AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ 2 ಜಿಲ್ಲೆ ಹೊರತುಪಡಿಸಿ ಉಳಿದ ಎಲ್ಲಾ ಕಡೆ ನಾವು ಅಕೌಂಟ್ ಓಪನ್ ಮಾಡೇ ಮಾಡುತ್ತೇವೆ: ಕುಮಾರಸ್ವಾಮಿ ವಿಶ್ವಾಸ

ದಕ್ಷಿಣ ಕನ್ನಡ, ಉಡುಪಿ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಯಲ್ಲಿ ನಾವು ಅಕೌಂಟ್ ಓಪನ್ ಮಾಡೇ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ 2 ಜಿಲ್ಲೆ ಹೊರತುಪಡಿಸಿ ಉಳಿದ ಎಲ್ಲಾ ಕಡೆ ನಾವು ಅಕೌಂಟ್ ಓಪನ್ ಮಾಡೇ ಮಾಡುತ್ತೇವೆ: ಕುಮಾರಸ್ವಾಮಿ ವಿಶ್ವಾಸ
ಹೆಚ್​ಡಿ ಕುಮಾರಸ್ವಾಮಿ
ರಮೇಶ್ ಬಿ. ಜವಳಗೇರಾ
|

Updated on:Mar 16, 2023 | 12:00 PM

Share

ಹಾಸನ: ಜೆಡಿಎಸ್​ನ ಪಂಚರತ್ನ (JDS Pancharatna Yatra) ಯಾತ್ರೆ ಹಾಸನ (Hassan) ಜಿಲ್ಲೆಗೆ ಪ್ರವೇಶ ಮಾಡಿದ್ದು, ಇಂದು (ಮಾರ್ಚ್​ 16) ಅರಕಲಗೂಡು ಕ್ಷೇತ್ರದ ದೇವರಮುದ್ದನಹಳ್ಲಿ ಗ್ರಾಮಕ್ಕೆ ಆಗಮಿಸಿದೆ. ಈ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್​ಡಿ ಕುಮಾರಸ್ವಾಮಿ(HD Kumaraswamy(, ಚುನಾವಣೆಯ ದಿನಾಂಕ ಸಮೀಪಕ್ಕೆ ಬಂದಿದ್ದೇವೆ. ಈ ರಥಯಾತ್ರೆಯಲ್ಲಿ ಜನತೆಯಿಂದ ಉತ್ತಮ ಸ್ಪಂದನೆ ಸಿಗುತ್ತಿದೆ. ದಕ್ಷಿಣ ಕನ್ನಡ, ಉಡುಪಿ ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಯಲ್ಲಿ ನಾವು ಅಕೌಂಟ್ ಓಪನ್ ಮಾಡೇ ಮಾಡುತ್ತೇವೆ. ಈ ಎರಡು ಜಿಲ್ಲೆಯಲ್ಲಿ ನಮಗೆ ಕಾರ್ಯಕರ್ತ ರ ಕೊರತೆ ಇದೆ. ಇದನ್ನ ಒಪ್ಪಿಕೊಳ್ಳಲೇಬೇಕು ಎಂದರು.

ಇದನ್ನೂ ಓದಿ: ಏ. 23ರ ವರೆಗೆ ನಿಮ್ಮ ಋಣ ಇದೆ, ಅಲ್ಲಿಯವರೆಗೂ ರಾಜೀನಾಮೆ ಕೊಡಲ್ಲ: ಜೆಡಿಎಸ್​ ಬಗ್ಗೆ ಕಡ್ಡಿ ಮುರಿದಂತೆ ಮಾತಾಡಿದ ಶಿವಲಿಂಗೇಗೌಡ

ಎರಡೂ ರಾಷ್ಟ್ರೀಯ ಪಕ್ಷಗಳು ಜನರಲ್ಲಿ ಗೊಂದಲ ಸೃಷ್ಠಿ ಮಾಡಲು ನಕಲಿ ಸಮೀಕ್ಷೆ ಮಾಡಿಸಿದ್ದಾರೆ. ಅದರಲ್ಲಿ ತಮ್ಮ ಸಂಖ್ಯೆ ಹೆಚ್ಚುಮಾಡಿಕೊಂಡು ಜನರಲ್ಲಿ ಗೊಂದಲ ಉಂಟುಮಾಡಿದ್ದಾರೆ. ಆದರೆ ನಿಜವಾದ ಅಂಕಿ ಅಂಶ ಬೇರೆಯೇ ಇದೆ. ನಾನು ಹೋದಲ್ಲೆಲ್ಲ ಜೆಡಿಎಸ್ ಪರ ಬೆಂಬಲ‌ ಕಾಣುತ್ತಿದ್ದೇನೆ. ರಾಜ್ಯ ಬಜೆಟ್ ಕೇವಲ ಪುಸ್ತಕಕ್ಕೆ ಸೀಮಿತವಾಗಲಿದೆ ಅಷ್ಟೇ. ಆದರೆ ಅದರ ಬಗ್ಗೆ ಸುಮ್ಮನೇ ಜಾಹಿರಾತು ಕೊಟ್ಟು ಜನರ ತೆರಿಗೆ ಹಣವನ್ನು ವೇಸ್ಟ್ ಮಾಡುತ್ತಿದ್ದಾರೆ. ಬಿಜೆಪಿಯ ಬೆಳೆವಣಿಗೆಯನ್ನು ನಾನು ಗಮನಿಸುತ್ತಿದ್ದೇನೆ. ಎರಡು ರಾಷ್ಟ್ರೀಯ ಪಕ್ಷಗಳ ಆಂತರಿಗೆ ಬೆಳವಣಿಗೆ ನನಗೆ ಸಂಬಂದ ಇಲ್ಲದಿದ್ದರೂ ಇವರ ಆಂತರಿಕ ಬೆಳವಣಿಗೆ ನಮ್ಮ ಗುರಿ ಮುಟ್ಟಲು ಅದೂ ಸಹಕಾರಿ ಆಗಲಿದೆ. ಇದು ನನ್ನ ರಾಜಕೀಯ ಲೆಕ್ಕಾಚಾರದ ವಿಶ್ಲೇಷಣೆ ಎಂದು ಹೇಳಿದರು.

ಅಶೋಕ ಅವರು ಓಡು ಓಡು ಎಂದು ಹೇಳಿ 20 ಸೀಟ್ ಗೆಲ್ಲಬಹುದು ಎಂದಿದ್ದಾರೆ. ಬಿಜೆಪಿ ನಾಯಕರು ಮೊದಲು ನಿಮ್ಮ ಮನೆಯಲ್ಲಿ ಏನಾಗಿದೆ ನೋಡಿಕೊಳ್ಳಲಿ. ನಿಮ್ಮದು ವಿಶ್ಚಗುರು ಪಕ್ಷ ಅಲ್ಲವೇ ನಮ್ಮನ್ನ ಟೀಕೆ ಮಾಡಲು ಹೋಗಿ ನೀವು 25ಕ್ಕೆ ಇಳಿದುಬಿಟ್ಟೀರಾ ಎಂದು ಚಾಟಿ ಬೀಸಿದರು.

ಮುನಿರತ್ನನಿಗೆ ಒಕ್ಕಲಿಗರ ಬಗ್ಗೆ ಏನು ಗೊತ್ತು. ಸಿನಿಮಾ ತೆಗೆಯುವುದಕ್ಕೆ ಸಂಶೋಧನೆ ಮಾಡಿಸಿಕೊಂಡಿರಬೇಕು, ಅವರಿಗೆ ಸಿನಿಮಾ ತೆಗೆಯಲು ಸಂಶೋದನೆ ಮಾಡಿ‌ಕೊಟ್ಟಿದಾರಾ. ಇತಿಹಾಸದಲ್ಲಿ ನಡೆದ ಘಟನೆ ಇದಲ್ಲ. ಮುನಿರತ್ನನಿಗೆ ಸಿನಿಮಾ ತೆಗೆಯುವುದಕ್ಕೆ ಕಾಲ್ಪನಿಕ ಕಥೆಯಾಗಿ ಅಶ್ವತ್ ಮತ್ತು ಅಶೋಕ್ ನೀಡಿರಬೇಕು. ಸಂಭಾಷಣೆ ಮತ್ತು ಸ್ಕ್ರಿಪ್ಟನ್ನು ಸಿನಿಮಾ ಮಾಡಲಿಕ್ಕಾಗಿ ಮುನಿರತ್ನ ತಯಾರಿಸಿಕೊಂಡಿರಬೇಕು ಎಂದು ಲೇವಡಿ ಮಾಡಿದರು.

ಇನ್ನು ಇದೇ ವೇಳೆ ಮಹಾರಾಷ್ಟ್ರ ಸರ್ಕಾರ ಪುಲೆಯವರ ಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಹೆಚ್​ಡಿಕೆ, ನಮ್ಮ ಭಾಗದ ಹಳ್ಳಿಗೆ ತರಲು ಹೊರಟಿದ್ದಾರೆ. ಇದಕ್ಕೆ ನಾನು ಹೆಚ್ಚು ಮಹತ್ವ ಕೊಡುವುದಿಲ್ಲ. ಅವರಲೇ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ನಮ್ಮ ರಾಜ್ಯ ಧರಿದ್ರ ರಾಜ್ಯ ಅಲ್ಲ, ಅವರ ಸಮಸ್ಯೆ ಅವರು ಸರಿಮಾಡಿಕೊಳ್ಳಲಿ. ಮಹಾರಾಷ್ಟ್ರದ ಬಿಜೆಪಿ ಸರ್ಕಾರದಿಂದ ನಮ್ಮ ನಾಡಿನ ಜನರ ರಕ್ಷಣೆ ಅವಶ್ಯಕತೆ ಇಲ್ಲ. ನಮ್ಮ ರಾಜ್ಯದ ಮೇಲೆ ಅಕ್ಕಪಕ್ಕದ ರಾಜ್ಯಗಳು ಅದರಲ್ಲೂ ಬಿಜೆಪಿ ಆಡಳಿತದ ದಬ್ಬಾಳಿಕೆ ಸರಿಯಲ್ಲ. ಮೊದಲು ಅಲ್ಲಿನ ಸರ್ಕಾರಕ್ಕೆ ಕೇಂದ್ರ ನಾಯಕರು ತಿಳಿ ಹೇಳಲಿ ಎಂದು ಬಿಜೆಪಿ ಹೈಕಮಾಂಡ್​ಗೆ ಟಾಂಗ್ ಕೊಟ್ಟರು.

ಇನ್ನಷ್ಟು ಚುನಾವಣೆ ಹಾಗೂ ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 11:56 am, Thu, 16 March 23