ಮೂಡಿದವು. ಇದೇ ವೇಳೆ ನನ್ನ ತಾಯಿ ಕೂಡಾ ಬಹಳ ನೆನಪಾದರು.

ಅವರು ಮಾಡುತ್ತಿದ್ದ ಆರೋಪಗಳನ್ನು ಕೇಳಿದಾಗ ನನಗೆ ಸಾವಿನಲ್ಲೂ ಹೀಗೆ ರಾಜಕೀಯ ಮಾಡುತ್ತಿದ್ದಾರಲ್ಲಾ, ಒಂದು ವೇಳೆ ನನಗೇ ಏನಾದರೂ ಆಗಿದ್ದರೆ ಇವರು ನಮ್ಮಂತೆ ನೋವು ಪಡುತ್ತಿದ್ದರಾ ಇಲ್ಲವೇ ” ಹೋದರೆ ಹೋಗಲಿ” ಎಂದು ಸುಮ್ಮನಾಗುತ್ತಿದ್ದರಾ ಎಂದು ನನಗೆ ಯೋಚನೆ ಶುರುವಾಯಿತು. ಮತ್ತೆ ಇನ್ನೊಂದು ರೀತಿಯಲ್ಲಿ ಬೇಸರವೂ ಆಯಿತು. ವ್ಯಕ್ತಿಯೊಬ್ಬನ ಪ್ರಾಣಕ್ಕಿಂತಲೂ ರಾಜಕೀಯ ಮತ್ತು ಅಧಿಕಾರವು ಹೆಚ್ಚೆಂದು ನಾನು ಹಿಂದೆಯೂ ಅಂದುಕೊಂಡಿಲ್ಲ, ಈಗಲೂ ಅಂದುಕೊಂಡಿಲ್ಲ ಮುಂದೆಯೂ ಅಂದುಕೊಳ್ಳುವುದಿಲ್ಲ. ಇನ್ನು ನಂಜನಗೂಡು ವಿಷಯಕ್ಕೆ ಬರುವುದಾದರೆ ಅಲ್ಲಿ ಹಿಂದೆ ಉಪ ಚುನಾವಣೆ ಸಂದರ್ಭವು ಏರ್ಪಟ್ಟಾಗ ನಮ್ಮ ಸುನಿಲ್ ಬೋಸ್ ಗೆ ಪಕ್ಷ ಸಂಘಟನೆ ಮಾಡಿ ಎಂದು ಆದೇಶ ಬಂದಿತ್ತು, ಅದರಂತೆಯೇ ಅವರು ಪಕ್ಷ ಸಂಘಟನೆಯಲ್ಲಿದ್ದಾಗ ಆತನಿಗೇ ಟಿಕೆಟ್ ನೀಡಿ ಎಂಬ ಕೂಗೂ ಸಹ ಇತ್ತು. ಆದರೆ ನಂತರ ಕಾಂಗ್ರೆಸ್ ಹೈಕಮಾಂಡ್ ನವರು ನಮ್ಮ ಕಳಲೆ ಕೇಶವಮೂರ್ತಿ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿದಾಗ ಆತ ಯಾವುದೇ ಬೇಸರ ಮಾಡಿಕೊಳ್ಳದೇ ಪಕ್ಷ ಸಂಘಟನೆಯಲ್ಲಿ ತೊಡಗಿ ಗೆಲುವಿಗಾಗಿ ಶ್ರಮಿಸಿದೆವು.

ಇನ್ನು ಆ ಸಂದರ್ಭದ ಓಡಾಟದಲ್ಲಿ ನನ್ನ ಕಾಲಿನ ಹಿಮ್ಮಡಿಗೆ ಬಲವಾಗಿ ಏಟು ಬಿದ್ದು ನಾನು ಬದುಕಿದ್ದೇ ಹೆಚ್ಚು ಎನ್ನುವಂತಹ ಸ್ಥಿತಿಗೆ ತಲುಪಿದ್ದೆ. ಈಗಲೂ ಅದರ ಪರಿಣಾಮವನ್ನು ನಾನು ಅನುಭವಿಸುತ್ತಿದ್ದೇನೆ. ಇದಾದ ಬಳಿಕ ಅಲ್ಲಿ ಕಳಲೆ ಕೇಶವಮೂರ್ತಿ ಅವರನ್ನು ನಮ್ಮ ಸಂಘಟಿತ ಹೋರಾಟದ ಮೂಲಕ ಗೆಲ್ಲಿಸಿಕೊಂಡೆವು. ಈ ಸಂಗತಿಯು ಕಳಲೆ ಕೇಶವಮೂರ್ತಿ ಅವರಿಗೂ ಸಹ ಚೆನ್ನಾಗಿ ಗೊತ್ತು. ಈ ಉಪ ಚುನಾವಣಾ ವರ್ಷದಲ್ಲಿ ನಂಜನಗೂಡು ಕ್ಷೇತ್ರದ ಅಭಿವೃದ್ಧಿಗಾಗಿ ಸುಮಾರು ಏಳು ನೂರು ಕೋಟಿಗಳನ್ನು ನಮ್ಮ ಸರ್ಕಾರದ ವತಿಯಿಂದ ನೀಡಲಾಗಿ ಇಡೀ ಕ್ಷೇತ್ರವೇ ದೊಡ್ಡ ಮಟ್ಟದಲ್ಲಿ ಅಭಿವೃದ್ಧಿ ಕಾಣುವಂತಾಯಿತು. ಈ ವೇಳೆ ಜಾತಿ ಧರ್ಮ ವ್ಯಕ್ತಿಯ ಬೇಧ ನೋಡದೇ ಇಡೀ ಕ್ಷೇತ್ರವೇ ಹೊಸ ರೂಪ ಪಡೆದುಕೊಂಡಂತೆ ಅಭಿವೃದ್ಧಿ ಕಂಡಿತು.

ಇದಾದ ಬಳಿಕ ಕ್ರಮೇಣ ಅಲ್ಲಿಯ ಜನರು ” ಸರ್ ನೀವು ಮುಂದಿನ ಬಾರಿ ನಮ್ಮ ಕ್ಷೇತ್ರಕ್ಕೆ ಬನ್ನಿ” ಎಂದು ಅಲ್ಲಿನ ಹಲವು ಸಮುದಾಯಗಳ ಮುಖಂಡರು, ನನ್ನನ್ನು ಆಗಾಗ್ಗೆ ಬಂದು ವಿನಂತಿಸಿದರು. ಅಲ್ಲಿಯವರೆಗೆ ನನಗೆ ಆ ಯೋಚನೆಯೇ ಇರಲಿಲ್ಲ. ನಂತರದ ಬೆಳವಣಿಗೆಯಲ್ಲಿ ನಂಜನಗೂಡು ನಮ್ಮೂರೇ ಆಗಿದ್ದು, ಜನರೂ ಬಯಸಿದ್ದರಿಂದ ಅಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ನಾನು ಮಾಡಿದ್ದೆ, ಅದೂ ಬಹಳ ತುಂಬಾ ಹಿಂದೆಯೇ. ಆದರೆ ನಮ್ಮ ಸ್ನೇಹಿತರಾದ ಧೃವ ನಾರಾಯಣ್ ಅವರ ನಿಧನದ ಸಂದರ್ಭದಲ್ಲಿ ಇದು ಅನಾರೋಗ್ಯಕರ ಸ್ಪರ್ಧೆಯ ರೂಪದ ಮೂಲಕ ದ್ವೇಷದ ಮಾತುಗಳಿಗೂ ಸಹ ತಿರುಗಿದೆ. ಇಂತಹ ಮಾತುಗಳಲ್ಲಿ ಕೆಲವರ ಸಾಂದರ್ಭಿಕ ರಾಜಕೀಯದ ದುರ್ಲಾಭ ಪಡೆಯುವ ಹುನ್ನಾರವೂ ಸೇರಿದ್ದು ನನ್ನಲ್ಲಿ ಅನಿರೀಕ್ಷಿತವಾದ ನೋವನ್ನು ಉಂಟು ಮಾಡಿದೆ. ನಮಗೂ ಒಂದು ಮನಸ್ಸು ಎಂಬುದು ಇರುತ್ತದೆ ಅಲ್ಲವೇ? ಅದನ್ನು ಇವರೆಲ್ಲಾ ಗಮನಿಸಬೇಕಿತ್ತು. ಅದೇನೇ ಇರಲಿ ಈ ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಈ ಹೊಲಸು ರಾಜಕೀಯಕ್ಕೂ ಮೀರಿದ ನೋವಿನಲ್ಲಿರುವ ನನ್ನ ಮಗನಂತಹ ದರ್ಶನ್ ಜೊತೆಗೆ ಈ ವೇಳೆ ನಾವೆಲ್ಲರೂ ಬೆಂಬಲವಾಗಿ ನಿಲ್ಲೋಣ ಎಂದು ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.

ಮಹದೇವಪ್ಪ ಅವರ ಈ ನಡೆಗೆ ತ್ಯಾಗಮಯಿ ಅಂತೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ಕಾರಣವಾಗಿದೆ.

Published On - 8:24 am, Thu, 16 March 23

‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ವೀರಸೌಧದಲ್ಲಿ ಗಾಂಧಿ ಪ್ರತಿಮೆ ಅನಾವರಣಗೊಳಿಸಿದ ಸಿದ್ದರಾಮಯ್ಯ, ಡಿಕೆಶಿ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ
ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ: ಸಿಎಂ