224ರ ಪೈಕಿ 135 ಕ್ಷೇತ್ರಗಳಿಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಸಿದ್ಧ, ಮೊದಲ ಲಿಸ್ಟ್​ನಲ್ಲಿ ಯಾರುಂಟು. ಯಾರಿಲ್ಲ? ಇಲ್ಲಿದೆ ನೋಡಿ

ನಾಳೆ(ಮಾರ್ಚ್ 16) ಕಾಂಗ್ರೆಸ್​ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಯಲಿದ್ದು, ಟಿಕೆಟ್​ ಆಕಾಂಕ್ಷಿಗಳ ಚಿತ್ತ ಇದೀಗ ದೆಹಲಿಯತ್ತ ನೆಟ್ಟಿದೆ, ಇನ್ನು ಸ್ಕ್ರೀನಿಂಗ್ ಕಮಿಟಿಯಿಂದ ಹೈಕಮಾಂಡ್‌ಗೆ ಕಳುಹಿಸಲಾಗಿರುವ ಅಭ್ಯರ್ಥಿಗಳ ಪಟ್ಟಿ ಸೋರಿಕೆಯಾಗಿದ್ದು, 66 ಕ್ಷೇತ್ರಗಳಿಗೆ ಸಿಂಗಲ್ ಹೆಸರು ಹಾಕಿ ಲಿಸ್ಟ್ ಕಳುಹಿಸಲಾಗಿದೆ. ಹಲವು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಲಭ್ಯವಾಗಿದೆ.

224ರ ಪೈಕಿ 135 ಕ್ಷೇತ್ರಗಳಿಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ ಸಿದ್ಧ, ಮೊದಲ ಲಿಸ್ಟ್​ನಲ್ಲಿ ಯಾರುಂಟು. ಯಾರಿಲ್ಲ? ಇಲ್ಲಿದೆ ನೋಡಿ
ಕಾಂಗ್ರೆಸ್​ ಪಕ್ಷದ ಚಿಹ್ನೆ
Follow us
TV9 Web
| Updated By: Digi Tech Desk

Updated on:Mar 16, 2023 | 4:01 PM

ಬೆಂಗಳೂರು: ಕಾಂಗ್ರೆಸ್‌ನ 135 ಅಭ್ಯರ್ಥಿಗಳ ಮೊದಲ ಪಟ್ಟಿ (Congress Candidates First Lift) ನಾಳೆಯೇ(ಮಾ.17) ಹೊರಬೀಳುವ ಸಾಧ್ಯತ ಇದೆ. ಇದಕ್ಕೆ ಪೂರಕವೆಂಬತೆ ಎಂಬಂತೆ ಸ್ಕ್ರೀನಿಂಗ್ ಕಮಿಟಿಯಿಂದ ಹೈಕಮಾಂಡ್‌ಗೆ ಕಳುಹಿಸಲಾಗಿರುವ ಅಭ್ಯರ್ಥಿಗಳ ಪಟ್ಟಿ ಟಿವಿ9ಗೆ ಲಭ್ಯವಾಗಿದೆ.  ಈ ಪಟ್ಟಿಯಲ್ಲಿ 66 ಕ್ಷೇತ್ರಗಳಿಗೆ ಸಿಂಗಲ್ ಹೆಸರು ಹಾಕಿ ಲಿಸ್ಟ್ ಕಳುಹಿಸಲಾಗಿದೆ. ಬಹುತೇಕ 66 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ತಲೆ ಬಿಸಿ ಇಲ್ಲ. ಈ ಪಟ್ಟಿಗೆ ಕಾಂಗ್ರೆಸ್​ ಕೇಂದ್ರ ಚುನಾವಣಾ ಸಮಿತಿ (Congress’s Central Election Committee (CEC) ಗ್ರೀನ್​ ಸಿಗ್ನಲ್​ ನೀಡಿದರೆ ಮೊದಲ ಹಂತದಲ್ಲಿ 135 ಕ್ಷೇತ್ರಗಳ ಅಭ್ಯರ್ಥಿ ಘೋಷಣೆ ಸಾಧ್ಯತೆ ಇದೆ. ಇನ್ನುಳಿದ 89 ಕ್ಷೇತ್ರಗಳಲ್ಲಿ ಎರಡೆರಡು ಹೆಸರು ಶಿಫಾರಸು ಮಾಡಲಾಗಿದೆ. ಈ ಕ್ಷೇತ್ರಗಳಲ್ಲಿ ಟಿಕೆಟ್ ಹಂಚಿಕೆ ಕಾಂಗ್ರೆಸ್ ಪಾಲಿಗೆ ಚಾಲೆಂಜಿಂಗ್​ ಕೆಲಸವಾಗಿದೆ. ಹೆಚ್ಚು ಪೈಪೋಟಿ ಇರುವ ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಈಗಾಗಲೇ ಸಂಧಾನ ನಡೆಸುತ್ತಿದ್ದಾರೆ. ಸುಮಾರು 10ರಿಂದ 12 ಕ್ಷೇತ್ರಗಳಲ್ಲಿ ಸಂಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನುಳಿದ ಕೆಲ ಕ್ಷೇತ್ರಗಳ ಟಿಕೆಟ್ ಹಂಚಿಕೆ ಕಾಂಗ್ರೆಸ್​ಗೆ ದೊಡ್ಡ ಸವಾಲ್​ ಆಗಿ ಪರಿಣಮಿಸಿದ್ದು, ಅದಕ್ಕಾಗಿ ಹೈಕಮಾಂಡ್ ಮೊರೆ ಹೋಗಿದ್ದಾರೆ. ನಾಳೆ ದೆಹಲಿಯಲ್ಲಿ ಕಾಂಗ್ರೆಸ್​ ಚುನಾವಣಾ ಸಮಿತಿ ಸಭೆ ಬಳಿಕ ಕೆಲ ಅಭ್ಯರ್ಥಿ ಬದಲಾಗುವ ಸಾಧ್ಯತೆಯೂ ಇದೆ. ಹಾಗಾದ್ರೆ ಸ್ಕ್ರೀನಿಂಗ್ ಕಮಿಟಿ ಯಾವ್ಯಾವ ಕ್ಷೇತ್ರಕ್ಕೆ ಸಿಂಗಲ್ ಹೆಸರು ಶಿಫಾರಸು ಮಾಡಿದೆ? ಯಾವ್ಯಾವ ಕ್ಷೇತ್ರದಲ್ಲಿ ಡಬಲ್ ಹೆಸರು ಶಿಫಾರಸು ಮಾಡಲಾಗಿದೆ? ಎನ್ನುವ ಪಟ್ಟಿ ಈ ಕೆಳಗಿನಂತಿದೆ.

ಇದನ್ನೂ ಓದಿ: Karnataka Assembly Poll 2023: ಕಾಂಗ್ರೆಸ್​ ಅಭ್ಯರ್ಥಿಗಳ ಮೊದಲ ಪಟ್ಟಿ ಸಿದ್ಧ, ಮಾ.17ರಂದು ದೆಹಲಿಗೆ ಡಿಕೆಶಿ-ಸಿದ್ದು

89 ಕ್ಷೇತ್ರಗಳಿಗೆ ಇಬ್ಬರ ಹೆಸರನ್ನ ಶಿಫಾರಸು ಮಾಡಲಾಗಿದೆ. ಇನ್ನೂ 40-50 ಕ್ಷೇತ್ರ ಇನ್ನೂ ಕಗ್ಗಂಟಾಗಿದ್ದರೆ, 10-12 ಕ್ಷೇತ್ರದಲ್ಲಿ ಸಂಧಾನ ಸಕ್ಸಸ್ ಆಗಿದೆ. ಉಳಿದ ಕ್ಷೇತ್ರಗಳ ಸಂಧಾನ ನಡೆಯುತ್ತಿದೆ. ಹಾಗಾದ್ರೆ, ಯಾವುವು ಕ್ಷೇತ್ರ..? ನಾಳೆ ಇದೆಲ್ಲವನ್ನೂು ಅಳೆದು ತೂಗಿ 135 ಅಭ್ಯರ್ಥಿಗಳ ಹೆಸರು ಫೈನಲ್ ಆಗುವ ಸಾಧ್ಯತೆ ಇದೆ.

ಯಾವ್ಯಾವ ಕ್ಷೇತ್ರಕ್ಕೆ ಸಿಂಗಲ್ ಹೆಸರು

ಬಸವನಗುಡಿ- ಯುಬಿ ವೆಂಕಟೇಶ್, ರಾಜಾಜಿನಗರ- ಪುಟ್ಟಣ್ಣ, ಸೊರಬ – ಮಧು ಬಂಗಾರಪ್ಪ, ಚಿತ್ರದುರ್ಗ – ವೀರೇಂದ್ರ ಪಪ್ಪಿ, ಹಿರಿಯೂರು -ಸುಧಾಕರ್, ಹಿರೇಕೆರೂರು – ಯುಬಿ ಬಣಕಾರ್, ವಿರಾಜಪೇಟೆ – ಪೊನ್ನಣ್ಣ, ರಾಮನಗರ – ಇಕ್ಬಾಲ್ ಹುಸೇನ್, ಮಾಗಡಿ – ಬಾಲಕೃಷ್ಣ, ಹೊಸಕೋಟೆ- ಶರತ್ ಬಚ್ಚೇಗೌಡ, ಚಿಂತಾಮಣಿ – ಎಂಸಿ ಸುಧಾಕರ್, ಚಿಕ್ಕಬಳ್ಳಾಪುರ – ಕೊತ್ತೂರ್ ಮಂಜುನಾಥ್, ಟಿ. ನರಸಿಪುರ – ಸುನಿಲ್ ಬೋಸ್, ನಿಪ್ಪಾಣಿ – ಕಾಕಾಸಾಹೇಬ್ ಪಾಟೀಲ್, ಹುಕ್ಕೇರಿ – ಎ.ಬಿ ಪಾಟೀಲ್ , ಗೋಕಾಕ್ – ಅಶೋಕ್ ಪೂಜಾರಿ, ಹುನಗುಂದ – ವಿಜಯಾನಂದ ಕಾಶಪ್ಪನವರ್, ಮುದ್ದೇಬಿಹಾಳ – ಸಿ.ಎಸ್ ನಾಡಗೌಡ, ರಾಯಚೂರು – ಎನ್.ಎಸ್ ಬೋಸರಾಜ್, ಕನಕಗಿರಿ – ಶಿವರಾಜ್ ತಂಗಡಗಿ , ಯಲಬುರ್ಗಾ – ಬಸವರಾಜ್ ರಾಯರೆಡ್ಡಿ, ಕಾರವಾರ – ಸತೀಶ್ ಸೈಲ್, ಭಟ್ಕಳ – ಮಂಕಾಳ ವೈದ್ಯ, ಹಾನಗಲ್ – ಶ್ರೀನಿವಾಸ್ ಮಾನೆ, ಬೈಂದೂರು – ಗೋಪಾಲ್ ಪೂಜಾರಿ, ಕೋಲಾರ – ಸಿದ್ದರಾಮಯ್ಯ, ಕಾಪು – ವಿನಯ್ ಕುಮಾರ್ ಸೊರಕೆ, ಕಡೂರು – ವೈಎಸ್‌ವಿ ದತ್ತಾ.

ಇದನ್ನೂ ಓದಿ: ಅನುಕಂಪದ ಅಲೆಯ ಅಬ್ಬರ, ಟಿಕೆಟ್ ರೇಸ್‌ನಿಂದ ಹಿಂದೆ ಸರಿದ ಹೆಚ್.ಸಿ.ಮಹದೇವಪ್ಪ ಭಾವನಾತ್ಮಕ ಪೋಸ್ಟ್​ಗೆ ಮೆಚ್ಚುಗೆ

ಒಂದು ಕ್ಷೇತ್ರಕ್ಕೆ ಎರಡು ಹೆಸರುಗಳು ಇರುವ ಪಟ್ಟಿ

‌‌ಹೊಳಲ್ಕೆರೆ – ಸವಿತಾ ರಘು/ ಆಂಜನೇಯ, ತೀರ್ಥಹಳ್ಳಿ – ಕಿಮ್ಮನೆ ರತ್ನಾಕರ್/ ಮಂಜುನಾಥ್ ಗೌಡ, ಬಳ್ಳಾರಿ ಸಿಟಿ – ಅಲ್ಲಂ ಪ್ರಶಾಂತ್/ ಅನಿಲ್ ಲಾಡ್, ಶಿಗ್ಗಾಂವಿ – ಅಜಂಪೀರ್ ಖಾದ್ರಿ/ ಸೋಮಣ್ಣ ಬೇವಿನಮರದ, ಗಂಗಾವತಿ – ಇಕ್ಬಾಲ್ ಅನ್ಸಾರಿ/ ಎಚ್.ಆರ್ ಶ್ರೀನಾಥ್, ಕಲಬುರಗಿ ಗ್ರಾಮೀಣ – ರೇವುನಾಯಕ ಬೆಳಮಗಿ/ ವಿಜಯಕುಮಾರ್, ತೇರದಾಳ್ – ಉಮಾಶ್ರೀ/ ಮಲ್ಲೇಶಪ್ಪ, ಬಾಗಲಕೋಟ – ಎಚ್ ವೈ ಮೇಟಿ/ ದೇವರಾಜ್ ಪಾಟೀಲ್, ಬೆಳಗಾವಿ ಉತ್ತರ – ಫೀರೋಜ್ ಸೇಠ್/ ಆಸೀಫ್ ಸೇಠ್, ಕುಡಚಿ – ಶ್ಯಾಮ್ ಭೀಮ್ ಘಾಟ್ಗೆ/ ಮಹೇಂದ್ರ ತಮ್ಮಣ್ಣ, ಕಾಗವಾಡ – ರಾಜೂ ಕಾಗೆ/ ದಿಗ್ವಿಜಯ್ ದೇಸಾಯಿ, ಅಥಣಿ – ಗಜಾನನ್ ಮಂಗಸೂಳಿ/ ಶ್ರೀಕಾಂತ್ ಪೂಜಾರಿ, ನಂಜನಗೂಡು – ಮಹದೇವಪ್ಪ/ ದ್ರುವನಾರಾಯಣ(ದರ್ಶನಗೆ ಫೈನಲ್​), ಚಾಮುಂಡೇಶ್ವರಿ – ಮರಿಗೌಡ/ ಚಂದ್ರಶೇಖರ್, ಮಂಗಳೂರು ದಕ್ಷಿಣ – ಐವಾನ್ ಡಿಸೋಜಾ/ ಜೆ ಆರ್ ಲೋಬೋ, ಬೆಳ್ತಂಗಡಿ- ರಕ್ಷಿತ್ / ಶಿವರಾಂ, ಬೆಂಗಳೂರು ದಕ್ಷಿಣ-ಆರ್ ಕೆ ರಮೇಶ್/ ಸುಷ್ಮಾ ರಾಜಗೋಪಾಲ್, ದಾಸರಹಳ್ಳಿ- ಕೃಷ್ಣಮೂರ್ತಿ/ ಸಿ.ಎಂ ಧನಂಜಯ, ಕಲಘಟಗಿ – ಸಂತೋಷ್ ಲಾಡ್/ ನಾಗರಾಜ್ ಚಬ್ಬಿ

ಹಾಲಿ ಶಾಸಕರಿರುವ ಕ್ಷೇತ್ರಕ್ಕೂ ಎರಡೆರಡು ಹೆಸರು

ಕುಂದಗೋಳ – ಕುಸುಮಾ ಶಿವಳ್ಳಿ, ಶಾಸಕಿ/ ಚಂದ್ರಶೇಖರ್ ಜತ್ತಲ್, ದೊಡ್ಡಬಳ್ಳಾಪುರ – ವೆಂಕಟರಮಣಯ್ಯ, ಶಾಸಕ/ ಬಿಸಿ ಆನಂದ್, ಪಾವಗಡ – ವೆಂಕಟರಮಣಪ್ಪ, ಶಾಸಕ/ಎಚ್.ವಿ ವೆಂಕಟೇಶ್, ಲಿಂಗಸುಗೂರು – ಡಿ‌ಎಸ್ ಹೂಲಗೇರಿ/ರುದ್ರಯ್ಯ.

Published On - 3:39 pm, Thu, 16 March 23

ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’